ಕೊಪ್ಪಳ ಜೂ.17(ಕರ್ನಾಟಕ ವಾರ್ತೆ): ಗ್ರಾಹಕ ಮಾಹಿತಿ ಕೇಂದ್ರ ಪ್ರಾರಂಭ ಮತ್ತು ನಿರ್ವಹಣೆಗೆ
ಆಸಕ್ತ ಎನ್.ಜಿ.ಓ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಹಕ
ಸಂರಕ್ಷಣಾ ಕಾಯ್ದೆ 1986 ರ ಅನ್ವಯ ಗ್ರಾಹಕರಿಗೆ ಹೆಚ್ಚಿನ ತಿಳುವಳಿಕೆ ನೀಡುವ ಸಲುವಾಗಿ ಗ್ರಾಹಕ ಸಂಬಂಧಿ
ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರತಿ ಜಿಲ್ಲೆಯಲ್ಲಿ ಗ್ರಾಹಕ ಚಟುವಟಿಕೆ ನಡೆಸುತ್ತಿರುವ ಎನ್.ಜಿ.ಓ./ವಿಸಿಓಯಿಂದ
ಒಂದು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಸಂಬಂಧ ಜಿಲ್ಲೆಯ ವ್ಯಾಪ್ತಿಯಲ್ಲಿ
ಗ್ರಾಹಕ ಚಟುವಟಿಕೆ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಎನ್.ಜಿ.ಓ./ವಿಸಿಓಗಳು ನಿಗದಿತ ನಮೂನೆ rule2 (c) of state consumer Welfare Fund Rule 2005 ಅರ್ಜಿ ನಲ್ಲಿ ಪೂರ್ಣ
ಮಾಹಿತಿಗಳನ್ನು ಭರ್ತಿ ಮಾಡಿ ಜೂ.30 ರೊಳಗಾಗಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿದ ಅರ್ಜಿದಾರರ ಪೈಕಿ
ಅರ್ಹ ಒಂದು ಎನ್.ಜಿ.ಓ./ವಿಸಿಓಗಳು ಅರ್ಜಿಗಳನ್ನು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವನ್ನು ತೆರೆಯಲು
ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಕೇಂದ್ರ ತೆರೆಯುವ ಆಸಕ್ತಿಯುಳ್ಳ ಎನ್.ಜಿ.ಓ./ವಿಸಿಓಗಳು
ನಿಗದಿತ ಅವಧಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ತಿಳಿಸಿದ್ದಾರೆ.
No comments:
Post a Comment