ಕೊಪ್ಪಳ ಜ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ-2020 ಇದೇ ಜನವರಿ. 09 ಮತ್ತು 10 ರಂದು ಏರ್ಪಡಿಸಲಾಗಿದ್ದು, ಉದ್ಘಾಟನಾ ಸಮಾರಂಭವು ಜ. 09 ರಂದು ಸಂಜೆ 05 ಗಂಟೆಗೆ ನಡೆಯಲಿದೆ.
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಆನೆಗೊಂದಿ ಉತ್ಸವದ ಉದ್ಘಾಟನೆ ನೆರವೇರಿಸುವರು. ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸಂಗಪ್ಪ ಸವದಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸುವರು. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವರಾದ ಸಿ.ಟಿ. ರವಿ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಗಂಗಾವತಿ ಶಾಸಕರಾದ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ ರೆಡ್ಡಿ, ಸಂಸದ ಕರಡಿ ಸಂಗಣ್ಣ, ವಿಧಾನಸಭೆ ಶಾಸಕರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಹಾಲಪ್ಪ ಬಸಪ್ಪ ಆಚಾರ್ ಹಾಗೂ ಬಸವರಾಜ ದಢೇಸೂಗೂರು, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಡಾ. ಚಂದ್ರಶೇಖರ ಬಿ. ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ, ಗಂಗಾವತಿ ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನಗೌಡ ಶಿವಬಸನಗೌಡ ಪೊಲೀಸ್ ಪಾಟೀಲ್, ಆನೆಗೊಂದಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಮಾರುತಿ ಜಿ, ಆನೆಗೊಂದಿ ಕ್ಷೇತ್ರ ಹಾಗೂ ತಾ.ಪಂ. ಸದಸ್ಯ ವೈ. ರಮೇಶ. ಸಾಣಾಪುರ, ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಪಾಲ್ಗೊಳ್ಳುವರು.
ವಿಶೇಷ ಆಹ್ವಾನಿತರಾಗಿ ವಿಜಯನಗರದ ಅರಸು ಮನೆತನದವರಾದ ಶ್ರೀರಂಗದೇವರಾಯಲು, ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಎನ್., ಬೆಂಗಳೂರು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸುಭೋದ ಯಾದವ್, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಕಾರ್ಯದರ್ಶಿ ಆರ್.ಆರ್. ಜನ್ನು ಅವರು ಭಾಗವಹಿಸುವರು.
ವಿವಿಧ ಕ್ರೀಡಾಕೂಟಗಳು ಹಾಗೂ ವಿವಿಧ ಸ್ಪರ್ಧೆಗಳಿಗೆ ಚಾಲನೆ;
ಆನೆಗೊಂದಿ ಉತ್ಸವದ ಅಂಗವಾಗಿ ವಿವಿಧ ಕ್ರೀಡಾಕೂಟಗಳು ಹಾಗೂ ವಿವಿಧ ಸ್ಪರ್ಧೆಗಳು ಜನವರಿ. 09 ರಂದು ನಡೆಯಲಿದ್ದು, ಜ. 09 ರಂದು ಬೆಳಿಗ್ಗೆ 07 ಗಂಟೆಗೆ ಗಂಗಾವತಿ ಬಸ್ ನಿಲ್ದಾಣದಿಂದ ಪುರುಷ ಮತ್ತು ಮಹಿಳೆಯರಿಗೆ ಮ್ಯಾರಾಥಾನ್ ಮತ್ತು ಬೆಳಗ್ಗೆ 09 ಗಂಟೆಗೆ ಆನೆಗೊಂದಿಯ ದುರ್ಗಾದೇವಿ ದೇವಸ್ಥಾನದಿಂದ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ಮೂಲಕ ಆನೆಗೊಂದಿ ಉತ್ಸವ-2020ಕ್ಕೆ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಚಾಲನೆ ನೀಡುವರು. ಬೆಳಗ್ಗೆ 11 ಗಂಟೆಗೆ ಆನೆಗೊಂದಿಯ ಗಗನ ಮಹಲ್ ಹತ್ತಿರ ತೋಟಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಫಲಪುಷ್ಪ ಪ್ರದರ್ಶನಕ್ಕೆ ಸಂಸದ ಕರಡಿ ಸಂಗಣ್ಣ ಅವರಿಂದ ಚಾಲನೆ. ಬೆಳಗ್ಗೆ 11-15 ಗಂಟೆಗೆ ಆನೆಗೊಂದಿಯ ಶ್ರೀ ಕೃಷ್ಣ ದೇವರಾಯ ವೇದಿಕೆ ಹತ್ತಿರ ಕೃಷಿ, ಮೀನುಗಾರಿಕೆ, ಅರಣ್ಯ, ರೇಷ್ಮೆ, ಆರೋಗ್ಯ, ಪಶುಪಾಲನಾ ಇಲಾಖೆಗಳಿಂದ ಆಯೋಜಿಸಲಾಗಿರುವ ಪ್ರದರ್ಶನ ಮಳಿಗೆಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ, ಶಿಲ್ಪಕಲಾ, ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಕುಷ್ಟಗಿ ಶಾಸಕ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪೂರ, ವಾಣಿಜ್ಯ ಮಳಿಗೆಗಳಿಗೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಬಸಪ್ಪ ಆಚಾರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾಗಿರುವ ಸರ್ಕಾರದ ಯೋಜನೆಗಳ ಕುರಿತು ವಸ್ತು ಪ್ರದರ್ಶನ ಮಳಿಗೆಯನ್ನು ಕನಕಗಿರಿ ಶಾಸಕ ಬಸವರಾಜ ದಢೇಸೂಗುರು ಅವರು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11-30ಕ್ಕೆ ಸಾಣಾಪೂರ ಕೆರೆ ಹತ್ತಿರ ಜಲ ಸಾಹಸ ಕ್ರೀಡೆಗಳು ಹಾಗೂ ಆನೆಗೊಂದಿಯ ಋಷಿಮುಖ ಪರ್ವತದ ಹತ್ತಿರ ರಾಕ್ ಕ್ಲೆöÊಂಬಿAಗ್ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಚಾಲನೆ ನೀಡುವರು.
ಕವಿಗೋಷ್ಠಿ ;
ಆನೆಗೊಂದಿ ಉತ್ಸವದ ನಿಮಿತ್ತ ಕವಿಗೋಷ್ಠಿಯನ್ನು ಜನವರಿ 09 ರಂದು ಬೆಳಗ್ಗೆ 11 ಗಂಟೆಗೆ ಆನೆಗೊಂದಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೊಪ್ಪಳದ ವಿಠ್ಠಪ್ಪ ಗೋರಂಟ್ಲಿ ಅವರು ಉದ್ಘಾಟನೆ ನೆರವೇರಿಸುವರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ವಹಿಸುವರು. ಕವಿಗಳಾದ ಯಲಬುರ್ಗಾದ ಮುನಿಯಪ್ಪ ಹುಬ್ಬಳ್ಳಿ, ಮುಧೋಳದ ಅನ್ನಪೂರ್ಣ ಮನ್ನಾಪುರ, ಕರಮುಡಿಯ ವೀರಣ್ಣ ನಿಂಗೋಜಿ, ಕುಕನೂರಿನ ಕೆ. ಬಿ. ಬ್ಯಾಳಿ, ಅಲ್ಲಾವುದ್ದಿನ ಎಮ್ಮಿ, ಅಕ್ಬರ್ ಕಾಲಿಮಿರ್ಚಿ, ಶಿ. ಕಾ. ಬಡಿಗೇರ, ಕೊಪ್ಪಳದ ವಿಮಲಾ ಇನಾಮದಾರ್, ಸಿದ್ದಲಿಂಗಪ್ಪ ಕೊಟ್ನೆಕಲ್, ಮೆಹಬೂಬ ಮಠದ, ಈಶ್ವರ ಹತ್ತಿ, ವೈ. ಬಿ. ಜೂಡಿ, ಅನಸೂಯಾ ಜಾಗಿರದಾರ, ಪುಷ್ಪಾಲತಾ ಏಳಭಾವಿ, ಸಿರಾಜ ಬಿಸರಳ್ಳಿ, ಗಂಗಾವತಿಯ ರಮೇಶ ಗಬ್ಬೂರ, ದೇವೇಂದ್ರಪ್ಪ ಜಾ. ಜಿ., ಶಿವಕುಮಾರ ಮಾಲಿಪಾಟೀಲ್, ಮೈಲಾರಪ್ಪ ಬೂದಿಹಾಳ, ಕನಕಗಿರಿಯ ಅಲ್ಲಾಗಿರಿರಾಜ್, ಸುರೇಶ ಕಂಬಳಿ, ಕಾರಟಗಿಯ ಬಿ.ಪೀರಬಾಷಾ, ಬಳ್ಳಾರಿಯ ಮಹೇಶ, ಕುಷ್ಟಗಿಯ ಕೆ.ಶರಣಪ್ಪ ನಿಡಶೇಶಿ, ಹನುಮೇಶ ಗುಮಗೇರಾ, ನಟರಾಜ ಸೋನಾರ, ಚಂದ್ರಪ್ಪ ಅಕ್ಕಿ, ಕನಕಗಿರಿಯ ಮನೋಹರ ಬೊಂದಡೆ ಕವಿಗೋಷ್ಠಿಯಲ್ಲಿ ಭಾಗವಹಿಸುವರು.
ವಿಚಾರ ಸಂಕಿರಣ;
ಆನೆಗೊಂದಿ ಉತ್ಸವದ ನಿಮಿತ್ತ ವಿಚಾರ ಸಂಕಿರಣವನ್ನು ಜ. 09 ರಂದು ಮಧ್ಯಾಹ್ನ 02-30 ಗಂಟೆಗೆ ಆನೆಗೊಂದಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ (ಗಂಗಾವತಿ) ಅಶೋಕ ರಾಯ್ಕರ ಅವರು ಉದ್ಘಾಟನೆ ನೆರವೇರಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೊಪ್ಪಳದ ಎಚ್.ಎಸ್. ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಗಂಗಾವತಿಯ ಡಾ. ಶರಣಬಸಪ್ಪ ಕೋಲ್ಕಾರ ಅವರು ``ವಿಜಯನಗರ ಸ್ಥಾಪನೆಯಲ್ಲಿ ಆನೆಗೊಂದಿಯ ಪಾತ್ರ'' ಕುರಿತು, ಕೂಡ್ಲಿಗಿಯ ಡಾ. ಅರುಣ ಜೋಳದ ಅವರು ``ಗಂಡುಗಲಿ ಕುಮಾರ ರಾಮ'' ಕುರಿತು ಹಾಗೂ ಗುಂಡೂರ ಎಸ್.ವಿ. ಪಾಟೀಲ್ ಅವರು ``ಕೊಪ್ಪಳ ಜಿಲ್ಲೆಯ ರಂಗಭೂಮಿ'' ಕುರಿತು ವಿಷಯ ಮಂಡನೆ ಮಾಡುವರು. ಪರಶುರಾಮಪ್ರಿಯ, ಡಾ. ಎಸ್.ವಿ. ಡಾಣಿ, ರಾಘವೇಂದ್ರ ದಂಡಿನ, ಮೆಹಬೂಬ ಹುಸೇನ, ಬಸವರಾಜ ಆಕಳವಾಡಿ ಹಾಗೂ ಎಸ್.ಬಿ. ಗೊಂಡಬಾಳರವರು ವಿಷಯ ಮಂಡನೆಯ ಬಗ್ಗೆ ಪ್ರತಿಕ್ರಿಯೆ ತಿಳಿಸುವರು.
ಸಾಂಸ್ಕೃತಿಕ ಕಾರ್ಯಕ್ರಮ;
ಆನೆಗೊಂದಿ ಉತ್ಸವದ ನಿಮಿತ್ತ ಜ. 09 ರಂದು ಸಂಜೆ ಆನೆಗೊಂದಿಯ ಶ್ರೀಕೃಷ್ಣ ದೇವರಾಯ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಸಂಜೆ 04 ರಿಂದ 04-10 ಗಂಟೆಯವರೆಗೆ ಬಿನ್ನಾಳದ ರಾಮಪ್ಪ ಫಕೀರಪ್ಪ ಭಜಂತ್ರಿ ಅವರಿಂದ ಮಂಗಳ ವಾದ್ಯ, 04-10 ರಿಂದ 04-20 ರವರೆಗೆ ಯಾದಗಿರಿಯ ಅರ್ಜುನ ವಟಾರ ರಿಂದ ಶಾಸ್ತಿçಯ ಗಾಯನ, 04-20 ರಿಂದ 04-30 ರವರೆಗೆ ಯರೇಹಂಚಿನಾಳದ ಹನುಮಂತಪ್ಪ ಎಸ್. ನರೆಗಲ್ ರಿಂದ ಸುಗಮ ಸಂಗೀತ, 04-30 ರಿಂದ 04-45 ರವರೆಗೆ ಬಾಗಲಕೋಟೆಯ ವೆಂಕಪ್ಪ ಎ. ಸುಗತೇಕರ್ ರಿಂದ ಗೊಂದಳಿ ಗಾಯನ, 04-45 ರಿಂದ 05 ರವರೆಗೆ ಕುದರಿಮೋತಿಯ ಹನುಮಂತ ಕುಮಾರ್ ಮುದೋಳ್ ರಿಂದ ಶಾಸ್ತಿçÃಯ ವಾದ್ಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಉತ್ಸವದ ಉದ್ಘಾಟನಾ ಸಮಾರಂಭದ ನಂತರ ಸಂಜೆ 06 ರಿಂದ 06-30 ರವರೆಗೆ ಗಂಗಾವತಿ ಬಿ. ಪ್ರಾಣೇಶ ಅವರಿಂದ ಹಾಸ್ಯೋತ್ಸವ ಕಾರ್ಯಕ್ರಮ, 06-30 ರಿಂದ 06-45 ರವರೆಗೆ ಕುಷ್ಟಗಿಯ ಶರಣಪ್ಪ ವಡಗೇರಿ ರಿಂದ ಜಾನಪದ ಹಾಡು, 06-45 ರಿಂದ 07 ಗಂಟೆಯವರೆಗೆ ಬೆಂಗಳೂರಿನ ನವಚೇತನ ನೃತ್ಯ ಕಲಾ ಅಕಾಡೆಮಿ ವತಿಯಿಂದ ರೂಪಕ ಕಾರ್ಯಕ್ರಮ, 07 ರಿಂದ 07-15 ರವರೆಗೆ ರಾಯಚೂರಿನ ಅಂಬಯ್ಯ ನೂಲಿ ರಿಂದ ಸುಗಮ ಸಂಗೀತ, 07-15 ರಿಂದ 07-30 ರವರೆಗೆ ಹೊಸಪೇಟೆಯ ಅಂಜಲಿ ಎಸ್. ಅಂಜಲಿ ನೃತ್ಯ ಕಲಾ ಕೇಂದ್ರದಿAದ ಶಾಸ್ತಿçÃಯ ನೃತ್ಯ, 07-30 ರಿಂದ 08 ಗಂಟೆಯವರೆಗೆ ಇಟಗಿಯ ಅರ್ಜುನ ರಿಂದ ರಸಮಂಜರಿ ಕಾರ್ಯಕ್ರಮ, 08 ರಿಂದ 09 ರವರೆಗೆ ಮೂಡಬಿದರಿಯ ನುಡಿಸಿರಿ ವಿರಾಸತ್ ಆಳ್ವಾಸ್ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ, 09 ರಿಂದ 09-10 ರವರೆಗೆ ಶಿರಗುಪ್ಪಾದ ಬಸವರಾಜ ಬಲಕುಂದಿ ರಿಂದ ಸಮೂಹ ನೃತ್ಯ, 09-10 ರಿಂದ 09-15 ರವರೆಗೆ ಕೊಪ್ಪಳದ ರುದ್ರೇಶ ಉಜ್ಜಿನಕೊಪ್ಪ ರಿಂದ ಸುಗಮ ಸಂಗೀತ, 09-15 ರಿಂದ 09-30 ರವರೆಗೆ ತೆಗ್ಗಿಹಾಳದ ರಾಮಪ್ಪ ಬಿ. ಚೌಡ್ಕಿ ರಿಂದ ಚೌಡ್ಕಿಪದಗಳು, 09-30 ರಿಂದ 09-45 ರವರೆಗೆ ಹುಬ್ಬಳ್ಳಿಯ ರೋಹಿಣಿ ಇಮರಾತಿ ರಿಂದ ಸಮೂಹ ನೃತ್ಯ, 9-45 ರಿಂದ 100 ಗಂಟೆಯವರಗೆ ಗಂಗಾವತಿಯ ಸಂಗೀತ ಶರಣಪ್ಪ ಅವರಿಂದ ಸುಗಮ ಸಂಗೀತ, 10-00 ರಿಂದ 12 ಗಂಟೆಯವರಗೆ ಬೆಂಗಳೂರಿನ ವಿಜಯ ಪ್ರಕಾಶ ಹಾಗೂ ತಂಡದಿAದ ಕಾರ್ಯಕ್ರಮ ಜರುಗಲಿವೆ.
ಜ. 09 ರಂದು ಮಧ್ಯಾಹ್ನ 3-45 ಗಂಟೆಗೆ ಆನೆಗೊಂದಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರಣ್ಯ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ನೆರವೇರಿಸುವರು. ಸಂಜೆ 04 ಗಂಟೆಯಿAದ 04-15 ರವರೆಗೆ ಕೊಪ್ಪಳದ ರಾಮಚಂದ್ರಪ್ಪ ಉಪ್ಪಾರ ಅವರಿಂದ ಶಾಸ್ತಿçÃಯ ಗಾಯನ, 04-15 ರಿಂದ 04-30 ರವರೆಗೆ ಬಳ್ಳಾರಿಯ ಲಕ್ಷಿö್ಮà ಕಲಾಕ್ಷೇತ್ರ ಅವರಿಂದ ಜಾನಪದ ನೃತ್ಯ, 04-30 ರಿಂದ 04-45 ರವರೆಗೆ ಕಲ್ಲೂರಿನ ರಾಚಯ್ಯ ಗವಾಯಿ ಅವರಿಂದ ಸುಗಮ ಸಂಗೀತ, 04-45 ರಿಂದ 05 ರವರೆಗೆ ನವಲಿಯ ಸ್ವಾಮಿವಿವೇಕಾನಂದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಲಾ ಸಂಘ(ರಿ), 05-00 ರಿಂದ 05-30 ರವರೆಗೆ ಗಂಗಾವತಿಯ ವಿದ್ಯಾಶ್ರೀ ಸಾಲಿಮಠ ಅವರಿಂದ ಶಾಸ್ತಿçÃಯ ಗಾಯನ, 05-30 ರಿಂದ 05-45 ರವರೆಗೆ ಭಾಗ್ಯನಗರದ ದೀಕ್ಷಾ ನಾಟ್ಯ ಕಲಾ ಸಂಸ್ಥೆ ಅವರಿಂದ ಸಮೂಹ ನೃತ್ಯ, 05-45 ರಿಂದ 06 ರವರೆಗೆ ಹಾಬಲಕಟ್ಟಿಯ ದಾವಲಸಾಬ ಅತ್ತಾರ ಅವರಿಂದ ಜಾನಪದ ಹಾಡು, 06 ರಿಂದ 06-15 ರವರೆಗೆ ಹೊಸಳ್ಳಿಯ ನಾಟ್ಯ ತರಬೇತಿ ಕೇಂದ್ರದ ವತಿಯಿಂದ ಶಾಸ್ತಿçÃಯ ನೃತ್ಯ, 06-15 ರಿಂದ 06-30 ರವರೆಗೆ ಗಂಗಾವತಿಯ ಆರಾಧನಾ ನೃತ್ಯಕಲಾ ತಂಡದವರಿAದ ಸಮೂಹ ನೃತ್ಯ, 06-30 ರಿಂದ 06-45 ರವರೆಗೆ ಗಂಗಾವತಿಯ ಪಂಚಾಕ್ಷರ ಕುಮಾರ ಅವರಿಂದ ಸುಗಮ ಸಂಗೀತ, 06-45 ರಿಂದ 07-00 ರವರೆಗೆ ಹನುಮಸಾಗರದ ಕೆ.ಜಿ.ಬಿ.ವಿ. ವಸತಿ ಶಾಲೆ ವತಿಯಿಂದ ಯುಗಳ ನೃತ್ಯ, 07ರಿಂದ 07-30ರವರಗೆ ಬಳ್ಳಾರಿಯ ಸೌಮ್ಯಶ್ರೀ ಹಾಗೂ ತಂಡದವರಿAದ ರೂಪಕ, 07-30 ರಿಂದ 07-40 ರವರೆಗೆ ಗಂಗಾವತಿಯ ಗೋವಿಂದರಾಜ ಬೊಮ್ಮಲಾಪುರ ಅವರಿಂದ ಶಾಸ್ತಿçÃಯ ವಾದ್ಯ ಸಂಗೀತ, 07-40 ರಿಂದ 07-50 ರವರೆಗೆ ತಳಕಲ್ ನಾದನೃತ್ಯ ವಿದ್ಯಾಸಂಸ್ಥೆ ಅವರಿಂದ ಶಾಸ್ತಿçÃಯ ನೃತ್ಯ, 07-50 ರಿಂದ 08 ರವರೆಗೆ ಕೊಪ್ಪಳದ ಅಂಬಣ್ಣ ಕೊಪ್ಪರದ ಅವರಿಂದ ಕೊಳಲು ವಾದನ, 08 ರಿಂದ 08-10 ರವರೆಗೆ ಗಂಗಾವತಿಯ ಈ. ವಿನೋದ ಅವರಿಂದ ಸುಗಮ ಸಂಗೀತ, 08-10 ರಿಂದ 08-40ರವರಗೆ ರಾಯಚೂರಿನ ಓಂ ಜ್ಯೋತಿ ಇನಾಂದಾರ ಅವರಿಂದ ಭರತನಾಟ್ಯ, 08-40 ರಿಂದ 08-50 ರವರೆಗೆ ಕುಷ್ಟಗಿಯ ವಾಲ್ಮಿಕಪ್ಪ ಯಕ್ಕರನಾಳ ಅವರಿಂದ ಜಾನಪದ ಗಾಯನ, 08-50 ರಿಂದ 09 ರವರೆಗೆ ಭಾಗ್ಯನಗರದ ಪಾಂಡುರAಗ ಎ. ಎಮ್. ಅವರಿಂದ ಜಾನಪದ ನೃತ್ಯ, 09 ರಿಂದ 09-10 ರವರೆಗೆ ಗದಗ ಪರಶುರಾಮ ದೊಡ್ಡಮನಿ ಅವರಿಂದ ಶಾಸ್ತಿçÃಯ ಸಂಗೀತ, 09-10 ರಿಂದ 09-20 ರವರೆಗೆ ಕಾರಟಗಿಯ ಶ್ರೀ ಶರಣಬಸವೇಶ್ವರ ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲೆ ಅವರಿಂದ ಜಾನಪದ ನೃತ್ಯ (ಹಾಲಕ್ಕಿ ಬುಡಕಟ್ಟು),09-20 ರಿಂದ 09-30 ರವರೆಗೆ ಗಂಗಾವತಿಯ ಶಿವಪ್ಪ ಹುಳ್ಳಿ ಅವರಿಂದ ಸುಗಮ ಸಂಗೀತ, 09-30 ರಿಂದ 09-40ರವರಗೆ ಬನ್ನಿಕೊಪ್ಪದ ಸುಧಾ ಆರ್. ಮುತ್ತಾಳ ಅವರಿಂದ ಸುಗ್ಗಿ ಕುಣಿತ, 09-40 ರಿಂದ 09-50 ರವರೆಗೆ ತಾವರಗೇರಾದ ತಿಪ್ಪಣ್ಣ ಅಂಬಾಜಿ ಸುಗತೇಕರ ಅವರಿಂದ ಜಾನಪದ ಹಾಡು, 09-45 ರಿಂದ 11 ರವರೆಗೆ ಅರಳಿಹಳ್ಳಿಯ ಶರಣಯ್ಯ ಶೇಖರಯ್ಯ ಕುಂದಕೂರ ಅವರಿಂದ ನಾಟಕ (ಆನೆಗೊಂದಿ ಸಂಗಮ ಅರಸರ ವಿಜಯ), 11 ರಿಂದ 12 ರವರೆಗೆ ಆನೆಗೊಂದಿಯ ವಿದ್ಯಾರಣ್ಯ ಬಯಲಾಟ ಕಲಾತಂಡದಿAದ ಬಯಲಾಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಮಹಿಳಾ ಗೋಷ್ಠಿ;
ಜ. 10 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಮಹಿಳಾ ಗೋಷ್ಠಿ ನಡೆಯಲಿದ್ದು, ಗಂಗಾವತಿಯ ಡಾ. ಮುಮತಾಜ ಬೇಗಂ ಉದ್ಘಾಟಿಸುವರು. ಕೊಪ್ಪಳದ ವಿಮಲಾ ಇನಾಮದಾರ ಅಧ್ಯಕ್ಷತೆ ವಹಿಸುವರು. ಕೊಪ್ಪಳದ ಗೌರಮ್ಮ ದೇಸಾಯಿ ಮಹಿಳಾ ದೌರ್ಜನ್ಯ ಸಾಮಾಜಿಕ ನಿಲುವು ಕುರಿತಾಗಿ, ಸಾವಿತ್ರಿ ಮುಜುಮದಾರ ಕೊಪ್ಪಳ ಜಿಲ್ಲೆಯ ಮಹಿಳೆಯರ ಸ್ಥಿತಿಗತಿ ಕುರಿತಾಗಿ, ಅರುಣಾ ನರೇಂದ್ರ ಸಾಹಿತ್ಯಕ್ಕೆ ಕೊಪ್ಪಳ ಜಿಲ್ಲೆಯ ಮಹಿಳೆಯರ ಕೊಡುಗೆ ಕುರಿತಾಗಿ ವಿಷಯ ಮಂಡಿಸುವರು. ವಿಜಯಲಕ್ಷಿö್ಮÃ ಕೊಟಗಿ, ಡಾ. ವಾಣಿಶ್ರೀ ಪಾಟೀಲ್, ಲಕ್ಷಿö್ಮÃದೇವಿ ಪತ್ತಾರ, ಅರ್ಚನಾ ಗಣಪ ಆದಾಪೂರ, ಕೋಮಲಾ ಕುದರಿಮೋತಿ ಅವರು ಪ್ರತಿಕ್ರಿಯೆ ನೀಡುವರು.
ಯುವ ಗೋಷ್ಠಿ;
ಜ. 10 ರಂದು ಮಧ್ಯಾಹ್ನ 2.30 ಗಂಟೆಗೆ ಯುವ ಗೋಷ್ಠಿ ನಡೆಯಲಿದ್ದು, ಸೋಮರೆಡ್ಡಿ ಅಳವಂಡಿ ಅಧ್ಯಕ್ಷತೆ ವಹಿಸುವರು. ಶಂಕ್ರಯ್ಯ ಅಬ್ಬಿಗೇರಿಮಠ ಹೊಸ ಕಾಲದಲ್ಲಿ ಯುವಜನತೆ ಕುರಿತಾಗಿ, ಮಂಜುನಾಥ ಜಿ. ಗೊಂಡಬಾಳ ಕೊಪ್ಪಳ ಜಿಲ್ಲೆಯ ಯುವ ಸಂಘಟನೆ ಕುರಿತಾಗಿ, ಡಾ. ರಾಜಶೇಖರ ನಾರನಾಳ ಪ್ರಸಾರ ಮಾಧ್ಯಮದಲ್ಲಿ ಯುವ ಶಕ್ತಿ ಕುರಿತಾಗಿ ವಿಷಯ ಮಂಡಿಸುವರು. ದೇವು ನಾಗನೂರ, ರಾಮಮೂರ್ತಿ ನವಲಿ, ಡಾ. ನಾಗರಾಜ ಹಿರಾ, ಪವನ ಕುಮಾರ ಅವರು ಪ್ರತಿಕ್ರಿಯೆ ನೀಡುವರು.
ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭ
ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭವನ್ನು ಜನವರಿ 10 ರಂದು ಸಂಜೆ 06 ಗಂಟೆಗೆ ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಉಪಮುಖ್ಯ ಮಂತ್ರಿಗಳು, ಸಾರಿಗೆ ಮತ್ತು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸಂಗಪ್ಪ ಸವದಿ ಅವರು ಸಮಾರೋಪ ಸಮಾರಂಭದ ಉದ್ಘಾಟನೆ ಮಾಡುವರು. ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕೊಪ್ಪಳ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ ರೆಡ್ಡಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ವಿಜಯನಗರದ ಅರಸು ಮನೆತನದವರಾದ ಲಲಿತಾರಾಣಿ ಶ್ರೀರಂಗದೇವರಾಯಲು ಆಗಮಿಸುವರು.
ಶ್ರೀ ಕೃಷ್ಣ ದೇವರಾಯ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ;
ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ; ಸಂಜೆ 04 ರಿಂದ 04-15 ರವರೆಗೆ ಇಲಕಲ್‌ನ ಗಣೇಶ ಎನ್. ರಾಯಬಾಗಿ ಅವರಿಂದ ಸುಗಮ ಸಂಗೀತ, 04-10 ರಿಂದ 04-20 ರವರೆಗೆ ಬೆಂಗಳೂರಿನ ಭೂಮಿಕಾ ನೃತ್ಯ ಹಾಗೂ ಸಂಗೀತ ಶಾಲೆಯಿಂದ ಜಾನಪದ ನೃತ್ಯ, 04-20 ರಿಂದ 04-30 ರವರೆಗೆ ಗಂಗಾವತಿಯ ವಿರುಪಾಕ್ಷಪ್ಪ ಇಟಗಿ ಅವರಿಂದ ಶಾಸ್ತಿçÃಯ ಗಾಯನ, 04-30 ರಿಂದ 04-45 ರವರೆಗೆ ಬೆಂಗಳೂರಿನ ಎಸ್.ಸ್ಮೃತಿ ಹಾಗೂ ತಂಡದವರಿAದ ಶಾಸ್ತಿçÃಯ ನೃತ್ಯ, 04-45 ರಿಂದ 05 ರವರೆಗೆ ಧಾರವಾಡದ ಸುಜಾತ ಗುರವ್ ಅವರಿಂದ ಶಾಸ್ತಿçÃಯ ಸಂಗೀತ, 05 ರಿಂದ 05-15 ರವರೆಗೆ ಧಾರವಾಡದ ವಿಜೇತಾ ವರ್ಣೇಕರ ಅವರಿಂದ ಸಮೂಹನೃತ್ಯ, 05-15 ರಿಂದ 05-25 ರವರೆಗೆ ಕಿನ್ನಾಳನ ಬಾಷು ಆರ್. ಹಿರೇಮನಿ ಅವರಿಂದ ಸುಗಮ ಸಂಗೀತ, 05-25 ರಿಂದ 05-35 ರವರೆಗೆ ಬೆಂಗಳೂರಿನ ಜೆ. ನಾಗೇಶ ಶ್ರೀ ನಾಟ್ಯಭಾರತಿ ಟ್ರಸ್ಟ ಅವರಿಂದ ಶಾಸ್ತಿçÃಯ ನೃತ್ಯ, 05-35 ರಿಂದ 05-50 ರವರೆಗೆ ವಿಜಯಪುರ ಶಶಿಕಲಾ ಶ್ರೀಕಾಂತ ಕುಲಹಳ್ಳಿ ಅವರಿಂದ ಸುಗಮ ಸಂಗೀತ, 05-50 ರಿಂದ 06 ರವರೆಗೆ ಯಲಬುರ್ಗಾದ ಮಾರೆಪ್ಪ ಮಾರೆಪ್ಪ ಚನ್ನದಾಸರ ಅವರಿಂದ ಜಾನಪದ ಹಾಡು, 06 ರಿಂದ 06-30 ರವರೆಗೆ ಆನೆಗೊಂದಿ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ, 06-30 ರಿಂದ 06-40 ರವರೆಗೆ ಹುಲಿಗಿ ನಾಟ್ಯನಾದ ಕಲಾಸಂಘ ಅವರಿಂದ ಶಾಸ್ತಿçÃಯ ನೃತ್ಯ, ರಾತ್ರಿ 06-40 ರಿಂದ 06-50 ರವರೆಗೆ ಬೆಂಗಳೂರಿನ ನಾಗಚಂದ್ರಿಕಾ ಭಟ್ ಅವರಿಂದ ಗಜಲ್ ಗಾಯನ, 06-50 ರಿಂದ 07 ರವರೆಗೆ ಆನೆಗೊಂದಿ ಚಂಪಕಮಾಲಾ ಅವರಿಂದ ಸುಗಮ ಸಂಗೀತ, ರಾತ್ರಿ 07 ರಿಂದ 07-30 ರವರೆಗೆ ಕೊಪ್ಪಳದ ಗಂಗಮ್ಮ ದೊಡ್ಡಮನಿ ಅವರಿಂದ ಯುಗಳ ಗೀತೆ, 07-30 ರಿಂದ 07-45 ರವರೆಗೆ ಧಾರವಾಡದ ಮಲ್ಲಪ್ಪ ಹೊಂಗಲ್ ಅವರಿಂದ ನಗೆ ಹಬ್ಬ, 07-45 ರಿಂದ 08 ರವರೆಗೆ ಗಂಗಾವತಿಯ ಆಹಾ ಸಂಗೀತA ಶಿಕ್ಷಕರ ಕಲಾ ತಂಡ ಅವರಿಂದ ಜಾನಪದ ಹಾಡು, 08 ರಿಂದ 08-15 ರವರೆಗೆ ಕುಷ್ಟಗಿಯ ಎಸ್.ಎಸ್. ಹಿರೇಮಠ (ತಬಲಾ ಸೋಲೋ) ಅವರಿಂದ ಶಾಸ್ತಿçÃಯ ವಾದ್ಯ ಸಂಗೀತ, 08-15 ರಿಂದ 08-30 ರವರೆಗೆ ಕೊಪ್ಪಳದ ಹೇಮಂತ ಕುಮಾರ ಹಾಗೂ ಸಂಗಡಿಗರು ಅವರಿಂದ ಯುಗಳ ಸಂಗೀತ, 08-30 ರಿಂದ 08-40 ರವರೆಗೆ ಕೊಪ್ಪಳದ ಜಿಲ್ಲಾ ನಾಗರಿಕರ ವೇದಿಕೆ ಅವರಿಂದ ಜಾನಪದ ನೃತ್ಯ, 08-40 ರಿಂದ 08-50 ರವರೆಗೆ ಭಾಗ್ಯನಗರದ ನಾಗರಾಜ ಶ್ಯಾವಿ ಅವರಿಂದ ಬಾನ್ಸುರಿ ವಾದನ, 08-50 ರಿಂದ 09 ರವರೆಗೆ ಬಿನ್ನಾಳನ ಶಂಕ್ರಪ್ಪ ಬಿನ್ನಾಳ ಅವರಿಂದ ಶಾಸ್ತಿçÃಯ ವಾದ್ಯ ಸಂಗೀತ, 09 ರಿಂದ 09-15 ರವರೆಗೆ ಗಂಗಾವತಿಯ ಚಂದ್ರಕಲಾ ಭೂಮಿ ಟ್ರಸ್ಟ ಅವರಿಂದ ಸಮೂಹ ನೃತ್ಯ, 09-15 ರಿಂದ 09-30 ರವರೆಗೆ ದಾದಾಪೀರ ಮಂಜರ್ಲಾ ಅವರಿಂದ ಜನಪದ ಸಂಗೀತ, 09-30 ರಿಂದ 09-45 ರವರೆಗೆ ಮಾರುತೇಶ ಮೆಣೆದಾಳ ಅವರಿಂದ ವಚನಗಾಯನ, 09-45 ರಿಂದ 10 ರವರೆಗೆ ಬಿನ್ನಾಳನ ಮಾರುತಿ ಬಿ. ದೊಡ್ಡಮನಿ ಅವರಿಂದ ಶಾಸ್ತಿçÃಯ ಗಾಯನ, 10ರಿಂದ 10-25 ರವರೆಗೆ ಮೊರನಾಳದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳಿಕ್ಯಾತರ ಅವರಿಂದ ತೊಗಲು ಗೊಂಬೆಯಾಟ, 10-25 ರಿಂದ 11-25 ರವರೆಗೆ ಹನುಮನಹಳ್ಳಿಯ ಕುಬೇರಪ್ಪ ಬಡಿಗೇರ ಅವರಿಂದ ನಾಟಕ (ಗಂಡುಗಲಿ ಕುಮಾರರಾಮ), 11-25 ರಿಂದ 12 ರವರೆಗೆ ಮೊರನಾಳ ಶಂಕ್ರಪ್ಪ ಹೊರಪೇಟೆ ಅವರಿಂದ ಬಯಲಾಟ (ಕುಶಲವರ ಕಾಳಗ) ಕಾರ್ಯಕ್ರಮ ನಡೆಯಲಿವೆ.
ಶ್ರೀ ವಿದ್ಯಾರಣ್ಯ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ;
ಜ. 10 ರಂದು ಸಂಜೆ 04 ರಿಂದ 04-15 ರವರೆಗೆ ಗಂಗಾವತಿಯ ಪ್ರಿಯಾಂಕ ನವಲಿ ಹಿರೇಮಠ ಅವರಿಂದ ಸಮೂಹ ನೃತ್ಯ, 04-15 ರಿಂದ 04-30 ರವರೆಗೆ ಸಿದ್ದಾಪುರದ ಶಿವಕುಮಾರ ಜಿ. ಮಹಾಂತ ಅವರಿಂದ ಸುಗಮ ಸಂಗೀತ, 04-30 ರಿಂದ 04-45 ರವರೆಗೆ ಕೊಪ್ಪಳದ ಕೆ. ನವೀನ ಹಾಗೂ ತಂಡ ಅವರಿಂದ ಶಾಸ್ತಿçÃಯ ನೃತ್ಯ, 04-45 ರಿಂದ 05 ರವರೆಗೆ ಮಂಗಳೂರು ಹನುಮಂತಪ್ಪ ಮುದುಕಪ್ಪ ಭಜಂತ್ರಿ ಅವರಿಂದ ಕ್ಲಾರಿಯೋನೆಟ್ ವಾದನ, 05 ರಿಂದ 05-15 ರವರೆಗೆ ಭಾಗ್ಯನಗರದ ಶಕುಂತಲಾ ಬೆನ್ನಾಳ ಅವರಿಂದ ಶಾಸ್ತಿçÃಯ ಗಾಯನ, 05-15 ರಿಂದ 5-30 ರವರೆಗೆ ಹಿರೇನಂದಿಹಾಳದ ಬಾಲನಗೌಡ ಯಮನಗೌಡ ಹಾದಿಮನಿ ಅವರಿಂದ ಜಾನಪದ ಹಾಡು, 05-30 ರಿಂದ 05-45 ರವರೆಗೆ ಮುನಿರಾಬಾದನ ನೇಹಾ ನಾಗರಾಜ ಅವರಿಂದ ಶಾಸ್ತಿçÃಯ ನೃತ್ಯ, 05-45 ರಿಂದ 06 ರವರೆಗೆ ಆದರಗುಂಚಿ ಗಂಗಾಧರ ಮಹಾಂತ ಅವರಿಂದ ಸುಗಮ ಸಂಗೀತ, 06 ರಿಂದ 06-15 ರವರೆಗೆ ಹನುಮಸಾಗರದ ವಾಣಿಶ್ರೀ ಮಚಗಾರ ಅವರಿಂದ ವಯೋಲಿನ್ ವಾದನ, 06-15 ರಿಂದ 06-30 ರವರೆಗೆ ಗಂಗಾವತಿಯ ನಟರಾಜ ನೃತ್ಯಕಲಾಸಂಘ ಅವರಿಂದ ಸಮೂಹನೃತ್ಯ, 06-30 ರಿಂದ 06-45 ರವರೆಗೆ ತಾವರಗೇರಾದ ಶಿವರಾಜ ಶಾಸ್ತಿç ರಾಂಪೂರ ಅವರಿಂದ ಕಥಾ ಕೀರ್ತನ, 06-45 ರಿಂದ 07 ರವರೆಗೆ ನವಲಿ ಹನುಮಂತಪ್ಪ ಭಜಂತ್ರಿ ಅವರಿಂದ ವಚನ ಗಾಯನ, 07 ರಿಂದ 07-15 ರವರೆಗೆ ಕೊಪ್ಪಳದ ಬಸನಗೌಡ ಪರಮೇಶ್ವರಪ್ಪ ಮರೇಗೌಡರ ಅವರಿಂದ ಸುಗಮ ಸಂಗೀತ, 07-15 ರಿಂದ 07-30 ರವರೆಗೆ ಗಂಗಾವತಿಯ ವಾರುಣಿ ನವಲಿ ಹಾಗೂ ತಂಡದವರಿAದ ಸಮೂಹನೃತ್ಯ, 07-30 ರಿಂದ 07-45 ರವರೆಗೆ ಕುಣಿಕೇರಿ ತಾಂಡಾದ ಪದ್ಮಪ್ರಿಯ ಹಾಗೂ ತಂಡದವರಿAದ ಲಂಬಾಣಿ ನೃತ್ಯ, 07-45 ರಿಂದ 08 ರವರೆಗೆ ಕಿನ್ನಾಳ ಲಚ್ಚಪ್ಪ ಹಳೆಪೇಟೆ ಅವರಿಂದ ಶಾಸ್ತಿçÃಯ ಗಾಯನ, ರಾತ್ರಿ 08 ರಿಂದ 08-10 ರವರೆಗೆ ಗಂಗಾವತಿಯ ಆರಾಧನಾ ನೃತ್ಯಕಲಾ ತಂಡದಿAದ ಶಾಸ್ತಿçÃಯ ನೃತ್ಯ, 08-10 ರಿಂದ 08-20 ರವರೆಗೆ ಬಳ್ಳಾರಿಯ ಸಮೀರ ಹಾಗೂ ತಂಡದಿAದ ಜಾನಪದ ನೃತ್ಯ, 08-20 ರಿಂದ 08-40 ರವರೆಗೆ ಮೊರನಾಳ ಯಂಕಪ್ಪ ಶಿಳ್ಳೆಕ್ಯಾತರ ಅವರಿಂದ ತೊಗಲು ಗೊಂಬೆಯಾಟ, 08-40 ರಿಂದ 08-50 ರವರೆಗೆ ಗಂಗಾವತಿಯ ಹೆಚ್. ಭಾವನಾ ಅವರಿಂದ ಭರತನಾಟ್ಯ, 08-50 ರಿಂದ 09 ರವರೆಗೆ ಮುನಿರಾಬಾದನ ಶೃತಿ ಹ್ಯಾಟಿ ಅವರಿಂದ ಶಾಸ್ತಿçÃಯ ಗಾಯನ, 09 ರಿಂದ 09-10 ರವರೆಗೆ ಗಂಗಾವತಿಯ ರಮ್ಯಾ ದೇವರಾಜ ಪೊಲೀಸ್ ಪಾಟೀಲ್ ಅವರಿಂದ ಶಾಸ್ತಿçÃಯ ನೃತ್ಯ, 09-10 ರಿಂದ 09-20 ರವರೆಗೆ ನರಸಿಂಹ ದರೋಜಿ ಅವರಿಂದ ಸುಗಮ ಸಂಗೀತ, 09-20 ರಿಂದ 09-30 ರವರೆಗೆ ಸಿದ್ದಪ್ಪ ಶಿವಪ್ಪ ಭಜಂತ್ರಿ ಅವರಿಂದ ಶಾಸ್ತಿçÃಯ ವಾದ್ಯಸಂಗೀತ, 09-30 ರಿಂದ 09-40 ರವರೆಗೆ ಆನೆಗೊಂದಿಯ ಸಂಜನಾ ಅವರಿಂದ ಭರತನಾಟ್ಯ, 09-40 ರಿಂದ 11 ರವರೆಗೆ ಚಿಕ್ಕಬಿಡನಾಳದ ವಿಸ್ತಾರ ರಂಗ ಶಾಲೆಯಿಂದ ನಾಟಕ, 11 ರಿಂದ 12 ರವರೆಗೆ ಕೊಪ್ಪಳದ ಪ್ರಕಾಶಗೌಡ ಹಾಗೂ ತಂಡದವರಿAದ ನಾಟಕ-(ಹೈ-ಕ ನಿವಾಸ#371) ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
========