ಕೊಪ್ಪಳ,ಜೂ.17(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಹಿಂದುಳಿದ ವರ್ಗಗಳ ವಿಸ್ತಣಾಧಿಕಾರಿಗಳ
ಕಛೇರಿಯಿಂದ ಪ್ರಸಕ್ತ ಸಾಲಿಗೆ ಕೊಪ್ಪಳ ತಾಲೂಕಿನ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸರ್ಕಾರಿ
ಮೆಟ್ರಿಕ್ ನಂತರ ಬಾಲಕರ/ಬಾಲಕಿಯರ ವಸತಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶಕ್ಕಾಗಿ ಅರ್ಜಿ
ಆಹ್ವಾನಿಸಲಾಗಿದೆ.
ಬಿಸಿಎಂ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ, ಕೊಪ್ಪಳ-1, ಕೊಪ್ಪಳ-2, ಬಿಸಿಎಂ ಮೆಟ್ರಿಕ್
ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಕೊಪ್ಪಳ-1, ಕೊಪ್ಪಳ-2, ಬಿಸಿಎಂ ಮೆಟ್ರಿಕ್ ನಂತರದ (ವೃತ್ತಿಪರ)
ಬಾಲಕಿಯರ ವಿದ್ಯಾರ್ಥಿ ನಿಲಯ ಕೊಪ್ಪಳ, ಬಿಸಿಎಂ ಮೆಟ್ರಿಕ್ ನಂತರದ ಮಹಿಳೆಯರ ವಿದ್ಯಾರ್ಥಿ ನಿಲಯ ಕೊಪ್ಪಳ,
ಬಿಸಿಎಂ ಮೆಟ್ರಿಕ್ ನಂತರ ಪುರುಷರ ವಿದ್ಯಾರ್ಥಿ ನಿಲಯ ಅಳವಂಡಿ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ
ವಿದ್ಯಾರ್ಥಿ ನಿಲಯ ಕೊಪ್ಪಳ, ಮೆಟ್ರಿಕ್ ನಂತರ ಬಾಲಕರ ಮಾದರಿ ವಿದ್ಯಾರ್ಥಿ ನಿಲಯ ಕಲ್ಯಾಣ ನಗರ ಕೊಪ್ಪಳ
ಈ ವಸತಿ ನಿಲಯಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಕೊಪ್ಪಳ
ತಾಲೂಕ ಹಿಂದುಳಿದ ವರ್ಗಗಳ ವಿಸ್ತಣಾಧಿಕಾರಿ ಕಛೇರಿಯಲ್ಲಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ-10
ಕೊನೆಯ ದಿನವಾಗಿರುತ್ತದೆ.
ಸರಕಾರ ನಡೆಸುತ್ತಿರುವ ಅಥವಾ ಸರಕಾರದಿಂದ ಅಂಗೀಕೃತವಾದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪಿ.ಯು.ಸಿ.
ಯಿಂದ ಮೇಲಿನ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಅರ್ಜಿಯನ್ನು
ಸಲ್ಲಿಸಬಹುದು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ. ಹಿಂದುಳಿದ ವರ್ಗಗಳ 2ಎ, 2ಬಿ,
3ಎ ಮತ್ತು 3ಬಿ. ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 44,500/- ದೊಳಗೆ ಇರಬೇಕು. ಪ್ರವರ್ಗ-1
ಮತ್ತು ಪರಿಶಿಷ್ಟ ಜಾತಿ ಪಂಗಡದ ಗುಂಪಿಗೆ ಸೇರಿದ ವಿದ್ಯಾರ್ಥಿಗಳಿಗೆ ಆದಾಯಮಿತಿ ರೂ. 1.00.000/-
ಮೀರಿರಬಾರದು, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ನಿಲಯಕ್ಕೆ ಸೇರ ಬಯಸುವ ವಿದ್ಯಾರ್ಥಿಗಳು
ಮತೀಯ ಅಲ್ಪಸಂಖ್ಯಾತರಾಗಿರಬೇಕು, ಮುಸ್ಲಿಂ, ಕ್ರಿಶ್ಚಿಯನ್, ಬುದ್ದರು, ಜೈನ್, ಶಿಖ್ಕರು ಹಾಗೂ ಆಂಗ್ಲೊ
ಇಂಡಿಯನ್ ಮಾತ್ರ ಅರ್ಹರಿರುತ್ತಾರೆ. 2014-15ನೇ ಸಾಲಿನಲ್ಲಿ ಕಾಲೇಜುಗಳಲ್ಲಿ ಪ್ರವೇಶ ಪಡೆದವರು ಅರ್ಜಿ
ಸಲ್ಲಿಸಲು ಅರ್ಹರು. ನಿಲಯಗಳ ಪ್ರವೇಶದ ಅರ್ಜಿ ನಮೂನೆಗಳನ್ನು ಕೊಪ್ಪಳ ತಾಲೂಕ ಹಿಂದುಳಿದ ವರ್ಗಗಳ ವಿಸ್ತರ್ಣಾಧಿಕಾರಿಗಳ
ಕಾರ್ಯಾಲಯ ಅಥವಾ ಸಂಬಂಧಪಟ್ಟ ವಸತಿ ನಿಲಯಗಳ ನಿಲಯ ಪಾಲಕರಿಂದ ಪಡೆಯಬಹುದಾಗಿರುತ್ತದೆ ಎಂದು ಪ್ರಕಟಣೆ
ತಿಳಿಸಿದೆ.
No comments:
Post a Comment