Saturday, 7 December 2019

ಡಿ. 27 ರಿಂದ ಕಾವ, ಜಾಣ ಮತ್ತು ರತ್ನ ಪರೀಕ್ಷೆ

ಡಿ. 27 ರಿಂದ ಕಾವ, ಜಾಣ ಮತ್ತು ರತ್ನ ಪರೀಕ್ಷೆ
ಕೊಪ್ಪಳ ಡಿ. 06 (ಕರ್ನಾಟಕ ವಾರ್ತೆ): ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಸಕ್ತ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ಡಿಸೆಂಬರ್. 27, 28 ಮತ್ತು 29 ರಂದು ಮೂರು ದಿನಗಳ ಕಾಲ ರಾಜ್ಯದ 19 ಕೇಂದ್ರಗಳಲ್ಲಿ ನಡೆಯಲಿವೆ.
ಪರೀಕ್ಷಾ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ. ಡಿಸೆಂಬರ್. 18 ನಂತರವೂ ಪ್ರವೇಶ ಪತ್ರ ತಲುಪದಿರುವ ಬಗ್ಗೆ ವಿದ್ಯಾರ್ಥಿಗಳು ಬೆಂಗಳೂರು-18, ಚಾಮರಾಜಪೇಟೆ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳ ಕಡೆ ವಿಚಾರಿಸಬಹುದು. ಬೇರೆ ಜಿಲ್ಲೆಯವರಿಗೆ ಪ್ರವೇಶ ಪತ್ರ ತಲುಪದಿದ್ದಲ್ಲಿ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬಹುದು. ಅಂತರ್ಜಾಲ ವೈಬ್‌ಸೈಟ್  ತಿತಿತಿ.ಞಚಿsಚಿಠಿಚಿ.iಟಿ   ಮೂಲಕ ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 080-26623584 ಗೆ ಸಂಪರ್ಕಿಸಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ. ಚೆನ್ನೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಯವರಿಗೆ ಅಪ್ರೆಂಟಿಷಿಪ್ ತರಬೇತಿ : ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ

ಪರಿಶಿಷ್ಟ ಜಾತಿಯವರಿಗೆ ಅಪ್ರೆಂಟಿಷಿಪ್ ತರಬೇತಿ : ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ
ಕೊಪ್ಪಳ ಡಿ. 06 (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಗಿರಿಜನ ಉಪಯೋಜನೆಯಡಿ ಇಲಾಖೆಯ ಆಯ್ದ ಜಿಲ್ಲಾ ಕಚೇರಿಗಳಲ್ಲಿ ಕ್ಷೇತ್ರ ಪ್ರಚಾರ ಹಾಗೂ ಮಾಧ್ಯಮ ತರಬೇತಿ ನೀಡಲು ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ಪುರುಷ ಅಭ್ಯರ್ಥಿಗಳಿಂದ ಅಪ್ರೆಂಟಿಷಿಪ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಪತ್ರಿಕೋದ್ಯಮ ಅಪ್ರೆಂಟಿಷಿಪ್ ತರಬೇತಿಯು ಹತ್ತು ತಿಂಗಳ ಅವಧಿ ಆಗಿರುತ್ತದೆ. ಅಭ್ಯರ್ಥಿಗಳು ಗಣಕಯಂತ್ರ ಜ್ಞಾನ, ಅದರಲ್ಲೂ ಕನ್ನಡ ಭಾಷೆಯಲ್ಲಿನ ಗಣಕ ಜ್ಞಾನ ಕಡ್ಡಾಯವಾಗಿರುತ್ತದೆ. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಮೂಲಕ ಪ್ರತಿ ಮಾಹೆ ತಲಾ 15 ಸಾವಿರ ರೂ.ಗಳ ಶಿಷ್ಯ ವೇತನವನ್ನು ಪಾವತಿಸಲಾಗುತ್ತದೆ. 
ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರ ಹಾಗೂ ಇನ್ನಿತರ ಪೂರಕ ದಾಖಲೆಗಳನ್ನು ದ್ವಿ-ಪ್ರತಿಯಲ್ಲಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನವಾಗಿದೆ. 
ಅರ್ಜಿಗಾಗಿ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಅಥವಾ ದೂ.ಸಂ.08539-220607 ಕ್ಕೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ : ಅರ್ಜಿ ಆಹ್ವಾನ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ : ಅರ್ಜಿ ಆಹ್ವಾನ
ಕೊಪ್ಪಳ ಜೂ.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಐಎಎಸ್, ಕೆಎಎಸ್ ಹಾಗೂ ಬ್ಯಾಂಕಿAಗ್ ಪ್ರೋಬೇಷನರಿ ಆಫೀಷ್‌ರ್ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. 
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಪ್ರಸಕ್ತ ಸಾಲಿನ ಐಎಎಸ್, ಕೆಎಎಸ್ ಹಾಗೂ ಬ್ಯಾಂಕಿAಗ್ ಪ್ರೋಬೇಷನರಿ ಆಫೀಷ್‌ರ್ ಸ್ಪರ್ಧಾತ್ಮಕ ಪರೀಕ್ಷೆಳಿಗೆ ಪೂರ್ವ ಪರೀಕ್ಷಾ ತರಬೇತಿ ನೀಡುತ್ತಿದ್ದು.   ಆಸಕ್ತ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1,  2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳು ಜು.12 ರೊಳಗಾಗಿ  ಆನ್‌ಲೈನ್ ಮೂಲಕ ಅರ್ಜಿಯನ್ನು  ಸಲ್ಲಿಸಬೇಕಾಗಿದೆ.
 ಹೆಚ್ಚಿನ ಮಾಹಿತಿಗಾಗಿ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ  ವೆಬ್‌ಸೈಟ್ ಗೆ ಸಂಪರ್ಕಿಸಿಬಹುದಾಗಿದೆ ಎಂದು ಜಿಲ್ಲಾ ಹಿಂದುಳಿತ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ ಜೂ.29 (ಕರ್ನಾಟಕ ವಾರ್ತೆ): ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ನಿರುದ್ಯೋಗ ವಿದ್ಯಾವಂತ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ``ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ)'' ಅಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
``ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ)'' ಯೋಜನೆಯಡಿ ಸೇವಾ ಚಟುವಟಿಕೆಗಳಿಗೆ ಗರಿಷ್ಠ ಸಾಲ 10 ಲಕ್ಷ, ಉತ್ಪಾದನಾ ಘಟಕಗಳಿಗೆ ಗರಿಷ್ಠ ಸಾಲ 25 ಲಕ್ಷ.  ಸಾಲದ ಮೊತ್ತದ ಮೇಲೆ ಸಾಮಾನ್ಯ ವರ್ಗದ ಗ್ರಾಮೀಣ ಪ್ರದೇಶದವರಿಗೆ ಯೋಜನೆ ವೆಚ್ಚದ ಶೇ.25 ರಷ್ಟು ಹಾಗೂ ನಗರ ಪ್ರದೇಶದವರಿಗೆ ಯೋಜನೆ ವೆಚ್ಚದ ಶೇ.15 ರಷ್ಟು ಮತ್ತು ವಿಶೇಷ ವರ್ಗದ (ಪರಿಶಿಷ್ಟ ಜಾತಿ, ಪ.ಪಂ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು, ಮಾಜಿ ಸೈನಿಕರು, ಮಹಿಳೆ ಫಲಾನುಭವಿಗಳು) ಗ್ರಾಮೀಣ ಪ್ರದೇಶದವರಿಗೆ ಯೋಜನೆ ವೆಚ್ಚದ ಶೇ.35 ರಷ್ಟು ಹಾಗೂ ನಗರ ಪ್ರದೇಶದವರಿಗೆ ಯೋಜನೆ ವೆಚ್ಚದ ಶೇ.25 ರಷ್ಟು ಸಹಾಯಧನ ಸೌಲಭ್ಯ ಇರುತ್ತದೆ.  ಉದ್ದಿಮೆಯನ್ನು ಪ್ರಾರಂಭ ಮಾಡುವ ಸಾಮಾನ್ಯ ವರ್ಗದವರು ಶೇ.10 ಮತ್ತು ವಿಶೇಷ ವರ್ಗದವರು ಶೇ.5 ರಷ್ಟು ಸ್ವಂತ ಭಂಡವಾಳ ಹೂಡಬೇಕಾಗಿರುತ್ತದೆ.
ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ 18 ವರ್ಷ ತುಂಬಿರಬೇಕು.  ಈ ಯೋಜನೆಯು ಹೊಸದಾಗಿ ಪ್ರಾರಂಭಿಸುವ ಘಟಕಗಳಿಗೆ ಮಾತ್ರ ಅನ್ವಯಿಸುತ್ತದೆ.  ಯೋಜನೆಯ ಸೌಲಭ್ಯ ಪಡೆಯಲು ಅಪೇಕ್ಷಿಸುವ ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ ತಿತಿತಿ.ಞvioಟಿಟiಟಿe.gov.iಟಿ/ಠಿmegಠಿeಠಿoಡಿಣಚಿಟ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಹಾರ್ಡ್ ಕಾಪಿಯ 2 ಸೆಟ್‌ನ್ನು ಜಂಟಿ ನಿರ್ದೇಶಕರ ಕಚೇರಿ ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ರವರ ಕಚೇರಿಗೆ ಸಲ್ಲಿಸಬೇಕು.  ಹೆಚ್ಚನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಮೊ.ಸಂ. 9480825631, ಜಿಲ್ಲಾ ಕೈಗಾರಿಕಾ ಕೇಂದ್ರ ಪ್ರಥಮ ದರ್ಜೆ ಸಹಾಕರು ಮೊ.ಸಂ. 7795142631 ಮತ್ತು ಖಾಗಿ ಮತ್ತು ಗ್ರಾಮೋದ್ಯೋಗ ಆಯೋಗ ಬೆಂಗಳೂರು ಮೊ.ಸಂ. 8317314107, ಇವರನ್ನು ಸಂಪರ್ಕಿಸವುವAತೆ ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ

ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ ಜೂ.29 (ಕರ್ನಾಟಕ ವಾರ್ತೆ): ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಗ್ರಾಮೀಣ ನಿರುದ್ಯೋಗ ವಿದ್ಯಾವಂತ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ``ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಸಿಎಂಇಜಿಪಿ)'' ಅಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
``ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಸಿಎಂಇಜಿಪಿ)'' ಯೋಜನೆಯಡಿ ಸೇವಾ ಚಟುವಟಿಕೆಗಳಿಗೆ ಗರಿಷ್ಠ ಸಾಲ 05 ಲಕ್ಷ, ಕೈಗಾರಿಕಾ ಚಟುವಟಿಕೆಗಳಿಗೆ ಗರಿಷ್ಠ ಸಾಲ 10 ಲಕ್ಷ.  ಸಾಲದ ಮೊತ್ತದ ಮೇಲೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.25% (ಗರಿಷ್ಠ ಮೊತ್ತ ರೂ. 2.50 ಲಕ್ಷಗಳಿಗೆ ಮಿತಿ) ಮತ್ತು ವಿಶೇಷ ವರ್ಗದ (ಪರಿಶಿಷ್ಟ ಜಾತಿ, ಪ.ಪಂ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು, ಮಾಜಿ ಸೈನಿಕರು, ಮಹಿಳೆ) ಫಲಾನುಭವಿಗಳಿಗೆ ಶೇ. 25% (ಗರಿಷ್ಠ ಮೊತ್ತ ರೂ. 3.50 ಲಕ್ಷಗಳಿಗೆ ಮಿತಿ) ಸಹಾಯಧನ ಸೌಲಭ್ಯ ಇರುತ್ತದೆ.  ಉದ್ದಿಮೆಯನ್ನು ಪ್ರಾರಂಭ ಮಾಡುವ ಸಾಮಾನ್ಯ ವರ್ಗದವರು ಶೇ.10 ಮತ್ತು ವಿಶೇಷ ವರ್ಗದವರು ಶೇ.5 ರಷ್ಟು ಸ್ವಂತ ಭಂಡವಾಳ ಹೂಡಬೇಕಾಗಿರುತ್ತದೆ.
ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ 18 ವರ್ಷ ತುಂಬಿರಬೇಕು. ಹಾಗೂ ಸಾಮಾನ್ಯ ವರ್ಗದವರು 35 ವರ್ಷ ಹಾಗೂ ವಿಶೇಷ ವರ್ಗದವರು 45 ವರ್ಷದೊಳಗಿರಬೇಕು.  ಈ ಯೋಜನೆಯು ಹೊಸದಾಗಿ ಪ್ರಾರಂಭಿಸುವ ಘಟಕಗಳಿಗೆ ಮಾತ್ರ ಅನ್ವಯಿಸುತ್ತದೆ.  ಯೋಜನೆಯ ಸೌಲಭ್ಯ ಪಡೆಯಲು ಅಪೇಕ್ಷಿಸುವ ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ hಣಣಠಿ://ಛಿmegಠಿ.ಞಚಿಡಿ.ಟಿiಛಿ.iಟಿ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಹಾರ್ಡ್ ಕಾಪಿಯ 2 ಸೆಟ್‌ನ್ನು ಜಂಟಿ ನಿರ್ದೇಶಕರ ಕಚೇರಿ ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ರವರ ಕಚೇರಿಗೆ ಸಲ್ಲಿಸಬೇಕು.  ಹೆಚ್ಚನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಮೊ.ಸಂ. 9480825631, ಜಿಲ್ಲಾ ಕೈಗಾರಿಕಾ ಕೇಂದ್ರ ಪ್ರಥಮ ದರ್ಜೆ ಸಹಾಕರು ಮೊ.ಸಂ. 8660843575 ಹಾಗೂ ಕೊಪ್ಪಳ ಮತ್ತು ಯಲಬುರ್ಗಾ ಕೈಗಾರಿಕಾ ವಿಸ್ತರಣಾಧಿಕಾರಿ ಮೊ.ಸಂ. 8497060159, ಇವರನ್ನು ಸಂಪರ್ಕಿಸವುವAತೆ ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
======

ಯುವತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಯುವತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ, ಜೂ. 20 (ಕರ್ನಾಟಕ ವಾರ್ತೆ):  ಕೊಪ್ಪಳ ತಾಲೂಕಿನ ಇರಕಲಗಡಾ ನಿವಾಸಿ ಸುಚೇತಾ ತಂದೆ ಉಮೇಶ ಅಂಗಡಿ ವಯಸು 19 ವರ್ಷ, ಎಂಬ ಯುವತಿಯು ಮೇ.17 ರಂದು ಕಾಣೆಯಾದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸುಚೇತಾ ತಂದೆ ಉಮೇಶ ಅಂಗಡಿ ವಯಸು 19 ವರ್ಷ, ಎಂಬ ಯುವತಿಯು ಮೇ. 17 ರಂದು ಸಂಜೆ 05 ಗಂಟೆಯ ಸುಮಾರಿಗೆ  ಮನೆಯಿಂದ ಹೊರಗೆ ಹೋಗಿ  ವಾಪಾಸ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ನನ್ನ ಮಗಳನ್ನು ನಮ್ಮ ಸಂಭAದಿಕರಲ್ಲಿ ಮತ್ತು ಮುಂತಾದ ಸ್ಥಳಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಎಂದು ಯುವತಿಯ ತಂದೆ ಉಮೇಶ ಅಂಗಡಿ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಯುವತಿಯ ಚಹರೆ ವಿವರ ಇಂತಿದೆ, 5 ಫೀಟ್ ಎತ್ತರ, ಮದ್ಯಮ ಮೈಕಟ್ಟು, ಕೆಂಪು ಮೈಬಣ್ಣ, ಕಪ್ಪು ತಲೆ ಕೂದಲು  ದುಂಡುಮುಖ ಹೊಂದಿದ್ದಾಳೆ. ಬಲಗೈ ಗೆ ಸುಟ್ಟ ಗಾಯದ ಕಲೆ ಇದೆ. ಕನ್ನಡ, ಇಂಗ್ಲೀಷ್  ಮಾತನಾಡುತ್ತಾಳೆ.  ಕಾಣೆಯಾದಾಗ ಕೆಂಪು ಟಾಪ್ ಧರಿಸಿದ್ದಾಳೆ, ಈ ಯುವತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನA 08539-230222-100, ಕೊಪ್ಪಳ ಡಿವೈಎಸ್‌ಪಿ-08539.230342. 9480803720, ಕೊಪ್ಪಳ ಗ್ರಾಮೀಣ ಸಿಪಿಐ-9480803731 ಕೊಪ್ಪಳ ಎಸ್ ಪಿ-08539, 230111 ಕೊಪ್ಪಳ ಗ್ರಾಮೀಣ ಪಿಎಸೈ-08539,221333,9480803746 ಇಲ್ಲಿಗೆ  ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷರಾಗಿ ಸೈಯದ್ ನಾಸಿರುದ್ದೀನ್ ಖಾದ್ರಿ ಅಧಿಕಾರ ಸ್ವೀಕಾರ

ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷರಾಗಿ ಸೈಯದ್ ನಾಸಿರುದ್ದೀನ್ ಖಾದ್ರಿ ಅಧಿಕಾರ ಸ್ವೀಕಾರ
ಕೊಪ್ಪಳ, ಜೂ. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷರಾಗಿ ಸೈಯದ್ ನಾಸಿರುದ್ದೀನ್ ಖಾದ್ರಿ ಅವರು ಗುರುವಾರದಂದು ಅಧಿಕಾರ ಸ್ವೀಕರಿಸಿದರು. 
ಕೊಪ್ಪಳ ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷರನ್ನಾಗಿ ಗಂಗಾವತಿಯ ಜಾಮೀಯ ಮಸ್ಜೀದ್ ಅಧ್ಯಕ್ಷರಾದ ಸೈಯದ್ ನಾಸಿರುದ್ದೀನ್ ಖಾದ್ರಿ ಇವರನ್ನು ರಾಜ್ಯ ಸರ್ಕಾರವು ನೇಮಿಸಿ ಆದೇಶ ಹೊರಡಿಸಿದ್ದು, ಸೈಯದ್ ನಾಸಿರುದ್ದೀನ್ ಖಾದ್ರಿರವರು ಸರ್ಕಾರದ ಆದೇಶ ಪತ್ರವನ್ನು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರಿಗೆ ಸಲ್ಲಿಸಿ ಜಿಲ್ಲಾ ವಕ್ಫ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡರು.  ಜಿಲ್ಲಾ ವಕ್ಫ ಅಧಿಕಾರಿ ಮಕ್ಬುಲ್‌ಪಾಶಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಹೂ ಗುಚ್ಚ ನೀಡಿ ಜಿಲ್ಲಾ ವಕ್ಫ ಬೋರ್ಡ್ ನೂತನ ಅಧ್ಯಕ್ಷರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸಲಾಯಿತು.
(ಫೋಟೋ ಕಳುಹಿಸಿದೆ)
======

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ, ಜೂ. 20 (ಕರ್ನಾಟಕ ವಾರ್ತೆ): ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಬೆಸ್ತ, ಕೋಳಿ, ಕಬ್ಬಲಿಗ, ಮೊಗವೀರ ಮತ್ತು ಇದರ ಉಪಜಾತಿಗೆ ಸೇರಿದ ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಲ ಮತ್ತು ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಸಾಲ ಯೋಜನೆ;
  ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆ ಅನುಸಾರ ಗರಿಷ್ಠ ರೂ.2,00,000/-ಗಳ ವರೆಗೆ ಆರ್ಥಿಕ ನೆರವು.  ಈ ಮೊತ್ತದಲ್ಲಿ ಶೇ.30 ರಿಂದ 15ರವರೆಗೆ ಸಹಾಯಧನ ಉಳಿಕೆ ಮೊತ್ತ ಶೇ.4ರ ಬಡ್ಡಿದರದಲ್ಲಿ ಸಾಲ.
ಅರಿವು ಶೈಕ್ಷಣಿಕ ಸಾಲ ಯೋಜನೆ;
  ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಕೋರ್ಸ್ನ ವಾಸ್ತವಿಕ ವೆಚ್ಚ ಅಥವಾ ವಾರ್ಷಿಕ ಗರಿಷ್ಠ ರೂ.1.00 ಲಕ್ಷಗಳಂತೆ ಶೇ.2ರ ಬಡ್ಡಿದರದಲ್ಲಿ ಸಾಲ.  ವಿದ್ಯಾರ್ಥಿಗಳು ಸಿ.ಇ.ಟಿ. ಮೂಲಕ ಅಥವಾ ಮೆರಿಟ್ ಆಧಾರದ ಮೇಲೆ ಸೀಟ್ ಪಡೆದು ಬಿ.ಇ., ಎಂ.ಬಿ.ಬಿ.ಎಸ್., ಬಿ.ಯೂ.ಎಂ.ಎಸ್., ಬಿ.ಡಿ.ಎಸ್. ಬಿ.ಎ.ಎಂ.ಎಸ್. ಬಿ.ಎಚ್.ಎಂ.ಎಸ್. ಎಂ.ಬಿ.ಎ. ಎಂ.ಟೆಕ್. ಎಂ.ಇ., ಎಂ.ಡಿ., ಪಿಹೆಚ್.ಡಿ. ಬಿ.ಸಿ.ಎ./ಎಂ.ಸಿ.ಎ ಎಂ.ಎಸ್.ಆಗ್ರ‍್ರಿಕಲ್ಚರ್ ಬಿ.ಎಸ್‌ಸಿ. ನರ್ಸಿಂಗ್, ಬಿ.ಫಾರಂ/ ಎಂ.ಫಾರA ಬಿ.ಎಸ್‌ಸಿ. ಪ್ಯಾರಾ ಮೆಡಿಕಲ್ ಬಿ.ಎಸ್‌ಸಿ. ಬಯೋ ಟೆಕ್ನಾಲಜಿ ಬಿ.ಟೆಕ್ ಬಿ.ಪಿ.ಟಿ. ಬಿ.ವಿ.ಎಸ್.ಸಿ/ ಎಂ.ವಿ.ಎಸ್.ಸಿ. ಬಿ.ಎನ್.ಎಂ. ಬಿ.ಹೆಚ್.ಎಮ್. ಎಂ.ಡಿ.ಎಸ್. ಎಂ.ಎಸ್.ಡಬ್ಲೂö್ಯ ಎಲ್.ಎಲ್.ಎಂ. ಎಂ.ಎಫ್.ಎ. ಎಂ.ಎಸ್‌ಸಿ. ಬಯೋ ಟೆಕ್ನಾಲಜಿ ಮತ್ತು ಎಂ.ಎಸ್‌ಸಿ. ಎಜಿ ಎಂ.ಕಾA ಎಂ.ಎಸ್ಸಿ.  ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಕುಟುಂಬದ ವಾರ್ಷಿಕ ವರಮಾನ ರೂ.3.50ಲಕ್ಷಗಳ ಮಿತಿಯಲ್ಲಿರಬೇಕು.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ;
  ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಗಳಾದ ಪೋಸ್ಟ್ಡಾಕ್ರö್ಟಲ್, ಪಿಹೆಚ್.ಡಿ., ಮಾಸ್ಟರ್ ಡಿಗ್ರಿ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡಲು ಶೇ.4ರ ಬಡ್ಡಿದರದಲ್ಲಿ ವಾರ್ಷಿಕ ರೂ.5.00ಲಕ್ಷಗಳಂತೆ, 03 ವರ್ಷಗಳ ಕೋರ್ಸ್ನ ಅವಧಿಗೆ,  ಗರಿಷ್ಠ ರೂ.15.00ಲಕ್ಷಗಳ ಸಾಲ ಸೌಲಭ್ಯ.  ಈ ಸಾಲದ ಭದ್ರತೆಗೆ ಸ್ಥಿರಾಸ್ತಿಯನ್ನು ಆಧಾರ ಮಾಡಬೇಕು.  ವಿದ್ಯಾರ್ಥಿಗಳು ಗರಿಷ್ಠ 35 ವರ್ಷಗಳ ವಯೋಮಿತಿಯಲ್ಲಿರಬೇಕು.  ವಾರ್ಷಿಕ ವರಮಾನ ರೂ.3.50ಲಕ್ಷಗಳನ್ನು ಮೀರಿರಬಾರದು.
ಗಂಗಾ-ಕಲ್ಯಾಣ ನೀರಾವರಿ ಯೋಜನೆ;
  ವೈಯಕ್ತಿಕ ಕೊಳವೆಬಾವಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‌ಸೆಟ್, ಉಪಕರಣಗಳನ್ನು ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವುದು. ಘಟಕ ವೆಚ್ಚ ರೂ.2.50ಲಕ್ಷಗಳಲ್ಲಿ ರೂ.2.00ಲಕ್ಷಗಳ ಸಹಾಯಧನ ಹಾಗೂ ರೂ.50,000/-ಗಳ ಶೇ.4ರ ಬಡ್ಡಿದರದಲ್ಲಿ ಸಾಲ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾ||, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ.4.00ಲಕ್ಷಗಳು. ಈ ಮೊತ್ತದಲ್ಲಿ ರೂ.3.50 ಲಕ್ಷ ಸಹಾಯಧನ ಹಾಗೂ ರೂ.50,000/- ಶೇ.4ರ ಬಡ್ಡಿದರದಲ್ಲಿ ಸಾಲ. ಘಟಕವೆಚ್ಚದಲ್ಲಿ ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ ರೂ.50,000/-ಗಳನ್ನು ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಲಾಗುವುದು.  ಮಲೆನಾಡು ಪ್ರದೇಶಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚದಲ್ಲಿ ತೆರೆದ ಬಾವಿಗಳ ಮಂಜೂರು.
ಅರ್ಜಿ ಸಲ್ಲಿಸಲು ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1,ಕ್ಕೆ ಸೇರಿದ ಕ್ರಮ ಸಂಖ್ಯೆ:6(ಎ) ಯಿಂದ 6(ಎಕೆ)ವರೆಗಿನ ಬೆಸ್ತ, ಅಂಬಿಗ/ ಅಂಬಿ, ಬರ‍್ಕಿ/ ಬಾರಿಕ, ಬೆಸ್ತರ್, ಭೋಯಿ, ರಾಜಬೋಯಿ, ಬುಂಡೆ-ಬೆಸ್ತರ್, ದಾಲ್ಚಿ, ದಾವತ್, ಗಬಿಟ್, ಗಲಾಡಕೊಂಕಣಿ, ಗಂಗೆಮಕ್ಕಳು, ಗಂಗಾಕುಲ, ಗಂಗಾಮತ, ಗಂಗಾಮತಸ್ಥ, ಗಂಗಾಪುತ್ರ, ಗೌರಿಮತ, ಬುಂಡೆ-ಬೆಸ್ತ/ ಗುಂಡೆ ಬೆಸ್ತ, ಹರಕಂತ್ರ, ಜಲಗಾರ, ಕಬ್ಬೇರ/ ಕಬ್ಬೇರ್, ಕಬ್ಬಲಿಗ, ಕಬ್ಬಿಲಿ, ಕಹರ್, ಖಾರ್ವಿ/ ಕೊಂಕಣಖಾರ್ವಿ, ಕೋಳಿ, ಕೋಳಿಮಹದೇವ್, ಮಡ್ಡರ್, ಮೀನಗಾರ್, ಮೊಗವೀರ, ಮಗೇರ್, ಮುಕ್ಕವಾನ್, ಪರಿವಾರ, ಸಿವಿಯರ್, ಸುಣಗಾರ, ತೊರೆಯ, (ಎಕೆ)ವಾಗಿ ಜಾತಿಗೆ ಸೇರಿದವರಾಗಿರಬೇಕು.  ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳ ಒಳಗಿರಬೇಕು.  ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿದಾರರು ಕೆ.ವೈ.ಸಿ. ಬಗ್ಗೆ ಆಧಾರ್ ಕಾರ್ಡ್/ ಚುನವಣಾ ಗುರುತಿನ ಚೀಟಿ/ಪಾನ್ ಕಾರ್ಡ್ ದಾಖಲೆಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು.  ಅರ್ಜಿದಾರರು ಐ.ಎಫ್.ಎಸ್.ಸಿ. ಕೋಡ್ ಹೊಂದಿರುವ ರಾಷ್ಟಿçÃಕೃತ/ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರಬೇಕು.   ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ನಿಗದಿತ ಅರ್ಜಿ ನಮೂನೆಗಳನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಅರ್ಜಿ ಪಡೆಯಲು ಜುಲೈ. 03 ರೊಳಗಾಗಿ ಪಡೆದುಕೊಳ್ಳಬೇಕು.  ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ವಿವಿಧ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಅಂಬಿಗರ ಚೌಡಯ್ಯ ಸಮುದಾಯಗಳ ಫಲಾಪೇಕ್ಷಿಗಳು, ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಉಚಿತವಾಗಿ ಅಥವಾ ನಿಗಮದ ವೆಬ್ ಸೈಟ್ hಣಣಠಿ://10.10.29.73:81/ಚಿmbigಚಿಡಿಚಿಜeveಟoಠಿmeಟಿಣ.ಞಚಿಡಿಟಿಚಿಣಚಿಞಚಿ.gov.iಟಿ/ಠಿubiಛಿ/ ಇಲ್ಲಿ ಪಡೆಯ ಬಹುದಾಗಿರುತ್ತದೆ.  ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ/ದಾಖಲಾತಿಗಳೊಂದಿಗೆ ದಿನಾಂಕ:12/07/2019 ರೊಳಗೆ ಸಲ್ಲಿಸುವುದು.  ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.  ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಉಪ್ಪಾರ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ


ಉಪ್ಪಾರ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ
ಕೊಪ್ಪಳ, ಜೂ. 20 (ಕರ್ನಾಟಕ ವಾರ್ತೆ): ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಉಪ್ಪಾರ ಮತ್ತು ಇದರ ಉಪಜಾತಿಗೆ ಸೇರಿದ ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಲ ಮತ್ತು ಸಹಾಯಧನದ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಸಾಲ ಯೋಜನೆ;
ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆ ಅನುಸಾರ ಗರಿಷ್ಠ ರೂ.2,00,000/-ಗಳ ವರೆಗೆ ಆರ್ಥಿಕ ನೆರವು.  ಈ ಮೊತ್ತದಲ್ಲಿ ಶೇ.30 ರಿಂದ 15ರವರೆಗೆ ಸಹಾಯಧನ ಉಳಿಕೆ ಮೊತ್ತ ಶೇ.4ರ ಬಡ್ಡಿದರದಲ್ಲಿ ಸಾಲ.
ಅರಿವು ಶೈಕ್ಷಣಿಕ ಸಾಲ ಯೋಜನೆ;
  ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಕೋರ್ಸ್ನ ವಾಸ್ತವಿಕ ವೆಚ್ಚ ಅಥವಾ ವಾರ್ಷಿಕ ಗರಿಷ್ಠ ರೂ.1.00 ಲಕ್ಷಗಳಂತೆ ಶೇ.2ರ ಬಡ್ಡಿದರದಲ್ಲಿ ಸಾಲ.  ವಿದ್ಯಾರ್ಥಿಗಳು ಸಿ.ಇ.ಟಿ. ಮೂಲಕ ಅಥವಾ ಮೆರಿಟ್ ಆಧಾರದ ಮೇಲೆ ಸೀಟ್ ಪಡೆದು ಬಿ.ಇ., ಎಂ.ಬಿ.ಬಿ.ಎಸ್., ಬಿ.ಯೂ.ಎಂ.ಎಸ್., ಬಿ.ಡಿ.ಎಸ್., ಬಿ.ಎ.ಎಂ.ಎಸ್., ಬಿ.ಎಚ್.ಎಂ.ಎಸ್., ಎಂ.ಬಿ.ಎ., ಎಂ.ಟೆಕ್., ಎಂ.ಇ., ಎಂ.ಡಿ., ಪಿಹೆಚ್.ಡಿ., ಬಿ.ಸಿ.ಎ./ಎಂ.ಸಿ.ಎ., ಎಂ.ಎಸ್. ಆಗ್ರ‍್ರಿಕಲ್ಚರ್,  ಬಿ.ಎಸ್‌ಸಿ. ನರ್ಸಿಂಗ್, ಬಿ.ಫಾರಂ/ ಎಂ.ಫಾರA, ಬಿ.ಎಸ್‌ಸಿ. ಪ್ಯಾರಾ ಮೆಡಿಕಲ್, ಬಿ.ಎಸ್‌ಸಿ (ಬಯೋ ಟೆಕ್ನಾಲಜಿ), ಬಿ.ಟೆಕ್., ಬಿ.ಪಿ.ಟಿ., ಬಿ.ವಿ.ಎಸ್.ಸಿ/ ಎಂ.ವಿ.ಎಸ್.ಸಿ., ಬಿ.ಎನ್.ಎಂ., ಬಿ.ಹೆಚ್.ಎಮ್., ಎಂ.ಡಿ.ಎಸ್., ಎಂ.ಎಸ್.ಡಬ್ಲೂö್ಯ., ಎಲ್.ಎಲ್.ಎಂ., ಎಂ.ಎಫ್.ಎ., ಎಂ.ಎಸ್‌ಸಿ., ಬಯೋ ಟೆಕ್ನಾಲಜಿ ಮತ್ತು ಎಂ.ಎಸ್‌ಸಿ. ಎಜಿ, ಎಂ.ಕಾA. ಹಾಗೂ ಎಂ.ಎಸ್ಸಿ. ಈ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು ಹಾಗೂ ಕುಟುಂಬದ ವಾರ್ಷಿಕ ವರಮಾನ ರೂ.3.50ಲಕ್ಷಗಳ ಮಿತಿಯಲ್ಲಿರಬೇಕು. 
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ;
  ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಗಳಾದ ಪೋಸ್ಟ್ಡಾಕ್ರö್ಟಲ್, ಪಿಹೆಚ್.ಡಿ., ಮಾಸ್ಟರ್ ಡಿಗ್ರಿ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ ಶೇ.4ರ ಬಡ್ಡಿದರದಲ್ಲಿ ವಾರ್ಷಿಕ ರೂ.5.00ಲಕ್ಷಗಳಂತೆ, 03 ವರ್ಷಗಳ ಕೋರ್ಸ್ನ ಅವಧಿಗೆ,  ಗರಿಷ್ಠ ರೂ.15.00ಲಕ್ಷಗಳ ಸಾಲ ಸೌಲಭ್ಯ.  ಈ ಸಾಲದ ಭದ್ರತೆಗೆ ಸ್ಥಿರಾಸ್ತಿಯನ್ನು ಆಧಾರ ಮಾಡಬೇಕು.  ವಿದ್ಯಾರ್ಥಿಗಳು ಗರಿಷ್ಠ 35 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ ವರಮಾನ ರೂ.3.50ಲಕ್ಷಗಳನ್ನು ಮೀರಿರಬಾರದು.
ಗಂಗಾ-ಕಲ್ಯಾಣ ನೀರಾವರಿ ಯೋಜನೆ;
  ವೈಯಕ್ತಿಕ ಕೊಳವೆಬಾವಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‌ಸೆಟ್, ಉಪಕರಣಗಳನ್ನು ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವುದು. ಘಟಕ ವೆಚ್ಚ ರೂ.2.50ಲಕ್ಷಗಳಲ್ಲಿ ರೂ.2.00ಲಕ್ಷಗಳ ಸಹಾಯಧನ ಹಾಗೂ ರೂ.50,000/-ಗಳ ಶೇ.4ರ ಬಡ್ಡಿದರದಲ್ಲಿ ಸಾಲ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾ||, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ.4.00ಲಕ್ಷಗಳು. ಈ ಮೊತ್ತದಲ್ಲಿ ರೂ.3.50 ಲಕ್ಷ ಸಹಾಯಧನ ಹಾಗೂ ರೂ.50,000/- ಶೇ.4ರ ಬಡ್ಡಿದರದಲ್ಲಿ ಸಾಲ. ಘಟಕವೆಚ್ಚದಲ್ಲಿ ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ ರೂ.50,000/-ಗಳನ್ನು ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಲಾಗುವುದು.  ಮಲೆನಾಡು ಪ್ರದೇಶಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚದಲ್ಲಿ ತೆರೆದ ಬಾವಿಗಳ ಮಂಜೂರು.
ಅರ್ಜಿ ಸಲ್ಲಿಸಲು ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1,ಕ್ಕೆ ಸೇರಿದ ಕ್ರಮ ಸಂಖ್ಯೆ:53(ಚಿ) ಯಿಂದ 53(v)ವರೆಗಿನ ಉಪ್ಪಾರ, ಬೆಲ್ದರ್, ಚುನಾರ್, ಗಾವಾಡಿ, ಗೌಂದಿ, ಕಲ್ಲುಕುಟಿಗ ಉಪ್ಪಾರ, ಲೋನಾರಿ, ಮೇಲು ಸಕ್ಕರೆಯವರು, ಮೇಲುಸಕ್ಕರೆ, ನಾಮದ ಉಪ್ಪಾರ, ಪಡಿತ್/ ಪಡ್ತಿ, ಪಡಿತಿ, ವಾಡಿ, ಸಗರ, ಸುಣ್ಣಗಾರ, ಸುಣ್ಣ ಉಪ್ಪಾರ, ಉಪ್ಪಳಿಗ, ಉಪ್ಪಳಿಗಶೆಟ್ಟಿ, ಉಪ್ಪಳಿಯನ್, ಉಪ್ಪೇರ, ಯಕಲಾರ, ಎಕ್ಕಲಿ ಜಾತಿಗೆ ಸೇರಿದವರಾಗಿರಬೇಕು.  ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳ ಒಳಗಿರಬೇಕು.  18 ರಿಂದ 55 ವರ್ಷಗಳ ವಯೋ ಮಿತಿಯಲ್ಲಿರಬೇಕು.  ಅರ್ಜಿದಾರರು ಕೆ.ವೈ.ಸಿ. ಬಗ್ಗೆ ಆಧಾರ್ ಕಾರ್ಡ್/ ಚುನವಣಾ ಗುರುತಿನ ಚೀಟಿ/ ಪಾನ್ ಕಾರ್ಡ್ ದಾಖಲೆಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿದಾರರು ಐ.ಎಫ್.ಎಸ್.ಸಿ. ಕೋಡ್ ಹೊಂದಿರುವ ರಾಷ್ಟಿçÃಕೃತ/ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರಬೇಕು.
ನಿಗದಿತ ಅರ್ಜಿ ನಮೂನೆಗಳನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಕೊಪ್ಪಳ ಇಲ್ಲಿಂದ ಜುಲೈ. 03 ರೊಳಗಾಗಿ ಪಡೆದುಕೊಳ್ಳಬೇಕು.  ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.  ನಿಗಮದ ವಿವಿಧ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಉಚಿತವಾಗಿ ಅಥವಾ ನಿಗಮದ ವೆಬ್ ಸೈಟ್ hಣಣಠಿ://10.10.29.73:81/uಠಿಠಿಚಿಡಿಜeveಟoಠಿmeಟಿಣ.ಞಚಿಡಿಟಿಚಿಣಚಿಞಚಿ.gov.iಟಿ/ಠಿubಟiಛಿ/ ನಲ್ಲಿ ಸಂಬAಧಿಸಿದ ಯೋಜನೆಯ ಅರ್ಜಿಯನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜುಲೈ. 12 ರೊಳಗೆ ಸಲ್ಲಿಸಬೇಕು.  ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.  ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.  

ಕುರಿಸಾಕಾಣಿಕೆ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಜೂ. 20 (ಕರ್ನಾಟಕ ವಾರ್ತೆ): ಕೊಪ್ಪಳ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲೆಯ ಆಸಕ್ತರಿಗೆ 10 ದಿನಗಳ ಉಚಿತ “ಕುರಿಸಾಕಾಣಿಕೆ” ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.  ಅರ್ಜಿ ವಿತರಿಸುವ ಹಾಗೂ ಸ್ವೀಕರಿಸುವ ಕೋನೆಯ ಜೂನ್ 30 ಆಗಿದ್ದು, ಜುಲೈ 01 ರಂದು ಬೆಳಿಗ್ಗೆ 10-30ಕ್ಕೆ ಸಂದರ್ಶನ ನಡೆಸಲಾಗುವುದುಜುಲೈ 02 ರಿಂದ ತರಬೇತಿಗಳು ಪ್ರಾರಂಭಗೊಳ್ಳುವವು.  ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. 
ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂರವಾಣಿ ಸಂಖ್ಯೆ 08539-231038, ಇಲ್ಲಿಗೆ ಸಲ್ಲಿಸಬಹುದು ಎಂದು ಕೊಪ್ಪಳ ಎಸ್.ಬಿ.ಐ. ಆರ್‌ಸೆಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯೂಟಿ ಪಾರ್ಲರ್ ತರಬೇತಿ : ಅರ್ಜಿ ಆಹ್ವಾನ

ಬ್ಯೂಟಿ ಪಾರ್ಲರ್ ತರಬೇತಿ : ಅರ್ಜಿ ಆಹ್ವಾನ
ಕೊಪ್ಪಳ, ಜೂ. 20 (ಕರ್ನಾಟಕ ವಾರ್ತೆ): ಕೊಪ್ಪಳ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲೆಯ ಆಸಕ್ತರಿಗೆ 30 ದಿನಗಳ ಉಚಿತ “ಬ್ಯೂಟಿಪಾರ್ಲರ್” ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.  ಅರ್ಜಿ ವಿತರಿಸುವ ಹಾಗೂ ಸ್ವೀಕರಿಸುವ ಕೋನೆಯ ಜೂನ್ 30 ಆಗಿದ್ದು, ಜುಲೈ 01 ರಂದು ಬೆಳಿಗ್ಗೆ 10-30ಕ್ಕೆ ಸಂದರ್ಶನ ನಡೆಸಲಾಗುವುದು.  ಜುಲೈ 02 ರಿಂದ ತರಬೇತಿಗಳು ಪ್ರಾರಂಭಗೊಳ್ಳುವವು.  ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. 
ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂರವಾಣಿ ಸಂಖ್ಯೆ 08539-231038, ಇಲ್ಲಿಗೆ ಸಲ್ಲಿಸಬಹುದು ಎಂದು ಕೊಪ್ಪಳ ಎಸ್.ಬಿ.ಐ. ಆರ್‌ಸೆಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಚ್ಛ ಭಾರತ ಸಮ್ಮರ ಇಂರ‍್ನಷಿಪ್‌ಗೆ : ಅರ್ಜಿ ಆಹ್ವಾನ

ಸ್ವಚ್ಛ ಭಾರತ ಸಮ್ಮರ ಇಂರ‍್ನಷಿಪ್‌ಗೆ : ಅರ್ಜಿ ಆಹ್ವಾನ
ಕೊಪ್ಪಳ, ಜೂ. 20 (ಕರ್ನಾಟಕ ವಾರ್ತೆ): ಕೊಪ್ಪಳ ನೆಹರು ಯುವ ಕೇಂದ್ರದ ವತಿಯಿಂದ ಸ್ವಚ್ಛ ಭಾರತ ಸಮ್ಮರ ಇಂರ‍್ನಷಿಪ್ ಯುವಜನರಿಂದ 50 ತಾಸು ಸ್ವಚ್ಛತಾ ಕಾರ್ಯಕ್ರಮಕ್ಕೆ ಅರ್ಹ ಯುವ ಸಂಘಗಳಿAದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊAಡ ನೊಂದಾಯಿತ ಯುವ ಸಂಘಗಳು ಹಾಗೂ  ಮಹಿಳಾ ಸಂಘಗಳಿAದ  ಸ್ವಚ್ಛ ಭಾರತ ಸಮ್ಮರ ಇಂರ‍್ನಷಿಪ್ 50 ತಾಸು ಸ್ವಚ್ಛತಾ ಕಾರ್ಯಕ್ರಮಕ್ಕೆ ಯುವಜನರಿಂದ ಅರ್ಜಿಯನ್ನು ಆಹ್ವಾನಿಸಿದ್ದು. ಆನಲೈನ್ ಮೂಲಕ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸಬಹುದಾಗಿದೆ.  ವೈಯಕ್ತಿಕ ಅಥವಾ ಗರಿಷ್ಠ 10 ಯುವಜನರ ತಂಡದೊAದಿಗೆ ಒಂದು ಯುವ ಸಂಘದಿAದ ಹೆಸರುಗಳನ್ನು ನೊಂದಾಯಿಸಿಕೊಳ್ಳಲು hಣಣಠಿ://sbsi.mಥಿgov.iಟಿ ಈ ವೆಬ್‌ಸೈಟನಲ್ಲಿ ತಮ್ಮ ಹೆಸರು ಎನ್‌ರೊಲ್ ಮಾಡುವುದು ಅಥವಾ ನೇರವಾಗಿ ಖುದ್ದಾಗಿ ಅರ್ಜಿ ನಮೂನೆ ಭರ್ತಿಮಾಡಿ ಕಛೇರಿಗೆ ಸಲ್ಲಿಸುವುದು ನಂತರ ಜೂ. 31 ರ ವರೆಗೆ 50 ತಾಸುಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.  ಸ್ವಂತ ಗ್ರಾಮ ಅಥವಾ ಸುತ್ತಮುತ್ತಲಿನ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡಿರು ಸೂಕ್ತವಾದ ದಾಖಲೆಗಳೊಂದಿಗೆ ಅರ್ಜಿಯನ್ನು ಕೊಪ್ಪಳ ನೆಹರು ಯುವ ಕೇಂದ್ರದ ವೆಬ್‌ಸೈಟ hಣಣಠಿ://sbsi.mಥಿgov.iಟಿ ನಲ್ಲಿ ಸಲ್ಲಿಸಬೇಕು.  ಒಳ್ಳೆಯ ಕೆಲಸ ಮಾಡಿದ ಯುವ ಸಂಘಗಳಿಗೆ ಜಿಲ್ಲಾ, ರಾಜ್ಯ, ರಾಷ್ಟç ಮಟ್ಟದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಗುವುದು. ಜಿಲ್ಲಾ ಮಟ್ಟಕ್ಕೆ ಪ್ರಥಮ ಬಹುಮಾನ 30,000, ದ್ವಿತೀಯ ಬಹುಮಾನ 20,000 ತೃತೀಯ ಬಹುಮಾನ 10000 ರೂ. ರಾಜ್ಯ ಮಟ್ಟಕ್ಕೆ ಪ್ರಥಮ ಬಹುಮಾನ,  50000 ರೂ. ದ್ವಿತೀಯ ಬಹುಮಾನ 30000 ರೂ, ತೃತೀಯ ಬಹುಮಾನ 20000 ರೂ, ರಾಷ್ಟç ಮಟ್ಟಕ್ಕೆ ಪ್ರಥಮ ಬಹುಮಾನ 2 ಲಕ್ಷ ರೂ. ದ್ವಿತೀಯ ಬಹುಮಾನ 1 ಲಕ್ಷ, ತೃತೀಯ ಬಹುಮಾನ 50000 ರಂತೆ ನೀಡಲಾಗುತ್ತದೆ. 
ಕಾರ್ಯಕ್ರಮಗಳು;
  ಪ್ಲಾಸ್ಟಿಕ್, ಕಸ ಸಂಗ್ರಹ ಮತ್ತು ನಿರ್ವಹಣೆ, ಆರೊಗ್ಯಕರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನುಕ್ಕಡ, ಪಾಸ್ಟಿಕ್, ಇತರೆ ಕಸ  ಸಂಗ್ರಹ , ನಿರ್ವಹಣೆ ಕುರಿತು ನಾಟಕ, ಬೀದಿ ನಾಟಕ ಕಾರ್ಯಕ್ರಮ,ಸಂಗೀತ ಮತ್ತು ಸಂಸ್ಕೃತಿಕ ಕಾರ್ಯಕ್ರಮ, ಗ್ರಾಮೀಣ ಅಥವಾ ಶಾಲಾ ಮಕ್ಕಳಿಂದ ಜಾಥಾ-ಆರೋಗ್ಯಕ್ಕೆ ಸಂಬAದಿಸಿದAತೆ ಮತ್ತು ಸ್ವಚ್ಛತೆಗೆ ಸಂಬAದಿಸಿದAತೆ. ಮನೆಮನೆಗೆ ತೆರಳಿ ಪ್ಲಾಸ್ಟಿಕ್,  ಕಸ ನಿರ್ವಹಣೆ ಕುರಿತು ಅರಿವು. ಪ್ಲಾಸ್ಟಿಕ್ , ಕಸ ಸಂಗ್ರಹ ನಿರ್ವಹಣೆ ಸಂಬAದಿಸಿದAತೆ ಗೋಡೆಬರಹಗಳನ್ನು ಬರೆಯುವುದು. ಪ್ಲಾಸ್ಟಿಕ್, ಕಸ ಸಂಬAದಿಸಿದAತೆ ಚಲನಚಿತ್ರಗಳನ್ನು ಪ್ರದರ್ಶಿಸುವುದು. ಪ್ಲಾಸ್ಟಿಕ್, ಕಸ ಸಂಬAದಿಸಿದAತಹ ಸಾಮಗ್ರಿಗಳನ್ನು ಉಚಿತವಾಗಿ ಣiಟಿಥಿuಡಿಟ.ಛಿom/sbmieಛಿ  ಇದರ ಮೂಲಕ ಪಡೆಯುವುದು, ಘನ ತ್ಯಾಜ್ಯ ವಸ್ತುಗಳ ಚಟುವಟಿಕೆಗಳಾದ ಅರಿವು ಮೂಡಿಸುವುದು, ಘನತ್ಯಾಜ್ಯವಸ್ತುಗಳ ಸಂಗ್ರಹ ಮತ್ತು ವಿಲೇವಾರಿ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುಲಾಗಿದೆ. 
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನೆಹರು ಯುವ ಕೇಂದ್ರ ನೊಡಲ ಅಧಿಕಾರಿ ರಾಮ ಕೃಷ್ಣ ಆಶ್ರಮದ ಹತ್ತಿರ ಬನ್ನಿಕಟ್ಟಿ ಗದಗ ರಸ್ತೆ, ದೂ-08539,230116 ಸಂಪರ್ಕಿಸಿ ಎಂದು ಕೊಪ್ಪಳ ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯಾಧಿಕಾರಿ ಡಿ.ದಯಾನಂದ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಕೊಪ್ಪಳ, ಜೂ. 20 (ಕರ್ನಾಟಕ ವಾರ್ತೆ): ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2018ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಗಾಗಿ ಸಲ್ಲಿಸಲ್ಪಡುವ ಕೃತಿಯು ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು.  ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿ.ಟಿ.ಪಿ ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಟ 60 ಪುಟಗಳಿರಬೇಕು. ಅನುವಾದ, ಪಠ್ಯ ಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬAಧಿಸಿದAತೆ ಹಸ್ತಪ್ರತಿ ಇರಬೇಕು. ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ ಇತ್ಯಾದಿ ಸಂಗತಿಗಳಿಗೆ ಸಂಬAಧಿಸಿದAತೆ ಹಾಗೂ ರಾಷ್ಟಿçÃಯ ನಾಯಕರುಗಳ ಕುರಿತಂತೆ ನೇರವಾಗಿಯೇ ಆಗಲಿ ಅಥವಾ ಪರೋಕ್ಷವಾಗಿಯೇ ಆಗಲಿ ಮನನೋಯಿಸುವಂತಹ ವಿಷಯವಾಗಲಿ ಇರಬಾರದು. ಅಲ್ಲದೇ ರಾಷ್ಟಿçÃಯ ಭಾವೈಕ್ಯತೆಗೆ ದಕ್ಕೆ ತರುವಂತಹ ವಿಷಯ ಅಥವಾ ಸಂಗತಿಗಳು ಪ್ರಸ್ತಾಪವಾಗಿರಬಾರದು. 
ಅರ್ಜಿದಾರರು 18 ರಿಂದ 35 ವರ್ಷದವರಾಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢಿಕೃತ ಎಸ್‌ಎಸ್‌ಎಲ್‌ಸಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.  ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಯನ್ನು ಅಥವಾ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.  ಅರ್ಜಿಯನ್ನು ಜುಲೈ 06 ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 ಇವರಿಗೆ ಸಲ್ಲಿಸಬಹುದು. 
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು, ದೂ. ಸಂ: 080-22484516/ 22017704 ಅಥವಾ ವೆಬ್‌ಸೈಟ್  ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ/ ರಸಪ್ರಶ್ನೆ ಕಾರ್ಯಕ್ರಮ : ಅರ್ಜಿ ಆಹ್ವಾನ

ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ/ ರಸಪ್ರಶ್ನೆ ಕಾರ್ಯಕ್ರಮ : ಅರ್ಜಿ ಆಹ್ವಾನ

ಕೊಪ್ಪಳ, ಜೂ. 20 (ಕರ್ನಾಟಕ ವಾರ್ತೆ): ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪ್ರೌಢ ಶಾಲೆಗಳಲ್ಲಿ “ಅಚ್ಚು ಮೆಚ್ಚಿನ ಮುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ ಅಥವಾ ರಸಪ್ರಶ್ನೆ ಕಾರ್ಯಕ್ರಮ” ಏರ್ಪಡಿಸಲು ಶಾಲಾ ಮುಖ್ಯಸ್ಥರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದಾದ್ಯಂತ ಪ್ರೌಢ ಶಾಲೆಗಳಲ್ಲಿ “ಅಚ್ಚು ಮೆಚ್ಚಿನ ಮುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ ಅಥವಾ ರಸಪ್ರಶ್ನೆ ಕಾರ್ಯಕ್ರಮ” ಏರ್ಪಡಿಸುವ ಕುರಿತು ಯೋಜನೆಯನ್ನು ಹಮ್ಮಿಕೊಂಡಿದೆ.  ಈ ಯೋಜನೆಯಡಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢ ಶಾಲೆಗಳು ತಮ್ಮ ತಮ್ಮ ಶಾಲೆಗಳಲ್ಲಿ ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ ಅಥವಾ ರಸಪ್ರಶ್ನೆಯ ಒಂದು ಕಾರ್ಯಕ್ರಮ ಏರ್ಪಡಿಸಬಹುದಾಗಿದೆ.  ಈ ಕಾರ್ಯಕ್ರಮವನ್ನು ನಡೆಸುವ ಸಲುವಾಗಿ ಪ್ರಾಧಿಕಾರವು ರೂ. 5,000 ಗಳ ಗರಿಷ್ಠ ಮಿತಿಯೊಳಗೆ ವಾಸ್ತವಿಕ ವೆಚ್ಚವನ್ನು ಭರಿಸಲಿದೆ.  ತಮ್ಮ ಶಾಲಾ ವಿವರಗಳೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾದ ದಿನಾಂಕ, ಆಹ್ವಾನಿಸುವ ಇಬ್ಬರು ತೀರ್ಪುಗಾರರ ಹೆಸರು ಇತ್ಯಾದಿ ವಿವರಗಳೊಂದಿಗೆ ಆಯಾ ಶಾಲಾ ಮುಖ್ಯಸ್ಥರು ಸ್ವಯಂ ಅರ್ಜಿ ಸಲ್ಲಿಸಬೇಕು.  ಅರ್ಜಿಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರು-560 002, ದೂರವಾಣಿ ಸಂಖ್ಯೆ 080-22484516/ 22107704, ಇವರಿಗೆ ಜುಲೈ 10 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯನ್ನು ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್‌ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ 28 ರಂದು ಜಿ.ಪಂ. ಮಾಸಿಕ ಕೆಡಿಪಿ ಸಭೆ


ಕೊಪ್ಪಳ, ಜೂ. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ಮಾಸಿಕ ಕೆ.ಡಿ.ಪಿ. (20 ಅಂಶಗಳ ಕಾರ್ಯಕ್ರಮ ಸೇರಿದಂತೆ) ಪ್ರಗತಿ ಪರಿಶೀಲನಾ ಸಭೆ ಜೂ. 28 ರಂದು ಬೆಳಿಗ್ಗೆ 11 ಗಂಟೆಗೆ ಜಿ.ಪಂ. ಸಭಾಂಗಣದಲ್ಲಿ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಜಿ.ಪಂ. ಅಧ್ಯಕ್ಷ ವಿಶ್ವನಾಥರೆಡ್ಡಿ ಅವರು ವಹಿಸುವರು.  ಮೇ ಅಂತ್ಯಕ್ಕೆ ಸಾಧಿಸಿದ ಪ್ರಗತಿಯ ಮಾಹಿತಿಯೊಂದಿಗೆ ಸಂಬAಧಪಟ್ಟ ಅಧಿಕಾರಿಗಳು ಸಭೆಗೆ ಹಾಜರಾಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sunday, 17 November 2019

ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವಲ್ಲಿ ಯಾರೇ ನಿರ್ಲಕ್ಷö್ಯ ವಹಿಸಿದರೂ ಸಹಿಸುವುದಿಲ್ಲ : ಕೆ.ಎಸ್. ಈಶ್ವರಪ್ಪ


ಕೊಪ್ಪಳ ನ. 04 (ಕರ್ನಾಟಕ ವಾರ್ತೆ): ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವಲ್ಲಿ ಯಾರೇ ನಿರ್ಲಕ್ಷö್ಯ ವಹಿಸಿದರೂ ಸಹಿಸುವುದಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಶಿಸ್ತು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಕೆ.ಎಸ್. ಈಶ್ವರಪ್ಪರವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
          ಜಿಲ್ಲಾ ಪಂಚಾಯತನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗ್ರಾಮೀಣ ಭಾಗದ ಜನರಿಗೆ ನೀರನ್ನು ಒದಗಿಸುವ ಮಹತ್ತರ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಯೋಜನೆಯ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ. ಇದಕ್ಕೆ ಸೂಕ್ತ ಕಾರಣಗಳೊಂದಿಗೆ ವರದಿ ಸಲ್ಲಿಸಿ. ಯೋಜನೆಯ ವಿನ್ಯಾಸವೇ ಅಸಮರ್ಪಕವಾಗಿದ್ದು, ಇದರಲ್ಲಿ ಅಧಿಕಾರಿಗಳ ಲೋಪವೂ ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಯೋಜನೆಯ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
            ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸ್ಥಾಪಿಸಿರುವ 204 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 118 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ಘಟಕಗಳು ಸ್ಥಗಿತಗೊಂಡಿರುವ ಕುರಿತು ಜಿಲ್ಲಾ ಪಂಚಾಯತ ಸದಸ್ಯರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳ ಪ್ರಸ್ತುತ ಕಾರ್ಯನಿರ್ವಣೆಯ ವಾಸ್ತವಾಂಶವುಳ್ಳ ಮಾಹಿತಿಯನ್ನು 15 ದಿನಗಳಲ್ಲಿ ಸಲ್ಲಿಸಬೇಕು. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಪರಿಶೀಲಿಸಬೇಕು. ಮಾತ್ರವಲ್ಲದೆ ಜಿಲ್ಲಾ ಪಂಚಾಯತ್ ಸದಸ್ಯರು ತಮ್ಮ ಕ್ಷೇತ್ರದಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕುಡಿಯುವ ನೀರನ್ನು ಒದಗಿಸುವಲ್ಲಿ ವಿಫಲರಾದ ಅಧಿಕಾರಿ ಹಾಗೂ ಗುತ್ತಿಗೆದಾರರು ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
           ಜಿಲ್ಲೆಯಲ್ಲಿ ಸರ್ಕಾರದಿಂದ ಅನುಮೋದನೆಗೊಂಡ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಕೆಲ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರಬಹುದು. ಆದ್ದರಿಂದ ಈ ಎರಡೂ ಇಲಾಖೆಗಳನ್ನು ವಿಲೀನಗೊಳಿಸಿ ಕಾರ್ಯಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಕುರಿತು ಶೀಘ್ರದಲ್ಲಿಯೇ ಸರ್ಕಾರದಿಂದ ಸುತ್ತೋಲೆ ಹೊರಡಿಸಲು ಕ್ರಮಕೈಗೊಳ್ಳಲಾಗುವುದು. ಆದರೆ ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳು ಈಗಾಗಲೇ ವಹಿಸಿಕೊಂಡಿರುವ ಹೆಚ್ಚುವರಿ ಜವಾಬ್ದಾರಿಯನ್ನು ಮುಂದುವರೆಸಿ ಮತ್ತು ನಿಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಿ ಎಂದು ಅವರು ತಿಳಿಸಿದರು.
ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ಕೇವಲ ಸಚಿವರ ಸಭೆ ಎಂದು ಅಂದಾಜು ಮಾಹಿತಿ ಸಿದ್ಧಪಡಿಸದೆ, ವಾಸ್ತವಾಂಶಗಳನ್ನು ಪರಿಶೀಲಿಸಿ ವರದಿ ನೀಡಬೇಕು. ಹಾಗೆಯೇ ಎಲ್ಲ ಚುನಾಯಿತ ಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುವ ವೇಳೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ. ಆ ಸ್ಥಳದಲ್ಲಿಯೇ ಸಂಬAಧಿಸಿದ ಕಾಮಗಾರಿಯ ಕುರಿತು ಮಾಹಿತಿ ಪಡೆದು ಅದನ್ನು ಸಂಬAಧಿಸಿದ ಇಲಾಖೆಯ ಮೇಲಾಧಿಕಾರಿಗೆ ತಿಳಿಸಿ ಎಂದು ಅವರು ಹೇಳಿದರು.
        ನರೇಗಾದಡಿ ನೂರು ದಿನಗಳ ಕಾಲ ನೀಡುತ್ತಿದ್ದ ಉದ್ಯೋಗವನ್ನು 150 ದಿನಗಳಿಗೆ ಹೆಚ್ಚಿಸಲಾಗಿದ್ದು, ಆದ್ದರಿಂದ ನಾವು ಕೆಂದ್ರ ಸಕಾರಕ್ಕೆ ಧನ್ಯವಾದವನ್ನು ಸಲ್ಲಿಸಬೇಕು. ನರೇಗಾದಲ್ಲಿ ಗಂಗಾವತಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿ ಹೆಚ್ಚಿನ ಗುರಿ ಸಾಧಿಸಿದ್ದು ಕೊಪ್ಪಳ ತಾಲ್ಲೂಕಿನಲ್ಲಿ ಯಾಕೆ ಕಡಿಮೆಯಾಗಿದೆ. ಅಧಿಕಾರಿಗಳು ತಾವೇ ನಿಗದಿ ಪಡಿಸಿದ ಗುರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸದಿದ್ದರೆ ಹೇಗೆ ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಸ್ವಚ್ಛ ಭಾರತ ಮಿಷನ್ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದರಡಿ ಶೌಚಾಲಯಗಳ ನಿರ್ಮಾಣ ಹಾಗೂ ಸ್ವಚ್ಛತೆಯ ಕಡೆಗೆ ಗಮನ ಹರಿಸುವುದರ ಜೊತೆಗೆ ಕೆಲವೊಂದು ಶಾಲೆಗಳಲ್ಲಿ ಶೌಚಾಲಯಗಳಿಲ್ಲ ಎಂಬ ದೂರುಗಳಿದ್ದು, ಅವುಗಳನ್ನು ಪಿಡಿಒಗಳು ಪಟ್ಟಿ ಮಾಡಿ ನರೇಗಾದಲ್ಲಿ ಅವುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
       ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಕೊಪ್ಪಳ ತಾಲ್ಲೂಕಿನ ಹುಲಿಗಿಯಲ್ಲಿ ನಿರ್ಮಿಸಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ. ಇದು ಯಾವ ರೀತಿಯಲ್ಲಿ ಮಾಡಲಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಒಂಭತ್ತು ಗ್ರಾಮ ಪಂಚಾಯತಗಳು ಸೇರಿ ಈ ಘಟಕವನ್ನು ನಿರ್ಮಿಸಲಾಗಿದೆ. ಇದಕ್ಕೆ ಒಂಭತ್ತು ಗ್ರಾ.ಪಂ. ಗಳ ಅಧ್ಯಕ್ಷರು ಹಾಗೂ ಸದಸ್ಯರ ಸಮಿತಿ ಇದ್ದು, ಇದಕ್ಕೆ ವಿವಿಧ ಯೋಜನೆಗಳ ಮೂಲಕ ಹಾಗೂ ಜಿಲ್ಲೆಯಲ್ಲಿರುವ ಉದ್ದಿಮೆಗಳಿಂದಲೂ ಧನ ಸಹಾಯವನ್ನು ಪಡೆಯಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಕೊಪ್ಪಳ ಜಿಲ್ಲೆಯು ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಮಾದರಿ ಕೆಲಸ ಮಾಡುತ್ತಿದ್ದು, ಅಧಿಕಾರಿಗಳು ಮುಂದಿನ ಸಭೆಗೆ ಬರುವಾಗ ಇನ್ನೂ ಹೆಚ್ಚಿನ ಪ್ರಗತಿ ತೋರಿಸಬೇಕು. ಯಾವುದೇ ಕಾರಣಕ್ಕೂ ಸಭೆಗೆ ಬರುವಾಗ ತಪ್ಪು ಮಾಹಿತಿ ನೀಡುವುದಾಗಲೀ, ವಿನಾಕಾರಣ ನೆಪ ಹೇಳಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.  
      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ, ಜಿಲ್ಲಾ ಪಂಚಾಯತ್ ಮಖ್ಯಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾ. ಇಲಾಖೆಯ ಆಯುಕ್ತರಾದ ಅನಿರುದ್ಧ ಶ್ರವಣ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಮುಖ್ಯ ಇಂಜಿನಿಯರ್ ಪ್ರಕಾಶ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಯರಾಂ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ ಹಾಗೂ ಬಸವರಾಜ ದಢೇಸೂಗೂರು, ಜಿಲ್ಲಾ ಪಂಚಾಯತ್ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯುತ್ ಬಳಕೆದಾರರಿಗೆ ಸೂಚನೆ


ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯುತ್ ಬಳಕೆದಾರರಿಗೆ ಸೂಚನೆ

ಕೊಪ್ಪಳ ನ. 16 (ಕರ್ನಾಟಕ ವಾರ್ತೆ): ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯುತ್ ಬಳಕೆದಾರರ ಗಣತಿಗಾಗಿ ಸರ್ಕಾರದ ಆದೇಶದಂತೆ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಮತ್ತು ನೀರಾವರಿ ಪಂಪಸೆಟ್‌ನ ಆರ್. ಆರ್. ಸಂಖ್ಯೆಗೆ  ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಗಳನ್ನು ಸೇರಿಸಬೇಕಾಗಿರುತ್ತದೆ.
       ಆದ್ದರಿಂದ ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಜೆಸ್ಕಾಂ, ಮುನಿರಾಬಾದ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಮತ್ತು ನೀರಾವರಿ ಪಂಪಸೆಟ್‌ಗಳ ಬಳಕೆದಾರರು ವಿದ್ಯುತ್ ಆರ್.ಆರ್. ಸಂಖ್ಯೆ, ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಗಳನ್ನು ಮುನಿರಾಬಾದ್ ಉಪ ವಿಭಾಗದ ಜೆಸ್ಕಾಂ ಕಚೇರಿಗೆ ಅಥವಾ ವಿದ್ಯುತ್ ಇಲಾಖೆ, ತಮ್ಮ ಗ್ರಾಮಗಳಿಗೆ ಸಂಬAಧಿಸಿದ ಮೀಟರ್ ರೀಡರ್, ಗ್ರಾಮ ವಿದ್ಯುತ್ ಪ್ರತಿನಿಧಿ ಅಥವಾ ಮಾರ್ಗದಾಳು (ಲೈನ್‌ಮ್ಯಾನ್) ರವರಿಗೆ ಕಚೇರಿ ವೇಳೆಯಲ್ಲಿ ಕರೆ ಮಾಡಿ ಗ್ರಾಹಕರ ಹೆಸರಿನೊಂದಿಗೆ ಮೇಲೆ ತಿಳಿಸಿದಂತೆ ಎಲ್ಲಾ ಮಾಹಿತಿಯನ್ನು ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ: 08539-270262, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಮೊ.ಸಂ: 9448271602 ಹಾಗೂ ಸಹಾಯಕ ಅಭಿಯಂತರರು(ತಾA) ಮೊ.ಸಂ: 9480847966 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜೆಸ್ಕಾಂನ ಮುನಿರಾಬಾದ್ ಕಾರ್ಯ ಮತ್ತು ಪಾಲನ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 20 ರಂದು ಚಾಮಲಾಪುರದಲ್ಲಿ ಜನಪರ ಉತ್ಸವ


ನ. 20 ರಂದು ಚಾಮಲಾಪುರದಲ್ಲಿ ಜನಪರ ಉತ್ಸವ

ಕೊಪ್ಪಳ ನ. 16 (ಕರ್ನಾಟಕ ವಾರ್ತೆ): ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ``ಜನಪರ ಉತ್ಸವ 2019-20'' ಕಾರ್ಯಕ್ರಮವನ್ನು ನವೆಂಬರ್. 20 ರಂದು ಸಂಜೆ 05 ಗಂಟೆಗೆ ಕೊಪ್ಪಳ ತಾಲ್ಲೂಕಿನ ಚಾಮಲಾಪುರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.  
ಚಾಮಲಾಪುರ ಸಂಸ್ಥಾನಮಠದ ಶ್ರೀ ಕರಿಬಸವೇಶ್ವರ ಮಾಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸುವರು.  ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪಂಚಾಯತ್ (ಇರಕಲ್ಲಗಡ) ಸದಸ್ಯ ರಾಮಣ್ಣ ಚೌಡ್ಕಿ, ತಾ.ಪಂ. (ವನಬಳ್ಳಾರಿ) ಸದಸ್ಯೆ ಪ್ರೇಮಾ ಹನುಮಂತಪ್ಪ ಚವ್ಹಾಣ, ಇರಕಲ್ಲಗಡ ಗ್ರಾ.ಪಂ. ಅಧ್ಯಕ್ಷೆ ದ್ಯಾಮಮ್ಮ ತಿಮ್ಮಣ್ಣ ವಂಕಲಕುAಟಿ, ಉಪಾಧ್ಯಕ್ಷ ಗಂಗಣ್ಣ ಕಾಮನೂರು, ಸದಸ್ಯರಾದ ನಿಂಗಪ್ಪ ಕರಡಿ, ಸಣ್ಣ ಹನುಮಂತಪ್ಪ ಗೌಡ್ರ, ರಂಗಭೂಮಿ ಕಲಾವಿದ ನಾರಾಯಣಾಚಾರ್ ಜೋಶಿ, ಇರಕಲ್ಲಗಡ ಗ್ರಾ.ಪಂ. ಪಿ.ಡಿ.ಒ ರಾವಾಸಾಬ್ ಬಿರಾದಾರ ಹಾಗೂ ಸರ್ವ ಸದಸ್ಯರು, ಗ್ರಾಮದ ಮುಖಂಡರು, ಗುರುಹಿರಿಯರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ : ಅರ್ಜಿ ಆಹ್ವಾನ

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ : ಅರ್ಜಿ ಆಹ್ವಾನ

ಕೊಪ್ಪಳ ನ. 16 (ಕರ್ನಾಟಕ ವಾರ್ತೆ): ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ರಾಷ್ಟಿçÃಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಹಿಂದುಳಿದ ವರ್ಗಗಳ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟಿçÃಯ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಎಂ, ಐಐಟಿ, ಐಐಎಸ್‌ಸಿ, ಐಐಐಟಿಎಸ್, ಎನ್‌ಐಟಿಎಸ್, ಐಐಎಸ್‌ಇಆರ್‌ಎಸ್, ಎಐಐಎಂಎಸ್, ಎನ್‌ಎಲ್‌ಯು, ಐಎಸ್‌ಎಂ, ಐಐಪಿ, ಐಎಸ್‌ಐ, ಜೆಐಪಿಎಂಇಆರ್ ಮತ್ತು ಎಸ್‌ಪಿಎ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ರಾಜ್ಯದ ಹಿಂದುಳಿದ ವರ್ಗಗಳ  ಪ್ರವರ್ಗ-1, 2(ಎ), 3(ಎ), ಹಾಗೂ 3(ಬಿ) ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳು ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ನ. 30  ಸಂಜೆ 5-00 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 8050770004 ಹಾಗೂ ಇಲಾಖಾ ವೈಬ್‌ಸೈಟ್ www.backwardclasses.kar.nic.in ನ್ನು ನೋಡಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


`ಭೂ ಸೇನಾ ನೇಮಕಾತಿ ರ‍್ಯಾಲಿ'' ಯಶಸ್ವಿ

ಭೂ ಸೇನಾ ನೇಮಕಾತಿ ರ‍್ಯಾಲಿ'' ಯಶಸ್ವಿ

ಕೊಪ್ಪಳ ನ. 16 (ಕರ್ನಾಟಕ ವಾರ್ತೆ): ಸೇನಾ ನೇಮಕಾತಿ ಕಚೇರಿ, ಬೆಳಗಾವಿ ವತಿಯಿಂದ ನ. 05 ರಿಂದ 16 ರವರೆಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ``ಭೂ ಸೇನಾ ನೇಮಕಾತಿ ರ‍್ಯಾಲಿ'' ಯಶಸ್ವಿಯಾಗಿ ನಡೆಯಿತು.  
ಈ ರ‍್ಯಾಲಿಯಲ್ಲಿ ಒಟ್ಟು 44,595 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 36,097 ಅಭ್ಯರ್ಥಿಗಳು ದೇಹದಾರ್ಢ್ಯತೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ 2020ರ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ಮೆರಿಟ್ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸೇನೆಯ ಪ್ರಮುಖ ತರಬೇತಿ ಕೇಂದ್ರಗಳಿಗೆ ತರಬೇತಿಗಾಗಿ ನಿಯೋಜಿಸಲಾಗುವುದು. ರ‍್ಯಾಲಿಗೆ ಸಂಪೂರ್ಣ ಸಹಕಾರ ನೀಡಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಮತ್ತು ಜಿಲ್ಲಾಡಳಿತಕ್ಕೆ  ಬೆಳಗಾವಿ ಸೇನಾ ನೇಮಕಾತಿ ಕಚೇರಿಯ ಮುಖ್ಯಸ್ಥರು ಧನ್ಯವಾದ ತಿಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ಕ.ರಾ.ಮು.ವಿ.ವಿನಲ್ಲಿ ನ. 30 ರಂದು ಉದ್ಯೋಗ ಮೇಳ

ಕ.ರಾ.ಮು.ವಿ.ವಿನಲ್ಲಿ ನ. 30 ರಂದು ಉದ್ಯೋಗ ಮೇಳ

ಕೊಪ್ಪಳ ನ. 16 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉದ್ಯೋಗ ಕೋಶದಿಂದ ಕರಾಮುವಿವಿಯ ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳಿಂದ ಪದವಿ (ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ ಹಾಗೂ ಸ್ನಾತಕೋತ್ತರ) ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಲು ಕರ್ನಾಟಕ ಸರ್ಕಾರದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮಾದರಿ ವೃತ್ತಿ ಕೇಂದ್ರ, ಮೈಸೂರು ಇವರ ಸಹಯೋಗದೊಂದಿಗೆ ರಾಜ್ಯಾದ್ಯಂತ ಇರುವ ವಿವಿಧ ಹೆಸರಾಂತ ಕಂಪನಿಗಳ ನಿಯೋಜಕರನ್ನು ಕರೆಸಿ ನವೆಂಬರ್. 30 ರಂದು ಕರಾಮುವಿವಿ ಯ ಕೇಂದ್ರ ಕಚೇರಿ ಮೈಸೂರು ಆವರಣದಲ್ಲಿ ಉದ್ಯೋಗಮೇಳವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಅಭ್ಯರ್ಥಿಗಳು ನವೆಂಬರ್. 18 ರೊಳಗಾಗಿ 01246184533 ನಂಬರಿಗೆ ಮಿಸ್ಡ್ ಕಾಲ್ ಮಾಡಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ: 9845659987, 9964697521 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕರಾಮುವಿವಿಯ ಕುಲಸಚಿವರಾದ ಪ್ರೊ. ಬಿ. ರಮೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 14 November 2019

ಲೋಕಸಭಾ ಚುನಾವಣೆ; ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು

ಲೋಕಸಭಾ ಚುನಾವಣೆ; ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು

ಕೊಪ್ಪಳ,ಏಪ್ರಿಲ್.08 (ಕರ್ನಾಟಕ ವಾರ್ತೆ):
 ಕೊಪ್ಪಳ ಲೋಕಸಭೆಗೆ ಚುನಾವಣೆ ನಡೆಯುತ್ತಿದ್ದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ಏಪ್ರಿಲ್ 8 ರಂದು ಇಬ್ಬರು ನಾಮಪತ್ರ ವಾಪಸ್ ಪಡೆದಿದ್ದು ಅಂತಿಮವಾಗಿ ಚುನವಣಾ ಕಣದಲ್ಲಿ 14 ಅಭ್ಯರ್ಥಿಗಳಿದ್ದಾರೆ.
 ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿAದ ರಾಜಶೇಖರ, ಭಾರತಿಯ ಜನತಾ ಪಕ್ಷದಿಂದ ಸಂಗಣ್ಣ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಶರಣಯ್ಯ, ಮಾರ್ಕ್ಸಿಸ್ಟ್ ಲೆನಿನಿಸ್ಟ್ ಪಾರ್ಟಿ ಆಫ್ ಇಂಡಿಯಾ (ರೆಡ್‌ಫ್ಲಾö್ಯಗ್)ದಿಂದ ಬಸಲಿಂಗಪ್ಪ, ಸರ್ವ ಜನತಾ ಪಾರ್ಟಿಯಿಂದ ಬಿ.ಅನ್ನೋಜಿರಾವ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್ ರೆಡ್‌ಸ್ಟಾರ್) ಹೇಮರಾಜ ವೀರಾಪೂರ, ಬಹುಜನ ಸಮಾಜ ಪಾರ್ಟಿಯಿಂದ ಶಿವಪುತ್ರಪ್ಪ ಮೆಣೆದಾಳ ಪಕ್ಷೇತರರಾಗಿ ಸುರೇಶ್, ನಾಗರಾಜ ಕಲಾಲ, ಬಾಲರಾಜ, ಸತೀಸರೆಡ್ಡಿ, ಮಲ್ಲಿಕಾರ್ಜುನ ಹಡಪದ, ಪ.ಯ.ಗಣೇಸ, ಸುರೇಶ.ಹೆಚ್ ಇವರು ಅಂತಿಮವಾಗಿ ಕಣದಲ್ಲಿದ್ದಾರೆ.

ಲೋಕಸಭಾ ಚುನಾವಣೆ : ಪೊಲೀಸ್ ವೀಕ್ಷಕರು ಲಭ್ಯ

ಲೋಕಸಭಾ ಚುನಾವಣೆ : ಪೊಲೀಸ್ ವೀಕ್ಷಕರು ಲಭ್ಯ 

ಕೊಪ್ಪಳ ಏ. 09 (ಕರ್ನಾಟಕ ವಾರ್ತೆ):
ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಪೊಲೀಸ್ ವೀಕ್ಷಕರಾಗಿ ಡಿ.ವೈ.ಮಾಂಡಲಿಕ್, ಡಿ.ಐ.ಜಿ.ಪಿ ಇವರು ಕೊಪ್ಪಳಕ್ಕೆ ಆಗಮಿಸಿದ್ದು, ಇವರು ಲೋಕೋಪಯೋಗಿ ಇಲಾಖೆ ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಏಪ್ರಿಲ್. 10, 11, 14, 15, 18 ಮತ್ತು 19 ರಂದು ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 12 ಗಂಟೆಯವರೆಗೆ ಲಭ್ಯವಿರುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
  ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬAಧಿಸಿದ ದೂರು, ಕುಂದು ಕೊರತೆಗಳನ್ನು ಸಾರ್ವಜನಿಕರು ಕೊಪ್ಪಳ ನಗರದ ಪ್ರವಾಸಿ ಮಂದಿರದ ರೂಂ ನಂ. 3ರಲ್ಲಿ ಖುದ್ದಾಗಿ ಭೇಟಿಯಾಗಿ ನೀಡಬಹುದು ಅಥವಾ ಪೊಲೀಸ್ ವೀಕ್ಷಕರ ಮೊಬೈಲ್ ಸಂಖ್ಯೆ 9823216733, 9108912018 ಗೆ ಸಂಪರ್ಕಿಸಬಹುದಾಗಿದೆ. 

ಕುಕನೂರು : ಏ. 30ರೊಳಗಾಗಿ ಆಸ್ತಿ ತೆರೆಗೆ ಪಾವತಿಸಿದರೆ ಶೇ.5 ರಷ್ಟು ರಿಯಾಯಿತಿ

ಕುಕನೂರು : ಏ. 30ರೊಳಗಾಗಿ ಆಸ್ತಿ ತೆರೆಗೆ ಪಾವತಿಸಿದರೆ ಶೇ.5 ರಷ್ಟು ರಿಯಾಯಿತಿ

ಕೊಪ್ಪಳ ಏ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯತ್ ವತಿಯಿಂದ ಏ.30 ರೊಳಗಾಗಿ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿಸಿದರೆ ಶೇ.5 ರಷ್ಟು ರಿಯಾಯಿತಿಯನ್ನು ನೀಡಲಾಗಿದೆ.
ಕುಕನೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಸ್ತಿ ಮಾಲಿಕರು ಪ್ರಸಕ್ತ (2019-20ನೇ) ಸಾಲಿನ ಸ್ವಯಂ ಘೋಷಿತ ಆಸ್ತಿ ತೆರೆಗೆಯನ್ನು ಏ.30 ರೊಳಗಾಗಿ ಪ.ಪಂ.ಗೆ ಪಾವತಿ ಮಾಡಿದಲ್ಲಿ ಶೇ.5 ರಷ್ಟು ರಿಯಾಯಿತಿಯನ್ನು ನೀಡಲಾಗುವುದು. ಈ ಅವಕಾಶವನ್ನು ಆಸ್ತಿ ಮಾಲಿಕರು ಸದುಪಯೋಗ ಪಡೆದುಕೊಳ್ಳಬೇಕು.  ಮೇ ಹಾಗೂ ಜೂನ್ ತಿಂಗಳಲ್ಲಿ ಬಡ್ಡಿ ಇಲ್ಲದೆ ಆಸ್ತಿ ತೆರಿಗೆ ತುಂಬಲು ಅವಕಾಶವಿದ್ದು, ನಂತರ ಜುಲೈ ತಿಂಗಳಿನಿAದ ಪ್ರತಿತಿಂಗಳು ಶೇ.2 ರಷ್ಟು ದಂಡ ವಿಧಿಸಲಾಗುವುದು.  ಇದಲ್ಲದೇ ಬಾಕಿ ಇರುವ ನೀರಿನ ಕರ, ಆಸ್ತಿ ಕರ, ಮಳಿಗೆ ಬಾಡಿಗೆ, ಲೈಸನ್ಸ್ ಫೀಗಳನ್ನು ಶೀಘ್ರವಾಗಿ ಪಾವತಿಸಿ ಪ.ಪಂ. ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ. 

ಭ್ರಷ್ಟಾಚಾರ ನಿಗ್ರಹ ದಳದಿಂದ ಏ. 09 ಮತ್ತು 10 ರಂದು ಸಾರ್ವಜನಿಕರಿಂದ ಅಹವಾಲು ಸ್ವಿಕಾರ

ಭ್ರಷ್ಟಾಚಾರ ನಿಗ್ರಹ ದಳದಿಂದ ಏ. 09 ಮತ್ತು 10 ರಂದು ಸಾರ್ವಜನಿಕರಿಂದ ಅಹವಾಲು ಸ್ವಿಕಾರ
ಕೊಪ್ಪಳ ಏ. 08 (ಕರ್ನಾಟಕ ವಾರ್ತೆ): ಕೊಪ್ಪಳ ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ನಿರೀಕ್ಷಕರು ಏ 09 ಮತ್ತು 10 ರಂದು ಜಿಲ್ಲೆಯ  ಕನಕಗಿರಿ, ಕುಷ್ಟಗಿ ಮತ್ತು ಕುಕನೂರು ತಾಲೂಕುಗಳಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ದೂರುಗಳನ್ನು  ಹಾಗೂ ಅಹವಾಲುಗಳನ್ನು ಸ್ವೀಕರಿಸುವರು.  
ಕೊಪ್ಪಳ ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ನಿರೀಕ್ಷಕರು ಏ.09 ರಂದು ಬೆಳಿಗ್ಗೆ 11 ಗಂಟೆಯಿAದ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಹಾಗೂ ಮಧ್ಯಾನ 02 ಗಂಟಿಯಿAದ ಸಂಜೆ 05 ಕುಷ್ಟಗಿ ತಾಲೂಕಿನ  ಪ್ರವಾಸಿ ಮಂದಿರದಲ್ಲಿ ಹಾಗೂ ಏ.10 ರಂದು ಮಧ್ಯಾಹ್ನ 03 ರಿಂದ ಸಂಜೆ 05 ಗಂಟೆಯವರೆಗೆ ಕುಕನೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕೂಂದು ಕೊರತೆಗಳ ದೂರುಗಳನ್ನು ಸ್ವೀಕರಿಸಿ ಅವರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.  ಆದ್ದರಿಂದ ಕನಕಗಿರಿ, ಕುಷ್ಟಗಿ ಹಾಗೂ ಕುಕನೂರು ತಾಲೂಕುಗಳ ಸಾರ್ವಜನಿಕರು ಈ ಸಭೆಗಳಿಗೆ ಹಾಜರಾಗಿ ತಮ್ಮ ಕುಂದುಕೊರತೆಯ ಬಗ್ಗೆ ದೂರಗಳ ಅರ್ಜಿಗಳನ್ನು ನೀಡಬಹುದಾಗಿದೆ.  
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಪಿ.ಡಬ್ಲುö್ಯ.ಡಿ. ಕ್ವಾಟ್ರಸ್ ನಂ-5, ಈಶ್ವರ ಗುಡಿ ಹಿಂದುಗಡೆ, ದೂ.ಸಂ. 08539-221833, ಮೊ.ನಂ 9480806244, 9480806319, 9480806320, ಇ-ಮೇಲ್ ಜsಠಿಞಠಿಟ.ಚಿಛಿb@ಞಚಿಡಿಟಿಚಿಣಚಿಞಚಿ.gov.iಟಿ ಕ್ಕೆ ಸಂರ್ಪಕಿಸಬಹುದು ಎಂದು ಎಸಿಬಿ ಆರಕ್ಷಕ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾ ಇಲಾಖೆಯಿಂದ ವಿವಿಧ ಪ್ರಶಸ್ತಿಗಳು : ಅರ್ಜಿ ಅಹ್ವಾನ

ಕ್ರೀಡಾ ಇಲಾಖೆಯಿಂದ ವಿವಿಧ ಪ್ರಶಸ್ತಿಗಳು : ಅರ್ಜಿ ಅಹ್ವಾನ

ಕೊಪ್ಪಳ ಏ. 08 (ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿ,ದ್ರೋಣಾಚಾರ್ಯ ಪ್ರಶಸ್ತಿ,ಧ್ಯಾನಚಂದ್ ಪ್ರಶಸ್ತಿ ಹಾಗೂ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರವು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ  ಸಾಧನೆ ಮಾಡಿರುವ ಅರ್ಹ ಕ್ರೀಡಾಪಟುಗಳಿಂದ 2019ನೇ ಸಾಲಿನ ಅರ್ಜುನ ಪ್ರಶಸ್ತಿ.ಧ್ಯಾನಚಂದ್ ಪ್ರಶಸ್ತಿ,ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ ಹಾಗೂ ಹಿರಿಯ ತರಬೇತುದಾರರಿಗೆ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಪ್ರಶಸ್ತಿಗಳ ಅರ್ಜಿ ನಮೂನೆಗಳನ್ನು ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯದ ಅಧಿಕೃತ ಜಾಲತಾಣ ತಿತಿತಿ.ಥಿಚಿs.ಟಿiಛಿ.iಟಿ/sಠಿoಡಿಣs ದಲ್ಲಿ ಲಭ್ಯವಿದ್ದು, ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಕ್ರೀಡಾಪಟುಗಳು ಮತ್ತು ತರಬೇತುದಾರರು ನಿಗದಿತ ಅರ್ಜಿ ನಮೂನೆಯನ್ನು ಆನ್‌ಲೈನ್ ಮೂಲಕ ಪಡೆದುಕೊಂಡು  ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ತ್ರಿ ಪ್ರತಿಗಳಲ್ಲಿ ಎ.10. ರೊಳಗಾಗಿ ಕಚೇರಿಗೆ ಸಲ್ಲಿಸಬಹುದಾಗಿದೆ. 
 
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿಲ್ಲಾ ಕ್ರೀಡಾಂಗಣ ಗದಗ ರಸ್ತೆ, ಕೊಪ್ಪಳ ಇವರನ್ನು ಖುದ್ದಾಗಿ ಅಥವಾ ದೂ.ಸಂ.9480886475 ಸಂಪರ್ಕಿಸಬಹುದಾಗಿದೆ ಹಾಗೂ ಕಚೇರಿಗೆ ಖುದ್ದಾಗಿ ಸಲ್ಲಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲ್ಯ ವಿವಾಹದಿಂದ ಬಾಲಕಿಯ ರಕ್ಷಣೆ : ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು

ಬಾಲ್ಯ ವಿವಾಹದಿಂದ ಬಾಲಕಿಯ ರಕ್ಷಣೆ : ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು

ಕೊಪ್ಪಳ ಏ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಬಾಲ್ಯ ವಿವಾಹಕ್ಕೆ ಒಳಪಡುತ್ತಿದ್ದ ಗಂಗಾವತಿ ತಾಲೂಕಿನ ಮುಕ್ಕುಂಪಿ ಗ್ರಾಮದ ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದೆ.
ಗಂಗಾವತಿ ತಾಲೂಕಿನ ಮುಕ್ಕಂಪಿ ಗ್ರಾಮದ ಬಾಲಕಿಗೆ ಗೋನಾಳ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರೆ ನಿಮಿತ್ಯ ಆಯೋಜಿಸಿರುವ ಸಾಮೂಹಿಕ ವಿವಾಹದಲ್ಲಿ, ವಿವಾಹ ಮಾಡುತ್ತಿರುವ ಕುರಿತು ಮಾಹಿತಿಯನ್ನು ತಿಳಿದು, ಗಂಗಾವತಿ ವೃತ್ತ ವಿಭಾಗದ ಆರಕ್ಷಕ ನಿರೀಕ್ಷಕ ದೀಪಕ್ ಭೂಸರೆಡ್ಡಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಪ್ಪ ಅವರ ನೇತೃತ್ವದಲ್ಲಿ, ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆ ಮ.ಎ.ಎಸ್. ಐರವ ಶಾರಮ್ಮ, ಸಿಪಿಸಿ-363 ಮರಿಶಾಂತಗೌಡ, ಲಕ್ಷಿö್ಮÃ ಗೋಟುರು, ಅಂಗನವಾಡಿ ಮೇಲ್ವಿಚಾರಕಿ ಬಾಲಕಿ ಗ್ರಾಮಕ್ಕೆ ಭೇಟಿ ನೀಡಿದಾಗ ಬಾಲಕಿಯ ಶಾಲಾ ದಾಖಲೆಗಳನ್ನು ಪರಿಶೀಲಿಸಿದಾ ಶಾಲಾ ದಾಖಲಾತಿಯ ಪ್ರಕಾರ  ಬಾಲಕಿಗೆ 17 ವರ್ಷ 6 ತಿಂಗಳು ಇದ್ದು ಈ ವಿವಾಹವು ಬಾಲ್ಯವಿವಾಹವೆಂದು ಕಂಡುಬAದಿದೆ. 
ಆದ್ದರಿಂದ ಬಾಲಕಿಯ ಪೋಷಕರಿಗೆ ತಿಳುವಳಿಕೆ ನೀಡಿ ಬಾಲಕಿಯನ್ನು ವಶಕ್ಕೆ ಪಡೆದು ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದಾರೆ. ಬಾಲ್ಯ ವಿವಾಹ ಮಾಡುವುದು, ವಿವಾಹದಲ್ಲಿ ಪಾಲ್ಗೊಳ್ಳುವುದು ಕೊಡ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ : ಇಬ್ಬರು ನಾಮಪತ್ರ ವಾಪಸ್, ಕಣದಲ್ಲಿ 14 ಅಭ್ಯರ್ಥಿಗಳು

ಲೋಕಸಭಾ ಚುನಾವಣೆ : ಇಬ್ಬರು ನಾಮಪತ್ರ ವಾಪಸ್, ಕಣದಲ್ಲಿ 14 ಅಭ್ಯರ್ಥಿಗಳು

ಕೊಪ್ಪಳ ಏ. 08 (ಕರ್ನಾಟಕ ವಾರ್ತೆ): ಕೊಪ್ಪಳ ಲೋಕಸಭಾ ಸಾರ್ವತ್ರಿಕ ಚುನಾವಣೆ ನಡುಯುತ್ತಿದ್ದು ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಚುನಾವಣಾ ಕಣದಲ್ಲಿ 14 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ. 
  ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ಏಪ್ರಿಲ್ 8 ರಂದು ಇಬ್ಬರು ಪಕ್ಷೇತರ ಅಭ್ಯರ್ಥಿಗಳಾದ ಬಸವರಾಜ್ ಕೆ ಮತ್ತು ಮಹಮ್ಮದ್ ನಜೀರುದ್ದೀನ್ ಮೂಲಿಮನಿ ತಮ್ಮ ಉಮ್ಮೀದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಅಂತಿಮವಾಗಿ ಚುನಾವಣಾ ಕಣದಲ್ಲಿ 14 ಅಭ್ಯರ್ಥಿಗಳಿದ್ದಾರೆ.

ಲೋಕಸಭಾ ಚುನಾವಣೆ : ಸರಳ ಜನ್ಮ ದಿನಾಚರಣೆ

 ಲೋಕಸಭಾ ಚುನಾವಣೆ : ಸರಳ ಜನ್ಮ ದಿನಾಚರಣೆ 

ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಅವರಿಗೆ ಭಕ್ತಿ ನಮನ

ಕೊಪ್ಪಳ ಏ. 14 (ಕರ್ನಾಟಕ ವಾರ್ತೆ): ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ 128 ನೇ ಜನ್ಮ ದಿನಾಚರಣೆಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಭಕ್ತಿ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
  ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಹಿನ್ನೆಲೆ ನೀತಿ ಸಂಹಿತೆಯ ಕಾರಣದಿಂದಾಗಿ ಜಿಲ್ಲಾಡಳಿತ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಭಾನುವಾರದಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಸರಳವಾಗಿ ಆಚರಿಸಲಾಯಿತು. 
  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ, ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ, ಜಿಲ್ಲಾ ವಾರ್ತಾಧಿಕಾರಿ ಬಿ. ಧನಂಜಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು ಭಕ್ತಿ ನಮನ ಸಲ್ಲಿಸಿದರು.
ಪುತ್ಥಳಿಗೆ ಮಾಲಾರ್ಪಣೆ : ಬಾಬಾ ಸಾಹೇಬರ್‌ರವರ ಜನ್ಮ ದಿನದ ಅಂಗವಾಗಿ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಶಿವಶಾಂತವೀರ ನಗರದಲ್ಲಿರುವ ಅಂಬೇಡ್ಕರ್‌ರವರ ಪುತ್ಥಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ. ಸುಕುಮಾರು ಅವರಿಂದ ಮಾಲಾರ್ಪಣೆ ಮಾಡಲಾಯಿತು.  ಅಲ್ಲದೇ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ ಸೇರಿದಂತೆ ಹಲವರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು, ಅಂಬೇಡ್ಕರ್‌ರವರ ಪುತ್ಥಳಿ ಮುಂದೆ ಕ್ಯಾಂಡಲ್ ಹಚ್ಚಿ, ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಅಂಬೇಡ್ಕರ್‌ರವರಿಗೆ ಗೌರವ ನಮನವನ್ನು ಸಲ್ಲಿಸಲಾಯಿತು.  

ಭಾಗ್ಯನಗರ ಪ.ಪಂ. ನಿಂದ ನಿವೇಶನ ರಹಿತರಿಗೆ ನಿವೇಶನ : ಭೂ ಮಾಲಿಕರಿಗೆ ಆಹ್ವಾನ

ಭಾಗ್ಯನಗರ ಪ.ಪಂ. ನಿಂದ ನಿವೇಶನ ರಹಿತರಿಗೆ ನಿವೇಶನ : ಭೂ ಮಾಲಿಕರಿಗೆ ಆಹ್ವಾನ 

ಕೊಪ್ಪಳ ಜೂ. 03 (ಕರ್ನಾಟಕ ವಾರ್ತೆ): ಭಾಗ್ಯನಗರ ಪಟ್ಟಣ ಪಂಚಾಯತಿ ಜಮೀನು ನಿವೇಶನ ಒದಗಿಸಲು 12-14 ಎಕರೆ ಜಮೀನಿನ ಅವಶ್ಯಕತೆ ಇದ್ದು ಜಮೀನಿನ ಮಾಲೀಕರಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ ರವರು ಮನವಿ ಮಾಡಿದ್ದಾರೆ.
ಕೊಪ್ಪಳ ನಗರದ ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 380-400 ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಒದಗಿಸಲು 12-14 ಎಕ್ಕರೆ ಜಮೀನಿನ ಅವಶ್ಯಕತೆ ಇದ್ದು, ಪಟ್ಟಣದ 4 ಕಿ.ಮೀ. ವ್ಯಾಪ್ತಿಯಲ್ಲಿ ತಮ್ಮ ಜಮೀನನ್ನು ಉದ್ದೇಶಕ್ಕಾಗಿ ನೀಡಲು ಇಚ್ಛಿಸುವವರು ಜಮೀನಿನ ದಖಲೆ, ವಿವರಗಳೊಂದಿಗೆ ಕಾರ್ಯಾಲಯಕ್ಕೆ ಖುದ್ದಾಗಿ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಬೇಕಾಗಿದೆ ಎಂದು ಭಾಗ್ಯನಗರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 13 ರಂದು ರಾಷ್ಟಿçÃಯ ಲೋಕ್ ಅದಾಲತ್

ಜುಲೈ 13 ರಂದು ರಾಷ್ಟಿçÃಯ ಲೋಕ್ ಅದಾಲತ್

ಕೊಪ್ಪಳ ಜೂ. 03 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ರಾಜೀ ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು “ರಾಷ್ಟಿçÃಯ ಲೋಕ್ ಅದಾಲತ್” ಕಾರ್ಯಕ್ರಮವನ್ನು ಜುಲೈ. 13 ರಂದು ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ.    
ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ಆದೇಶದ ಮೇರಗೆ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು 2017ರ ನವೆಂಬರ್. 30 ರಿಂದ ಖಾಯಂ ಸದಸ್ಯ ಕಾರ್ಯದರ್ಶಿಗಳ ಸ್ಥಾನವನ್ನು ಹೊಂದಿ ಕಾರ್ಯನಿರ್ವಹಿಸುತ್ತಿದೆ.  ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪಾಧಿಕಾರ ಇವರ ನಿರ್ದೇಶನದ ಮೇರಗೆ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳು ಅಂತಾ ಪರಿಗಣಿಸಿ ವಿವಿಧ ಪ್ರಕರಣಗಳಾದ ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕರಣಗಳು, ಅಸಲು ದಾವೆಗಳು, ಬ್ಯಾಂಕುಗಳಿಗೆ ಸಂಬAಧಿಸಿದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು, ಕಾನೂನಿನನ್ವಯ ರಾಜೀ ಆಗಬಹುದಾದ ಕ್ರಿಮೀನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ರಾಜೀ ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಜುಲೈ 13 ರಂದು ಆಯಾ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಿಕೊಳ್ಳಲು ರಾಷ್ಟಿçÃಯ ಲೋಕ್ ಅದಾಲತ್‌ನ್ನು ಏರ್ಪಡಿಸಲಾಗಿದೆ.  ಕಕ್ಷಿದಾರರು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಂಜೀವ ವಿ. ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ವೃದ್ದ ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ವೃದ್ದ ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಜೂ 03 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಗಿಣಿಗೇರಿ ಗ್ರಾಮದ ದ್ಯಾಮವ್ವ ಗಂಡ ಹನುಮಪ್ಪ ಕಕ್ಕೂರ (86) ಎಂಬ ವೃದ್ದ ಮಹಿಳೆ  ಏಪ್ರಿಲ್. 04 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದ್ಯಾಮವ್ವ ಗಂಡ ಹನುಮಪ್ಪ ಕಕ್ಕೂರ ವಯಸ್ಸು 86 ಎಂಬ ಮಹಿಳೆ. ಏಪ್ರಿಲ್ 04 ರಂದು ಮದ್ಯಾಹ್ನ 03 ಗಂಟೆಯ ಸುಮಾರಿಗೆ ಗಿಣಿಗೇರಿ ಗ್ರಾಮದ ಮನೆಯಿಂದ ಎದ್ದು ಎಲ್ಲಿಯೋ ಹೋಗಿದ್ದು, ವಾಪಸು ಮನೆಗೆ ಬರದೇ ಕಾಣೆಯಾಗಿದ್ದಾರೆ ಎಂದು ಕಾಣೆಯಾದ ವೃದ್ದ ಮಹಿಳೆಯ ಪುತ್ರ ಶಿವಪುತ್ರಪ್ಪರವರು ಪತ್ತೆ ಮಾಡಿಕೊಡಲು ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಕಾಣೆಯಾದ ವೃದ್ದ ಮಹಿಳೆಯ ಚಹರೆ ವಿವರ ಇಂತಿದೆ, 5. ಫೀಟ್ ಎತ್ತರ, ತೆಳ್ಳನೆ ಮೈಕಟ್ಟು, ಸಾದಾ ಕಪ್ಪು ಮೈಬಣ್ಣ, ಬಿಳಿ ತಲೆಗೂದಲು ಕೋಲು ಮುಖ ಹೊಂದಿದ್ದಾಳೆ  ಕನ್ನಡ ಭಾಷೆ ಮಾತನಾಡುತ್ತಾಳೆ.  ಕಾಣೆಯಾದ ಒಂದು ಹಸಿರು ಬಣ್ಣದ ಬಾಂಡ್ ಸೀರೆ. ಹಸಿರು ಬಣ್ಣದ ಕುಪ್ಪಸ ಧರಿಸಿದ್ದು, ಈ ವೃದ್ದ ಮಹಿಳೆ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಗ್ರಾಮೀಣ ಪಿ.ಎಸ್.ಐ ದೂ.ಸಂ. 08539- 221333, 9480803746, ಕೊಪ್ಪಳ ಗ್ರಾಮೀಣ ಸಿಪಿಐ ಮೊ.ಸಂ. 9480803731, ಕೊಪ್ಪಳ ಡಿವೈಎಸ್‌ಪಿ ದೂ.ಸಂ. 08539-230342, 9480803720, ಕೊಪ್ಪಳ ಎಸ್ಪಿ ದೂ.ಸಂ. 08539-230111 ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ. 08539-100 ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Tuesday, 12 November 2019

ಎನ್.ಟಿ.ಎಸ್.ಇ ಹಾಗೂ ಎನ್.ಎಮ್.ಎಮ್.ಎಸ್ ಪರೀಕ್ಷೆಗಳ ಪ್ರವೇಶ ಪತ್ರ ವಿತರಣೆ ಆರಂಭ

 ಎನ್.ಟಿ.ಎಸ್.ಇ ಹಾಗೂ ಎನ್.ಎಮ್.ಎಮ್.ಎಸ್ ಪರೀಕ್ಷೆಗಳ ಪ್ರವೇಶ ಪತ್ರ ವಿತರಣೆ ಆರಂಭ
ಕೊಪ್ಪಳ ನ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ನವೆಂಬರ್. 17 ರಂದು ಎನ್.ಟಿ.ಎಸ್.ಇ ಹಾಗೂ ಎನ್.ಎಮ್.ಎಮ್.ಎಸ್ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈಗಾಗಲೇ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ವಿತರಿಸಲಾಗುತ್ತಿದೆ. ಪ್ರವೇಶ ಪತ್ರ ಹಾಗೂ ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಬAಧಿಸಿದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಮುನಿರಾಬಾದ್‌ನ ಜಿ¯

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಸಾರ್ವಜನಿಕರ ಗಮನಕ್ಕೆ

ಸಾರ್ವಜನಿಕರ ಗಮನಕ್ಕೆ

ಕೊಪ್ಪಳ ನ. 07 (ಕರ್ನಾಟಕ ವಾರ್ತೆ): ಕೊಪ್ಪಳದಲ್ಲಿ ಭಾರತೀಯ ಸೇನಾ ರ‍್ಯಾಲಿಯನ್ನು ಜಿಲ್ಲಾ ಸೈನಿಕ ಪುನರ್ವಸತಿ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನವೆಂಬರ್. 05 ರಿಂದ 16 ರವರೆಗೆ ಆಯೋಜಿಸಲಾಗಿದೆ. ಈ ರ‍್ಯಾಲಿಯ ಹೆಸರಿನಲ್ಲಿ ಕೆಲವರು ಅಂಗಡಿ ಮಾಲೀಕರು, ಸಂಘ-ಸAಸ್ಥೆಗಳಿAದ ಹಣ ಮತ್ತು ಇತರೆ ಪರಿಕರಗಳನ್ನು ಅನಧಿಕೃತವಾಗಿ ವಸೂಲಿ ಮಾಡುತ್ತಿರುವುದು ಜಿಲ್ಲಾಡಳಿತದ ಗಮಕ್ಕೆ ಬಂದಿದೆ. ಆದ್ದರಿಂದ ಯಾವುದೇ ವ್ಯಕ್ತಿ ಅನಧಿಕೃತವಾಗಿ ಹಣ ಮತ್ತು ಇತರೆ ವಸ್ತುಗಳನ್ನು ಕೇಳಲು ಬಂದರೆ ಅವರ ಹೆಸರು ಮತ್ತು ವಿಳಾಸ ನೀಡಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪಚುನಾವಣೆ ಪ್ರಯುಕ್ತ ನ.12 ಸಾರ್ವತ್ರಿಕ ರಜೆ


ಉಪಚುನಾವಣೆ ಪ್ರಯುಕ್ತ ನ.12 ಸಾರ್ವತ್ರಿಕ ರಜೆ

ಕೊಪ್ಪಳ ನ. 08 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಸ್ಥಾನಗಳಿಗೆ ನವೆಂಬರ್ 12 ರಂದು ಉಪ ಚುನಾವಣೆಯ ಮತದಾನ ನಡೆಯಲಿದ್ದು, ಸರ್ಕಾರದ ಅಧಿಸೂಚನೆಯ ಮೂಲಕ ಉಪ ಚುನಾವಣೆ ನಡೆಯುವ ತಾಲ್ಲೂಕು, ಗ್ರಾಮ ಪಂಚಾಯತಿಗಳ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡAತೆ) ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಒಳಗೊಂಡAತೆ ಮತದಾನದ ದಿನದಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಕುಷ್ಟಗಿ ತಾಲ್ಲೂಕಿನ ತಾಲ್ಲೂಕು ಪಂಚಾಯತ ಕ್ಷೇತ್ರ ಜುಮಲಾಪೂರ-22 ವ್ಯಾಪ್ತಿಗೆ ಒಳಪಡುವ ಜುಮಲಾಪುರ, ಮುದ್ದಲಗುಂದಿ, ನಂದಾಪೂರ, ಅಡವಿಭಾವಿ, ಸಾಸ್ವಿಹಾಳ, ಹಾಗಲದಾಳ. ಐನಾಪೂರ(ಬೇ), ಜಾಗೀರರಾಂಪೂರ, ಮ್ಯಾದರಡೊಕ್ಕಿ ಮತ್ತು ತಾಂಡಾ ಹಾಗೂ ಕೊಪ್ಪಳ ತಾಲ್ಲೂಕಿನ  ಗ್ರಾಮ ಪಂಚಾಯತ್ ಕ್ಷೇತ್ರ ಹುಲಿಗಿ-25ರ ವ್ಯಾಪ್ತಿಗೆ ಬರುವ 7-ಮುನಿರಾಬಾದ-2 ಗ್ರಾಮ ಪಂಚಾಯತ್ ಕ್ಷೇತ್ರಗಳಲ್ಲಿ ಉಪ ಚುನಾವಣೆ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹತಾ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನ

ಅರ್ಹತಾ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ ನ. 08 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಕೈಗೊಳ್ಳಲು ಅಗತ್ಯವಾಗಿರುವ ಸ್ಯಾಟ್, ಜಿಆರ್‌ಇ , ಜಿಮ್ಯಾಟ್ ಮೊದಲಾದ ಅರ್ಹತಾ ಪರೀಕ್ಷೆಗಳಿಗೆ ತರಬೇತಿ ನೀಡಲು ಪರೀಕ್ಷಾ ಪೂರ್ವ ತರಬೇತಿ ಕೇಂದ್ರದಿAದ ಅರ್ಜಿ ಆಹ್ವಾನಿಸಲಾಗಿದೆ. 
ದ್ವಿತೀಯ ಪಿ.ಯು.ಸಿ ಓದುತ್ತಿರುವ ಮತ್ತು ಮುಕ್ತಾಯಗೊಳಿಸಿರುವ ಅಭ್ಯರ್ಥಿಗಳು ಸ್ಯಾಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ ವಿದೇಶದಲ್ಲಿ ಅಧ್ಯಯನ ಮಾಡಲು ಆಸಕ್ತರಿರುವ ಅಭ್ಯರ್ಥಿಗಳು ಜಿಆರ್‌ಇ ಅಥವಾ ಜಿಮ್ಯಾಟ್  ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು www.sw.kar.nic.in  ನಲ್ಲಿ ಪಡೆದುಕೊಂಡು ಅರ್ಜಿ ನಮೂನೆಯಲ್ಲಿನ ಕಾಲಂಗಳನ್ನು  ಭರ್ತಿಮಾಡಿ ಸದರಿ ಅರ್ಜಿಯನ್ನು ಸ್ಕಾö್ಯನ್ ಮಾಡಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಇ-ಮೇಲ್ ವಿಳಾಸ sat.gre.gmat.petc@gmail.com ಗೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ನ. 23 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಕಛೇರಿಗಳನ್ನು ಸಂಪರ್ಕಿಸಬಹ್ಮದೆAದು ಪ್ರಕಟಣೆ ತಿಳಿಸಿದೆ.

ಉದ್ಯೋಗಾಧಾರಿತ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನ

ಉದ್ಯೋಗಾಧಾರಿತ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ ನ. 08 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಭದ್ರತಾಪಡೆ, ಸೇನಾಪಡೆ, ಅರೆ ಸೇನಾಪಡೆ, ಪೊಲೀಸ್ ಪಡೆ, ಅಗ್ನಿಶಾಮಕ, ಅರಣ್ಯ, ವಿದ್ಯುತರ, ಗೃಹ ರಕ್ಷಕ, ಸಾರಿಗೆ ಮೊದಲಾದ ಸೇವೆಗಳಲ್ಲಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿ ಸಹಿತ ಪ್ರಿ ಮಿಲಿಟರಿ ತರಬೇತಿಯನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಇಲಾಖೆ ವೆಬ್‌ಸೈಟ್ www.sw.kar.nic.in ನಲ್ಲಿ ಪಡೆದುಕೊಂಡು ಅರ್ಜಿ ನಮೂನೆಯಲ್ಲಿನ ಕಾಲಂಗಳನ್ನು  ಭರ್ತಿಮಾಡಿ ಸದರಿ ಅರ್ಜಿಯನ್ನು ಸ್ಕಾö್ಯನ್ ಮಾಡಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಇ-ಮೇಲ್ ವಿಳಾಸ pre.military.petc@gmail.com ಗೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ನ. 23 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಕಛೇರಿಗಳನ್ನು ಸಂಪರ್ಕಿಸಬಹುದೆAದು ಪ್ರಕಟಣೆ ತಿಳಿಸಿದೆ.

ಜೆಇಇ ಹಾಗೂ ನೀಟ್ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಜೆಇಇ ಹಾಗೂ ನೀಟ್ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ನ. 08 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯಿಂದ 2019-20ನೇ ಸಾಲಿನ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 02 ವರ್ಷಗಳ ಅವಧಿಗೆ ಜೆಇಇ (ಅಡ್ವಾನ್ಸ್ ಹಾಗೂ ಮೇನ್ಸ್) ಹಾಗೂ ನೀಟ್ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿಯನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಇಲಾಖೆ ವೆಬ್‌ಸೈಟ್ www.sw.kar.nic.in  ನಲ್ಲಿ ಪಡೆದುಕೊಂಡು ಅರ್ಜಿ ನಮೂನೆಯಲ್ಲಿನ ಕಾಲಂಗಳನ್ನು  ಭರ್ತಿಮಾಡಿ ಸದರಿ ಅರ್ಜಿಯನ್ನು ಸ್ಕಾö್ಯನ್ ಮಾಡಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಇ-ಮೇಲ್ ವಿಳಾಸ jee.neet.petc@gmail.com ಗೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ನ. 23 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿಗಳನ್ನು ಸಂಪರ್ಕಿಸಬಹುದೆAದು ಪ್ರಕಟಣೆ ತಿಳಿಸಿದೆ.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ ನ. 08 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದಿAದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾನೂನು ಪದವಿ ಪಡೆದ ಅಭ್ಯರ್ಥಿಗಳಿಗೆ ಸಿವಿಲ್, ಸೆಷನ್ಸ್ ಹಾಗೂ ಡಿಸ್ಟಿçಕ್ಟ್ವ್ ಜಡ್ಜ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನ. 15 ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಇಲಾಖೆ ವೆಬ್‌ಸೈಟ್ www.sw.kar.nic.in ನಲ್ಲಿ ಪಡೆದು, ಅರ್ಜಿ ನಮೂನೆಯಲ್ಲಿನ ಕಾಲಂಗಳನ್ನು  ಭರ್ತಿಮಾಡಿ, ಅರ್ಜಿಯನ್ನು ಸ್ಕಾö್ಯನ್ ಮಾಡಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ವೆಬ್‌ಸೈಟ್ judge.petc@gmail.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿಗೆ ಸಂಪರ್ಕಿಸಬಹುದಾಗಿದೆ ಎಂದು  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 9 October 2019

ಸೈನಿಕ ನೇಮಕಾತಿ : ಅ.೧೦ ರಂದು ಪೂರ್ವಭಾವಿ ಸಭೆ

 ಸೈನಿಕ ನೇಮಕಾತಿ : ಅ.೧೦ ರಂದು ಪೂರ್ವಭಾವಿ ಸಭೆ

ಕೊಪ್ಪಳ ಅ.೦೩ (ಕರ್ನಾಟಕ ವಾರ್ತೆ): ಕೊಪ್ಪಳದಲ್ಲಿ ಸೈನಿಕ ನೇಮಕಾತಿ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಅಕ್ಟೊÃಬರ್. ೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 
ನವೆಂಬರ್. ೦೫ ರಿಂದ ೧೬ ವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಸೈನಿಕ ನೇಮಕಾತಿ ನಡೆಯಲಿದ್ದು, ಈ ಕುರಿತಾದ ಪೂರ್ವಭಾವಿ ಸಭೆಯನ್ನು ಇದೇ ಅ. ೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.  ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. 

ಗಾಂಧೀಜಿ ಅವರ ಜೀವನವೇ ಒಂದು ಸಂದೇಶ: ಕೆ.ರಾಘವೇಂದ್ರ ಹಿಟ್ನಾಳ

ಗಾಂಧೀಜಿ ಅವರ ಜೀವನವೇ ಒಂದು ಸಂದೇಶ: ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ ಅ.೦೨ (ಕರ್ನಾಟಕ ವಾರ್ತೆ): ಗಾಂಧೀಜಿಯವರ ಜೀವನವೇ ನಮಗೆ ಒಂದು ಸಂದೇಶ. ಇಂದಿನ ಯುವಕರಿಗೆ ಗಾಂಧೀಜಿ ಅವರು ಮಾದರಿ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು(ಅ.೦೨) ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಮಹಾತ್ಮ ಗಾಂಧೀಜಿಯವರ ೧೫೦ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲವಾರು ಹೋರಾಟದ ಮೂಲಕ ಗಾಂಧೀಜಿಯವರು ನಮಗೆ ಸ್ವಾತಂತ್ರö್ಯವನ್ನು ದೊರಕಿಸಿ ಕೊಟ್ಟರು. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಗಾಂಧೀಜಿಯವರ ಕನಸಾಗಿತ್ತು. ಇಂದು ನಾವು ಎಲ್ಲೆಡೆ ಇಷ್ಟು ಸ್ವಚ್ಛ ಪರಿಸರವನ್ನು ಕಾಣುತ್ತಿದ್ದೆÃವೆಂದರೆ ಅದಕ್ಕೆ ಗಾಂಧೀಜಿಯವರೇ ಕಾರಣ. ಇಂದಿನ ಯುವ ಪೀಳಿಗೆಯವರು ಗಾಂಧೀಜಿಯವರ ಬೌದ್ಧಿಕ, ಸಾಂಸ್ಕೃತಿಕ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು. ಅವರಂತೆ ನಮ್ಮ ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿ ಲಾಲ್ ಬಹದ್ದೂರ ಶಾಸ್ತಿçà ಅವರು ಕೂಡ ಒಬ್ಬರು. ಅವರ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ನಮಗೆಲ್ಲ ಮಾದರಿಯಾಗಬೇಕು ಎಂದು ಅವರು ಹೇಳಿದರು.
ಗಾಂಧೀಜಿಯವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಭುರಾಜ ನಾಯಕ್, ಗಾಂಧೀಜಿಯವರ ಸತ್ಯ, ಅಹಿಂಸೆ, ಸರಳತೆಯನ್ನು ಅಳವಡಿಸಿಕೊಂಡರೆ ನಾವು ಏನನ್ನಾದರೂ ಸಾಧಿಸಬಹುದು. ಮುಂದಿನ ಜನಾಂಗ ಇವುಗಳನ್ನು  ಅರ್ಥ ಮಾಡಿಕೊಂಡು, ಅವರ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೇಲೆ ನಮ್ಮ ಭಾರತ ದೇಶದ ಭವಿಷ್ಯ ನಿಂತಿದೆ. ಗಾಂಧೀಜಿಯವರ ಬೋಧನೆ, ನೀತಿ, ಜೀವನ ಸಂದೇಶವನ್ನು ಎಲ್ಲರೂ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಗಾಂಧೀಜಿ ಅವರ ಆತ್ಮ ಕತೆ ನನ್ನ ಸತ್ಯಾನ್ವೆÃಷಣೆ ಪುಸ್ತಕದಲ್ಲಿ ಇಂದಿನ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ವಿದ್ಯಾರ್ಥಿಗಳಿಗೆ, ವೈದ್ಯರಿಗೆ ಮತ್ತು ಎಲ್ಲಾ ವರ್ಗದವರಿಗೂ ಅನ್ವಯವಾಗುವಂತ ಸಂದೇಶಗಳನ್ನು ಅವರು ಬರೆದಿದ್ದಾರೆ. ಗಾಂಧೀಜಿಯವರು ಬ್ರಿಟಿಷರ  ದಬ್ಬಾಳಿಕೆಯ ವಿರುದ್ಧ ಹೋರಾಟ ಮಾಡಿ ನಮಗೆ ಸ್ತಾತಂತ್ರö್ಯವನ್ನು ದಕ್ಕಿಸಿಕೊಟ್ಟಿದ್ದಾರೆ. ಗಾಂಧೀಜಿ ಅವರು ಸತ್ಯವೇ ದೇವರು ಎಂದು ನಂಬಿದವರು. ಸತ್ಯ ಪಥವನ್ನು ಬಿಟ್ಟು ಅವರು ಬದುಕಿಲ್ಲ. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಗಾಂಧೀಜಿಯವರ ಸತ್ಯ ಪರ ನಿಲುವುಗಳನ್ನು ಕಾಣುವುದು ಕಷ್ಟ. ಆದರೆ ಅವರ ನಿಲುವು, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯವಾಗಬೇಕು ಎಂದು ಅವರು ಹೇಳಿದರು.
ಗಾಂಧೀಜಿಯವರ ಸರಳತೆ ಮತ್ತು ಅಹಿಂಸಾ ಮಾರ್ಗಗಳನ್ನು ಇಂದಿನ ಯುವಕರು ಅನುಸರಿಸಬೇಕು.  ಇಂದಿನ ರಾಜಕಾರಣ ಪ್ರಜಾಪ್ರಭುತ್ವದ ಉದ್ದೆÃಶ ಮತ್ತು ಧರ್ಮವನ್ನು ಒಳಗೊಂಡಿರಬೇಕು. ದುಡಿಯದೇ ಬರುವ ಹಣ ಅದು ಪಾಪಿಗಳ ಹಣವಿದ್ದಂತೆ ಅದನ್ನು ಸ್ವಿÃಕರಿಸಬಾರದು.  ಇಂದಿನ ದಿನಮಾನದಲ್ಲಿ ನಾವು ಚಾರಿತ್ರö್ಯವಿಲ್ಲದ ಶಿಕ್ಷಣವನ್ನು ಪಡೆಯುತ್ತಿದ್ದೆÃವೆ. ವಿದ್ಯೆಗೆ ಗುರು ಮತ್ತು ಹಿರಿಯರು ಎಂಬ ಎರಡು ರೇಖೆಗಳು ಎಂಬುದನ್ನು ಅರಿತರೆ ಸಮಾಜದ ಹಿರಿಯರನ್ನು ಗೌರವಿಸಲು ಸಾಧ್ಯ. ನೀತಿ ಇಲ್ಲದ ವಿಜ್ಞಾನ, ಹಿಡಿತವಿಲ್ಲದ  ಲೇಖನಿ ಎಲ್ಲವನ್ನೂ ನಾಶಮಾಡುತ್ತದೆ ಎಂದು ಗಾಧೀಜಿಯವರು ಹೇಳಿದ್ದಾರೆ. ಜಗತ್ತಿನ ಶಾಂತಿ, ಸ್ಥಿರತೆ, ಪ್ರಗತಿಗೆ ಗಾಂಧಿ ಅವರ ವಿಚಾರಧಾರೆಗಳು ಮಾರ್ಗದರ್ಶಿಯಾಗಿವೆ. ಜಗತ್ತು ಕೈ ಸೋತು ನಿಂತಾಗ ಗಾಧೀಜಿಯವರ ವಿಚಾರಗಳು ಕೈ ಹಿಡಿಯುತ್ತವೆ ಎಂಬ ಸ್ವಾಮಿ ವಿವೇಕಾನಂದರ ಮಾತು ಅಕ್ಷರಶಃ ಸತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಬದಲಾವಣೆ ಎನ್ನುವುದು ನಮ್ಮಿಂದಲೇ ಆರಂಭವಾಗಬೇಕು. ಗಾಂಧೀಜಿಯವರು ಹೇಳಿರುವ ಮೌಲ್ಯಗಳನ್ನು ಶಾಲಾ ಮಕ್ಕಳು ಮತ್ತು ಎಲ್ಲರೂ ಅಳವಡಿಸಿ ಕೊಳ್ಳಬೇಕು. ಸ್ವಚ್ಛತೆ ಇದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಪ್ರತಿ ವಿದ್ಯಾರ್ಥಿಯೂ ಎರಡು ಗಿಡಗಳನ್ನು ನೆಟ್ಟು ಪೋಷಿಸಬೇಕು. ತಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್‌ನ್ನು ತ್ಯಜಿಸಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಬೇಕು ಎಂದು ಹೇಳುತ್ತಾ, ಶಾಲಾ ವಿದ್ಯಾರ್ಥಿಗಳಿಗೆ ಜಲ ಶಕ್ತಿ ಅಭಿಯಾನ, ಮಳೆನೀರು ಕೊಯ್ಲಿನ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು. ಬರಗಾಲದಲ್ಲಿ ನೀರಿಗೆ ನಾವು ತೊಂದರೆ ಪಡುತ್ತೆÃವೆ ಆದ್ದರಿಂದ ನೀರಿನ ಸಂರಕ್ಷಣೆ ಬಗ್ಗೆ ಇಂದಿನಿಂದಲೇ ಜಾಗೃತವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಗೊಂಡ ಗಾಂಧೀಜಿ ಅವರ ಪಾಪು-ಬಾಪು  ಪುಸ್ತಕವನ್ನು ಶಾಸಕರು ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಗಾಂಧೀಜಿಯವರ ಜೀವನ ಬಿಂಬಿಸುವ ಛಾಯಾಚಿತ್ರ ಪ್ರದರ್ಶನವನ್ನು ಅವರು ಉದ್ಘಾಟಿಸಿದರು.
ಇದೇ ಸಂದರ್ಭ ರಂಗೋಲಿಯಲ್ಲಿ ಗಾಂಧೀಜಿಯವರ ಚಿತ್ರ ರಚಿಸಿದ ಕಲಾವಿದ ಮೊಹಮ್ಮದ ದಾದಾಪೀರ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಮಾರುತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್. ಕೆ. ತೊರವಿ, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಿಸರಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆÃಶಕಿ ಅಮಿತಾ ಯರಗೋಳ್ಕರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸುರೇಶ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈಶಪ್ಪ ಆಶಾಪುರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ಸಂಖ್ಯಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಅಂಬಿಕಾ ಭಾಗ್ಯನಗರ ಮತ್ತು ಸಂಗಡಿಗರು ಪ್ರಾರ್ಥನೆ ಹಾಗೂ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭ ಗಾಂಧೀಜಿಯವರ ಜೀವನ ಕುರಿತ ಸಾಕ್ಷö್ಯ ಚಿತ್ರ ಪ್ರದರ್ಶನ ಮಾಡಲಾಯಿತು. 

ಅನಾಮಧೇಯ ವೃದ್ಧನ ಶವ ಪತ್ತೆ

ಅನಾಮಧೇಯ ವೃದ್ಧನ ಶವ ಪತ್ತೆ

ಕೊಪ್ಪಳ ಅ. ೦೪ (ಕರ್ನಾಟಕ ವಾರ್ತೆ): ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಹಾದಿ ಬಸವಣ್ಣ ಗುಡಿ ಹತ್ತಿರ ೬೦ ವರ್ಷದ ವೃದ್ಧ ಮೃತ ಪಟ್ಟಿದ್ದು, ಮೃತ ವ್ಯಕ್ತಿಯು ಅಂದಾಜು ೫ ಅಡಿ ೫ ಇಂಚು ಎತ್ತರ, ಕಪ್ಪು ಮೈಬಣ್ಣ ಮತ್ತು ಮೈ ಮೇಲೆ ಬಿಳಿ ತನ್ನು ಹೊಂದಿದ್ದು, ತೆಳ್ಳನೆಯ ಮೈಕಟ್ಟು ಹಾಗೂ ತಲೆಯಲ್ಲಿ ಬಿಳಿ ಕೂದಲು ಹೊಂದಿರುತ್ತಾನೆ. ಮೈ ಮೇಲೆ ಬಿಳಿ ಬಣ್ಣದ ತುಂಬ ತೋಳಿನ ಶರ್ಟ್ ಮತ್ತು ಕಡುನೀಲಿ ಬಣ್ಣದ ಹಾಫ್ ಪ್ಯಾಂಟ್ ಧರಿಸಿದ್ದನು. ಮೃತನ ಬಲಗಾಲ ಪಾದದ ಹತ್ತಿರ ಹಳೆಯ ಗಾಯವಿದ್ದು, ಅದಕ್ಕೆ ಬ್ಯಾಂಡೇಜ್ ಸುತ್ತಿದ್ದು ಕಂಡು ಬಂದಿದೆ.
ಮೃತ ವ್ಯಕ್ತಿಯ ಹೆಸರು, ವಿಳಾಸ ಮತ್ತು ಸಂಬಂಧಿಕರ ಬಗ್ಗೆ ಯಾವುದಾದರೂ ಮಾಹಿತಿ ಸಿಕ್ಕಲ್ಲಿ ಕಂಟ್ರೊÃಲ್ ರೂ. ನಂ: ೦೮೫೩೯-೨೩೦೧೦೦ ಮತ್ತು ೨೩೦೨೨೨, ಪಿ.ಐ ನಗರ ಪೊಲೀಸ ಠಾಣೆ ಕೊಪ್ಪಳ ಮೊ ಸಂ: ೯೪೮೦೮ ೦೩೭೪೫, ನಗರ ಪೊಲೀಸ ಠಾಣೆ ಕೊಪ್ಪಳ ದೂರವಾಣಿ ಸಂ: ೦೮೫೩೯-೨೨೦೩೩೩ ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ವಿಕಲಚೇತನರ ಕ್ಷೆÃತ್ರದಲ್ಲಿ ಸೇವೆಗೈದವರಿಗೆ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ವಿಕಲಚೇತನರ ಕ್ಷೆÃತ್ರದಲ್ಲಿ ಸೇವೆಗೈದವರಿಗೆ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ ಅ. ೦೪ (ಕರ್ನಾಟಕ ವಾರ್ತೆ): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಡಿಸೆಂಬರ್ ೦೩ ರಂದು ನಡೆಯುವ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲರ ಕ್ಷೆÃತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ ೧೫ ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ, ಸಲ್ಲಿಸಿರುವ ಶಿಕ್ಷಕರಿಂದ ರಾಜ್ಯ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಅಂಗವಿಕಲರ ಕ್ಷೆÃತ್ರದಲ್ಲಿ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿ, ಸಂಸ್ಥೆ, ವಿಶೇಷ ಶಾಲೆಗಳ ಶಿಕ್ಷಕರು ನಿಗದಿತ ಅರ್ಜಿ ನಮೂನೆಗಳನ್ನು ಇಲಾಖೆಯ ವೆಬ್‌ಸೈಟ್ ತಿತಿತಿ.ತಿeಟಜಿಚಿಡಿeoಜಿಜisಚಿbಟeಜ.ಞಚಿಡಿ.ಟಿiಛಿ ಅಥವಾ ತಿತಿತಿ.ಜತಿಜsಛಿ.ಞಚಿಡಿ.ಟಿiಛಿ.iಟಿ ರಲ್ಲಿ ಪಡೆದು  ಅಕ್ಟೊÃಬರ್ ೧೮ ರೊಳಗೆ ಕೊಪ್ಪಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಇಲ್ಲಿಗೆ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                             
======

ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಅ. ೦೪ (ಕರ್ನಾಟಕ ವಾರ್ತೆ): ಕೊಪ್ಪಳ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ  ಮಾರುತೆಪ್ಪ  ತಂದೆ ಭೀಮಪ್ಪ ಗುಂಡೂರ (೩೫) ವಾಲ್ಮಿÃಕಿ ಎಂಬ ವ್ಯಕ್ತಿಯು ಸೆಪ್ಟೆಂಬರ್ ೦೯ ರಂದು ಮಧ್ಯಾಹ್ನ ೦೧ ಗಂಟೆಯಿಂದ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಾಣೆಯಾದ ವ್ಯಕ್ತಿಯು ೫ ಅಡಿ ೨ ಇಂಚು ಎತ್ತರವಿದ್ದು, ಸಾದಾ ಕೆಂಪು ಮೈಬಣ್ಣ, ಸಾಧಾರಣಾ ಮೈಕಟ್ಟು, ದುಂಡು ಮುಖ, ದಪ್ಪ ಮೀಸೆಯ ಲಕ್ಷಣಗಳನ್ನು ಹೊಂದಿದ್ದು, ಕಾಣೆಯಾದಾಗ ಲುಂಗಿ, ಟಿ-ಶರ್ಟ್ ಧರಿಸಿದ್ದು ಕನ್ನಡ ಭಾಷೆ ಮಾತನಾಡುತ್ತಾನೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಜಿಲ್ಲಾ ಎಸ್. ಪಿ ಕಛೇರಿ ದೂ. ಸಂ: ೦೮೫೩೯-೨೩೦೧೧೧, ಕೊಪ್ಪಳ ಡಿ.ಎಸ್.ಪಿ ದೂ.ಸಂ: ೦೮೫೩೯-೨೩೦೪೩೨, ೯೪೮೦೮೦೩೭೨೦, ಕೊಪ್ಪಳ ಸಿ.ಪಿ.ಐ ಗ್ರಾಮೀಣ ವೃತ್ತ ದೂ.ಸಂ: ೦೮೫೩೯-೨೨೨೪೩೩, ೯೪೮೦೮೦೩೭೩೧, ಮುನಿರಾಬಾದ್ ಠಾಣೆ ಪಿ.ಎಸ್.ಐ ದೂ.ಸಂ: ೦೮೫೩೯-೨೭೦೩೩೩, ಕೊಪ್ಪಳ ಜಿಲ್ಲಾ ಕಂಟ್ರೊÃಲ್ ರೂಂ ದೂ.ಸಂ-೦೮೫೩೯-೨೩೦೨೨೨, ೧೦೦ ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ಕೆಆರ್‌ಐಡಿಎಲ್ ಕಲಬುರಗಿ ವಲಯದ ಅಧೀಕ್ಷಕ ಅಭಿಯಂತರರಾಗಿ (ಹೆಚ್ಚುವರಿ) ಎಲ್. ಧನ್ಯಕುಮಾರ್ ಅಧಿಕಾರ ಸ್ವಿÃಕಾರ

ಕೆಆರ್‌ಐಡಿಎಲ್ ಕಲಬುರಗಿ ವಲಯದ ಅಧೀಕ್ಷಕ ಅಭಿಯಂತರರಾಗಿ (ಹೆಚ್ಚುವರಿ) ಎಲ್. ಧನ್ಯಕುಮಾರ್ ಅಧಿಕಾರ ಸ್ವಿÃಕಾರ

ಕೊಪ್ಪಳ ಅ.೦೪ (ಕರ್ನಾಟಕ ವಾರ್ತೆ): ಕರ್ನಾಟಕ ರೂರಲ್ ಇನ್‌ಫ್ರಾಸ್ಟçಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್  (ಹಿಂದಿನ ಹೆಸರು ಕರ್ನಾಟಕ ಭೂಸೇನಾ ನಿಗಮ ನಿಯಮಿತಿ) ಸಂಸ್ಥೆಯ ಕಲಬುರಗಿ ವಲಯದ ಅಧೀಕ್ಷಕ ಅಭಿಯಂತರರಾಗಿ (ಹೆಚ್ಚುವರಿ) ಎಲ್. ಧನ್ಯಕುಮಾರ್ ಬಿಇ.(ಸಿವಿಲ್) ಇವರು ಸೆಪ್ಟೆಂಬರ್ ೨೫ ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಅಧೀಕ್ಷಕ ಅಭಿಯಂತರರು, ಕೆಆರ್‌ಐಡಿಎಲ್, ಕಲಬುರಗಿ ವಲಯ, ಕಲಬುರಗಿ ಇವರಿಗೆ ಉದ್ದೆÃಶಿಲ್ಪಟ್ಟ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ರಹಸ್ಯ ಪತ್ರ ಮತ್ತು ಖಾಸಗಿ ಪತ್ರಗಳನ್ನು, ಎಲ್. ಧನ್ಯಕುಮಾರ್ ಬಿಇ.(ಸಿವಿಲ್), ಅಧೀಕ್ಷಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್, ರಾಜಾಪೂರ-ಕುಸನೂರ ರಸ್ತೆ, ಕಲಬುರಗಿ- ೫೮೫೧೦೫, ಕಚೇರಿ ದೂ.ಸಂ-೦೮೪೭೨-೨೪೯೩೪೧,  ಮೊ.ಸಂ-೯೪೮೦೮೨೬೧೦೭  ವಿಳಾಸಕ್ಕೆ  ಕಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 8 October 2019

೧೬ ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಿ: ಪ್ರಭಾರಿ ಅಪರ ಜಿಲ್ಲಾಧಿಕಾರಿ ಮಾರುತಿ

೧೬ ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಿ: ಪ್ರಭಾರಿ ಅಪರ ಜಿಲ್ಲಾಧಿಕಾರಿ ಮಾರುತಿ

ಕೊಪ್ಪಳ ಅ. ೦೪ (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಅಕ್ಟೊÃಬರ್ ೧೪ ರಿಂದ ನವೆಂಬರ್ ೦೪ ರವರೆಗೆ ೧೬ ನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣಕ್ಕಾಗಿ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಅಭಿಯಾನವನ್ನು ಯಶಸ್ವಿಗೊಳಿಸಿ ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿ ಮಾರುತಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಕಾಲುಬಾಯಿ ರೋಗ ನಿಯಂತ್ರಣ ಜಿಲ್ಲಾ ನಿರ್ವಹಣಾ ಸಮಿತಿ ಹಾಗೂ ರಾಷ್ಟಿçÃಯ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಕಾಲು-ಬಾಯಿ ಲಸಿಕೆಗೆ ಒಳಪಡಿಸುವ ಒಟ್ಟು ೨,೭೨,೯೯೪ (ದನ, ಎಮ್ಮೆ ಮತ್ತು ಹಂದಿ) ಜಾನುವಾರುಗಳಿದ್ದು, ಗ್ರಾಮವಾರು ಹಾಗೂ ಬ್ಲಾಕ್ ವಾರು ಮೈಕ್ರೊÃಪ್ಲಾನ್ ಹಾಗೂ ತಂಡವಾರು ವೇಳಾಪಟ್ಟಿಯನ್ನು ಇಲಾಖೆ ತಯಾರಿಸಿದೆ. ಕೊಪ್ಪಳ -೦೬, ಗಂಗಾವತಿ-೦೭, ಕುಷ್ಟಗಿ-೦೫, ಯಲಬುರ್ಗಾ-೦೪ ರಂತೆ ಜಿಲ್ಲೆಯಲ್ಲಿ ಒಟ್ಟು ೨೨ ಲಸಿಕಾ ತಂಡಗಳನ್ನು ರಚಿಸಲಾಗಿದೆ. ಲಸಿಕಾ ಕಾರ್ಯಕ್ರಮಕ್ಕೆ ಒಟ್ಟು ೨೨ ವಾಹನಗಳ ಅವಶ್ಯಕತೆ ಇದ್ದು ಈ ಕುರಿತು ರಾ.ಬ.ಕೊ ಹಾಲು ಒಕ್ಕೂಟ ಬಳ್ಳಾರಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಬೇಡಿಕೆಯನ್ವಯ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪೂರೈಸಲು ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ. ಲಸಿಕಾ ಕಾರ್ಯಕ್ರಮಕ್ಕೆ ಸರಬರಾಜಾಗುವ ಲಸಿಕೆ ಹಾಗೂ ಸಿರಿಂಜ್ ಮತ್ತು ನೀಡಲ್ಸ್ಗಳನ್ನು ಸ್ವಿÃಕರಿಸುವ ಕುರಿತಾಗಿ ಸಮಿತಿಯನ್ನು ರಚಿಸುವಂತೆ ಸೂಚಿಸಿದರು.
ಆಕಾಶವಾಣಿ ಬಾನುಲಿ ಕೇಂದ್ರದಲ್ಲಿ ಲಸಿಕಾ ಅಭಿಯಾನ ಕುರಿತಂತೆ ಪ್ರಚಾರ ಕೈಗೊಳ್ಳಿ. ಲಸಿಕಾ ಅಭಿಯಾನದ ಪ್ರಚಾರಕ್ಕೆ ಕರ ಪತ್ರಗಳನ್ನು ಹಂಚಲು ಹಾಗೂ ಬ್ಯಾನರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಿ. ಸ್ಥಳೀಯ ದಿನ ಪತ್ರಿಕೆಗಳಲ್ಲಿ ಪ್ರಕಟಣೆಗಳನ್ನು ಹೊರಡಿಸಿ ವ್ಯಾಪಕ ಪ್ರಚಾರ ಕೈಗೊಳ್ಳಿ. ಪ್ರತಿ ಗ್ರಾಮದ ಗ್ರಾಮ ಪಂಚಾಯತಿಗೆ ಲಸಿಕೆಯ ೨ ದಿನದ ಮುಂಚಿತವಾಗಿ ತಿಳಿಸಿ ಗ್ರಾಮ ಪಂಚಾಯತ್ ವತಿಯಿಂದ ಡಂಗುರ ಅಥವಾ ಟಾಂ ಟಾಂ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಿ. ಆಯಾ ತಾಲ್ಲೂಕಿನ ವಿಸ್ತರಣಾ ಅಧಿಕಾರಿಗಳು, ಎಂ.ಪಿ.ಸಿ.ಎಸ್, ರೈತ ಸಂಪರ್ಕ ಕೇಂದ್ರ, ಸಂಘ-ಸಂಸ್ಥೆಗಳನ್ನು ಭೇಟಿ ಮಾಡಿ ಕಾಲು ಬಾಯಿ ಲಸಿಕಾ ಅಭಿಯಾನದ ಕುರಿತು ಜಾಗೃತಿ ಮೂಡಿಸಿ. ಲಸಿಕಾ ಕಾರ್ಯಕ್ರಮದಲ್ಲಿ ಜಾನುವಾರುಗಳಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾದಲ್ಲಿ ನಿಯಂತ್ರಣಕ್ಕಾಗಿ ಅವಶ್ಯವಿರುವ ಔಷಧಿಗಳ ದಾಸ್ತಾನಿಗೆ ಕ್ರಮ ವಹಿಸುವಂತೆ ಸೂಚಿಸಿದರು.
ಭಾರತ ಸರ್ಕಾರದ ನೂತನ ಕಾರ್ಯಕ್ರಮವಾದ ಕೃತಕ ಗರ್ಭಧಾರಣೆಯ ಮೂಲಕ ರಾಸುಗಳ ತಳಿ ಉನ್ನತೀಕರಣ ಕಾರ್ಯಕ್ರಮದ ಅನುಷ್ಠಾನದ ಕುರಿತು ಚರ್ಚಿಸಿದ ಅವರು ಈ ಕಾರ್ಯಕ್ರಮಕ್ಕಾಗಿ ಕೊಪ್ಪಳ ಜಿಲ್ಲೆಯಿಂದ ಈಗಾಗಲೇ ೧೦೦ ಗ್ರಾಮ/ ಗುಚ್ಚಗ್ರಾಮಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಗ್ರಾಮ/ ಗುಚ್ಚಗ್ರಾಮಗಳಲ್ಲಿ ವಿವಿಧ ತಳಿಯ ರಾಸುಗಳ ಸಂವರ್ಧನೆಗಾಗಿ ವಿವಿಧ ತಳಿಯ ವೀರ್ಯವನ್ನು ಬಳಸಬಹುದಾಗಿದ್ದು, ವಿವಿಧ ತಳಿಗಳ ವೀರ್ಯನಳಿಕೆಗಳ ವಿಶೇಷತೆಯನ್ನು ರಾಸುಗಳ ಮಾಲೀಕರಿಗೆ ತಿಳಿಸಿ. ಅದರಂತೆ ವೀರ್ಯನಳಿಕೆಗಳ ಬೇಡಿಕೆಯನ್ವಯ ಜಿಲ್ಲೆಯ ಒಟ್ಟಾರೆ ಬೇಡಿಕೆಯನ್ನು ಸಲ್ಲಿಸಬೇಕಾಗಿರುವುದರಿಂದ ಜಿಲ್ಲೆಯ ಒಟ್ಟಾರೆ ವೀರ್ಯ ನಳಿಕೆಗಳ ಬೇಡಿಕೆಯನ್ನು ನಿಗಧಿತ ಅನುಬಂಧದಲ್ಲಿ ಸಲ್ಲಿಸಬೇಕು. ಈ ಕಾರ್ಯಕ್ರಮಕ್ಕೆ ಕೃತಕ ಗರ್ಭಧಾರಣೆಯ ಸೌಲಭ್ಯವನ್ನು ಒದಗಿಸಲು ಪಶುಪಾಲನಾ ಇಲಾಖೆಯ ಸಿಬ್ಬಂದಿಗಳ ಜೊತೆಗೆ ಹಾಲು ಉತ್ಪಾದಕರ ಒಕ್ಕೂಟದ ಸಿಬ್ಬಂದಿ ಮತ್ತು ಮೈತ್ರಿ ಕಾರ್ಯಕರ್ತರನ್ನು ಒಳಗೊಂಡಂತೆ ಸಿಬ್ಬಂದಿಯನ್ನು ಗುರುತಿಸಿ ಗ್ರಾಮವಾರು ಪಟ್ಟಿಯನ್ನು ಅಂತಿಮಗೊಳಿಸಿ ಎಂದು ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೆÃಶಕ ಡಾ. ಬಸಯ್ಯ ಸಾಲಿ, ಜಂಟಿ ಕೃಷಿ ನಿರ್ದೆÃಶಕಿ ಶಬಾನ ಶೇಖ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಲಬುರಗಿ ವಿಭಾಗ ಮಟ್ಟದ ಕ್ರಿÃಡಾಕೂಟವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ: ಪ್ರಭಾರಿ ಅಪರ ಜಿಲ್ಲಾಧಿಕಾರಿ ಮಾರುತಿ

 ಕಲಬುರಗಿ ವಿಭಾಗ ಮಟ್ಟದ ಕ್ರಿÃಡಾಕೂಟವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ: ಪ್ರಭಾರಿ ಅಪರ ಜಿಲ್ಲಾಧಿಕಾರಿ ಮಾರುತಿ

ಕೊಪ್ಪಳ ಅ. ೦೪ (ಕರ್ನಾಟಕ ವಾರ್ತೆ): ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ/ಬಾಲಕಿಯರಿಗಾಗಿ ಖೋಖೋ, ಬಾಲ್ ಬ್ಯಾಡ್ಮಿಂಟನ್ ಹಾಗೂ ಹ್ಯಾಂಡ್‌ಬಾಲ್ ಕ್ರಿÃಡೆಗಳನ್ನು ಜಿಲ್ಲೆಯಲ್ಲಿ ಸಂಘಟಿಸಲಾಗುತ್ತಿದ್ದು ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಅಚ್ಚುಕಟ್ಟಾಗಿ ತಮ್ಮ ಕರ್ತವ್ಯ ನಿರ್ವಹಿಸಿ ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿ ಮಾರುತಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ/ಬಾಲಕಿಯರಿಗಾಗಿ ಖೋಖೋ, ಬಾಲ್ ಬ್ಯಾಡ್ಮಿಂಟನ್ ಹಾಗೂ ಹ್ಯಾಂಡ್‌ಬಾಲ್ ಕ್ರಿÃಡೆಗಳನ್ನು ಸಂಘಟಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಕ್ರಿÃಡಾಕೂಟದಲ್ಲಿ ಕಲಬುರಗಿ ವಿಭಾಗದ ಆರು ಜಿಲ್ಲೆಗಳಿಂದ ಕ್ರಿÃಡಾಪಟುಗಳು ಭಾಗವಹಿಸುತ್ತಿದ್ದಾರೆ. ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಕ್ರಿÃಡಾಕೂಟಗಳು ನಡೆಯಲಿವೆ. ಅಕ್ಟೊÃಬರ್ ೧೨ ರಂದು ಖೋಖೋ ಕ್ರಿÃಡೆ ನಡೆಯಲಿದ್ದು, ಒಟ್ಟು ೨೪ ತಂಡಗಳು ಭಾಗವಹಿಸಲಿವೆ. ಈ ಕ್ರಿÃಡೆಗೆ ಭಾಗವಹಿಸುವ ತಂಡಗಳು ಅ. ೧೧ ರಂದು ನೋಂದಣಿ ಮಾಡಿಕೊಳ್ಳಬೇಕು. ಅ. ೧೩ ರಂದು ನಡೆಯುವ ಬಾಲ್ ಬ್ಯಾಡ್ಮಿಂಟನ್ ಕ್ರಿÃಡೆಗೆ ಒಟ್ಟು ೧೨ ತಂಡಗಳು ಭಾಗವಹಿಸಲಿದ್ದು, ಅ. ೧೨ ರಂದು ನೋಂದಣಿ ಮಾಡಿಕೊಳ್ಳಬೇಕು. ಅ. ೧೬ ರಂದು ಹ್ಯಾಂಡ್‌ಬಾಲ್ ಕ್ರಿÃಡೆ ನಡೆಯಲಿದ್ದು, ಒಟ್ಟು ೨೪ ತಂಡಗಳು ಭಾಗವಹಿಸಲಿವೆ. ಭಾಗವಹಿಸುವ ತಂಡಗಳು ಅ. ೧೫ ರಂದು ನೋಂದಣಿ ಮಾಡಿಕೊಳ್ಳಬೇಕು. ಹಾಗೆಯೇ ನವೆಂಬರ್ ೦೫ ಮತ್ತು ೦೬ ರಂದು ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ/ ಬಾಲಕಿಯರಿಗಾಗಿ ಹ್ಯಾಂಡಬಾಲ್ ಕ್ರಿÃಡೆಗಳು ನಡೆಯಲಿದ್ದು, ಈ ಕ್ರಿÃಡಾಕೂಟದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಿಂದ ಕ್ರಿÃಡಾಪಟುಗಳು ಭಾಗವಹಿಸುತ್ತಿದ್ದಾರೆ. ಬಾಲಕರ ೧೬ ತಂಡಗಳು ಹಾಗೂ ಬಾಲಕಿಯರ ೧೬ ತಂಡಗಳು ಕ್ರಿÃಡಾಕೂಟದಲ್ಲಿ ಭಾಗವಹಿಸಲಿವೆ. ಈ ಎರಡೂ ಕ್ರಿÃಡಾಕೂಟಗಳಲ್ಲಿ ಅಂದಾಜು ೧೪೦೦ ಕ್ರಿÃಡಾಪಟುಗಳು, ೨೩೦ ಕ್ಕೂ ಹೆಚ್ಚು ತಂಡದ ವ್ಯವಸ್ಥಾಪಕರು, ನಿರ್ಣಾಯಕರು ಸೇರಿದಂತೆ ಸುಮಾರು ೨ ಸಾವಿರಕ್ಕೂ ಹೆಚ್ಚು ಜನ  ಭಾಗವಹಿಸುತ್ತಾರೆ ಎಂದು ಅವರು ಮಾಹಿತಿ ನೀಡಿದರು.
ಭಾಗವಹಿಸುವ ಕ್ರಿÃಡಾಪಟುಗಳು, ತಂಡದ ವ್ಯವಸ್ಥಾಪಕರಿಗೆ ವಸತಿ ವ್ಯವಸ್ಥೆ, ಊಟ-ಉಪಹಾರದ ವ್ಯವಸ್ಥೆ, ಕ್ರಿÃಡಾಂಗಣಕ್ಕೆ ಕರೆದು ತರುವ ಮತ್ತು ಕರೆದೊಯ್ಯುವ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಕಾರ್ಯವೂ ವ್ಯವಸ್ಥಿತವಾಗಿರಬೇಕು. ಕ್ರಿÃಡಾಪಟುಗಳು ಉಳಿದುಕೊಳ್ಳಲು ಅಗತ್ಯ ಮೂಲಭೂತ ಸೌಕರ್ಯಗಳಿರುವ ವಸತಿ ನಿಲಯದ ವ್ಯವಸ್ಥೆ ಮಾಡಬೇಕು. ತುರ್ತು ಆರೋಗ್ಯ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಸಾರಿಗೆ ವ್ಯವಸ್ಥೆಗಾಗಿ ವಿವಿಧ ಶಾಲೆಗಳ ಶಾಲಾ ವಾಹನಗಳನ್ನು ಬಳಸಿಕೊಳ್ಳಿ. ಈ ಎಲ್ಲ ಕಾರ್ಯಗಳಿಗೂ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಕ್ರಿÃಡಾ ಇಲಾಖೆಯ ಅಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
(ಫೋಟೋ ಕಳುಹಿಸಿದೆ)
======

ಮಹಾತ್ಮ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಾಜರಿರಲು ಸೂಚನೆ

ಮಹಾತ್ಮ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಾಜರಿರಲು ಸೂಚನೆ

ಕೊಪ್ಪಳ ಅ. ೦೧ (ಕರ್ನಾಟಕ ವಾರ್ತೆ): ಅಕ್ಟೊÃಬರ್. ೦೨ ರಂದು ಬೆಳಗ್ಗೆ ೧೦ ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಳ್ಳಲಾದ ``ಮಹಾತ್ಮ ಗಾಂಧಿ ಜಯಂತಿ'' ಆಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ತಪ್ಪದೇ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
======

ಅ.೦೨ ರಂದು ಕೊಪ್ಪಳದಲ್ಲಿ ಗಾಂಧಿ ಜಯಂತಿ ಆಚರಣೆ

 ಅ.೦೨ ರಂದು ಕೊಪ್ಪಳದಲ್ಲಿ ಗಾಂಧಿ ಜಯಂತಿ ಆಚರಣೆ

ಕೊಪ್ಪಳ ಅ. ೦೧ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧೀಜಿಯವರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ಗಾಂಧೀಜಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ಅಕ್ಟೊÃಬರ್. ೦೨ ರಂದು ಬೆಳಗ್ಗೆ ೧೦ ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸಂಗಪ್ಪ ಸವದಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ ರೆಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ, ಪರಣ್ಣ ಈಶ್ವರಪ್ಪ ಮುನವಳ್ಳಿ, ಹಾಲಪ್ಪ ಬಸಪ್ಪ ಆಚಾರ್ ಹಾಗೂ ಬಸವರಾಜ ದಢೇಸೂಗೂರು, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಡಾ. ಚಂದ್ರಶೇಖರ ಬಿ. ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್ ಪಾಲ್ಗೊಳ್ಳುವರು.  ವಿಶೇಷ ಆಹ್ವಾನಿತರಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಭಾಗವಹಿಸುವರು. 
ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಭುರಾಜ ನಾಯಕ್ ಅವರು ಗಾಂಧೀಜಿಯವರ ಕುರಿತು ವಿಶೇಷ ಉಪನ್ಯಾಸ ನೀಡುವರು.  ಗಾಂಧೀಜಿಯವರ ಕುರಿತ ಸಾಕ್ಷö್ಯಚಿತ್ರ ಪ್ರದರ್ಶನ ಮತ್ತು ಸರ್ವಧರ್ಮ ಪ್ರಾರ್ಥನೆ, ಭಜನೆ ಕಾರ್ಯಕ್ರಮ ನಡೆಯಲಿದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸುರೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ : ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ : ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ

ಕೊಪ್ಪಳ ಸೆ. ೧೭ (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಮಂಗಳವಾರದಂದು ಜಿಲ್ಲಾಡಳಿತ ಭವನದ ಆವಣರದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ರಾಷ್ಟç ಧ್ವಜಾರೋಹಣ ನೆರವೇರಿಸಿದರು. 
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಶುಭಾಶಯಗಳನ್ನು ಕೋರಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಮಾತನಾಡಿ, ೩೭೧(ಜೆ) ಲಾಭ ಈ ಭಾಗದ ಎಲ್ಲಾ ಜನರಿಗೆ ಸಿಗಬೇಕು.  ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮೀಸಬೇಕು. ಪ್ರತಿ ವರ್ಷ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ೧೦೦ ಕೋಟಿ ಅನುದಾನ ಬರುತ್ತದೆ.  ಅದರ ಲಾಭ ಈ ಭಾಗದ ಜನ ಸಾಮಾನ್ಯರಿಗೆ ತಲುಪಿದಾಗ ಮಾತ್ರ ಸರ್ಕಾರದ ಯೋಜನೆಗಳಿಗೆ ಮಹತ್ವ ಬರುತ್ತದೆ.  ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಕ ಕಲ್ಯಾಣಾಧಿಕಾರಿ ಡಾ. ರಾಜಕುಮಾರ್ ಯರಗಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಜಿ. ಸುರೇಶ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸರಳವಾಗಿ ಜನರಿಗೆ ಮರಳು ಒದಗಿಸುವುದು ಸರ್ಕಾರದ ಗುರಿ : ಸಿ.ಸಿ ಪಾಟೀಲ

 ಸರಳವಾಗಿ ಜನರಿಗೆ ಮರಳು ಒದಗಿಸುವುದು ಸರ್ಕಾರದ ಗುರಿ : ಸಿ.ಸಿ ಪಾಟೀಲ

ಕೊಪ್ಪಳ ಸೆ. ೧೭ (ಕರ್ನಾಟಕ ವಾರ್ತೆ): ಪ್ರತಿಯೊಂದು ಜನರಿಗೆ ಮರಳು ಸುಲಲಿತವಾಗಿ ತಲುಪುವಂತೆ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ ಪಾಟೀಲ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಬಡವರು, ಸಾರ್ವಜನಿಕರು ಮನೆ  ಹಾಗೂ ಕಟ್ಟಡ ಕಟ್ಟಿಸಿಕೊಳ್ಳಲು ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇದರ ಜೊತೆ ಜೊತೆಗೆ ಸಾರ್ವಜನಿಕರಿಗೆ ಮರಳು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕಿದೆ.  ಸರ್ಕಾರದ ಯಾವುದೇ ಕಾರ್ಯಕ್ರಮಗಳು ಮಂದಗತಿಯಲ್ಲಿ ಸಾಗಬಾರದು.  ಅಕ್ರಮ ಗಣಿ ಮತ್ತು ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಮೈನಿಂಗ್, ಕಂದಾಯ, ಅರಣ್ಯ ಹಾಗೂ ಪೊಲೀಸ್ ಇಲಾಖೆಯವರು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು.  ಮರಳು ಗಣಿಗಾರಿಕೆಯನ್ನು ಸುಗಮಗೊಳಿಸಲು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಕೊಪ್ಪಳ ಜಿಲ್ಲೆಯನ್ನು ಆದ್ಯತೆಯ ಮೇಲೆ ಪರಿಗಣಿಸಿದ್ದು, ಗಣಿಗಾರಿಕೆ ಮತ್ತು ಮರಳುಗಾರಿಕೆಯಲ್ಲಿ ಆದಷ್ಟು ಬೇಗನೆ ಪಾರದರ್ಶಕತೆ ತರಲು ಪ್ರಯತ್ನಿಸಲಾಗುತ್ತಿದೆ.  ಕಾನೂನು ಬಾಹೀರವಾಗಿ ಗಣಿ ಮತ್ತು ಮರಳು ಸಾಗಾಣಿಕೆ ಮಾಡುವವರ ವಿರುದ್ಧ ನಿರ್ಧಾಕ್ಷಿÃಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 
ರೈಲ್ವೆ ಹಾಗೂ ರಾಷ್ಟಿçÃಯ ಹೆದ್ದಾರಿ ಕಾಮಗಾರಿಗಳು ಕೇಂದ್ರ ಸರ್ಕಾರದ ಕಾಮಗಾರಿಗಳು ಆಗಿರುವುದರಿಂದ.  ಈ ಎಲ್ಲಾ ಕಾಮಗಾರಿಗಳು ಅತೀ ದೊಡ್ಡ ಯೋಜನೆಗಳದ್ದಾಗಿವೆ.  ಈ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಇವುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು. 
ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಮಾತನಾಡಿ, ಜಿಲ್ಲೆಯ ಗ್ರಾö್ಯನೇಟ್ ಉದ್ಯಮ ಸಂಕಷ್ಟದಲ್ಲಿದೆ ರಾಜ್ಯ ಸರ್ಕಾರದಿಂದ ಇದಕ್ಕೆ ಅನುಕೂಲವಾಗುವ ರೀತಿಯಲ್ಲಿ ಹೊಸದೊಂದು ಯೋಜನೆ ರೂಪಿಸುವಂತೆ ಕೇಳಿಕೊಂಡರು. 
ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ ಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ ಕ್ಷಿÃರಸಾಗರ, ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು. 
ಲಿಫ್ಟ್ ಉದ್ಘಾಟನೆ;
  ಕೊಪ್ಪಳ ಜಿಲ್ಲಾಡಳಿತ ಭವನಕ್ಕೆ ಬರುವ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಜಿಲ್ಲಾಧಿಕಾರಿ ಹಾಗೂ ಮೊದಲನೇ ಮಹಡಿಯ ಕಚೇರಿಗಳಿಗೆ ಭೇಟಿಗೆ ಅನುಕೂಲವಾಗಲು ಜಿಲ್ಲಾಡಳಿತ ಭವನದಲ್ಲಿ ಸ್ಥಾಪಿಸಲಾದ ಲಿಫ್ಟ್ನ್ನು ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ ಪಾಟೀಲ ಅವರು ವಿಕಲಚೇತನ ಯುವತಿಯಿಂದ ಉದ್ಘಾಟಿಸಿದರು.  ಇದೇ ಸಂದರ್ಭದಲ್ಲಿ  ಸಂಸದ ಕರಡಿ ಸಂಗಣ್ಣ, ಶಾಸಕ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 
(ಫೋಟೋ ಕಳುಹಿಸಿದೆ)   

ಸಹಕಾರ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಸಹಕಾರ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ ಸೆ. ೧೯ (ಕರ್ನಾಟಕ ವಾರ್ತೆ): ಕೊಪ್ಪಳ ಸಹಕಾರ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ “ಸಹಕಾರ ರತ್ನ” ಪ್ರಶಸ್ತಿಗಾಗಿ ಅರ್ಹ ಸಹಕಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರವು ಶ್ರೆÃಷ್ಠ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ನೀಡುವ ಸಲುವಾಗಿ ಶಿಫಾರಸ್ಸು ಮಾಡುವ ಬಗ್ಗೆ ಅಧ್ಯಕ್ಷರು ಆರ್.ಡಿ.ಸಿ.ಸಿ. ಬ್ಯಾಂಕ್ ನಿ. ರಾಯಚೂರು ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿರುತ್ತದೆ. ಆ ಪ್ರಕಾರ ೨೦೧೯ ನೇ ಸಾಲಿಗೆ ಪ್ರಶಸ್ತಿಗೆ ಅರ್ಹರಾದ ಸಹಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. 
ಸೆಪ್ಟೆಂಬರ್ ೩೦ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದ್ದು, ಸಹಕಾರ ಕ್ಷೆÃತ್ರದಲ್ಲಿ ಕನಿಷ್ಠ ೧೦ ವರ್ಷಗಳ ನಿಷ್ಕಳಂಕ ಸೇವೆ ಸಲ್ಲಿಸಿರುವ, ಕೊಪ್ಪಳ ಜಿಲ್ಲೆಯಲ್ಲಿರುವ  ನಿವಾಸಿಗಳು ತಮ್ಮ ವೈಯಕ್ತಿಕ ಪರಿಚಯ, ಸಹಕಾರ ಕ್ಷೆÃತ್ರದಲ್ಲಿ ಸೇವೆ  ಸಲ್ಲಿರುವ ವಿವರ, ಸಹಕಾರ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ವಿವರ ಹಾಗೂ ಪೂರಕ ಮಾಹಿತಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸಹಕಾರ ಸಂಘಗಳ ಉಪನಿಬಂಧಕರು, ಕೊಪ್ಪಳ ಇವರಿಗೆ ಅರ್ಜಿ ಸಲ್ಲಿಸಬೇಕು ಎಂದು ಕೊಪ್ಪಳ ಸಹಕಾರ ಸಂಘಗಳ ಉಪ ನಿಬಂಧಕ ಎಸ್.ಕೆ.ಸಿದ್ನೆಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾರ್ಗಸೂಚಿಯನ್ವಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿ : ಡಿ.ಸಿ

ಮಾರ್ಗಸೂಚಿಯನ್ವಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿ : ಡಿ.ಸಿ

ಕೊಪ್ಪಳ ಸೆ. ೧೯ (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ  ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸಹಾಯಕಿಯರ ಗೌರವ ಸೇವೆಗಳಿಗೆ ಅರ್ಜಿಗಳು ಸ್ವಿÃಕೃತಿಯಾಗಿದ್ದು, ಮಾರ್ಗಸೂಚಿಯನ್ವಯ ನೇಮಕಾತಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ. 
ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ೨೨ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ೮೫ ಸಹಾಯಕಿಯರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಜುಲೈ ೩೧ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಈ ಪ್ರಕ್ರಿಯೆಯಲ್ಲಿ ೨೨ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ೧೫೭೫ ಹಾಗೂ ೮೫ ಸಹಾಯಕಿಯರ ಹುದ್ದೆಗಳಿಗೆ ೧೧೮೫ ಅರ್ಜಿಗಳನ್ನು ಸ್ವಿÃಕರಿಸಲಾಗಿದೆ.  
ಸ್ವಿÃಕೃತಿಯಾದ ಎಲ್ಲ ಅರ್ಜಿಗಳ ಪರಿಶೀಲನೆ ಮಾಡಲಾಗುತ್ತಿದ್ದು, ನೇಮಕಾತಿ ಪ್ರಕ್ರ‍್ರಿಯೆಯು ಪಾರದರ್ಶಕತೆಯಿಂದ ಕೂಡಿರುತ್ತದೆ. ಸರ್ಕಾರಿ ಮಾರ್ಗಸೂಚಿಯನ್ವಯ ನಿಗದಿಪಡಿಸಿದ ಆದ್ಯತೆಗಳಿಗನುಗುಣವಾಗಿ ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ಆಯ್ಕೆ ಸಮಿತಿ ಅನುಮೋದನೆ ಮೇರೆಗೆ ಆಯ್ಕೆ ಮಾಡಲಾಗುತ್ತದೆ.  ಈ ಕುರಿತು ಯಾವುದೇ ಶಿಫಾರಸ್ಸು ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ.  ಈ ಮಧ್ಯ ಕೆಲವು ಮಧ್ಯವರ್ತಿಗಳು ಕೆಲಸ ಕೊಡಿಸುವುದಾಗಿ ಅರ್ಜಿದಾರರನ್ನು ನಂಬಿಸಿ, ಹಣದ ಬೇಡಿಕೆ ಇಡುತ್ತಿರುವುದಾಗಿ ಕೆಲವು ಸಾರ್ವಜನಿಕರಿಂದ ಊಹಾಪೋಹದ ಮಾತು ಕೇಳಿ ಬರುತ್ತಿವೆ.  ಇಂತಹ ಯಾವುದೇ ಮಾತುಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಒಂದು ವೇಳೆ ಹಣದ ಆಮೀಷಕ್ಕೆ ಸಾರ್ವಜನಿಕರು ಮತ್ತು ಅರ್ಜಿದಾರರು ಒಳಗಾದಲ್ಲಿ ಅದಕ್ಕೆ ಇಲಾಖೆಯು ಯಾವುದೇ ರೀತಿಯ ಹೊಣೆಯಲ್ಲ ಎಂದು ಸೂಚಿಸಿದ್ದಾರೆ.  
ನೇಮಕಾತಿ ಪ್ರಕ್ರಿಯೆಯು ಪಾರದರ್ಶಕತೆಯಿಂದ ಕೂಡಿದ್ದು, ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಸಲ್ಲಿಸಿದ ದಾಖಲೆಗಳಿಗನುಸಾರ ನಿಗದಿಪಡಿಸಿದ ಮೀಸಲಾತಿ, ವಯೋಮೀತಿ, ವಾಸಸ್ಥಳ, ವಿದ್ಯಾರ್ಹತೆ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.  ಆದ್ದರಿಂದ ಸಾರ್ವಜನಿಕರು ಮಧ್ಯವರ್ತಿಗಳ ಯಾವುದೇ ಹಣದ ಆಮೀಷಕ್ಕೆ ಒಳಗಾಗದಿರಲು ಪ್ರಕಟಣೆಯಲ್ಲಿ ತಿಳಿಸಿದೆ. 
======

ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಶಿಬಿರ : ಹೆಸರು ನೋಂದಾಯಿಸಿ

ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಶಿಬಿರ : ಹೆಸರು ನೋಂದಾಯಿಸಿ

ಕೊಪ್ಪಳ ಸೆ. ೧೯ (ಕರ್ನಾಟಕ ವಾರ್ತೆ): ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟೆ ಇವರ ವತಿಯಿಂದ ಉಚಿತ ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಶಿಬಿರವನ್ನು ಅಕ್ಟೊÃಬರ್ ತಿಂಗಳಿಂದ ಆಯೋಜಿಸಲಾಗಿದ್ದು, ಭಾಗವಹಿಸಲಿಚ್ಛಿಸುವ ಆಸಕ್ತ ರೈತರು ಹೆಸರನ್ನು ನೋಂದಾಯಿಸಿಕೊಳ್ಳಬಹುದು. 
ಈ ಶಿಬಿರದಲ್ಲಿ ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.  ಭಾಗವಹಿಸುವ ಅಭ್ಯರ್ಥಿಗಳು ೧೮ ರಿಂದ ೫೫ ವರ್ಷ ವಯೋಮಿತಿಯಲ್ಲಿರಬೇಕು.  ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ಈ ಶಿಬಿರದಲ್ಲಿ ಭಾಗವಹಿಸಬಹುದು.  ಆಸಕ್ತರು ಮೊ.ಸಂ; ೯೪೮೨೬೩೦೭೯೦ ಕ್ಕೆ ಕರೆ ಮಾಡಿ ಸೆಪ್ಟೆಂಬರ್. ೩೦ ರೊಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕು.
ತರಬೇತಿ ಕೇಂದ್ರದ ವಿಳಾಸ;
  ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೆಂದ್ರ, ಬಿ.ವಿ.ವಿ. ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-೫೮೭೧೦೨. ಹೆಚ್ಚಿನ ಮಾಹಿತಿಗಾಗಿ ದೂ.ಸಂ: ೦೮೩೫-೨೪೪೦೨೮, ೨೪೪೦೪೮ ಕ್ಕೆ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ನೆರೆಹಾವಳಿ ಗ್ರಾಮಗಳಿಗೆ ಹೆಚ್ಚುವರಿ ಅನುದಾನ : ಮುಖ್ಯ ಮಂತ್ರಿಗಳ ಭೇಟಿಗೆ ನಿರ್ಧಾರ

 ನೆರೆಹಾವಳಿ ಗ್ರಾಮಗಳಿಗೆ ಹೆಚ್ಚುವರಿ ಅನುದಾನ : ಮುಖ್ಯ ಮಂತ್ರಿಗಳ ಭೇಟಿಗೆ ನಿರ್ಧಾರ

ಕೊಪ್ಪಳ ಸೆ. ೧೯ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ  ನೆರೆಹಾವಳಿಯಿಂದ ಹಾನಿಗೊಳಗಾದ ಗ್ರಾಮಗಳಿಗೆ ಹೆಚ್ಚುವರಿ ಅನುದಾನದ ಬಿಡುಗಡೆ ಸಂಬಂಧ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಸರ್ವ ಸದಸ್ಯರನ್ನೊಳಗೊಂಡ ಸರ್ವಪಕ್ಷ ನಿಯೋಗದ ಜೊತೆಗೆ ಮುಖ್ಯ ಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ರವರನ್ನು ಸೆಪ್ಟೆಂಬರ್. ೨೦ ರಂದು ಭೇಟಿ ಮಾಡಲು ತೀರ್ಮಾನಿಸಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.  

ಪ್ರತಿಯೊಬ್ಬರಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕುಗಳಿವೆ : ಟಿ. ಶ್ರಿÃನಿವಾಸ್

ಪ್ರತಿಯೊಬ್ಬರಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕುಗಳಿವೆ : ಟಿ. ಶ್ರಿÃನಿವಾಸ್

ಕೊಪ್ಪಳ ಸೆ. ೦೯ (ಕರ್ನಾಟಕ ವಾರ್ತೆ): ಈ ಸಮಾಜದಲ್ಲಿ ಬದುಕಲು ಪ್ರತಿಯೊಬ್ಬರಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕುಗಳು ಇರುತ್ತವೆ. ಇವುಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಟಿ. ಶ್ರಿÃನಿವಾಸ್ ರವರು ಹೇಳಿದರು.  
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ನಗರಸಭೆ ಇವರ ಸಹಯೋಗದಲ್ಲಿ ನಗರದ ಹಮಾಲರ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಇಂದು (ಸೆ.೦೯) ಹಮ್ಮಿಕೊಳ್ಳಲಾದ ‘’ಪೋಷಣಾ ಅಭಿಯಾನ’’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಹಳ್ಳಿಗಳ ದೇಶ ಹಳ್ಳಿಗಳ ಅಭಿವೃದ್ಧಿ ದೇಶದ ಅಭಿವೃದ್ಧಿಯಾಗಿದೆ. ಹಳ್ಳಿಗಳಲ್ಲಿ ವಾಸಿಸುವ ಪ್ರತಿಯೊಬ್ಬರ ಆರೋಗ್ಯ ಹಾಗೂ ವಿಶೇಷವಾಗಿ ಗರ್ಭಿಣಿಯರು, ಕಿಶೋರಿಯರು ಹಾಗೂ ೦೫ ವರ್ಷದೊಳಗಿನ ಮಕ್ಕಳ ಆರೊಗ್ಯ ಬಹಳ ಮುಖ್ಯವಾಗಿದೆ. ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬರು ಆರೊಗ್ಯವಂತರಾಗಿರ ಬೇಕಾದರೆ ಪೌಷ್ಠಿಕ ಆಹಾರ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಜನಸಮುದಾಯಕ್ಕೆ ಪ್ರತಿದಿನ ಆಹಾರದಲ್ಲಿ ಕಾರ್ಬೊÃಹೈಡ್ರೆಟ್, ಪ್ರೊÃರ್ಟಿನ್, ಕೊಬ್ಬು, ವಿಟಮಿನ್ಸ್ ಮತ್ತು ಮಿನರಲ್ಸ್ ಎಲ್ಲಾ ಬಗೆಯ ಸೊಪ್ಪು ಮತ್ತು ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ, ಮೀನು ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸುವಂತೆ ಮಾಹಿತಿ ನೀಡಿದರು. ತಾಯಿಂದಿರಲ್ಲಿ, ಗರ್ಭಿಣಿಯರಲ್ಲಿ ಮತ್ತು ಮಕ್ಕಳಲ್ಲಿ ರಕ್ತ-ಹೀನತೆ ತಡೆಗಟ್ಟುವ ಸಲುವಾಗಿ ಪ್ರತಿದಿನ ಸ್ಥಳೀಯವಾಗಿ ದೊರಕುವ ಆಹಾರ ಪದಾರ್ಥಗಳನ್ನು ಬಳಸಿ ಅಪೌಷ್ಠಿಕತೆಯನ್ನು ತಡೆಗಟ್ಟಿಬೇಕು.  ಈ ಸಮಾಜದಲ್ಲಿ ಬದುಕಲು ಪ್ರತಿಯೊಬ್ಬರಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕುಗಳು ಇರುತ್ತವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಟಿ. ಶ್ರಿÃನಿವಾಸರವರು ಹೇಳಿದರು.
ಕೊಪ್ಪಳ ನಗರ ಸಭೆ ಸದಸ್ಯ ಅಮಜದ್ ಪಟೇಲ್ ರವರು ಮಾತನಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯವರು ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಕೊಪ್ಪಳ ನಗರ ಪ್ರದೇಶದ ಕೊಳಚೆ ಪ್ರದೇಶ ಜನರು ಹಾಗೂ ಇತರ ಪ್ರದೇಶದ ಸಾರ್ವಜನಿಕರು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಿ ಜಂಬಯ್ಯ ಮಾತನಾಡಿ, ಸಮತೋಲನ ಆಹಾರ ಹೇಗೆ ಪಡೆಯಬೇಕು ವಿಟಮಿನ್ ಮತ್ತು  ಮಿನಿರಲ್ಸ್ನಲ್ಲಿ ಕೊಬ್ಬು, ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಯಾವ ಯಾವ ಪೋಷ್ಠಿಕಾಂಶ ದೊರೆಯುತ್ತವೆ ವಿಶೇಷವಾಗಿ ರಕ್ತಹೀನತೆ ತಡೆಗಟ್ಟುವ ಆಹಾರವನ್ನು ಹೆಚ್ಚು ಸೇವಿಸುವಂತೆ ತಿಳಿಸಿದರು. ಈ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ವಿಶೇಷವಾಗಿ ‘’ಮಗುವಿನ ಜನನ ನಂತರ ೧೦೦೦ ದಿನಗಳ ಆರೋಗ್ಯ ರಕ್ಷಣೆ, ಅನಿಮಿಯಾ ಮುಕ್ತ ಭಾರತ್, ಅತಿಸಾರ ಬೇಧಿ ನಿಯಂತ್ರಣ, ನೀರು ಮತ್ತು ನೈರ್ಮಲ್ಯ ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ’’. ಇವುಗಳಿಗೆ ಹೆಚ್ಚು ಮಹತ್ವ ನೀಡಿ ಕಾರ್ಯಕ್ರಮದ ಬಗ್ಗೆ ಆರೋಗ್ಯ ಸಹಾಯಕರು, ಆರೋಗ್ಯ ಶಿಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಸಮುದಾಯದ ಜನರಿಗೆ ಮನನ ಮಾಡಬೇಕು ಎಂದರು.
ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾತೃ ಪೂರ್ಣ ಯೋಜನೆ ಹಾಗೂ ಇಲಾಖೆಯ ಸೌಲಭ್ಯ ಕುರಿತು ಉಪ ನಿರ್ದೆÃಶಕ ಈರಣ್ಣ ಪಾಂಚಾಳ ರವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಎಸ್ ಯರಗಲ್ಲ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಲಿಂಗರಾಜು ಟಿ,  ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕ ಆರೋಗ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವೈಧ್ಯಾಧಿಕಾರಿಗಳು, ಆರೋಗ್ಯ ಶಿಕ್ಷಣಾಧಿಕಾರಿಗಳು, ಐ.ಸಿ.ಡಿ.ಎಸ್ ಇಲಾಖೆಯ ಮೇಲ್ವಿಚಾರಕರು, ಹಿರಿಯ , ಕಿರಿಯ ಆರೋಗ್ಯ ಸಹಾಯಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಕಿಶೋರಿಯರು, ತಾಯಂದಿರು, ಇಲಾಖೆಯ ಸಿಬ್ಬಂದಿಗಳು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಗಂಗಾವತಿ; ಸೆ.೧೧ ರಂದು “ರಾಷ್ಟಿçÃಯ ಜಾನುವಾರು ರೋಗಗಳ ನಿಯಂತ್ರಣ” ಕಾರ್ಯಕ್ರಮ ನೇರ ಪ್ರಸಾರ

ಗಂಗಾವತಿ; ಸೆ.೧೧ ರಂದು “ರಾಷ್ಟಿçÃಯ ಜಾನುವಾರು ರೋಗಗಳ ನಿಯಂತ್ರಣ” ಕಾರ್ಯಕ್ರಮ ನೇರ ಪ್ರಸಾರ

ಕೊಪ್ಪಳ ಸೆ. ೦೯ (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ವತಿಯಿಂದ ಕೇಂದ್ರ ವಲಯದ ಕಾರ್ಯಕ್ರಮಗಳಾದ “ರಾಷ್ಟಿçÃಯ ಜಾನುವಾರು ರೋಗಗಳ ನಿಯಂತ್ರಣ” ಮತ್ತು ರಾಷ್ಟಿçÃಯ ಕೃತಕ ಗರ್ಭದಾರಣ ಕಾರ್ಯಕ್ರಮದ ನೇರ ಪ್ರಸಾರವನ್ನು ಸೆಪ್ಟೆಂಬರ್. ೧೧ ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. 
ಭಾರತ ಸರ್ಕಾರದ ವತಿಯಿಂದ ಕೇಂದ್ರ ವಲಯದ ಕಾರ್ಯಕ್ರಮಗಳಾದ “ರಾಷ್ಟಿçÃಯ ಜಾನುವಾರು ರೋಗಗಳ ನಿಯಂತ್ರಣ” ಮತ್ತು ರಾಷ್ಟಿçÃಯ ಕೃತಕ ಗರ್ಭದಾರಣ ಕಾರ್ಯಕ್ರಮವನ್ನು  ಸೆಪ್ಟೆಂಬರ್. ೧೧ ರಂದು ದೇಶಾದ್ಯಂತ ಪ್ರಾರಂಭಿಸಲು ನಿರ್ಣಯಿಸಲಾಗಿದೆ. ಈ ಕಾರ್ಯಕ್ರಮವನ್ನು ಉತ್ತರ ಪ್ರದೇಶ ರಾಜ್ಯದ ಮಥುರಾದಲ್ಲಿ ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ ಉದ್ಘಾಟನೆ ಮಾಡಿ, ರೈತರನ್ನು ಉದ್ದೆÃಶಿಸಿ ಮಾತನಾಡಲಿದ್ದಾರೆ, ದೇಶದ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.  
ಕಾರ್ಯಕ್ರಮದಲ್ಲಿ ತಜ್ಞರಿಂದ ಜಾನುವಾರು ರೋಗಗಳ ನಿಯಂತ್ರಣ ಹಾಗೂ ಕೃತಕ ಗರ್ಭದಾರಣೆ ಕುರಿತು ರೈತರುಗಳಿಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.  ಈ ಕಾರ್ಯಕ್ರಮದಲ್ಲಿ ಸಂಸತ ಸದಸ್ಯರು, ಕೊಪ್ಪಳ ಜಿಲ್ಲೆಯ ಎಲ್ಲಾ ಶಾಸಕರುಗಳು, ಅದ್ಯಕ್ಷರು, ಜಿಲ್ಲಾ ಪಂಚಾಯತ್, ಕೊಪ್ಪಳ ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕೊಪ್ಪಳ ಜಿಲ್ಲಾ ಪಂಚಾಯತ್ ಹಾಗೂ ಎಲ್ಲಾ ಸ್ಥಳೀಯ  ಚುನಾಯಿತ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಆಸಕ್ತ ರೈತರುಗಳು ಈ ಕಾರ್ಯಕ್ರಮಕ್ಕೆ ಹಾಜರಾಗಿ ಪ್ರಯೋಜನ ಪಡೆದುಕೊಳ್ಳುವಂತೆ ಕೊಪ್ಪಳ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೆÃಶಕರು ಡಾ.ಬಸಯ್ಯ ಸಾಲಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅಲೆಮಾರಿ, ಅರೆ ಅಲೆಮಾರಿ, ಸೂಕ್ಷö್ಮ ಸಮುದಾಯಗಳ ಪರಿಶಿಷ್ಟರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ

ಅಲೆಮಾರಿ, ಅರೆ ಅಲೆಮಾರಿ, ಸೂಕ್ಷö್ಮ ಸಮುದಾಯಗಳ ಪರಿಶಿಷ್ಟರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ

ಕೊಪ್ಪಳ ಸೆ. ೦೯ (ಕರ್ನಾಟಕ ವಾರ್ತೆ): ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಕೊಪ್ಪಳ ವತಿಯಿಂದ ಅಲೆಮಾರಿ/ ಅರೆ ಅಲೆಮಾರಿ/ಸೂಕ್ಷö್ಮ ಸಮುದಾಯಗಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಜಿಲ್ಲಾ ಕಛೇರಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮಹರ್ಷಿ ವಾಲ್ಮಿÃಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಅಧಿನಗಳಲ್ಲಿ ಇರುವ ಅಲೆಮಾರಿ ಅಭಿವೃದ್ಧಿ ಕೋಶದಿಂದ ವಿವಿಧ ಯೋಜನೆಗಳಿಗೆ ಸಹಾಯಧನ/ ಸಾಲ ಸೌಲಭ್ಯ ಕಲ್ಪಿಸುವ ಉದ್ದೆÃಶ ದಿಂದ ೨೦೧೭-೧೮ ಹಾಗೂ ೨೦೧೮-೧೯ ನೇ ಸಾಲಿನಲ್ಲಿ ಸ್ವಯಂ ಉದ್ಯೊÃಗ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಮನೆ ನಿರ್ಮಾಣ ಹಾಗೂ ಭೂ ಒಡೆತನ ಯೋಜನೆಗಳಡಿ ಅಲೆಮಾರಿ/ ಅರೆ ಅಲೆಮಾರಿ/ಸೂಕ್ಷö್ಮ ಸಮುದಾಯಗಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಸೌಲಭ್ಯ ಒದಗಿಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 
ಅಲೆಮಾರಿ/ ಅರೆ ಅಲೆಮಾರಿ/ಸೂಕ್ಷö್ಮ ಸಮುದಾಯಗಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಭೂ ಒಡೆತನ ಮತ್ತು ಗಂಗಾಕಲ್ಯಾಣ ಯೋಜನೆ ಈ ಎರಡು ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದು.  ಸ್ವಯಂ ಉದ್ಯೊÃಗ ಮತ್ತು ಉದ್ಯಮಶೀಲತಾ ಯೋಜನೆಯಡಿಯಲ್ಲಿ ಒಂದು ಕುಟುಂಬದ ಒಬ್ಬ ಸದಸ್ಯರು ಒಂದು ಬಾರಿ ಸಹಾಯಧನ ಮತ್ತು ಮಾರ್ಜಿನ್ ಮನಿ ಪಡೆಯಲು ಮಾತ್ರ ಅರ್ಹರಿರುತ್ತಾರೆ. ಪರಿಶಿಷ್ಟ ಜಾತಿಗೆ ಸೇರಿದ ಅಲೆಮಾರಿ/ ಅರೆ ಅಲೆಮಾರಿ/ಸೂಕ್ಷö್ಮ ಸಮುದಾಯಗಳಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತಿ ವತಿಯಿಂದ ಒದಗಿಸಲಾಗುವುದು.  ಪರಿಶಿಷ್ಟ ಪಂಗಡಕ್ಕೆ ಸೇರಿ ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷö್ಮ  ಮತ್ತು ಅತಿ ಸೂಕ್ಷö್ಮ ಸಮುದಾಯಗಳಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕರ್ನಾಟಕ ಮಹರ್ಷಿ ವಾಲ್ಮಿÃಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತಿ ವತಿಯಿಂದ ಒದಗಿಸಲಾಗುವುದು. 
ಅರ್ಜಿ ಸಲ್ಲಿಸಲು  ಸೆಪ್ಟೆಂಬರ್ ೨೫  ಕೊನೆ ದಿನವಾಗಿದ್ದು, ಅರ್ಜಿಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ಕಛೇರಿ, ಜಿಲ್ಲಾಡಳಿತ ಭವನ ೨ನೇ ಮಹಡಿ ಇವರಿಂದ ಅರ್ಜಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳಾದ ಜಾತಿ ಪ್ರಮಾಣ ಪತ್ರ, ವಾಸದ ದೃಡೀಕರಣ ಪತ್ರ, ಆದಾಯ ಪ್ರಮಾಣ ಪತ್ರ,ಆಧಾರ ಕಾರ್ಡ್, ಪಡಿತರ ಚೀಟಿಯೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತಿ, ಕೊಠಡಿ ಸಂಖ್ಯೆ:೧೦೯, ಕೊಪ್ಪಳ ಜಿಲ್ಲಾಡಳಿತ ಭವನ, ಇಲ್ಲಿಗೆ ಅರ್ಜಿಯನ್ನು ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: ೦೮೫೩೩೯-೨೨೧೧೭೬ ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸದೆ. 
======

ಕುಕನೂರ ಬೀದಿ-ಬದಿ ವ್ಯಾಪಾರಿಗಳ ತಾತ್ಕಾಲಿಕ ಮತದಾರರ ಪಟ್ಟಿ ಪ್ರಕಟ : ಆಕ್ಷೆÃಪಣೆಗೆ ಆಹ್ವಾನ

ಕುಕನೂರ ಬೀದಿ-ಬದಿ ವ್ಯಾಪಾರಿಗಳ ತಾತ್ಕಾಲಿಕ ಮತದಾರರ ಪಟ್ಟಿ ಪ್ರಕಟ : ಆಕ್ಷೆÃಪಣೆಗೆ ಆಹ್ವಾನ

ಕೊಪ್ಪಳ ಸೆ. ೦೯ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಕನೂರ ಪಟ್ಟಣ ಪಂಚಾಯತ್ ವ್ಯಾಪ್ತಿಯ ನೋಂದಾಯಿತ ಬೀದಿ-ಬದಿ ವ್ಯಾಪಾರಿಗಳ ತಾತ್ಕಾಲಿಕ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೆÃಪಣೆಗೆ ಆಹ್ವಾನಿಸಲಾಗಿದೆ. 
ಬೀದಿ-ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ನಿಯಮಗಳು-೨೦೧೯ ನ್ನು ಡೇ-ನಲ್ಮ್ ಯೊಜನೆಯಡಿ ಅನುಷ್ಠಾನಗೊಳಿಸುವ ಸಂಬಂಧ ಕುಕನೂರ ಪಟ್ಟಣದ ವ್ಯಾಪ್ತಿಯ ನೋಂದಾಯಿತ ಬೀದಿ-ಬದಿ ವ್ಯಾಪಾರಿಗಳ ತಾತ್ಕಾಲಿಕ ಮತದಾರರ ಪಟ್ಟಿಯನ್ನು ಪಟ್ಟಣ ಪಂಚಾಯತ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.  ಈ ಪಟ್ಟಿ ಕುರಿತು ಯಾವುದೇ ಆಕ್ಷೆÃಪಣೆಗಳಿದ್ದಲ್ಲಿ ಸೆಪ್ಟೆಂಬರ್. ೨೦ ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಸೆ. ೨೩ ರಂದು ಬೀದಿ-ಬದಿ ವ್ಯಾಪಾರಿಗಳ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಸಮುದಾಯ ಸಂಘಟನಾಧಿಕಾರಿ ಶಿವಕುಮಾರ ಕಟ್ಟಿಮನಿ, ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಕುಕನೂರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Thursday, 26 September 2019

ಮತದಾರರ ಪಟ್ಟಿ ಪರಿಷ್ಕರಣೆ, ಪರಿಶೀಲನಾ ಕಾರ್ಯಕ್ರಮ


ಮತದಾರರ ಪಟ್ಟಿ ಪರಿಷ್ಕರಣೆ, ಪರಿಶೀಲನಾ ಕಾರ್ಯಕ್ರಮ (ಇ.ವಿ.ಪಿ)

ರಾಜಕೀಯ ಪಕ್ಷಗಳು, ಮತಗಟ್ಟೆಗಳಿಗೆ ಎಜೆಂಟ್‌ಗಳನ್ನು ನೇಮಿಸಿ : ಪಿ.ಸುನೀಲ್ ಕುಮಾರ್

ಕೊಪ್ಪಳ ಸೆ. ೨೪ (ಕರ್ನಾಟಕ ವಾರ್ತೆ): ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತದಾರರ ಪರಿಶೀಲನಾ ಕಾರ್ಯಕ್ರಮ (ಇ.ವಿ.ಪಿ)ದ ಅಂಗವಾಗಿ ರಾಜಕೀಯ ರಾಜಕೀಯ ಪಕ್ಷಗಳು ಕೂಡಲೇ ಎಲ್ಲಾ ಮತಗಟ್ಟೆಗಳಿಗೆ ಬೂತ್ ಲೆವಲ್ ಎಜೆಂಟ್‌ಗಳನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಹೇಳಿದರು. 
ಅವರು ತಮ್ಮ ಕಚೇರಿಯಲ್ಲಿ ಇತ್ತಿÃಚೆಗೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತದಾರರ ಪರಿಶೀಲನಾ ಕಾರ್ಯಕ್ರಮ (ಇ.ವಿ.ಪಿ) ಕುರಿತು ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  
ಮತದಾರರ ಪಟ್ಟಿ ಪರಿಷ್ಕರಣೆ-೨೦೨೦ರ ಅಂಗವಾಗಿ ಸೆಪ್ಟೆಂಬರ್. ೦೧ ರಿಂದ ಅಕ್ಟೊÃಬರ್. ೧೫ ರವರೆಗೆ ಇ.ವಿ.ಪಿ ಕಾರ್ಯಕ್ರಮ, ಸೆಪ್ಟೆಂಬರ್. ೦೧ ರಿಂದ ೩೦ ರವರೆಗೆ ಬಿ.ಎಲ್.ಒ ಗಳಿಂದ ಮನೆ-ಮನೆಗೆ ಭೇಟಿ ಮೂಲಕ ಪರಿಶೀಲನೆ, ಅಕ್ಟೊÃಬರ್. ೧೫ ಇಂಟಿಗ್ರೇಟೆಡ್ ಡ್ರಾಫ್ಟ್ ಎಲೆಕ್ಟರಲ್ ರೋಲ್‌ನ ಪ್ರಕಟಣೆ, ಅಕ್ಟೊÃಬರ್. ೧೫ ರಿಂದ ನವೆಂಬರ್. ೩೦ ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಕ್ಲೆöÊಮ್ ಮಾಡುವ ಅವಧಿ, ನವೆಂಬರ್. ೦೨, ೦೩, ೦೯, ೧೦ ರಂದು ವಿಶೇಷ ಪ್ರಚಾರ,  ಡಿಸೆಂಬರ್. ೧೫ ರಂದು ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ, ೨೦೨೦ರ ಜನವರಿ. ೦೧ ರಿಂದ ೧೫ ರವರೆಗೆ ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಕಾರ್ಯಕ್ರಮ ನಡೆಯಲಿದೆ.  
ಮತದಾರರ ಪರಿಶೀಲನಾ ಕಾರ್ಯಕ್ರಮ (ಇ.ವಿ.ಪಿ); 
  ಭಾರತ ಚುನಾವಣಾ ಆಯೋಗವು ಎಲ್ಲಾ ಮತದಾರರಿಗೆ ಮತದಾರರ ಪಟ್ಟಿಯಲ್ಲಿಯ ವಿವರಗಳನ್ನು ಪರಿಶೀಲಿಸಿ, ತಿದ್ದುಪಡಿಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವನ್ನು ನೀಡಿದ್ದು, ಸೆಪ್ಟೆಂಬರ್. ೦೧ ರಿಂದ ಅಕ್ಟೊÃಬರ್. ೧೫ ರವರೆಗೆ ಅವಧಿಯನ್ನು ನಿಗದಿಪಡಿಸಿರುತ್ತದೆ.  ಈ ಕಾರ್ಯಕ್ರಮದಡಿಯಲ್ಲಿ ಪ್ರತಿ ಮತದಾರರು ತಮ್ಮ ವಿವರಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿ ಮುದ್ರಿತವಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.  ಆದ್ದರಿಂದ ಜಿಲ್ಲೆಯ ಮತದಾರರು ಎನ್.ವಿ.ಎಸ್.ಪಿ ತಿತಿತಿ.ಟಿvsಠಿ.iಟಿ ವೋಟರ್ ಹೆಲ್ಪಲೈನ್ ಮೋಬೈಲ್ ಆ್ಯಪ್, ಕಾಮನ್ ಸರ್ವಿಸ್ ಸೆಂಟರ್, ಅಟಲ್‌ಜೀ ಜನಸ್ನೆÃಹಿ ಕೇಂದ್ರ, ಜಿಲ್ಲಾಡಳಿತ ಭವನದಲ್ಲಿರುವ ೧೯೫೦೦-ಸಂಪರ್ಕ ಕೇಂದ್ರ, ಸಹಾಯಕ ಆಯುಕ್ತ ಕಾರ್ಯಾಲಯ, ತಹಶೀಲ್ದಾರ ಕಾರ್ಯಾಲಯದ ವೋಟರ್ ಫ್ಯಾಶಿಲೇಷನ್ ಸೆಂಟರ್, ಈ ಕೇಂದ್ರಗಳಲ್ಲಿ ಅಥವಾ ಜಾಲತಾಣಗಳ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು ಮತ್ತು ಯಾವುದಾದರೂ ಸೇರ್ಪಡೆ, ತಿದ್ದುಪಡಿಗಳಿದ್ದಲ್ಲಿಯೂ ಕೂಡ ನಿಗದಿತ ಅರ್ಜಿ ಸಲ್ಲಿಸಬಹುದಾಗಿರುತ್ತದೆ.   
ರಾಜಕೀಯ ಪಕ್ಷಗಳು ಕೂಡಲೇ ಎಲ್ಲಾ ಮತಗಟ್ಟೆಗಳಿಗೆ ಬೂತ್ ಲೆವಲ್ ಲೆವಲ್ ಎಜೆಂಟ್‌ಗಳನ್ನು ನೇಮಿಸುವುದು ಹಾಗೂ ಈ ಎಜೆಂಟ್‌ಗಳು ನಿಗದಿಪಡಿಸಿದ ಮತಗಟ್ಟೆ ವ್ಯಾಪ್ತಿಯಲ್ಲಿಯ ಎಲ್ಲಾ ಮತದಾರರು ಇ.ವಿ.ಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಲು ಹಾಗೂ ಯಾವುದೇ ತಿದ್ದುಪಡಿಗಳಿದ್ದಲ್ಲಿ ಮಾಡಿಸಿಕೊಳ್ಳಲು ಜಾಗೃತಿ ಮೂಡಿಸುವುದು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಪರಿಶೀಲನೆ ಮತ್ತು ತಿದ್ದುಪಡಿಗಳನ್ನು ಮಾಡಿಸಲು ಸಹಕರಿಸಬೇಕು.  
ಮತದಾರರ ವಿವರ;
  ಕೊಪ್ಪಳ ಜಿಲ್ಲೆಯ ೬೦-ಕುಷ್ಟಗಿ ವಿಧನಸಭಾ ಕ್ಷೆÃತ್ರದಲ್ಲಿ ೨೭೨ ಮತಗಟ್ಟೆಗಳು ಹಾಗೂ ೨೨೮೨೬೯ ಮತದಾರರಿದ್ದಾರೆ.  ೬೧-ಕನಕಗಿರಿ ವಿಧನಸಭಾ ಕ್ಷೆÃತ್ರದಲ್ಲಿ ೨೬೧ ಮತಗಟ್ಟೆಗಳು ಹಾಗೂ ೨೧೪೮೩೦ ಮತದಾರರು, ೬೨-ಗಂಗಾವತಿ ವಿಧನಸಭಾ ಕ್ಷೆÃತ್ರದಲ್ಲಿ ೨೩೩ ಮತಗಟ್ಟೆಗಳು ಹಾಗೂ ೧೯೬೪೯೦ ಮತದಾರರು, ೬೩-ಯಲಬುರ್ಗಾ ವಿಧನಸಭಾ ಕ್ಷೆÃತ್ರದಲ್ಲಿ ೨೫೩ ಮತಗಟ್ಟೆಗಳು ಹಾಗೂ ೨೧೦೩೪೯ ಮತದಾರರು, ೬೪-ಕೊಪ್ಪಳ ವಿಧನಸಭಾ ಕ್ಷೆÃತ್ರದಲ್ಲಿ ೨೮೮ ಮತಗಟ್ಟೆಗಳು ಹಾಗೂ ೨೪೦೨೫೮ ಮತದಾರರು, ಜಿಲ್ಲೆಯ ಐದು ವಿಧಾನಸಭೆಗಳು ಸೇರಿ ಒಟ್ಟು ಮತಗಟ್ಟೆಗಳು ೧೩೦೭ ಹಾಗೂ  ೧೦೯೦೧೯೬ ಮತದಾರರಿದ್ದಾರೆ. 
೨೦೨೦ರ ಜನವರಿ. ೦೧ಕ್ಕೆ ೧೮ ವರ್ಷ ವಯಸ್ಸು ಪೂರ್ಣಗೊಳ್ಳುವ ಮತದಾರರನ್ನು ಸೇರ್ಪಡೆ ಮಾಡಲು ಬೂತ್ ಮಟ್ಟದ ಏಜೆಂಟರ ಮುಖಾಂತರ ಕ್ರಮ ಕೈಗೊಳ್ಳುವುದು ಹಾಗೂ ಅದೇ ರೀತಿ ಯಾವುದೇ ಅನರ್ಹ ಮತದಾರರು/ ಖಾಯಂ ಸ್ಥಳಾಂತರಗೊಂಡ/ ಮರಣ ಹೊಂದಿದ ಮತದಾರರ ವಿವರಗಳನ್ನು ನೀಡಿದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದು, ಈ ಕುರಿತು ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದರು.  
೧೯೫೦ ಜಿಲ್ಲಾ ಸಂಪರ್ಕ ಕೇಂದ್ರ (ಡಿಸಿಸಿ); 
  ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಟೋಲ್-ಫ್ರಿÃ ಸಂಖ್ಯೆ ೧೯೫೦ರೊಂದಿಗೆ ಜಿಲ್ಲಾ ಸಂಪರ್ಕ ಕೇಂದ್ರವು ಕಾರ್ಯನಿರ್ವಹಿಸುತ್ತಲಿದ್ದು, ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೦೬ ಗಂಟೆಯವರೆಗೆ ಸಾರ್ವಜನಿಕರಿಗೆ ಚುನಾವಣಾ ಸಂಬಂಧಿತ ಮಾಹಿತಿಯನ್ನು ಒದಗಿಸಲಾಗುವುದು.  ಈ ಕೇಂದ್ರವೂ ಕೂಡ ವೋಟರ್ ಫೆಸಿಲಿಟಿಟೇಷನ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು, ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು ಹಾಗೂ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬಹುದು.  
ಬೂತ್ ಮಟ್ಟದ ಅಧಿಕಾರಿಗಳಿಂದ ಮನೆ-ಮನೆ ಭೇಟಿ;  
  ಮತಗಟ್ಟೆ ಅಧಿಕಾರಿಗಳು ಸೆಪ್ಟೆಂಬರ್. ೩೦ ರವರೆಗೆ ಮನೆ-ಮನೆಗೆ ಭೇಟಿ ನೀಡಲಿದ್ದು, ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಲು, ತಿದ್ದುಪಡಿ ಮತ್ತು ನೊಂದಾಯಿತರಾಗದ ಅರ್ಹ ಮತದಾರರ ಸೇರ್ಪಡೆಗಾಗಿಯೂ ಅವಕಾಶವಿರುತ್ತದೆ. ಬೂತ್ ಮಟ್ಟದ ಅಧಿಕಾರಿಗಳಿಗಾಗಿ ಈ ಬಾರಿ ಭಾರತ ಚುನಾವಣಾ ಆಯೋಗವು ಬಿ.ಎಲ್.ಒ ಆ್ಯಪ್ (ಃಐಔ ಂಠಿಠಿ) ಸಿದ್ಧಪಡಿಸಿದ್ದು, ಸ್ಥಳದಲ್ಲೆÃ ಅರ್ಜಿದಾರರ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸ್ವಿÃಕರಿಸಲಾಗುವುದು ಮತ್ತು ಮನೆಯ ಜಿ.ಐ.ಎಸ್ ಕೋ-ಆರ್ಡಿನೇಟ್ ಪಡೆದು ಮ್ಯಾಪ್ ಮಾಡಲಾಗುವುದು ಮತ್ತು ಒಂದೇ ಕುಟುಂಬದ ಎಲ್ಲಾ ಮತದಾರರನ್ನು ಒಟ್ಟುಗೂಡಿಸಲಾಗುವುದು.  ಈ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲು ಬೂತ್ ಮಟ್ಟದ ಏಜೆಂಟರ ಹಾಗೂ ರಾಜಕೀಯ ಪಕ್ಷಗಳ ಸಹಕಾರ ಅತ್ಯವಶ್ಯಕವಾಗಿದೆ.  
ಕರಡು ಮತದಾರರ ಪಟ್ಟಿ ಪ್ರಕಟಣೆ: 
  ಅಕ್ಟೊÃಬರ್. ೧೫ ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು ಮತ್ತು ಅಕ್ಟೊÃಬರ್. ೧೫ ರಿಂದ ನವೆಂಬರ್. ೩೦ ರವರೆಗೆ ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಅಕ್ಷೆÃಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.  ಈ ಅವಧಿಯಲ್ಲಿಯೂ ಕೂಡ ಮತದಾರರು ಅರ್ಹ ಮತದಾರರ ಸೇರ್ಪಡೆಗಾಗಿ (ನಮೂನೆ-೬), ಅನರ್ಹ/ ಖಾಯಂ ಸ್ಥಾಳಾಂತರಗೊಂಡ/ ಮರಣ ಹೊಂದಿದ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು (ನಮೂನೆ-೭) ತಿದ್ದುಪಡಿಗಾಗಿ (ನಮೂನೆ-೮), ಮತ್ತು ವಿ.ಸ.ಕ್ಷೆÃತ್ರ ವ್ಯಾಪ್ತಿಯಲ್ಲಿ ಸ್ಥಳಾಂತರಕ್ಕಾಗಿ ಅರ್ಜಿಯನ್ನು ಬೂತ್‌ಮಟ್ಟದ ಅಧಿಕಾರಿಗಳಿಗೆ ಅಥವಾ ಆನ್‌ಲೈನ್, ವೋಟರ್ ಫೆಸಿಲಿಟೇಶನ್ ಸೆಂರ‍್ಸ್, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು.  
ವಿಶೇಷ ಅಭಿಯಾನ;
  ನವೆಂಬರ್. ೦೨ & ೦೩ ಹಾಗೂ ೦೯ & ೧೦, ಈ ದಿನಗಳಂದು ವಿಶೇಷ ಅಭಿಯಾನವನ್ನು ಆಯೋಜಿಸಲಿದ್ದು, ಈ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ನಿಗದಿತ ಬೂತ್‌ಗಳಲ್ಲಿ ಹಾಜರಿರುತ್ತಾರೆ.  ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಯುವ ಮತದಾರರು ನೊಂದಾಯಿತರಾಗುವಂತೆ ಬೂತ್ ಮಟ್ಟದ ಏಜೆಂಟರ ಮೂಲಕ ಉತ್ತೆÃಜಿಸುವಂತೆ ಹಾಗೂ ಜಾಗೃತಿ ಮೂಡಿಸಲು ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದರು.  
ಅಂತಿಮ ಮತದಾರರ ಪಟ್ಟಿ ಪ್ರಕಟಣೆ;
  ಮೇಲಿನ ಎಲ್ಲಾ ಕಾರ್ಯಗಳ ನಂತರ ೨೦೨೦ರ ಜನವರಿ. ೦೧ ರಿಂದ ೧೫ರ ಅವಧಿಯಲ್ಲಿ ಭಾರತ ಚುನಾವಣಾ ಆಯೋಗವು ನಿಗದಿಪಡಿಸುವ ಒಂದು ದಿನ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿ, ಸಾರ್ವಜನಿಕರ ಮಾಹಿತಿಗಾಗಿ ಎಲ್ಲಾ ಬೂತ್‌ಗಳಲ್ಲಿ, ತಹಶೀಲ್ದಾರ ಕಛೇರಿಗಳಲ್ಲಿ, ಸಹಾಯಕ ಆಯುಕ್ತರ ಕಛೇರಿಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರಚುರಪಡಿಸಲಾಗುವುದು ಹಾಗೂ ರಾಜಕೀಯ ಪಕ್ಷಗಳಿಗೂ ಅದರ ಒಂದು ಪ್ರತಿಯನ್ನು ನೀಡಲಾಗುವುದು.  ಇದರೊಂದಿಗೆ ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೆÃತ್ರಗಳಲ್ಲಿ ಯಾವುದಾದರೂ ಮತಗಟ್ಟೆಗಳನ್ನು ಬದಲಾವಣೆ ಮಾಡಬೇಕಿದ್ದಲ್ಲಿ ಸಕಾರಣಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಲಾಯಿತು.  
ಅಂತಿಮವಾಗಿ ರಾಜಕೀಯ ಪಕ್ಷಗಳು ಭಾರತ ಚುನಾವಣಾ ಆಯೋಗವು ಉದ್ದೆÃಶಿತ ಮತದಾರರ ಪರಿಶೀಲನಾ ಕಾರ್ಯ ಹಾಗೂ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವನ್ನು ಯಶಸ್ವಿಗೊಳಿಸಲು ಮತ್ತು ಮತದಾರರ ಪಟ್ಟಿಯನ್ನು ಶುದ್ಧ ಹಾಗೂ ದೋಷರಹಿತವಾಗಿ ತಯಾರಿಸುವಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಧಿಖಾರಿ ಪಿ.ಸುನೀಲ್ ಕುಮಾರ್ ಕೋರಿದರು.  
ಸಭೆಯಲ್ಲಿ ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಕೊಪ್ಪಳ ತಹಶೀಲ್ದಾರ ಜೆ.ಬಿ ಮಜ್ಗಿ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿದಿಗಳು ಉಪಸ್ಥಿತರಿದ್ದರು.  

======