Saturday, 2 May 2020

ಹೊರ ರಾಜ್ಯಗಳಿಗೆ ಕಳುಹಿಸಲು ಸರ್ಕಾರದ ಆದೇಶದನ್ವಯ ಅವಕಾಶ : ಪಿ.ಸುನೀಲ್ ಕುಮಾರ್

ಕೊವೀಡ್-19 ಹಿನ್ನಲೆ ವಲಸೆ ಕಾರ್ಮಿಕರಿಗೆ ಅನ್ಯ ರಾಜ್ಯ-ಜಿಲ್ಲೆಗಳಿಗೆ ಕಳುಹಿಸುವ ಕುರಿತು ಸಭೆ
--------------------------------
ಆನ್‌ಲೈನ್ ಅರ್ಜಿ ಸಲ್ಲಿಸುವುದರಿಂದ ಸಂಚಾರಿಸಲು ಅವಕಾಶ : ಡಿಸಿ
***************************************
ಕೊಪ್ಪಳ, ಮೇ.02(ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯದಿಂದ ಹೊರ ರಾಜ್ಯಗಳಿಗೆ ಮತ್ತು ಬೇರೆ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಸಂಚರಿಸಲು ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತರೆ ಜನರಿಗೆ ಸಂಚರಿಸಲು ಅವಕಾಶ ನೀಡಲಾಗಿದ್ದು, ಕೆಲವೊಂದು ನಿಬಂಧನೆಗಳನ್ನು ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

      ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು (ಮೇ.02ರಂದು) ಶನಿವಾರದಂದು ಕೊವೀಡ್-19ರ ವಲಸೆ ಕಾರ್ಮಿಕರನ್ನು ಅನ್ಯ ರಾಜ್ಯಗಳಿಗೆ ಅಥವಾ ಅನ್ಯ ಜಿಲ್ಲೆಗಳಿಗೆ ಕಳುಹಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಹೊರ ರಾಜ್ಯದಿಂದ ಕೊಪ್ಪಳ ಜಿಲ್ಲೆಗೆ ಬರುವವರಿಗೆ ಮಾರ್ಗಸೂಚಿಗಳು:
ಅರ್ಜಿದಾರರು ತಮ್ಮ ಅರ್ಜಿಯನ್ನು ಅಂತರ್ಜಾಲ ಪುಟ https://sevasindhu.karnataka.gov.in ನಲ್ಲಿ ಸಲ್ಲಿಸಬೇಕಾಗಿರುತ್ತದೆ.  ಸಂಚರಿಸಲು ಅನುಮತಿಯನ್ನು ರಾಜ್ಯ ಸರ್ಕಾರಗಳು ಆಯಾ ಜಿಲ್ಲಾಡಳಿತದ ಸಹಯೋಗದೊಂದಿಗೆ ನೀಡಲಾಗುವುದು. ಬೇರೆ ರಾಜ್ಯದಲ್ಲಿ ಸಿಲುಕಿಕೊಂಡಿರುವವರು, ಈ ಅಂತರ್ಜಾದಲ್ಲಿ ನೋಂದಾಯಿಸಲು ಮತ್ತು ಸ್ವಂತ ವಾಹನದಲ್ಲಿ ಪ್ರಯಾಣಿಸುವ ಪರವಾನಿಗೆ ಬಗ್ಗೆ ಆಯಾ ಜಿಲ್ಲಾಡಳಿತವನ್ನು ಸಂಪರ್ಕಿಸುವುದು. ಸೋಂಕುರಹಿತರು ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಸಂಚಾರಕ್ಕಾಗಿ ಬಸ್ / ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಜಿಲ್ಲೆಗೆ ಹಿಂತಿರುಗುವ ಪ್ರಯಾಣಿಕರು ಪ್ರಯಾಣದ ವೆಚ್ಚವನ್ನು ಅವರೇ ಭರಿಸಬೇಕಾಗಿರುತ್ತದೆ ಮತ್ತು ಸ್ವಂತ ವಾಹನಗಳ ವ್ಯವಸ್ಥೆಯೊಂದಿಗೂ ಸಹ ಆಯಾ ಜಿಲ್ಲಾಡಳಿತಗಳ ಅನುಮತಿಯೊಂದಿಗೆ ಪ್ರಯಾಣಿಸಬಹುದು. ಜಿಲ್ಲೆಗೆ ಹಿಂತಿರುಗುವವರು ಗುರುತಿನ ಚೀಟಿಗಳಾದ ಚಾಲನಾ ಪರವಾನಿಗೆ, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ ಮತ್ತು ಪಾನ್‌ಕಾರ್ಡ್ ಇವುಗಳ ಪೈಕಿ ಯಾವುದಾದರೊಂದನ್ನು ಜೊತೆಯಲ್ಲಿರಿಸಿಕೊಳ್ಳತಕ್ಕದ್ದು. ಕೊಪ್ಪಳ ಜಿಲ್ಲೆಗೆ ಸ್ವಂತ ವಾಹನಗಳಲ್ಲಿ ಮತ್ತು ಸರ್ಕಾರಿ ಬಸ್ ಮತ್ತು ರೈಲ್ವೇಗಳಲ್ಲಿ ಹಿಂತಿರುಗುವವರಿಗಾಗಿ ಕೊಪ್ಪಳ ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ಗಳ ಮುಖಾಂತರ ಆಗಮಿಸುವ ಮಾರ್ಗಗಳಲ್ಲಿ ತಪಾಸಣೆ ನಡೆಸಿ, ನಂತರ ನೇರವಾಗಿ ಕೊಪ್ಪಳ ನಗರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಕೊಪ್ಪಳ ಜಿಲ್ಲಾ ಆಗಮನ ಕೇಂದ್ರ ( Entry Point ) ನಿಗದಿಪಡಿಸಲಾಗಿದ್ದು, ಈ ಮಾರ್ಗಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಿ ಮಾರ್ಗಗಳಲ್ಲಿ ಬರುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಸದರಿ ಮಾರ್ಗಗಳನ್ನು ಬಿಟ್ಟು ಸ್ವಂತ ಊರುಗಳಿಗೆ ತೆರಳಿದ್ದಲ್ಲಿ, ಸಂಬAಧಪಟ್ಟ ಗ್ರಾಮ ಸಮಿತಿಗಳಿಗೆ ಮತ್ತು ವಾರ್ಡ ಸಮಿತಿಗಳಿಗೆ ತಿಳಿಸತಕ್ಕದ್ದು ಮತ್ತು ಸ್ವಯಂಪ್ರೇರಿತವಾಗಿ ತಪಾಸಣೆಗೊಳಪಡಿಸಿಕೊಂಡು 14 ದಿನ ಗೃಹ ಬಂಧನ ( Home Quarantine) ಇರಬೇಕಾಗುತ್ತದೆ. ಈ ಅಂಶಗಳನ್ನು ಉಲ್ಲಂಘಿಸಿದವರಿಗೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಜಿಲ್ಲೆಗೆ ಹಿಂತಿರುಗುವವರನ್ನು ಕೊಪ್ಪಳ ನಗರದ ಬಸ್ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದು. ಈ ಕಾರ್ಯದ ಮೇಲುಸ್ತುವಾರಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಕೊಪ್ಪಳ ಇವರಿಗೆ ವಹಿಸಲಾಗಿದೆ. ಸ್ವಂತ ವಾಹನಗಳಲ್ಲಿ ಸಂಚರಿಸುವವರಿಗೆ ಚೆಕ್‌ಪೋಸ್ಟ್ನಲ್ಲಿ ದಾಖಲಾತಿಗಳ ವಿವರವಾದ ಪರಿಶೀಲನೆ, ವೈದ್ಯಕೀಯ ತಪಾಸಣೆ ಮತ್ತು ನೋಂದಣಿ ಕಾರ್ಯವನ್ನು ಕಡ್ಡಾಯವಾಗಿ ನಡೆಸಿ ಸಂಪರ್ಕ ತಡೆ ಮೊಹರನ್ನು ಹಾಕಲಾಗುವುದು.  ಜಿಲ್ಲೆಗೆ ಆಗಮಿಸಿದವರನ್ನು ಕಡ್ಡಾಯವಾಗಿ ಸಂಪರ್ಕ ತಡೆಯಲ್ಲಿರಿಸುವ ಜವಾಬ್ದಾರಿ ಸಂಬAಧಪಟ್ಟ ಗ್ರಾಮ ಪಂಚಾಯತಿ/ ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯತಿಗಳದ್ದಾಗಿರುತ್ತದೆ. ಕಾಲಕಾಲಕ್ಕೆ ಸರಿಯಾಗಿ ಆರೋಗ್ಯ ತಪಾಸಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸುವುದು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಆರೋಗ್ಯ ತಪಾಸಣಾ ತಂಡವನ್ನು ನಿಯೋಜಿಸಲು ತಿಳಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ವೀಣಾ (ದೂ.ಸಂ. 9886620694) ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಯೋಜನಾ ಅಧಿಕಾರಿ ಶ್ರೀ ಬಸವರಾಜರವರನ್ನು (ದೂ.ಸಂ. 8884673492) ನೇಮಿಸಲಾಗಿದೆ. ಕೊಪ್ಪಳ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ  ಆರೋಗ್ಯ ತಪಾಸಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸುವುದು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಆರೋಗ್ಯ ತಪಾಸಣಾ ತಂಡವನ್ನು ನಿಯೋಜಿಸಲು ತಿಳಿಸಲಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳನ್ನು ಘಟನಾ ನಿರ್ವಹಣಾಧಿಕಾರಿಗಳಾಗಿ ನೇಮಿಸಲಾಗಿದೆ. ಯಾವುದೇ ಹೆಚ್ಚಿನ ವಿವರಗಳಿಗಾಗಿ ಕಂಟ್ರೋಲ್ ರೂಮ್ ನಂ.08539-225001 ನ್ನು ಸಂಪರ್ಕಿಸಬಹುದಾಗಿದೆ.
ಕೊಪ್ಪಳ ಜಿಲ್ಲೆಯಿಂದ ಅನ್ಯ ರಾಜ್ಯಗಳಿಗೆ ತೆರಳುವವರಿಗೆ ಮಾರ್ಗಸೂಚಿಗಳು;
  ಅರ್ಜಿದಾರರು ತಮ್ಮ ಅರ್ಜಿಯನ್ನು ಅಂತರ್ಜಾಲ ಪುಟ https://sevasindhu.karnataka.gov.in ನಲ್ಲಿ ಸಲ್ಲಿಸಬೇಕಾಗಿರುತ್ತದೆ. ಸಂಚರಿಸಲು ಅನುಮತಿಯನ್ನು ರಾಜ್ಯ ಸರ್ಕಾರಗಳು ಆಯಾ ಜಿಲ್ಲಾಡಳಿತದ ಸಹಯೋಗದೊಂದಿಗೆ ನೀಡಲಾಗುವುದು. ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಸಿಲುಕಿಕೊಂಡಿರುವ ಅನ್ಯ ರಾಜ್ಯದ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ಜನರು ಸದರಿ ಅಂತರ್ಜಾದಲ್ಲಿ ಸ್ವತಃ ನೋಂದಾಯಿಸಬಹುದು ಅಥವಾ ಸಂಬAಧಿಸಿದ ತಾಲೂಕ ತಹಶಿಲ್ದಾರ ಕಛೇರಿಯಲ್ಲಿ ನೋಂದಾಯಿಸಲು ಮತ್ತು ಸ್ವಂತ ವಾಹನದಲ್ಲಿ ಪ್ರಯಾಣಿಸುವ ಪರವಾನಿಗೆ ಬಗ್ಗೆ ಪರವಾನಿಗೆಯನ್ನು ಪಡೆಯಬಹುದಾಗಿದೆ.

ಸೋಂಕುರಹಿತರು ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಸ್ವಂತ ವಾಹನದಲ್ಲಿ ಪ್ರಯಾಣಿಸುವವರು ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಇರುವ ನಿರ್ಗಮನ ಕೇಂದ್ರ (ಎಕ್ಸಿಟ್ ಕೇಂದ್ರ)ಲ್ಲಿನ  ನಿಯೋಜಿತ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ತಂಡದವರಿAದ ತಪಾಸಣೆ ಮಾಡಿಸಿಕೊಂಡು ಪರವಾನಿಗೆ ಪಡೆದು ನಂತರ ಸಂಚರಿಸುವುದು. ಸಂಚಾರಕ್ಕಾಗಿ ಬಸ್ / ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ಪ್ರಯಾಣದ ದರವನ್ನು ಸ್ವತಃ ಭರಿಸಬೇಕಾಗಿರುತ್ತದೆ. ಅನ್ಯ ರಾಜ್ಯಗಳಿಗೆ ಹೋಗುವವರು ತಮ್ಮಲ್ಲಿರುವ ಗುರುತಿನ ಚೀಟಿಗಳಾದ ಚಾಲನಾ ಪರವಾನಿಗೆ, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ ಮತ್ತು ಪಾನ್‌ಕಾರ್ಡ್ ಇವುಗಳ ಪೈಕಿ ಯಾವುದಾದರೊಂದನ್ನು ಜೊತೆಯಲ್ಲಿರಿಸಿಕೊಳ್ಳಬೇಕು ಎಂದರು.

ಕೊಪ್ಪಳ ಜಿಲ್ಲೆಯಿಂದ ಅನ್ಯ ರಾಜ್ಯಗಳಿಗೆ ಸ್ವಂತ ವಾಹನಗಳಲ್ಲಿ ಮತ್ತು ಸರ್ಕಾರಿ ಬಸ್ ಮತ್ತು ರೈಲ್ವೇಗಳಲ್ಲಿ ತೆರಳುವವರಿಗಾಗಿ ಕೊಪ್ಪಳ ತಾಲೂಕ ಕ್ರೀಡಾಂಗಣದಲ್ಲಿ ನಿರ್ಗಮನ ಕೇಂದ್ರದ ( Exit Point    ) ಮೂಲಕ ಮಾತ್ರ ತೆರಳಲು ನಿಗದಿಪಡಿಸಲಾಗಿದ್ದು, ಈ ಮಾರ್ಗಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಿ ಮಾರ್ಗಗಳಲ್ಲಿ ತೆರಳುವದನ್ನು ನಿರ್ಬಂಧಿಸಲಾಗಿದೆ.  ಜಿಲ್ಲೆಯಿಂದ ಅನ್ಯ ರಾಜ್ಯಗಳಿಗೆ ತೆರಳುವವರನ್ನು ಕೊಪ್ಪಳ ನಗರದ ತಾಲೂಕ ಕ್ರೀಡಾಂಗಣದಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದು. ಈ ಕಾರ್ಯದ ಮೇಲುಸ್ತುವಾರಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಕೊಪ್ಪಳ ಇವರಿಗೆ ವಹಿಸಲಾಗಿದೆ. ಕೊಪ್ಪಳ ಜಿಲ್ಲೆಯಿಂದ ಅನ್ಯ ರಾಜ್ಯಕ್ಕೆ ಹೋಗುವವರು ಆಯಾ ರಾಜ್ಯದ ಆಯಾ ಜಿಲ್ಲಾ ಕೇಂದ್ರದ ನಿಗದಿತ ಪ್ರವೇಶ ಕೇಂದ್ರ  Entry Point) ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ. ಕೊಪ್ಪಳ ತಾಲೂಕ ಕ್ರೀಡಾಂಗಣದಲ್ಲಿ  ಆರೋಗ್ಯ ತಪಾಸಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸುವುದು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಆರೋಗ್ಯ ತಪಾಸಣಾ ತಂಡವನ್ನು ನಿಯೋಜಿಸಲು ತಿಳಿಸಲಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳನ್ನು ಘಟನಾ ನಿರ್ವಹಣಾಧಿಕಾರಿಗಳಾಗಿ ನೇಮಿಸಲಾಗಿದೆ. ಯಾರೇ ವ್ಯಕ್ತಿ ರಾಜ್ಯದೊಳಗಿನ ಇತರೆ ಜಿಲ್ಲೆಗಳಿಂದ (ಉದಾ : ಬೆಂಗಳೂರು, ಮೈಸೂರು, ಗದಗ, ಬಳ್ಳಾರಿ, ಬಾಗಲಕೋಟೆ) ಬರುವವರು ವiತ್ತು ಹೋಗುವವರು ಆನ್‌ಲೈನ್ ನೋಂದಣಿ ಮಾಡುವ ಅವಕಾಶವಿರುವುದಿಲ್ಲ. ಯಾವುದೇ ಹೆಚ್ಚಿನ ವಿವರಗಳಿಗಾಗಿ ಕಂಟ್ರೋಲ್ ರೂಮ್ ನಂ.08539-225001 ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಸಂಪೂರ್ಣ ಮಾಹಿತಿಯನ್ನು ನೀಡಿದರು.

ಹೊರರಾಜ್ಯದಿಂದ ಕೊಪ್ಪಳ ಜಿಲ್ಲೆಗೆ ಬರುವ ಮತ್ತು ಕೊಪ್ಪಳ ಜಿಲ್ಲೆಯಿಂದ ಅನ್ಯ ರಾಜ್ಯಗಳಿಗೆ ತೆರಳುವ ಬಗ್ಗೆ ಮೇಲ್ವಿಚಾರಣೆಗಾಗಿ ಕೊಪ್ಪಳ ಯುನಿಸೆಫ್‌ನ ಜಿಲ್ಲಾ ಸಮಾಲೋಚಕರಾದ ಹರೀಶ್ ಜೋಗಿ ಅವರ ಮೊ.ಸಂ 9035129484 ಗೆ ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪ ವಿಭಾಗಾಧಿಕಾರಿ ಸಿ.ಡಿ.ಗೀತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಸೇರೆದಂತೆ ವಿವಿಧ ಇಲಾಖೆಗಳ ಅಧಿಕಾರಿಗಲು ಉಪಸ್ಥಿತರಿದ್ದರು.
(ಫೋಟೋ ಕಳುಹಿಸಿದೆ)
===========

Wednesday, 8 January 2020

ಆನೆಗೊಂದಿ ಉತ್ಸವ : ಬಂದೋಬಸ್ತ್ಗೆ 788 ಪೊಲೀಸ್‌ರ ನಿಯೋಜನೆ

ಕೊಪ್ಪಳ ಜ. 08 (ಕರ್ನಾಟಕ ವಾರ್ತೆ): ಆನೆಗೊಂದಿ ಉತ್ಸವ-2020ರ ನಿಮಿತ್ತ ಬಂದೋಬಸ್ತ್ಗಾಗಿ 788 ಪೊಲೀಸ್ ಅಧಿಕಾರಿ, ಸಿಂಬAದಿಗಳನ್ನು ನಿಯೋಜಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು ತಿಳಿಸಿದ್ದಾರೆ.
ಜ. 09 ರಂದು ನಡೆಯಲಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಆಗಮಿಸುತ್ತಿರುವ ಹಿನ್ನೆಲೆ, ಅವರ ಭದ್ರತೆ ಹಾಗೂ ಉತ್ಸವದ ಬಂದೋಬಸ್ತ್ ಕರ್ತವ್ಯಕ್ಕಾಗಿ 03 ಡಿ.ಎಸ್.ಪಿ., 13 ಸಿ.ಪಿ.ಐ., 30 ಪಿ.ಎಸ್.ಐ., 50 ಎ.ಎಸ್.ಐ., 330 ಎಚ್.ಸಿ./ಪಿ.ಸಿ., 52 ಡಬ್ಲೂö್ಯ.ಎಚ್.ಸಿ./ ಡಬ್ಲೂö್ಯ.ಪಿ.ಸಿ., 300 ಎಚ್.ಜಿ., 06 ಡಿ.ಎ.ಆರ್. ಸ್ಟೆçöÊಕಿಂಗ್ ಪಾರ್ಟಿ ಹಾಗೂ 04 ಕೆ.ಎಸ್.ಆರ್.ಪಿ. ಪ್ಲಾಟೂನ್ಸ್ ಸೇರಿದಂತೆ ಒಟ್ಟು 788 ಪೊಲೀಸ್‌ರ ನಿಯೋಜನೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಹಿಳಾ ಮತ್ತು ಪುರುಷರ ಕುಸ್ತಿ ಹಾಗೂ ಬಾಲಕಿಯರ ಹ್ಯಾಂಡ್ ಬಾಲ್ ಸ್ಪರ್ಧೆಗಳು ಯಶಸ್ವಿ


ಕೊಪ್ಪಳ ಜ. 08 (ಕರ್ನಾಟಕ ವಾರ್ತೆ): ಆನೆಗೊಂದಿ ಉತ್ಸವದ ಅಂಗವಾಗಿ  ಮಹಿಳೆಯರ ಕುಸ್ತಿ ಮತ್ತು ಪುರುಷರ ಕುಸ್ತಿ ಸ್ಪರ್ಧೆಗಳು ಹಾಗೂ ಬಾಲಕಿಯರ ಹ್ಯಾಂಡ್ ಬಾಲ್ ಸ್ಪರ್ಧೆಗಳ ಆಕರ್ಷಕ ಪ್ರದರ್ಶನ ನಡೆಯಿತು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಇಂದು (ಜ.8) ಹಮ್ಮಿಕೊಳ್ಳಲಾದ ಮಹಿಳಾ ಕುಸ್ತಿ ಮತ್ತು ಪುರುಷ ಕುಸ್ತಿ ಹಾಗೂ ಹ್ಯಾಂಡ್ ಬಾಲ್ ಪ್ರದರ್ಶನಕ್ಕೆ ಆನೆಗೊಂದಿ ಶ್ರೀಕೃದೇವರಾಯ ಮುಖ್ಯ ವೇದಿಕೆಯಲ್ಲಿ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಅವರು ಚಾಲನೆ ನೀಡಿದರು.
ಮಹಿಳೆಯರ ಕುಸ್ತಿ 45 ಕೆ.ಜಿ ವಿಭಾಗದಲ್ಲಿ 4 ಸ್ಪರ್ಧಿಗಳು, 50 ಕೆ.ಜಿ ಯಲ್ಲಿ 5, 55 ಕೆ.ಜಿ ವಿಭಾಗದಲ್ಲಿ 6, 55 ಪ್ಲಸ್ ಕೆ.ಜಿ ವಿಭಾಗದಲ್ಲಿ 9 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಪುರುಷರ ಕುಸ್ತಿ 55 ಕೆ.ಜಿ ವಿಭಾಗದಲ್ಲಿ 4 ಸ್ಫರ್ಧಿಗಳು, 61 ಕೆ.ಜಿ ವಿಭಾಗದಲ್ಲಿ 14, 65. ಕೆ.ಜಿ ವಿಭಾಗದಲ್ಲಿ 12, 70 ಕೆ.ಜಿ ವಿಭಾಗದಲ್ಲಿ 07, 75 ಕೆ.ಜಿ ವಿಭಾಗದಲ್ಲಿ 06, 85 ಕೆ.ಜಿ ವಿಭಾಗದಲ್ಲಿ 06, 97 ಕೆ.ಜಿ ಪ್ಲಸ್ ವಿಭಾಗದಲ್ಲಿ 5 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಒಟ್ಟು ಪುರುಷರ ಕುಸ್ತಿ ಸ್ಪರ್ಧೆಯಲ್ಲಿ 54, ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ 24 ಸ್ಪರ್ಧಿಗಳು ಭಾಗವಹಿಸಿದ್ದಾರೆ.
ಮಹಿಳೆಯರ ಕುಸ್ತಿ ಫಲಿತಾಂಶ 45 ಕೆ.ಜಿ ವಿಭಾಗದಲ್ಲಿ ಪ್ರಥಮ ಗೋಪವ್ವ ಎಂ.ಖೋಡಿ, ದ್ವೀತಿಯ ಸ್ಥಾನ ಮಮತಾ ಕೇಳೊಜಿ, ತೃತೀಯ ಶ್ವೇತಾ ಜಾಧವ್ ಚತುರ್ಥ ಪ್ರೀಯಾಂಕ ಕರಿಗಾರ್, 50 ಕೆ.ಜಿ 1 ಬಸಿರಾ ವಕಾರದ ತಂಡದ 2 ಜ್ಯೋತಿ 3 ಸೋನಿಯಾ 4 ಅಂಕಿತಾ ಗದಗ, 55 ಕೆ.ಜಿ 1 ಪ್ರೇಮಾ ಹುಚ್ಚಣ್ಣನವರ ಗದಗ 2 ಶಾಹಿದಾ ಬಳಿಗಾರ ಗದಗ 3 ಸಹಾನ್ ಪಿ.ಎಸ್ 4 ನಿಕೀತಾ ಡೇಫಿ , 55 ಕೆ.ಜಿ ಪ್ಲಸ್ 1 ಲೀನಾ ಸಿದ್ದಿ ಹರಿಯಾಣ 2 ಶ್ವೇತಾ ಬೆಳ್ಳಟ್ಟಿ ಗದಗ 3 ಡೆಲ್ಫಿ ಎನ್ 4 ಅಕ್ಷತಾ ಬುರ್ಲಿ ಆಳ್ವಾಸ್ ಸ್ಥಾನಗಳನ್ನು ಪಡೆದಿದ್ದಾರೆ.
ಪುರುಷರ ಕುಸ್ತಿ ಫಲಿತಾಂಶ 57 ಕೆ.ಜಿ ವಿಭಾಗದಲ್ಲಿ ಪ್ರಥಮ ಪ್ರತೀಕ್ ಬಿ.ಎಸ್ ದ್ವೀತಿಯ ಪ್ರವೀಣ್ ಕೊಲಂಬಿ, ತೃತೀಯ ಶ್ರೀಕಾಂತ ಮಡಿವಾಳರ್ ಚತುರ್ಥ ಲಕ್ಷ್ಮಣ್, 61 ಕೆ.ಜಿ 1. ಮಹೇಶ್ ಗೌಡ 2 ಶಿವಾಜಿ ದನಕರಿ 3 ನೀಲಪ್ಪ ಭುಜಿ 4 ಮಲ್ಲಪ್ಪ ಮರ್ನರು 65 ಕೆ.ಜಿ ವಿಭಾಗದಲ್ಲಿ 1 ರಮೇಶ ಹೊಸಕೋಟೆ 2 ಸಂತೋಷ ಮೇತ್ರಿ 3 ಮುರಗೇಶ ತಮದಡ್ಡಿ 4 ಶಿವಾನಂದ ತಳವಾರ್ 70 ಕೆ.ಜಿ ವಿಭಾಗದಲ್ಲಿ 1 ಆಕಾಶ ಘಾಡಿ 2 ಅನೀಲ್ ದಳವಾಯು 3 ಹೊಳಬಸು ಹೆಬ್ಬಾಳ 4 ಯೋಗೇಶ್ ಬಿ. 75 ಕೆ.ಜಿ ವಿಭಾಗದಲ್ಲಿ 1 ಪ್ರಸಾದ ಅಷ್ಟಗಿ 2 ರವಿ ಕೆಂಪಣ್ಣವರ್ 3 ಸುನೀಲ್ ಹೊಸಕೋಟೆ 4 ಮಾಳಪ್ಪ ಕುಡುಚಿ 85 ಕೆ.ಜಿ ವಿಭಾಗದಲ್ಲಿ 1 ಪಾಂಡು ರಾಘವ ಶಿಂಥೆ 2 ಬಿರೇಶ ಲಂಗೋಟಿ 3 ಅಮಗೊಂಡ ಎಮ್ ನಿರ್ವಾಣಿ 4 ಗೋಪಾಲ ತಂಶಿ 97 ರಿಂದ 130 ಕೆ.ಜಿ ವಿಭಾಗದಲ್ಲಿ 1 ಲೋಕೆಶ ತಲಶೆಟ್ಟಿ 2 ಎಮ್.ವೈ ಪಾಟೀಲ 3 ಶ್ರೀಶೈಲ ಯಲಶೆಟ್ಟಿ 4 ಮಲ್ಲಪ್ಪ ಮೇತ್ರಿ ಸ್ಥಾನಗಳನ್ನು ಪಡೆದಿದ್ದಾರೆ.
ಬಾಲಕಿಯರು ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ 11 ತಂಡಗಳು ಭಾಗವಹಿಸಿದ್ದವು, ಅಂತಿಮ ಫೈನಲ್ ಪಂದ್ಯದಲ್ಲಿ ಎಸ್.ಜಿ.ವಿ.ಆರ್ ಧರಣಿ ತಂಡ ಗಂಗಾವತಿ ವಿರುದ್ದ ಜಿ.ಎಚ್.ಎಸ್ ಚಿಕ್ಕಡಣಕನಕಲ್ ತಂಡ 4-1 ರಿಂದ ಜಯಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಎಸ್.ಜಿ.ವಿ.ಆರ್ ತಂಡ ಎರಡನೇ ಸ್ಥಾನ ಪಡೆದಿದೆ. ಪೈಯರ್ಸ್ ಗಲ್ಸ್ ತಂಡ ಶ್ರಿರಾಮನಗರ ತಂಡ ವಿರುದ್ಧ ಎಸ್.ಜಿ.ವಿ ಆರ್ ತೆಲುಗು ಮೀಡಿಯಮ್ ಪ್ರಗತಿನಗರ ತಂಡ  4-3 ರಿಂದ ಜಯ ಸಾಧಿಸಿ ಮೂರನೆ ಸ್ಥಾನ ಪಡೆಯಿತು.



ಆನೆಗೊಂದಿ ಉತ್ಸವ-2020 : ಸಿದ್ಧತೆಗಳು ಪೂರ್ಣ

ಕೊಪ್ಪಳ ಜ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಅಂಗವಾಗಿ ಜನವರಿ 9 ಹಾಗೂ 10 ರಂದು ನಡೆಯಲಿರುವ ಆನೆಗೊಂದಿ ಉತ್ಸವದ ತಳವಾರಘಟ್ಟಕ್ಕೆ ತೆರಳುವ ಮಾರ್ಗದ ವಿಶಾಲ ಬಯಲಿನಲ್ಲಿ ಪ್ರಖ್ಯಾತ ಗಗನ ಮಹಲ್‌ನ ಪ್ರತಿರೂಪದಂತೆ ತಲೆ ಎತ್ತಿರುವ ಶ್ರೀ ಕೃಷ್ಣದೇವರಾಯ ಮುಖ್ಯ ವೇದಿಕೆ ವಿಜಯನಗರದ ಸಾಮ್ರಾಜ್ಯದ ಮಾತೃನೆಲದ ಭವ್ಯತೆ ಸಾರುವಂತಿದೆ. ಮುಖ್ಯ ವೇದಿಕೆ ಬಳಿ ಎಂಟು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.ಎಡಭಾಗದಲ್ಲಿ ಮಾಧ್ಯಮ ಕೇಂದ್ರ, ಸರ್ಕಾರದ ಯೋಜನೆ ಮತ್ತು ಸಾಧನೆಗಳನ್ನು ಪ್ರದರ್ಶಿಸುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಳಿಗೆ , ವಿವಿಧ ವಸ್ತು ಪ್ರದರ್ಶನ ಮಳಿಗೆಗಳನ್ನು ನಿರ್ಮಿಸಲಾಗಿದೆ. ಬೆಟ್ಟಗುಡ್ಡಗಳಿಗೆ ಆಕರ್ಷಕ  ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಕಲ್ಲುಗಳಿಗೆ ಜೀವಕಳೆ ಬಂದಿದೆ.

ಆನೆಗೊAದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀವಿದ್ಯಾರಣ್ಯ ವೇದಿಕೆಯೂ ಸಿದ್ಧವಾಗಿದೆ. ಕೊಪ್ಪಳ ಮತ್ತು ಗಂಗಾವತಿಯಿAದ ಆನೆಗೊಂದಿಗೆ ತಲುಪುವ ಎಲ್ಲಾ ರಸ್ತೆಗಳನ್ನು ಸಿಂಗರಿಸಲಾಗಿದೆ. ಬಾನಂಗಳದಲ್ಲಿ ಹಾರಿ ಬಿಟ್ಟಿರುವ ಬಲೂನುಗಳು ಕಲಾಸಕ್ತರನ್ನು ವೈಭವರಿಂದ ಉತ್ಸವಕ್ಕೆ ಕೈಬೀಸಿ ಕರೆಯುತ್ತಿವೆ. ಐತಿಹಾಸಿಕ  ಪಾರಂಪರಿಕ ಸ್ಮಾರಕಗಳಿಗೆ ತಳಿರು ತೋರಣ ಅಲಂಕಾರ ಮಾಡಲಾಗಿದ್ದು, ಸಹಜ ಕಳೆ ಪ್ರಾಪ್ತಿಯಾಗಿದೆ.

ಅಂತಿಮ ಹಂತದ ಸಿದ್ಧತೆಗಳನ್ನು ಇಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್, ಗಂಗಾವತಿ ತಹಸೀಲ್ದಾರ ಚಂದ್ರಕಾAತ ಮಾಲಗತ್ತಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮೋಹನ್, ಆಹಾರ ಇಲಾಖೆ ಉಪನಿರ್ದೇಶಕ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ಧರಾಮೇಶ್ವರ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಶಿಧರ ಸೇರಿದಂತೆ ಮತ್ತಿತರರು  ಪರಿಶೀಲಿಸಿದರು.

ಆನೆಗೊಂದಿ ಉತ್ಸವ : ಬಂದೋಬಸ್ತ್ಗೆ 788 ಪೊಲೀಸ್‌ರ ನಿಯೋಜನೆ

ಕೊಪ್ಪಳ ಜ. 08 (ಕರ್ನಾಟಕ ವಾರ್ತೆ): ಆನೆಗೊಂದಿ ಉತ್ಸವ-2020ರ ನಿಮಿತ್ತ ಬಂದೋಬಸ್ತ್ಗಾಗಿ 788 ಪೊಲೀಸ್ ಅಧಿಕಾರಿ, ಸಿಂಬAದಿಗಳನ್ನು ನಿಯೋಜಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು ತಿಳಿಸಿದ್ದಾರೆ.
ಜ. 09 ರಂದು ನಡೆಯಲಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಆಗಮಿಸುತ್ತಿರುವ ಹಿನ್ನೆಲೆ, ಅವರ ಭದ್ರತೆ ಹಾಗೂ ಉತ್ಸವದ ಬಂದೋಬಸ್ತ್ ಕರ್ತವ್ಯಕ್ಕಾಗಿ 03 ಡಿ.ಎಸ್.ಪಿ., 13 ಸಿ.ಪಿ.ಐ., 30 ಪಿ.ಎಸ್.ಐ., 50 ಎ.ಎಸ್.ಐ., 330 ಎಚ್.ಸಿ./ಪಿ.ಸಿ., 52 ಡಬ್ಲೂö್ಯ.ಎಚ್.ಸಿ./ ಡಬ್ಲೂö್ಯ.ಪಿ.ಸಿ., 300 ಎಚ್.ಜಿ., 06 ಡಿ.ಎ.ಆರ್. ಸ್ಟೆçöÊಕಿಂಗ್ ಪಾರ್ಟಿ ಹಾಗೂ 04 ಕೆ.ಎಸ್.ಆರ್.ಪಿ. ಪ್ಲಾಟೂನ್ಸ್ ಸೇರಿದಂತೆ ಒಟ್ಟು 788 ಪೊಲೀಸ್‌ರ ನಿಯೋಜನೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
=========

ಮಹಿಳಾ ಮತ್ತು ಪುರುಷ ಕುಸ್ತಿ ಹಾಗೂ ಬಾಲಕಿಯರ ಹ್ಯಾಂಡ್ ಬಾಲ್ ಸ್ಪರ್ಧೆಗಳು ಯಶಸ್ವಿ

ಕೊಪ್ಪಳ ಜ. 08 (ಕರ್ನಾಟಕ ವಾರ್ತೆ): ಆನೆಗೊಂದಿ ಉತ್ಸವದ ಅಂಗವಾಗಿ  ಮಹಿಳೆಯರ ಕುಸ್ತಿ ಮತ್ತು ಪುರುಷರ ಕುಸ್ತಿ ಸ್ಪರ್ಧೆಗಳು ಹಾಗೂ ಬಾಲಕಿಯರ ಹ್ಯಾಂಡ್ ಬಾಲ್ ಸ್ಪರ್ಧೆಗಳ ಆಕರ್ಷಕ ಪ್ರದರ್ಶನ ನಡೆಯಿತು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಇಂದು (ಜ.8) ಹಮ್ಮಿಕೊಳ್ಳಲಾದ ಮಹಿಳಾ ಕುಸ್ತಿ ಮತ್ತು ಪುರುಷ ಕುಸ್ತಿ ಹಾಗೂ ಹ್ಯಾಂಡ್ ಬಾಲ್ ಪ್ರದರ್ಶನಕ್ಕೆ ಆನೆಗೊಂದಿ ಶ್ರೀಕೃದೇವರಾಯ ಮುಖ್ಯ ವೇದಿಕೆಯಲ್ಲಿ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಅವರು ಚಾಲನೆ ನೀಡಿದರು. 
ಮಹಿಳೆಯರ ಕುಸ್ತಿ 45 ಕೆ.ಜಿ ವಿಭಾಗದಲ್ಲಿ 4 ಸ್ಪರ್ಧಿಗಳು, 50 ಕೆ.ಜಿ ಯಲ್ಲಿ 5, 55 ಕೆ.ಜಿ ವಿಭಾಗದಲ್ಲಿ 6, 55 ಪ್ಲಸ್ ಕೆ.ಜಿ ವಿಭಾಗದಲ್ಲಿ 9 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಪುರುಷರ ಕುಸ್ತಿ 55 ಕೆ.ಜಿ ವಿಭಾಗದಲ್ಲಿ 4 ಸ್ಫರ್ಧಿಗಳು, 61 ಕೆ.ಜಿ ವಿಭಾಗದಲ್ಲಿ 14, 65. ಕೆ.ಜಿ ವಿಭಾಗದಲ್ಲಿ 12, 70 ಕೆ.ಜಿ ವಿಭಾಗದಲ್ಲಿ 07, 75 ಕೆ.ಜಿ ವಿಭಾಗದಲ್ಲಿ 06, 85 ಕೆ.ಜಿ ವಿಭಾಗದಲ್ಲಿ 06, 97 ಕೆ.ಜಿ ಪ್ಲಸ್ ವಿಭಾಗದಲ್ಲಿ 5 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಒಟ್ಟು ಪುರುಷರ ಕುಸ್ತಿ ಸ್ಪರ್ಧೆಯಲ್ಲಿ 54, ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ 24 ಸ್ಪರ್ಧಿಗಳು ಭಾಗವಹಿಸಿದ್ದಾರೆ.
ಮಹಿಳೆಯರ ಕುಸ್ತಿ ಫಲಿತಾಂಶ 45 ಕೆ.ಜಿ ವಿಭಾಗದಲ್ಲಿ ಪ್ರಥಮ ಗೋಪವ್ವ ಎಂ.ಖೋಡಿ, ದ್ವೀತಿಯ ಸ್ಥಾನ ಮಮತಾ ಕೇಳೊಜಿ, ತೃತೀಯ ಶ್ವೇತಾ ಜಾಧವ್ ಚತುರ್ಥ ಪ್ರೀಯಾಂಕ ಕರಿಗಾರ್, 50 ಕೆ.ಜಿ 1 ಬಸಿರಾ ವಕಾರದ ತಂಡದ 2 ಜ್ಯೋತಿ 3 ಸೋನಿಯಾ 4 ಅಂಕಿತಾ ಗದಗ, 55 ಕೆ.ಜಿ 1 ಪ್ರೇಮಾ ಹುಚ್ಚಣ್ಣನವರ ಗದಗ 2 ಶಾಹಿದಾ ಬಳಿಗಾರ ಗದಗ 3 ಸಹಾನ್ ಪಿ.ಎಸ್ 4 ನಿಕೀತಾ ಡೇಫಿ , 55 ಕೆ.ಜಿ ಪ್ಲಸ್ 1 ಲೀನಾ ಸಿದ್ದಿ ಹರಿಯಾಣ 2 ಶ್ವೇತಾ ಬೆಳ್ಳಟ್ಟಿ ಗದಗ 3 ಡೆಲ್ಫಿ ಎನ್ 4 ಅಕ್ಷತಾ ಬುರ್ಲಿ ಆಳ್ವಾಸ್ ಸ್ಥಾನಗಳನ್ನು ಪಡೆದಿದ್ದಾರೆ.
ಪುರುಷರ ಕುಸ್ತಿ ಫಲಿತಾಂಶ 57 ಕೆ.ಜಿ ವಿಭಾಗದಲ್ಲಿ ಪ್ರಥಮ ಪ್ರತೀಕ್ ಬಿ.ಎಸ್ ದ್ವೀತಿಯ ಪ್ರವೀಣ್ ಕೊಲಂಬಿ, ತೃತೀಯ ಶ್ರೀಕಾಂತ ಮಡಿವಾಳರ್ ಚತುರ್ಥ ಲಕ್ಷ್ಮಣ್, 61 ಕೆ.ಜಿ 1. ಮಹೇಶ್ ಗೌಡ 2 ಶಿವಾಜಿ ದನಕರಿ 3 ನೀಲಪ್ಪ ಭುಜಿ 4 ಮಲ್ಲಪ್ಪ ಮರ್ನರು 65 ಕೆ.ಜಿ ವಿಭಾಗದಲ್ಲಿ 1 ರಮೇಶ ಹೊಸಕೋಟೆ 2 ಸಂತೋಷ ಮೇತ್ರಿ 3 ಮುರಗೇಶ ತಮದಡ್ಡಿ 4 ಶಿವಾನಂದ ತಳವಾರ್ 70 ಕೆ.ಜಿ ವಿಭಾಗದಲ್ಲಿ 1 ಆಕಾಶ ಘಾಡಿ 2 ಅನೀಲ್ ದಳವಾಯು 3 ಹೊಳಬಸು ಹೆಬ್ಬಾಳ 4 ಯೋಗೇಶ್ ಬಿ. 75 ಕೆ.ಜಿ ವಿಭಾಗದಲ್ಲಿ 1 ಪ್ರಸಾದ ಅಷ್ಟಗಿ 2 ರವಿ ಕೆಂಪಣ್ಣವರ್ 3 ಸುನೀಲ್ ಹೊಸಕೋಟೆ 4 ಮಾಳಪ್ಪ ಕುಡುಚಿ 85 ಕೆ.ಜಿ ವಿಭಾಗದಲ್ಲಿ 1 ಪಾಂಡು ರಾಘವ ಶಿಂಥೆ 2 ಬಿರೇಶ ಲಂಗೋಟಿ 3 ಅಮಗೊಂಡ ಎಮ್ ನಿರ್ವಾಣಿ 4 ಗೋಪಾಲ ತಂಶಿ 97 ರಿಂದ 130 ಕೆ.ಜಿ ವಿಭಾಗದಲ್ಲಿ 1 ಲೋಕೆಶ ತಲಶೆಟ್ಟಿ 2 ಎಮ್.ವೈ ಪಾಟೀಲ 3 ಶ್ರೀಶೈಲ ಯಲಶೆಟ್ಟಿ 4 ಮಲ್ಲಪ್ಪ ಮೇತ್ರಿ ಸ್ಥಾನಗಳನ್ನು ಪಡೆದಿದ್ದಾರೆ.
ಬಾಲಕಿಯರು ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ 11 ತಂಡಗಳು ಭಾಗವಹಿಸಿದ್ದವು, ಅಂತಿಮ ಫೈನಲ್ ಪಂದ್ಯದಲ್ಲಿ ಎಸ್.ಜಿ.ವಿ.ಆರ್ ಧರಣಿ ತಂಡ ಗಂಗಾವತಿ ವಿರುದ್ದ ಜಿ.ಎಚ್.ಎಸ್ ಚಿಕ್ಕಡಣಕನಕಲ್ ತಂಡ 4-1 ರಿಂದ ಜಯಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಎಸ್.ಜಿ.ವಿ.ಆರ್ ತಂಡ ಎರಡನೇ ಸ್ಥಾನ ಪಡೆದಿದೆ. ಪೈಯರ್ಸ್ ಗಲ್ಸ್ ತಂಡ ಶ್ರಿರಾಮನಗರ ತಂಡ ವಿರುದ್ಧ ಎಸ್.ಜಿ.ವಿ ಆರ್ ತೆಲುಗು ಮೀಡಿಯಮ್ ಪ್ರಗತಿನಗರ ತಂಡ  4-3 ರಿಂದ ಜಯ ಸಾಧಿಸಿ ಮೂರನೆ ಸ್ಥಾನ ಪಡೆಯಿತು.
=========

ಆನೆಗೊಂದಿ ಉತ್ಸವ-2020 : ಸಿದ್ಧತೆಗಳು ಪೂರ್ಣ

ಕೊಪ್ಪಳ ಜ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಅಂಗವಾಗಿ ಜನವರಿ 9 ಹಾಗೂ 10 ರಂದು ನಡೆಯಲಿರುವ ಆನೆಗೊಂದಿ ಉತ್ಸವದ ತಳವಾರಘಟ್ಟಕ್ಕೆ ತೆರಳುವ ಮಾರ್ಗದ ವಿಶಾಲ ಬಯಲಿನಲ್ಲಿ ಪ್ರಖ್ಯಾತ ಗಗನ ಮಹಲ್‌ನ ಪ್ರತಿರೂಪದಂತೆ ತಲೆ ಎತ್ತಿರುವ ಶ್ರೀ ಕೃಷ್ಣದೇವರಾಯ ಮುಖ್ಯ ವೇದಿಕೆ ವಿಜಯನಗರದ ಸಾಮ್ರಾಜ್ಯದ ಮಾತೃನೆಲದ ಭವ್ಯತೆ ಸಾರುವಂತಿದೆ. ಮುಖ್ಯ ವೇದಿಕೆ ಬಳಿ ಎಂಟು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.ಎಡಭಾಗದಲ್ಲಿ ಮಾಧ್ಯಮ ಕೇಂದ್ರ, ಸರ್ಕಾರದ ಯೋಜನೆ ಮತ್ತು ಸಾಧನೆಗಳನ್ನು ಪ್ರದರ್ಶಿಸುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಳಿಗೆ , ವಿವಿಧ ವಸ್ತು ಪ್ರದರ್ಶನ ಮಳಿಗೆಗಳನ್ನು ನಿರ್ಮಿಸಲಾಗಿದೆ. ಬೆಟ್ಟಗುಡ್ಡಗಳಿಗೆ ಆಕರ್ಷಕ  ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಕಲ್ಲುಗಳಿಗೆ ಜೀವಕಳೆ ಬಂದಿದೆ. 


ಆನೆಗೊAದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀವಿದ್ಯಾರಣ್ಯ ವೇದಿಕೆಯೂ ಸಿದ್ಧವಾಗಿದೆ. ಕೊಪ್ಪಳ ಮತ್ತು ಗಂಗಾವತಿಯಿAದ ಆನೆಗೊಂದಿಗೆ ತಲುಪುವ ಎಲ್ಲಾ ರಸ್ತೆಗಳನ್ನು ಸಿಂಗರಿಸಲಾಗಿದೆ. ಬಾನಂಗಳದಲ್ಲಿ ಹಾರಿ ಬಿಟ್ಟಿರುವ ಬಲೂನುಗಳು ಕಲಾಸಕ್ತರನ್ನು ವೈಭವರಿಂದ ಉತ್ಸವಕ್ಕೆ ಕೈಬೀಸಿ ಕರೆಯುತ್ತಿವೆ. ಐತಿಹಾಸಿಕ  ಪಾರಂಪರಿಕ ಸ್ಮಾರಕಗಳಿಗೆ ತಳಿರು ತೋರಣ ಅಲಂಕಾರ ಮಾಡಲಾಗಿದ್ದು, ಸಹಜ ಕಳೆ ಪ್ರಾಪ್ತಿಯಾಗಿದೆ.
ಅಂತಿಮ ಹಂತದ ಸಿದ್ಧತೆಗಳನ್ನು ಇಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್, ಗಂಗಾವತಿ ತಹಸೀಲ್ದಾರ ಚಂದ್ರಕಾAತ ಮಾಲಗತ್ತಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮೋಹನ್, ಆಹಾರ ಇಲಾಖೆ ಉಪನಿರ್ದೇಶಕ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ಧರಾಮೇಶ್ವರ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಶಿಧರ ಸೇರಿದಂತೆ ಮತ್ತಿತರರು  ಪರಿಶೀಲಿಸಿದರು.
=========

ಆನೆಗೊಂದಿ ಉತ್ಸವ : ಜ. 09 ರಂದು ನಡೆಯುವ ಕಾರ್ಯಕ್ರಮಗಳ ವಿವರ

ಕೊಪ್ಪಳ ಜ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ-2020ರ ಉದ್ಘಾಟನಾ ಸಮಾರಂಭವು ಜ. 09 ರಂದು ಸಂಜೆ 05 ಗಂಟೆಗೆ ನಡೆಯಲಿದ್ದು, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಆನೆಗೊಂದಿ ಉತ್ಸವದ ಉದ್ಘಾಟನೆ ನೆರವೇರಿಸುವರು.
   ಆನೆಗೊಂದಿ ಉತ್ಸವದ ಅಂಗವಾಗಿ ಜನವರಿ. 09 ರಂದು ವಿವಿಧ ಕ್ರೀಡಾಕೂಟಗಳು ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಅಂದು ಬೆಳಿಗ್ಗೆ 07 ಗಂಟೆಗೆ ಗಂಗಾವತಿ ಬಸ್ ನಿಲ್ದಾಣದಿಂದ ಪುರುಷ ಮತ್ತು ಮಹಿಳೆಯರಿಗೆ ಮ್ಯಾರಾಥಾನ್ ಮತ್ತು ಬೆಳಗ್ಗೆ 09 ಗಂಟೆಗೆ ಆನೆಗೊಂದಿಯ ದುರ್ಗಾದೇವಿ ದೇವಸ್ಥಾನದಿಂದ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ಮೂಲಕ ಆನೆಗೊಂದಿ ಉತ್ಸವ-2020ಕ್ಕೆ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಚಾಲನೆ ನೀಡುವರು.  ಬೆಳಗ್ಗೆ 11 ಗಂಟೆಗೆ ಆನೆಗೊಂದಿಯ ಗಗನ ಮಹಲ್ ಹತ್ತಿರ ತೋಟಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಫಲಪುಷ್ಪ ಪ್ರದರ್ಶನಕ್ಕೆ ಸಂಸದ ಕರಡಿ ಸಂಗಣ್ಣ ಅವರಿಂದ ಚಾಲನೆ.  ಬೆಳಗ್ಗೆ 11-15 ಗಂಟೆಗೆ ಆನೆಗೊಂದಿಯ ಶ್ರೀ ಕೃಷ್ಣ ದೇವರಾಯ ವೇದಿಕೆ ಹತ್ತಿರ ಕೃಷಿ, ಮೀನುಗಾರಿಕೆ, ಅರಣ್ಯ, ರೇಷ್ಮೆ, ಆರೋಗ್ಯ, ಪಶುಪಾಲನಾ ಇಲಾಖೆಗಳಿಂದ ಆಯೋಜಿಸಲಾಗಿರುವ ಪ್ರದರ್ಶನ ಮಳಿಗೆಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ, ಶಿಲ್ಪಕಲಾ, ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಕುಷ್ಟಗಿ ಶಾಸಕ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪೂರ, ವಾಣಿಜ್ಯ ಮಳಿಗೆಗಳಿಗೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಬಸಪ್ಪ ಆಚಾರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾಗಿರುವ ಸರ್ಕಾರದ ಯೋಜನೆಗಳ ಕುರಿತು ವಸ್ತು ಪ್ರದರ್ಶನ ಮಳಿಗೆಯನ್ನು ಕನಕಗಿರಿ ಶಾಸಕ ಬಸವರಾಜ ದಢೇಸೂಗುರು ಅವರು ಉದ್ಘಾಟಿಸಲಿದ್ದಾರೆ.  ಬೆಳಗ್ಗೆ 11-30ಕ್ಕೆ ಸಾಣಾಪೂರ ಕೆರೆ ಹತ್ತಿರ ಜಲ ಸಾಹಸ ಕ್ರೀಡೆಗಳು ಹಾಗೂ ಆನೆಗೊಂದಿಯ ಋಷಿಮುಖ ಪರ್ವತದ ಹತ್ತಿರ ರಾಕ್ ಕ್ಲೆöÊಂಬಿAಗ್ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಚಾಲನೆ ನೀಡುವರು.
  ಆನೆಗೊಂದಿ ಉತ್ಸವದ ನಿಮಿತ್ತ ಜನವರಿ 09 ರಂದು ಬೆಳಗ್ಗೆ 11 ಗಂಟೆಗೆ ಆನೆಗೊಂದಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಕವಿಗೋಷ್ಠಿ ಹಾಗೂ ಮಧ್ಯಾಹ್ನ 02-30 ಗಂಟೆಗೆ ವಿಚಾರ ಸಂಕಿರಣ, ಸಂಜೆ 04 ರಿಂದ ಆನೆಗೊಂದಿಯ ಶ್ರೀಕೃಷ್ಣ ದೇವರಾಯ ವೇದಿಕೆಯಲ್ಲಿ ಮತ್ತು ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ.  
=========

ಜ. 09 ರಂದು ಕೊಪ್ಪಳದಲ್ಲಿ ಸಚಿವ ಸಿ.ಟಿ. ರವಿ ಅವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 08 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಕ್ಕರೆ ಸಚಿವರಾದ ಸಿ.ಟಿ. ರವಿ ಅವರು ಜನವರಿ. 09 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.  ಸಚಿವರಾದ ಸಿ.ಟಿ. ರವಿ ಅವರು ಜ. 09 ರಂದು ಸಂಜೆ 05 ಗಂಟೆಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿ, ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ-2020ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ನಂತರ ವಸಂತ ವೈಭವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಚಿವರು ಅಂದು ಸಂಜೆ 06-30 ಗಂಟೆಗೆ ಆನೆಗೊಂದಿಯಿAದ ರಸ್ತೆ ಮೂಲಕವಾಗಿ ಹೊಸಪೇಟೆ ಕಡೆಗೆ ಪ್ರಯಾಣ ಬೆಳಸುವರು ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಆನೆಗೊಂದಿ ಉತ್ಸವ : ಡಿಸಿಎಂ ಲಕ್ಷ್ಮಣ ಸವದಿ ಅವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 08 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು, ಸಾರಿಗೆ, ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ಜನವರಿ. 09 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ಜ. 09 ರಂದು ಸಂಜೆ 06 ಗಂಟೆಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿ, ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ-2020ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಉಪ ಮುಖ್ಯಮಂತ್ರಿಗಳು ಅಂದು ರಾತ್ರಿ 09-30 ಗಂಟೆಗೆ ಆನೆಗೊಂದಿಯಿAದ ರಸ್ತೆ ಮೂಲಕವಾಗಿ ಹೊಸಪೇಟೆಯ ಮಾಲಪನಗುಡಿಗೆ ಪ್ರಯಾಣ ಬೆಳೆಸುವರು ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಆನೆಗೊಂದಿ ಉತ್ಸವ-2020 : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 08 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಜನವರಿ. 09 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜ. 09 ರಂದು ಸಂಜೆ 04-30 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣದಿಂದ ಹೊರಟು 05-20ಕ್ಕೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಏರ್‌ಸ್ಟಿçಪ್‌ಗೆ ಆಗಮಿಸಿ, ಅಲ್ಲಿಂದ ರಸ್ತೆ ಮೂಲಕವಾಗಿ ಸಂಜೆ 06-30 ಗಂಟೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಗೆ ಆಗಮಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತ ಇವರ ಸಹಯೋಗದಲ್ಲಿ ಆನೆಗೊಂದಿಯ ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಆಯೋಜಿಸಲಾಗಿರುವ ``ಆನೆಗೊಂದಿ ಉತ್ಸವ-2020''ರ ಸಮಾರಂಭದ ಉದ್ಘಾಟನೆ ನೆರವೇರಿಸುವರು.  ಮುಂದಿನ ಕಾರ್ಯಕ್ರಮ ಕಾಯ್ದಿರಿಸಲಾಗಿದೆ.  ನಂತರ ಮುಖ್ಯಮಂತ್ರಿಗಳು ಅಂದು ರಾತ್ರಿ 08 ಗಂಟೆಗೆ ರಸ್ತೆ ಮೂಲಕವಾಗಿ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಏರ್‌ಸ್ಟಿçಪ್ ಕಡೆಗೆ ಪ್ರಯಾಣ ಬೆಳೆಸುವರು ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.    

Tuesday, 7 January 2020

ಆನೆಗೊಂದಿ ಉತ್ಸವ : ಕೆಸರು ಗದ್ದೆ ಓಟ ಹಾಗೂ ಹಗ್ಗ-ಜಗ್ಗಾಟ ಸ್ಪರ್ಧೆಯ ಫೋಟೋಗಳು






ಆನೆಗೊಂದಿ ಉತ್ಸವ ಮಲ್ಲಕಂಬ ಸ್ಪರ್ಧೆಯ ಫೋಟೋಗಳು

























ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜಿಸಿದ ಆನೆಗೊಂದಿ ಉತ್ಸವ : ಸಾರ್ವಜನಿಕರಿಂದ ಹರ್ಷ


ಕೊಪ್ಪಳ ಜ. 07 (ಕರ್ನಾಟಕ ವಾರ್ತೆ): ಆನೆಗೊಂದಿ ಉತ್ಸವವು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದು, ಸಾರ್ವಜನಿಕರು ಸ್ಪರ್ಧಾ ಸ್ಥಳಗಳಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.  

ಹೌದು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ-2020ರ ಅಂಗವಾಗಿ ಆನೆಗೊಂದಿಯ ಗ್ರಾಮದಲ್ಲಿ ಇಂದು (ಜ.7) ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಪಗಡೆಯಾಟ, ಕೆಸರು ಗದ್ದೆ ಓಟ, ಹಗ್ಗ-ಜಗ್ಗಾಟ, ಕಲ್ಲುಗುಂಡು ಎತ್ತುವುದು, ಸಂಗ್ರಾಣಿಕಲ್ಲು ಎತ್ತುವುದು, ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ನಡೆದವು.  

ಚಿತ್ರಕಲಾ ಸ್ಪರ್ಧೆ;
  ಉತ್ಸವದ ಅಂಗವಾಗಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾದ ಚಿತ್ರಕಲೆ  ಸ್ಪರ್ಧೆಯಲ್ಲಿ 43 ಸ್ಪರ್ಧಾಳುಗಳು ಭಾಗವಹಿಸಿದ್ದರು.  ಒಟ್ಟು 84 ಚಿತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು. ಅದರಲ್ಲಿ ಪ್ರಥಮ ಸ್ಥಾನ ಹನುಮೇಶ, ಕೊಟ್ಟೂರು ಶಾಲೆ, ಗಂಗಾವತಿ ಅವರಿಗೆ ಗಗನ್ ಮಹಲ್ ಚಿತ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜಶೇಖರ ಯಲಬುರ್ಗಾ ಅವರ ವಾಲಿಕೋಟೆ ಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದೆ.  ಶಶಿಭೂಷಣ್ ಎಂ.ಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಸ್ಲಾಂಪುರ ಅವರ ವಾಲಿಕೋಟೆಯ ಚಿತ್ರಕ್ಕೆ ತೃತೀಯ ಸ್ಥಾನ ಲಭಿಸಿದೆ.
ರಂಗೋಲಿ ಸ್ಪರ್ಧೆ;
  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ  29 ಮಹಿಳೆಯರು ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನ ಲಕ್ಷಿö್ಮÃ (ಸಾಣಾಪುರ), ದ್ವಿತೀಯ ಶೃತಿ ಹಿರೇಮಠ (ರಾಂಪುರ), ತೃತೀಯ ಧರ್ಮವತಿ (ಹನುಮನಹಳ್ಳಿ) ಸ್ಥಾನ ಪಡೆದಿದ್ದಾರೆ.  ರಂಗೋಲಿ ಸ್ಪರ್ಧಾ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೇರಿದಂತೆ ಅನೇಕರು ಭೇಟಿ ನೀಡಿ ರಂಗೋಲಿ ವೀಕ್ಷಿಸಿದರು.
ಪಗಡೆಯಾಟ;
    ಉತ್ಸವದ ಅಂಗವಾಗಿ ಮಹಿಳೆಯರಿಗೆ ಹಮ್ಮಿಕೊಳ್ಳಲಾದ ಪಗಡೆ ಆಟ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ 05 ಮಹಿಳೆಯರು ಭಾಗವಹಿಸಿದ್ದರು.  ಇದರಲ್ಲಿ ಪ್ರಥಮ ಸ್ಥಾನ ಗೀತಾ ಕೆ (ಆನೆಗೊಂದಿ), ದ್ವಿತೀಯ ಮಂಜುಳಾ ಎಮ್  (ಗಂಗಾವತಿ), ತೃತೀಯ ಜಯಲಕ್ಷ್ಮಿ ಕೆ.ಎಲ್  (ಬಸಪಟ್ಟಣ) ಸ್ಥಾನ ಪಡೆದಿದ್ದಾರೆ.  ಪುರುಷರ ಪಗಡೆ ಆಟ ಸ್ಪರ್ಧೆಯಲ್ಲಿ 03 ಪುರುಷರು ಭಾಗವಹಿಸಿದ್ದರು. ಇದರಲ್ಲಿ ಪ್ರಥಮ ಸ್ಥಾನವನ್ನು ಚರಂಡಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಕೊಪ್ಪಳ), ದ್ವಿತೀಯ ಮಾನಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಕೊಪ್ಪಳ), ತೃತೀಯ ನಾಗರಾಜ ಎಸ್.ಕೆ.ಎನ್.ಜಿ ಕಾಲೇಜು (ಗಂಗಾವತಿ) ಸ್ಥಾನ ಪಡೆದಿದ್ದಾರೆ.
ಕೆಸರು ಗದ್ದೆ ಓಟ;
  ಕೆಸರು ಗದ್ದೆ ಓಟಕ್ಕೆ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಜಂಟಿಯಾಗಿ ಚಾಲನೆ ನೀಡಿದರು.  ಓಟದಲ್ಲಿ ಒಟ್ಟು 45 ಸ್ಪರ್ಧಾಳುಗಳು ಭಾಗವಹಿಸಿದ್ದು, ಒಂದು ಭಾಗದಲ್ಲಿ 09 ಜನರಂತೆ ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ಪ್ರಾರಂಭಿಸಿ, ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರನ್ನು ಅಂತಿಮ ಪಂದ್ಯಾವಳಿಗೆ ಆಯ್ಕೆ ಮಾಡಲಾಯಿತು.  ಅಂತಿಮ ಸ್ಪರ್ಧೆಯಲ್ಲಿ ಒಟ್ಟು 10 ಜನ ಸ್ಪರ್ಧಿಗಳಿಂದ ಕೆಸರು ಗದ್ದೆ ಓಟ ನಡೆಯಿತು. ಇದರಲ್ಲಿ ಪ್ರಥಮ ಸ್ಥಾನ ಪ್ರೇಮರಾಜ್ ರಾಮಪ್ಪ, ದ್ವಿತೀಯ ಸ್ಥಾನವನ್ನು ಪೊಲೀಸ್ ಇಲಾಖೆಯ ಶರಣಪ್ಪ ಪಡೆದರೆ.  ತೃತೀಯ ಸ್ಥಾನವನ್ನು ಎಂ.ಡಿ ಸಮೀರ್ ಪಡೆದರು.
ಕೆಸರು ಗದ್ದೆಯಲ್ಲಿ ಹಗ್ಗ-ಜಗ್ಗಾಟ;
  ಉತ್ಸವದ ಅಂಗವಾಗಿ ಪೊಲೀಸ್, ಆರ್.ಡಿ.ಪಿ.ಆರ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಏರ್ಪಡಿಸಲಾದ ಹಗ್ಗ-ಜಗ್ಗಾಟ ಸ್ಪರ್ಧೆಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಚಾಲನೆ ನೀಡಿದರು. ಈ ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.  ಇದರಲ್ಲಿ ಪ್ರಥಮ ಸ್ಥಾನ ಪೊಲೀಸ್ ಇಲಾಖೆ ಡಿ.ಆರ್ ಕೊಪ್ಪಳ ತಂಡ, ದ್ವಿತೀಯ ಸ್ಥಾನ ಆನೆಗೊಂದಿ ಮುಸ್ತಾಫ ತಂಡ,  ತೃತೀಯ ಸ್ಥಾನ ಬಸವನದುರ್ಗ ವೆಂಕಟೇಶ ಬಾಬು ತಂಡ ಪಡೆದಿದೆ.  
ವಿಲ್ಹ್ ಚೇರ್ ಸ್ಪರ್ಧೆ;  
  ಪುರುಷರ ವಿಲ್ಹ್ ಚೇರ್ ಸ್ಪರ್ಧೆಯಲ್ಲಿ ಒಟ್ಟು 4 ಸ್ಪರ್ಧಿಗಳು ಭಾಗವಹಿಸಿದ್ದು, ಪ್ರಥಮ ಗಣೇಶ ಬಂಡಿವಡ್ಡರ (ಗೊಂಡಬಾಳ), ದ್ವಿತೀಯ ಅಶೋಕ ಡಂಬರ್ (ವಡ್ಡರಹಟ್ಟಿ), ತೃತೀಯ ಯಲ್ಲಪ್ಪ (ವಡ್ಡರಹಟ್ಟಿ) ಸ್ಥಾನಗಳನ್ನು ಪಡೆದಿದ್ದಾರೆ.  
ಸ್ಲೋ ಸೈಕಲ್ ರೈಸ್ ಸ್ಪರ್ಧೆ;
  ಸ್ಲೋ ಸೈಕಲ್ ರೇಸ್ ಸ್ಪರ್ಧೆಯಲ್ಲಿ ಒಟ್ಟು ಈ ಸ್ಪರ್ಧೆಯಲ್ಲಿ 29 ಸ್ಪರ್ಧಾಳುಗಳು ಭಾಗವಹಿಸಿದ್ದು, 3 ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ.  1 ಗುಂಪಿಗೆ 10 ರಂತೆ ಸ್ಲೋ ಸೈಕಲ್ ರೈಸ್ ಮಾಡಿಸಲಾಗಿತ್ತು.  ಇದರಲ್ಲಿ ಪ್ರಥಮ ಸ್ಥಾನ ವೆಂಕಟೇಶಬಾಬು (ಆನೆಗೊಂದಿ), ದ್ವಿತೀಯ ಬೋಗಪ್ಪ (ಗಂಗಾವತಿ), ತೃತೀಯ ವಿರನಗೌಡ ಕುಲಕರ್ಣಿ ಹಾರಳ ಸ್ಥಾನ ಪಡೆದಿದ್ದಾರೆ.
ಸಂಗ್ರಹಣೆ ಕಲ್ಲು ಎತ್ತುವ ಸ್ಪರ್ಧೆ;
  ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಒಟ್ಟು 22 ಪುರುಷರ ಭಾಗವಹಿಸಿದ್ದರು.  ಈ ಸ್ಪರ್ಧೆಯಲ್ಲಿರುವ ಸಂಗ್ರಾಣಿ ಕಲ್ಲಿನ ತೂಕ  55, 57, 62, 65, 70, 72, 74, 77, 78, 80 ಕೆಜಿ ಭಾರವನ್ನು ಹೊಂದಿದ್ದವು.  ಪ್ರಥಮ ಸ್ಥಾನ ಪಡೆದ ಹಾಲಪ್ಪ (ಕುಷ್ಟಗಿ) 77 ಕೆ.ಜಿ ತೂಕದ ಸಂಗ್ರಾಣಿ ಕಲ್ಲು ಎತ್ತಿದ್ದರೆ,  ದ್ವಿತೀಯ ಸ್ಥಾನ ಪಡೆದ ಹನುಮಂತ ತುರುವಿಹಾಳ 74 ಕೆ.ಜಿ, ತೃತೀಯ ಸ್ಥಾನ ಪಡೆದ ಸೋಮನಾಥ (ಕುಷ್ಟಗಿ) 72 ಕೆ.ಜಿ ಸಂಗ್ರಾಣಿ ಕಲ್ಲು ಎತ್ತಿದ್ದಾರೆ.

ಕಲ್ಲು ಎತ್ತುವ ಸ್ಪರ್ಧೆ;
  ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಒಟ್ಟು 11 ಸ್ಪರ್ಧಿಗಳು ಭಾಗವಹಿಸಿದ್ದರು.  ಇದರಲ್ಲಿ 100 ಮತ್ತು 120 ಕೆಜಿ ಕಲ್ಲುಗಳನ್ನು ಇರಿಸಲಾಗಿತ್ತು.  ಇದರಲ್ಲಿ ಪ್ರಥಮ ಸ್ಥಾನ ಪ್ರಭು ಸುಭಾಷ್ ಚಂದ್ರ ಜವಳಗೇರಾ, ದ್ವಿತೀಯ ಸ್ಥಾನ ಆಯಾನಿ ಮುದಕಪ್ಪ ಅರಳಹಳ್ಳಿ, ತೃತೀಯ ಸ್ಥಾನ ಎ. ಮಾರುತಿ ಕಂಪ್ಲಿ ಅವರು ಪಡೆದಿದ್ದಾರೆ.

ಆಕರ್ಷಕ ಸ್ಥಿರ ಹಾಗೂ ಹಗ್ಗದ ಮಲ್ಲಕಂಬ ಪ್ರದರ್ಶನ


ಕೊಪ್ಪಳ ಜ. 07 (ಕರ್ನಾಟಕ ವಾರ್ತೆ): ಆನೆಗೊಂದಿ ಉತ್ಸವದ ಅಂಗವಾಗಿ ಕರ್ನಾಟಕ ಅಮೆಚರ್ ಮಲ್ಲಕಂಬ ಸಂಸ್ಥೆ ಲಕ್ಷೆö್ಮÃಶ್ವರ, ತಂಡದ ವತಿಯಿಂದ ಆಕರ್ಷಕ ಮಲ್ಲಕಂಬ ಪ್ರದರ್ಶನ ನಡೆಯಿತು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಇಂದು (ಜ.7) ಹಮ್ಮಿಕೊಳ್ಳಲಾದ ಮಲ್ಲಕಂಬ ಪ್ರದರ್ಶನಕ್ಕೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಅವರು ಚಾಲನೆ ನೀಡಿದರು.  
ತುಳಸಗಿ, ಬಾಗಲಕೋಟೆ, ಲಕ್ಷೆö್ಮÃಶ್ವರ, ಕಲದಗಿ, ರಾಮಗಿರಿ ಊರುಗಳನ್ನೊಳಗೊಂಡ ಕರ್ನಾಟಕ ಅಮೆಚರ್ ಮಲ್ಲಕಂಬ ಸಂಸ್ಥೆ ಲಕ್ಷೆö್ಮÃಶ್ವರ, ಈ ಸಂಸ್ಥೆಯ ಸಹಾಸಿಗಳಿಂದ ಹಗ್ಗದ ಮಲ್ಲಕಂಬ ಪ್ರದರ್ಶನದಲ್ಲಿ 37 ಜನ ಬಾಲಕಿಯರು ಹಾಗೂ ಸ್ಥಿರ ಮಲ್ಲಕಂಬ ಪ್ರದರ್ಶನದಲ್ಲಿ 36 ಜನ ಬಾಲಕರು  ಪಾಲ್ಗೊಂಡು ಯೋಗ ಸೇರಿದಂತೆ ವಿಭಿನ್ನ ರೀತಿಯಲ್ಲಿ ವ್ಯಾಯಾಮಗಳನ್ನು ಮಾಡುವುದರ ಮೂಲಕ ಸಾರ್ವಜನಿಕರ ಮನ ಸೆಳೆದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶೀಲ್ದಾರ ಎಲ್.ಡಿ ಚಂದ್ರಕಾAತ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ್, ತಾಲ್ಲೂ
ಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್, ಕರ್ನಾಟಕ ಅಮೆಚರ್ ಮಲ್ಲಕಂಬ, ಲಕ್ಷೆö್ಮÃಶ್ವರ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಫ್. ಕೊಡ್ಲಿ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆನೆಗೊಂದಿ ಉತ್ಸವ-2020 ಪ್ರದರ್ಶನಕ್ಕೆ ಶಾಸಕ ಪರಣ್ಣ ಮುನವಳ್ಳಿ ಅವರಿಂದ ಚಾಲನೆ


ತಳಿರು ತೋರಣಗಳಿಂದ ಅಲಂಕಾರಗೊAಡ ಆನೆಗೊಂದಿ
ಪ್ರದರ್ಶನಕ್ಕೆ ಶಾಸಕ ಪರಣ್ಣ ಮುನವಳ್ಳಿ ಅವರಿಂದ ಚಾಲನೆ
ಕೊಪ್ಪಳ ಜ. 07 (ಕರ್ನಾಟಕ ವಾರ್ತೆ): ಆನೆಗೊಂದಿ ಉತ್ಸವ-2020ರ ಅಂಗವಾಗಿ ತಳಿರು ತೋರಣಗಳಿಂದ ಅಲಂಕಾರಗೊAಡಿರುವ ಆನೆಗೊಂದಿ ಗ್ರಾಮದ ಪ್ರದರ್ಶನಕ್ಕೆ ದ್ವಾರ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುವುದರ ಮೂಲಕ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಇಂದು (ಜ.7) ಚಾಲನೆ ನೀಡಿದರು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವವು ಇದೇ ಜನವರಿ. 09 ಮತ್ತು 10 ರಂದು ನಡೆಯಲಿದ್ದು, ಈ ಪ್ರಯುಕ್ತ ಆನೆಗೊಂದಿ ಗ್ರಾಮ ಪಂಚಾಯತ್ ಕಾರ್ಯಾಲಯ, ಗ್ರಾಮದ ಮನೆ-ಮನೆಗಳು, ಅಂಗಡಿಗಳ ಅಂಗಳ ಬಣ್ಣ-ಬಣ್ಣದ ರಂಗೋಲಿಯಿAದ ಕೂಡಿದ್ದು, ತಳಿರು ತೋರಣಗಳಿಂದ ಶೃಂಗಾರಗೊAಡಿವೆ.  ಉತ್ಸವದ ಅಂಗವಾಗಿ ಆನೆಗೊಂದಿ ಗ್ರಾಮದಲ್ಲಿ ಉತ್ತಮ ರೀತಿಯಲ್ಲಿ ಅಲಂಕಾರಗೊAಡಿರುವ ಮನೆಗೆ ಬಹುಮಾನ ದೊರೆಯಲಿದ್ದು, ಈ ನಿಟ್ಟಿನಲ್ಲಿ ಆನೆಗೊಂದಿ ಗ್ರಾಮವು ಆಕರ್ಷಣೀಯವಾಗಿ ಶೃಂಗಾರಗೊAಡಿದ್ದವು. ಉತ್ಸವಕ್ಕೆ ಆಗಮಿಸುವ ಗಣ್ಯರ ಹಾಗೂ ಸಾರ್ವಜನಿಕರ ಮತ್ತು ಪ್ರವಾಸಿಗರ ಕಣ್ಮನ ಸೆಳೆದವು.
ಆನೆಗೊಂದಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ತಹಶೀಲ್ದಾರ ಎಲ್.ಡಿ ಚಂದ್ರಕಾAತ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ್, ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾ.ಪಂ., ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. (ಫೋಟೋ ಕಳುಹಿಸಿದೆ)

ಆನೆಗೊಂದಿ ಉತ್ಸವ : ಸ್ಲೋ ಸೈಕಲ್ ರೇಸ್ ಪಂದ್ಯಕ್ಕೆ ಗ್ರಾ.ಪಂ. ಅಧ್ಯಕ್ಷರಿಂದ ಚಾಲನೆ



ಕೊಪ್ಪಳ ಜ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಅಂಗವಾಗಿ ಆನೆಗೊಂದಿಯ ಶ್ರೀ ಕೃಷ್ಣದೇವರಾಯ ವೇದಿಕೆ ಮುಂಭಾಗದಲ್ಲಿ ಇಂದು (ಜ.7) ಹಮ್ಮಿಕೊಳ್ಳಲಾದ ಸ್ಲೋ ಸೈಕಲ್ ರೇಸ್ ಪಂದ್ಯಕ್ಕೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಅವರು ವಿಜಿಲ್ ಹಾಕುವುದರ ಮೂಲಕ ಚಾಲನೆ ನೀಡಿದರು.
ಆನೆಗೊಂದಿ ಉತ್ಸವವು ಇದೇ ಜನವರಿ. 09 ಮತ್ತು 10 ರಂದು ನಡೆಯಲಿದ್ದು, ಉತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೈಕ್ ಸ್ಟಂಟ್, ಗಾಳಿಪಟ ಉತ್ಸವ, ಕಬಡ್ಡಿ, ವಾಲಿಬಾಲ್, ಸೈಕಲ್ ಜಾಥಾ, ಹಗ್ಗ-ಜಗ್ಗಾಟ, ಕೆಸರು ಗದ್ದೆ ಓಟ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇಂದು ಸ್ಲೋ ಸೈಕಲ್ ರೇಸ್ ಸ್ಪರ್ಧೆ ನಡೆಯಿತು.  ಈ ಸ್ಪರ್ಧೆಯಲ್ಲಿ ಶಾಲಾ ಕಾಲೇಜುಗಳ ಮಕ್ಕಳು, ಸಾರ್ವಜನಿಕರು ಸ್ಪರ್ಧಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶೀಲ್ದಾರ ಎಲ್.ಡಿ ಚಂದ್ರಕಾAತ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆನೆಗೊಂದಿ ಉತ್ಸವ : ಜ. 09 ರಂದು ಉದ್ಘಾಟನಾ ಸಮಾರಂಭ


ಕೊಪ್ಪಳ ಜ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ-2020 ಇದೇ ಜನವರಿ. 09 ಮತ್ತು 10 ರಂದು ಏರ್ಪಡಿಸಲಾಗಿದ್ದು, ಉದ್ಘಾಟನಾ ಸಮಾರಂಭವು ಜ. 09 ರಂದು ಸಂಜೆ 05 ಗಂಟೆಗೆ ನಡೆಯಲಿದೆ.
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಆನೆಗೊಂದಿ ಉತ್ಸವದ ಉದ್ಘಾಟನೆ ನೆರವೇರಿಸುವರು.  ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸಂಗಪ್ಪ ಸವದಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸುವರು.  ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವರಾದ ಸಿ.ಟಿ. ರವಿ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಗಂಗಾವತಿ ಶಾಸಕರಾದ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ ರೆಡ್ಡಿ, ಸಂಸದ ಕರಡಿ ಸಂಗಣ್ಣ, ವಿಧಾನಸಭೆ ಶಾಸಕರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಹಾಲಪ್ಪ ಬಸಪ್ಪ ಆಚಾರ್ ಹಾಗೂ ಬಸವರಾಜ ದಢೇಸೂಗೂರು, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಡಾ. ಚಂದ್ರಶೇಖರ ಬಿ. ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ, ಗಂಗಾವತಿ ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನಗೌಡ ಶಿವಬಸನಗೌಡ ಪೊಲೀಸ್ ಪಾಟೀಲ್, ಆನೆಗೊಂದಿ ಕ್ಷೇತ್ರದ  ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಮಾರುತಿ ಜಿ, ಆನೆಗೊಂದಿ ಕ್ಷೇತ್ರ ಹಾಗೂ ತಾ.ಪಂ. ಸದಸ್ಯ ವೈ. ರಮೇಶ. ಸಾಣಾಪುರ, ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಪಾಲ್ಗೊಳ್ಳುವರು.
ವಿಶೇಷ ಆಹ್ವಾನಿತರಾಗಿ ವಿಜಯನಗರದ ಅರಸು ಮನೆತನದವರಾದ ಶ್ರೀರಂಗದೇವರಾಯಲು, ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಎನ್., ಬೆಂಗಳೂರು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸುಭೋದ ಯಾದವ್, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಕಾರ್ಯದರ್ಶಿ ಆರ್.ಆರ್. ಜನ್ನು ಅವರು  ಭಾಗವಹಿಸುವರು.
ವಿವಿಧ ಕ್ರೀಡಾಕೂಟಗಳು ಹಾಗೂ ವಿವಿಧ ಸ್ಪರ್ಧೆಗಳಿಗೆ ಚಾಲನೆ;
    ಆನೆಗೊಂದಿ ಉತ್ಸವದ ಅಂಗವಾಗಿ ವಿವಿಧ ಕ್ರೀಡಾಕೂಟಗಳು ಹಾಗೂ ವಿವಿಧ ಸ್ಪರ್ಧೆಗಳು ಜನವರಿ. 09 ರಂದು ನಡೆಯಲಿದ್ದು, ಜ. 09 ರಂದು ಬೆಳಿಗ್ಗೆ 07 ಗಂಟೆಗೆ ಗಂಗಾವತಿ ಬಸ್ ನಿಲ್ದಾಣದಿಂದ ಪುರುಷ ಮತ್ತು ಮಹಿಳೆಯರಿಗೆ ಮ್ಯಾರಾಥಾನ್ ಮತ್ತು ಬೆಳಗ್ಗೆ 09 ಗಂಟೆಗೆ ಆನೆಗೊಂದಿಯ ದುರ್ಗಾದೇವಿ ದೇವಸ್ಥಾನದಿಂದ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ಮೂಲಕ ಆನೆಗೊಂದಿ ಉತ್ಸವ-2020ಕ್ಕೆ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಚಾಲನೆ ನೀಡುವರು.  ಬೆಳಗ್ಗೆ 11 ಗಂಟೆಗೆ ಆನೆಗೊಂದಿಯ ಗಗನ ಮಹಲ್ ಹತ್ತಿರ ತೋಟಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಫಲಪುಷ್ಪ ಪ್ರದರ್ಶನಕ್ಕೆ ಸಂಸದ ಕರಡಿ ಸಂಗಣ್ಣ ಅವರಿಂದ ಚಾಲನೆ.  ಬೆಳಗ್ಗೆ 11-15 ಗಂಟೆಗೆ ಆನೆಗೊಂದಿಯ ಶ್ರೀ ಕೃಷ್ಣ ದೇವರಾಯ ವೇದಿಕೆ ಹತ್ತಿರ ಕೃಷಿ, ಮೀನುಗಾರಿಕೆ, ಅರಣ್ಯ, ರೇಷ್ಮೆ, ಆರೋಗ್ಯ, ಪಶುಪಾಲನಾ ಇಲಾಖೆಗಳಿಂದ ಆಯೋಜಿಸಲಾಗಿರುವ ಪ್ರದರ್ಶನ ಮಳಿಗೆಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ, ಶಿಲ್ಪಕಲಾ, ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಕುಷ್ಟಗಿ ಶಾಸಕ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪೂರ, ವಾಣಿಜ್ಯ ಮಳಿಗೆಗಳಿಗೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಬಸಪ್ಪ ಆಚಾರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾಗಿರುವ ಸರ್ಕಾರದ ಯೋಜನೆಗಳ ಕುರಿತು ವಸ್ತು ಪ್ರದರ್ಶನ ಮಳಿಗೆಯನ್ನು ಕನಕಗಿರಿ ಶಾಸಕ ಬಸವರಾಜ ದಢೇಸೂಗುರು ಅವರು ಉದ್ಘಾಟಿಸಲಿದ್ದಾರೆ.  ಬೆಳಗ್ಗೆ 11-30ಕ್ಕೆ ಸಾಣಾಪೂರ ಕೆರೆ ಹತ್ತಿರ ಜಲ ಸಾಹಸ ಕ್ರೀಡೆಗಳು ಹಾಗೂ ಆನೆಗೊಂದಿಯ ಋಷಿಮುಖ ಪರ್ವತದ ಹತ್ತಿರ ರಾಕ್ ಕ್ಲೆöÊಂಬಿAಗ್ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಚಾಲನೆ ನೀಡುವರು.
ಕವಿಗೋಷ್ಠಿ ;
  ಆನೆಗೊಂದಿ ಉತ್ಸವದ ನಿಮಿತ್ತ ಕವಿಗೋಷ್ಠಿಯನ್ನು ಜನವರಿ 09 ರಂದು ಬೆಳಗ್ಗೆ 11 ಗಂಟೆಗೆ ಆನೆಗೊಂದಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೊಪ್ಪಳದ ವಿಠ್ಠಪ್ಪ ಗೋರಂಟ್ಲಿ ಅವರು ಉದ್ಘಾಟನೆ ನೆರವೇರಿಸುವರು.  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ವಹಿಸುವರು.  ಕವಿಗಳಾದ ಯಲಬುರ್ಗಾದ ಮುನಿಯಪ್ಪ ಹುಬ್ಬಳ್ಳಿ, ಮುಧೋಳದ ಅನ್ನಪೂರ್ಣ ಮನ್ನಾಪುರ, ಕರಮುಡಿಯ ವೀರಣ್ಣ ನಿಂಗೋಜಿ, ಕುಕನೂರಿನ ಕೆ. ಬಿ. ಬ್ಯಾಳಿ, ಅಲ್ಲಾವುದ್ದಿನ ಎಮ್ಮಿ, ಅಕ್ಬರ್ ಕಾಲಿಮಿರ್ಚಿ, ಶಿ. ಕಾ. ಬಡಿಗೇರ, ಕೊಪ್ಪಳದ ವಿಮಲಾ ಇನಾಮದಾರ್, ಸಿದ್ದಲಿಂಗಪ್ಪ ಕೊಟ್ನೆಕಲ್, ಮೆಹಬೂಬ ಮಠದ, ಈಶ್ವರ ಹತ್ತಿ, ವೈ. ಬಿ. ಜೂಡಿ, ಅನಸೂಯಾ ಜಾಗಿರದಾರ,  ಪುಷ್ಪಾಲತಾ ಏಳಭಾವಿ, ಸಿರಾಜ ಬಿಸರಳ್ಳಿ, ಗಂಗಾವತಿಯ ರಮೇಶ ಗಬ್ಬೂರ, ದೇವೇಂದ್ರಪ್ಪ ಜಾ. ಜಿ., ಶಿವಕುಮಾರ ಮಾಲಿಪಾಟೀಲ್, ಮೈಲಾರಪ್ಪ ಬೂದಿಹಾಳ, ಕನಕಗಿರಿಯ ಅಲ್ಲಾಗಿರಿರಾಜ್, ಸುರೇಶ ಕಂಬಳಿ, ಕಾರಟಗಿಯ ಬಿ.ಪೀರಬಾಷಾ, ಬಳ್ಳಾರಿಯ ಮಹೇಶ, ಕುಷ್ಟಗಿಯ ಕೆ.ಶರಣಪ್ಪ ನಿಡಶೇಶಿ, ಹನುಮೇಶ ಗುಮಗೇರಾ, ನಟರಾಜ ಸೋನಾರ, ಚಂದ್ರಪ್ಪ ಅಕ್ಕಿ, ಕನಕಗಿರಿಯ ಮನೋಹರ ಬೊಂದಡೆ ಕವಿಗೋಷ್ಠಿಯಲ್ಲಿ ಭಾಗವಹಿಸುವರು.
ವಿಚಾರ ಸಂಕಿರಣ;
  ಆನೆಗೊಂದಿ ಉತ್ಸವದ ನಿಮಿತ್ತ ವಿಚಾರ ಸಂಕಿರಣವನ್ನು ಜ. 09 ರಂದು ಮಧ್ಯಾಹ್ನ 02-30 ಗಂಟೆಗೆ ಆನೆಗೊಂದಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ (ಗಂಗಾವತಿ) ಅಶೋಕ ರಾಯ್ಕರ ಅವರು ಉದ್ಘಾಟನೆ ನೆರವೇರಿಸುವರು.  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೊಪ್ಪಳದ ಎಚ್.ಎಸ್. ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.  ಗಂಗಾವತಿಯ ಡಾ. ಶರಣಬಸಪ್ಪ ಕೋಲ್ಕಾರ ಅವರು ``ವಿಜಯನಗರ ಸ್ಥಾಪನೆಯಲ್ಲಿ ಆನೆಗೊಂದಿಯ ಪಾತ್ರ'' ಕುರಿತು, ಕೂಡ್ಲಿಗಿಯ ಡಾ. ಅರುಣ ಜೋಳದ ಅವರು ``ಗಂಡುಗಲಿ ಕುಮಾರ ರಾಮ'' ಕುರಿತು ಹಾಗೂ ಗುಂಡೂರ ಎಸ್.ವಿ. ಪಾಟೀಲ್ ಅವರು ``ಕೊಪ್ಪಳ ಜಿಲ್ಲೆಯ ರಂಗಭೂಮಿ'' ಕುರಿತು ವಿಷಯ ಮಂಡನೆ ಮಾಡುವರು.  ಪರಶುರಾಮಪ್ರಿಯ, ಡಾ. ಎಸ್.ವಿ. ಡಾಣಿ, ರಾಘವೇಂದ್ರ ದಂಡಿನ, ಮೆಹಬೂಬ ಹುಸೇನ, ಬಸವರಾಜ ಆಕಳವಾಡಿ ಹಾಗೂ ಎಸ್.ಬಿ. ಗೊಂಡಬಾಳರವರು ವಿಷಯ ಮಂಡನೆಯ ಬಗ್ಗೆ ಪ್ರತಿಕ್ರಿಯೆ ತಿಳಿಸುವರು.
ಸಾಂಸ್ಕೃತಿಕ ಕಾರ್ಯಕ್ರಮ;
  ಆನೆಗೊಂದಿ ಉತ್ಸವದ ನಿಮಿತ್ತ ಜ. 09 ರಂದು ಸಂಜೆ ಆನೆಗೊಂದಿಯ ಶ್ರೀಕೃಷ್ಣ ದೇವರಾಯ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.  ಸಂಜೆ 04 ರಿಂದ 04-10 ಗಂಟೆಯವರೆಗೆ ಬಿನ್ನಾಳದ ರಾಮಪ್ಪ ಫಕೀರಪ್ಪ  ಭಜಂತ್ರಿ ಅವರಿಂದ ಮಂಗಳ ವಾದ್ಯ, 04-10 ರಿಂದ 04-20 ರವರೆಗೆ ಯಾದಗಿರಿಯ ಅರ್ಜುನ ವಟಾರ ರಿಂದ ಶಾಸ್ತಿçಯ ಗಾಯನ, 04-20 ರಿಂದ 04-30 ರವರೆಗೆ ಯರೇಹಂಚಿನಾಳದ ಹನುಮಂತಪ್ಪ ಎಸ್. ನರೆಗಲ್ ರಿಂದ ಸುಗಮ ಸಂಗೀತ, 04-30 ರಿಂದ 04-45 ರವರೆಗೆ ಬಾಗಲಕೋಟೆಯ ವೆಂಕಪ್ಪ ಎ. ಸುಗತೇಕರ್ ರಿಂದ ಗೊಂದಳಿ ಗಾಯನ, 04-45 ರಿಂದ 05 ರವರೆಗೆ ಕುದರಿಮೋತಿಯ ಹನುಮಂತ ಕುಮಾರ್ ಮುದೋಳ್ ರಿಂದ ಶಾಸ್ತಿçÃಯ ವಾದ್ಯ ಸಂಗೀತ ಕಾರ್ಯಕ್ರಮ ನಡೆಯಲಿದೆ.  ಉತ್ಸವದ ಉದ್ಘಾಟನಾ ಸಮಾರಂಭದ ನಂತರ ಸಂಜೆ 06 ರಿಂದ 06-30 ರವರೆಗೆ ಗಂಗಾವತಿ ಬಿ. ಪ್ರಾಣೇಶ ಅವರಿಂದ ಹಾಸ್ಯೋತ್ಸವ ಕಾರ್ಯಕ್ರಮ, 06-30 ರಿಂದ 06-45 ರವರೆಗೆ ಕುಷ್ಟಗಿಯ ಶರಣಪ್ಪ ವಡಗೇರಿ ರಿಂದ ಜಾನಪದ ಹಾಡು, 06-45 ರಿಂದ 07 ಗಂಟೆಯವರೆಗೆ ಬೆಂಗಳೂರಿನ ನವಚೇತನ ನೃತ್ಯ ಕಲಾ ಅಕಾಡೆಮಿ ವತಿಯಿಂದ ರೂಪಕ ಕಾರ್ಯಕ್ರಮ, 07 ರಿಂದ 07-15 ರವರೆಗೆ ರಾಯಚೂರಿನ ಅಂಬಯ್ಯ ನೂಲಿ ರಿಂದ ಸುಗಮ ಸಂಗೀತ, 07-15 ರಿಂದ 07-30 ರವರೆಗೆ ಹೊಸಪೇಟೆಯ ಅಂಜಲಿ ಎಸ್. ಅಂಜಲಿ ನೃತ್ಯ ಕಲಾ ಕೇಂದ್ರದಿAದ ಶಾಸ್ತಿçÃಯ ನೃತ್ಯ, 07-30 ರಿಂದ 08 ಗಂಟೆಯವರೆಗೆ ಇಟಗಿಯ ಅರ್ಜುನ ರಿಂದ ರಸಮಂಜರಿ ಕಾರ್ಯಕ್ರಮ, 08 ರಿಂದ 09 ರವರೆಗೆ ಮೂಡಬಿದರಿಯ ನುಡಿಸಿರಿ ವಿರಾಸತ್ ಆಳ್ವಾಸ್ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ, 09 ರಿಂದ 09-10 ರವರೆಗೆ ಶಿರಗುಪ್ಪಾದ ಬಸವರಾಜ ಬಲಕುಂದಿ ರಿಂದ ಸಮೂಹ ನೃತ್ಯ, 09-10 ರಿಂದ 09-15 ರವರೆಗೆ ಕೊಪ್ಪಳದ ರುದ್ರೇಶ ಉಜ್ಜಿನಕೊಪ್ಪ ರಿಂದ ಸುಗಮ ಸಂಗೀತ, 09-15 ರಿಂದ 09-30 ರವರೆಗೆ ತೆಗ್ಗಿಹಾಳದ ರಾಮಪ್ಪ ಬಿ. ಚೌಡ್ಕಿ ರಿಂದ ಚೌಡ್ಕಿಪದಗಳು, 09-30 ರಿಂದ 09-45 ರವರೆಗೆ ಹುಬ್ಬಳ್ಳಿಯ ರೋಹಿಣಿ ಇಮರಾತಿ ರಿಂದ ಸಮೂಹ ನೃತ್ಯ, 9-45 ರಿಂದ 100 ಗಂಟೆಯವರಗೆ ಗಂಗಾವತಿಯ ಸಂಗೀತ ಶರಣಪ್ಪ ಅವರಿಂದ ಸುಗಮ ಸಂಗೀತ, 10-00 ರಿಂದ 12 ಗಂಟೆಯವರಗೆ ಬೆಂಗಳೂರಿನ ವಿಜಯ ಪ್ರಕಾಶ ಹಾಗೂ ತಂಡದಿAದ ಕಾರ್ಯಕ್ರಮ ಜರುಗಲಿವೆ.
ಜ. 09 ರಂದು ಮಧ್ಯಾಹ್ನ 3-45 ಗಂಟೆಗೆ ಆನೆಗೊಂದಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರಣ್ಯ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ನೆರವೇರಿಸುವರು.  ಸಂಜೆ 04 ಗಂಟೆಯಿAದ 04-15 ರವರೆಗೆ ಕೊಪ್ಪಳದ ರಾಮಚಂದ್ರಪ್ಪ ಉಪ್ಪಾರ ಅವರಿಂದ ಶಾಸ್ತಿçÃಯ ಗಾಯನ, 04-15 ರಿಂದ 04-30 ರವರೆಗೆ ಬಳ್ಳಾರಿಯ ಲಕ್ಷಿö್ಮà ಕಲಾಕ್ಷೇತ್ರ ಅವರಿಂದ ಜಾನಪದ ನೃತ್ಯ, 04-30 ರಿಂದ 04-45 ರವರೆಗೆ ಕಲ್ಲೂರಿನ ರಾಚಯ್ಯ ಗವಾಯಿ ಅವರಿಂದ ಸುಗಮ ಸಂಗೀತ, 04-45 ರಿಂದ 05 ರವರೆಗೆ ನವಲಿಯ ಸ್ವಾಮಿವಿವೇಕಾನಂದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಲಾ ಸಂಘ(ರಿ), 05-00 ರಿಂದ 05-30 ರವರೆಗೆ ಗಂಗಾವತಿಯ ವಿದ್ಯಾಶ್ರೀ ಸಾಲಿಮಠ ಅವರಿಂದ  ಶಾಸ್ತಿçÃಯ ಗಾಯನ, 05-30 ರಿಂದ 05-45 ರವರೆಗೆ ಭಾಗ್ಯನಗರದ ದೀಕ್ಷಾ ನಾಟ್ಯ ಕಲಾ ಸಂಸ್ಥೆ ಅವರಿಂದ ಸಮೂಹ ನೃತ್ಯ, 05-45 ರಿಂದ 06 ರವರೆಗೆ ಹಾಬಲಕಟ್ಟಿಯ ದಾವಲಸಾಬ ಅತ್ತಾರ ಅವರಿಂದ  ಜಾನಪದ ಹಾಡು, 06 ರಿಂದ 06-15 ರವರೆಗೆ ಹೊಸಳ್ಳಿಯ ನಾಟ್ಯ ತರಬೇತಿ ಕೇಂದ್ರದ ವತಿಯಿಂದ  ಶಾಸ್ತಿçÃಯ ನೃತ್ಯ,  06-15 ರಿಂದ 06-30 ರವರೆಗೆ ಗಂಗಾವತಿಯ ಆರಾಧನಾ ನೃತ್ಯಕಲಾ ತಂಡದವರಿAದ ಸಮೂಹ ನೃತ್ಯ, 06-30 ರಿಂದ 06-45 ರವರೆಗೆ ಗಂಗಾವತಿಯ ಪಂಚಾಕ್ಷರ ಕುಮಾರ ಅವರಿಂದ ಸುಗಮ ಸಂಗೀತ, 06-45 ರಿಂದ 07-00 ರವರೆಗೆ ಹನುಮಸಾಗರದ ಕೆ.ಜಿ.ಬಿ.ವಿ. ವಸತಿ ಶಾಲೆ ವತಿಯಿಂದ ಯುಗಳ ನೃತ್ಯ, 07ರಿಂದ 07-30ರವರಗೆ ಬಳ್ಳಾರಿಯ ಸೌಮ್ಯಶ್ರೀ ಹಾಗೂ ತಂಡದವರಿAದ ರೂಪಕ, 07-30 ರಿಂದ 07-40 ರವರೆಗೆ ಗಂಗಾವತಿಯ ಗೋವಿಂದರಾಜ ಬೊಮ್ಮಲಾಪುರ ಅವರಿಂದ ಶಾಸ್ತಿçÃಯ ವಾದ್ಯ ಸಂಗೀತ, 07-40 ರಿಂದ 07-50 ರವರೆಗೆ ತಳಕಲ್ ನಾದನೃತ್ಯ ವಿದ್ಯಾಸಂಸ್ಥೆ ಅವರಿಂದ ಶಾಸ್ತಿçÃಯ ನೃತ್ಯ, 07-50 ರಿಂದ 08 ರವರೆಗೆ ಕೊಪ್ಪಳದ ಅಂಬಣ್ಣ ಕೊಪ್ಪರದ ಅವರಿಂದ ಕೊಳಲು ವಾದನ, 08 ರಿಂದ 08-10 ರವರೆಗೆ ಗಂಗಾವತಿಯ ಈ. ವಿನೋದ ಅವರಿಂದ ಸುಗಮ ಸಂಗೀತ, 08-10 ರಿಂದ 08-40ರವರಗೆ ರಾಯಚೂರಿನ ಓಂ ಜ್ಯೋತಿ ಇನಾಂದಾರ ಅವರಿಂದ ಭರತನಾಟ್ಯ, 08-40 ರಿಂದ 08-50 ರವರೆಗೆ ಕುಷ್ಟಗಿಯ ವಾಲ್ಮಿಕಪ್ಪ ಯಕ್ಕರನಾಳ ಅವರಿಂದ ಜಾನಪದ ಗಾಯನ, 08-50 ರಿಂದ 09 ರವರೆಗೆ ಭಾಗ್ಯನಗರದ ಪಾಂಡುರAಗ ಎ. ಎಮ್. ಅವರಿಂದ ಜಾನಪದ ನೃತ್ಯ, 09 ರಿಂದ 09-10 ರವರೆಗೆ ಗದಗ ಪರಶುರಾಮ ದೊಡ್ಡಮನಿ ಅವರಿಂದ ಶಾಸ್ತಿçÃಯ ಸಂಗೀತ, 09-10 ರಿಂದ 09-20 ರವರೆಗೆ ಕಾರಟಗಿಯ ಶ್ರೀ ಶರಣಬಸವೇಶ್ವರ ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲೆ ಅವರಿಂದ ಜಾನಪದ ನೃತ್ಯ (ಹಾಲಕ್ಕಿ ಬುಡಕಟ್ಟು),09-20 ರಿಂದ 09-30 ರವರೆಗೆ ಗಂಗಾವತಿಯ ಶಿವಪ್ಪ ಹುಳ್ಳಿ ಅವರಿಂದ ಸುಗಮ ಸಂಗೀತ, 09-30 ರಿಂದ 09-40ರವರಗೆ ಬನ್ನಿಕೊಪ್ಪದ ಸುಧಾ ಆರ್. ಮುತ್ತಾಳ ಅವರಿಂದ ಸುಗ್ಗಿ ಕುಣಿತ, 09-40 ರಿಂದ 09-50 ರವರೆಗೆ ತಾವರಗೇರಾದ ತಿಪ್ಪಣ್ಣ ಅಂಬಾಜಿ ಸುಗತೇಕರ ಅವರಿಂದ ಜಾನಪದ ಹಾಡು, 09-45 ರಿಂದ 11 ರವರೆಗೆ ಅರಳಿಹಳ್ಳಿಯ ಶರಣಯ್ಯ ಶೇಖರಯ್ಯ ಕುಂದಕೂರ ಅವರಿಂದ ನಾಟಕ (ಆನೆಗೊಂದಿ ಸಂಗಮ ಅರಸರ ವಿಜಯ), 11  ರಿಂದ 12 ರವರೆಗೆ ಆನೆಗೊಂದಿಯ ವಿದ್ಯಾರಣ್ಯ ಬಯಲಾಟ ಕಲಾತಂಡದಿAದ ಬಯಲಾಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಮಹಿಳಾ ಗೋಷ್ಠಿ;
ಜ. 10 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಮಹಿಳಾ ಗೋಷ್ಠಿ ನಡೆಯಲಿದ್ದು, ಗಂಗಾವತಿಯ ಡಾ. ಮುಮತಾಜ ಬೇಗಂ ಉದ್ಘಾಟಿಸುವರು. ಕೊಪ್ಪಳದ ವಿಮಲಾ ಇನಾಮದಾರ ಅಧ್ಯಕ್ಷತೆ ವಹಿಸುವರು. ಕೊಪ್ಪಳದ ಗೌರಮ್ಮ ದೇಸಾಯಿ ಮಹಿಳಾ ದೌರ್ಜನ್ಯ ಸಾಮಾಜಿಕ ನಿಲುವು ಕುರಿತಾಗಿ, ಸಾವಿತ್ರಿ ಮುಜುಮದಾರ ಕೊಪ್ಪಳ ಜಿಲ್ಲೆಯ ಮಹಿಳೆಯರ ಸ್ಥಿತಿಗತಿ ಕುರಿತಾಗಿ, ಅರುಣಾ ನರೇಂದ್ರ ಸಾಹಿತ್ಯಕ್ಕೆ ಕೊಪ್ಪಳ ಜಿಲ್ಲೆಯ ಮಹಿಳೆಯರ ಕೊಡುಗೆ ಕುರಿತಾಗಿ ವಿಷಯ ಮಂಡಿಸುವರು. ವಿಜಯಲಕ್ಷಿö್ಮÃ ಕೊಟಗಿ, ಡಾ. ವಾಣಿಶ್ರೀ ಪಾಟೀಲ್, ಲಕ್ಷಿö್ಮÃದೇವಿ ಪತ್ತಾರ, ಅರ್ಚನಾ ಗಣಪ ಆದಾಪೂರ, ಕೋಮಲಾ ಕುದರಿಮೋತಿ ಅವರು ಪ್ರತಿಕ್ರಿಯೆ ನೀಡುವರು.
ಯುವ ಗೋಷ್ಠಿ;
ಜ. 10 ರಂದು ಮಧ್ಯಾಹ್ನ 2.30 ಗಂಟೆಗೆ ಯುವ ಗೋಷ್ಠಿ ನಡೆಯಲಿದ್ದು, ಸೋಮರೆಡ್ಡಿ ಅಳವಂಡಿ ಅಧ್ಯಕ್ಷತೆ ವಹಿಸುವರು. ಶಂಕ್ರಯ್ಯ ಅಬ್ಬಿಗೇರಿಮಠ ಹೊಸ ಕಾಲದಲ್ಲಿ ಯುವಜನತೆ ಕುರಿತಾಗಿ, ಮಂಜುನಾಥ ಜಿ. ಗೊಂಡಬಾಳ ಕೊಪ್ಪಳ ಜಿಲ್ಲೆಯ ಯುವ ಸಂಘಟನೆ ಕುರಿತಾಗಿ, ಡಾ. ರಾಜಶೇಖರ ನಾರನಾಳ ಪ್ರಸಾರ ಮಾಧ್ಯಮದಲ್ಲಿ ಯುವ ಶಕ್ತಿ ಕುರಿತಾಗಿ ವಿಷಯ ಮಂಡಿಸುವರು. ದೇವು ನಾಗನೂರ, ರಾಮಮೂರ್ತಿ ನವಲಿ, ಡಾ. ನಾಗರಾಜ ಹಿರಾ, ಪವನ ಕುಮಾರ ಅವರು ಪ್ರತಿಕ್ರಿಯೆ ನೀಡುವರು.

ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭ
  ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭವನ್ನು ಜನವರಿ 10 ರಂದು ಸಂಜೆ 06 ಗಂಟೆಗೆ ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಉಪಮುಖ್ಯ ಮಂತ್ರಿಗಳು, ಸಾರಿಗೆ ಮತ್ತು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸಂಗಪ್ಪ ಸವದಿ ಅವರು ಸಮಾರೋಪ ಸಮಾರಂಭದ ಉದ್ಘಾಟನೆ ಮಾಡುವರು. ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕೊಪ್ಪಳ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ ರೆಡ್ಡಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ವಿಜಯನಗರದ ಅರಸು ಮನೆತನದವರಾದ ಲಲಿತಾರಾಣಿ ಶ್ರೀರಂಗದೇವರಾಯಲು ಆಗಮಿಸುವರು.  

ಶ್ರೀ ಕೃಷ್ಣ ದೇವರಾಯ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ;

  ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ; ಸಂಜೆ 04 ರಿಂದ 04-15 ರವರೆಗೆ ಇಲಕಲ್‌ನ ಗಣೇಶ ಎನ್. ರಾಯಬಾಗಿ ಅವರಿಂದ ಸುಗಮ ಸಂಗೀತ, 04-10 ರಿಂದ 04-20 ರವರೆಗೆ ಬೆಂಗಳೂರಿನ ಭೂಮಿಕಾ ನೃತ್ಯ ಹಾಗೂ ಸಂಗೀತ ಶಾಲೆಯಿಂದ ಜಾನಪದ ನೃತ್ಯ, 04-20 ರಿಂದ 04-30 ರವರೆಗೆ ಗಂಗಾವತಿಯ ವಿರುಪಾಕ್ಷಪ್ಪ ಇಟಗಿ ಅವರಿಂದ ಶಾಸ್ತಿçÃಯ ಗಾಯನ, 04-30 ರಿಂದ 04-45 ರವರೆಗೆ ಬೆಂಗಳೂರಿನ ಎಸ್.ಸ್ಮೃತಿ ಹಾಗೂ ತಂಡದವರಿAದ ಶಾಸ್ತಿçÃಯ ನೃತ್ಯ,  04-45 ರಿಂದ 05 ರವರೆಗೆ ಧಾರವಾಡದ ಸುಜಾತ ಗುರವ್ ಅವರಿಂದ ಶಾಸ್ತಿçÃಯ ಸಂಗೀತ, 05 ರಿಂದ 05-15 ರವರೆಗೆ ಧಾರವಾಡದ ವಿಜೇತಾ ವರ್ಣೇಕರ ಅವರಿಂದ ಸಮೂಹನೃತ್ಯ, 05-15 ರಿಂದ 05-25 ರವರೆಗೆ ಕಿನ್ನಾಳನ ಬಾಷು ಆರ್. ಹಿರೇಮನಿ ಅವರಿಂದ ಸುಗಮ ಸಂಗೀತ, 05-25 ರಿಂದ 05-35 ರವರೆಗೆ ಬೆಂಗಳೂರಿನ ಜೆ. ನಾಗೇಶ ಶ್ರೀ ನಾಟ್ಯಭಾರತಿ ಟ್ರಸ್ಟ ಅವರಿಂದ ಶಾಸ್ತಿçÃಯ ನೃತ್ಯ, 05-35 ರಿಂದ 05-50 ರವರೆಗೆ ವಿಜಯಪುರ ಶಶಿಕಲಾ ಶ್ರೀಕಾಂತ ಕುಲಹಳ್ಳಿ ಅವರಿಂದ ಸುಗಮ ಸಂಗೀತ, 05-50 ರಿಂದ 06 ರವರೆಗೆ ಯಲಬುರ್ಗಾದ ಮಾರೆಪ್ಪ ಮಾರೆಪ್ಪ ಚನ್ನದಾಸರ ಅವರಿಂದ ಜಾನಪದ ಹಾಡು, 06 ರಿಂದ 06-30 ರವರೆಗೆ ಆನೆಗೊಂದಿ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ, 06-30 ರಿಂದ 06-40 ರವರೆಗೆ ಹುಲಿಗಿ ನಾಟ್ಯನಾದ ಕಲಾಸಂಘ ಅವರಿಂದ ಶಾಸ್ತಿçÃಯ ನೃತ್ಯ, ರಾತ್ರಿ 06-40 ರಿಂದ 06-50 ರವರೆಗೆ ಬೆಂಗಳೂರಿನ ನಾಗಚಂದ್ರಿಕಾ ಭಟ್ ಅವರಿಂದ ಗಜಲ್ ಗಾಯನ, 06-50 ರಿಂದ 07 ರವರೆಗೆ ಆನೆಗೊಂದಿ ಚಂಪಕಮಾಲಾ ಅವರಿಂದ ಸುಗಮ ಸಂಗೀತ, ರಾತ್ರಿ 07 ರಿಂದ 07-30 ರವರೆಗೆ ಕೊಪ್ಪಳದ ಗಂಗಮ್ಮ ದೊಡ್ಡಮನಿ ಅವರಿಂದ ಯುಗಳ ಗೀತೆ, 07-30 ರಿಂದ 07-45 ರವರೆಗೆ ಧಾರವಾಡದ ಮಲ್ಲಪ್ಪ ಹೊಂಗಲ್ ಅವರಿಂದ ನಗೆ ಹಬ್ಬ, 07-45 ರಿಂದ 08 ರವರೆಗೆ ಗಂಗಾವತಿಯ ಆಹಾ ಸಂಗೀತA ಶಿಕ್ಷಕರ ಕಲಾ ತಂಡ ಅವರಿಂದ ಜಾನಪದ ಹಾಡು, 08 ರಿಂದ 08-15 ರವರೆಗೆ  ಕುಷ್ಟಗಿಯ ಎಸ್.ಎಸ್. ಹಿರೇಮಠ (ತಬಲಾ ಸೋಲೋ) ಅವರಿಂದ ಶಾಸ್ತಿçÃಯ ವಾದ್ಯ ಸಂಗೀತ, 08-15 ರಿಂದ 08-30 ರವರೆಗೆ ಕೊಪ್ಪಳದ ಹೇಮಂತ ಕುಮಾರ ಹಾಗೂ ಸಂಗಡಿಗರು ಅವರಿಂದ ಯುಗಳ ಸಂಗೀತ, 08-30 ರಿಂದ 08-40 ರವರೆಗೆ ಕೊಪ್ಪಳದ ಜಿಲ್ಲಾ ನಾಗರಿಕರ ವೇದಿಕೆ ಅವರಿಂದ ಜಾನಪದ ನೃತ್ಯ, 08-40 ರಿಂದ 08-50 ರವರೆಗೆ ಭಾಗ್ಯನಗರದ ನಾಗರಾಜ ಶ್ಯಾವಿ ಅವರಿಂದ ಬಾನ್ಸುರಿ ವಾದನ, 08-50 ರಿಂದ 09 ರವರೆಗೆ ಬಿನ್ನಾಳನ ಶಂಕ್ರಪ್ಪ ಬಿನ್ನಾಳ ಅವರಿಂದ ಶಾಸ್ತಿçÃಯ ವಾದ್ಯ ಸಂಗೀತ, 09 ರಿಂದ 09-15 ರವರೆಗೆ ಗಂಗಾವತಿಯ ಚಂದ್ರಕಲಾ ಭೂಮಿ ಟ್ರಸ್ಟ ಅವರಿಂದ ಸಮೂಹ ನೃತ್ಯ, 09-15 ರಿಂದ 09-30 ರವರೆಗೆ ದಾದಾಪೀರ ಮಂಜರ್ಲಾ ಅವರಿಂದ ಜನಪದ ಸಂಗೀತ, 09-30 ರಿಂದ 09-45 ರವರೆಗೆ ಮಾರುತೇಶ ಮೆಣೆದಾಳ ಅವರಿಂದ ವಚನಗಾಯನ, 09-45 ರಿಂದ 10 ರವರೆಗೆ ಬಿನ್ನಾಳನ ಮಾರುತಿ ಬಿ. ದೊಡ್ಡಮನಿ ಅವರಿಂದ ಶಾಸ್ತಿçÃಯ ಗಾಯನ, 10ರಿಂದ 10-25 ರವರೆಗೆ ಮೊರನಾಳದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳಿಕ್ಯಾತರ ಅವರಿಂದ ತೊಗಲು ಗೊಂಬೆಯಾಟ,  10-25 ರಿಂದ 11-25 ರವರೆಗೆ ಹನುಮನಹಳ್ಳಿಯ ಕುಬೇರಪ್ಪ ಬಡಿಗೇರ ಅವರಿಂದ ನಾಟಕ (ಗಂಡುಗಲಿ ಕುಮಾರರಾಮ), 11-25 ರಿಂದ 12 ರವರೆಗೆ ಮೊರನಾಳ ಶಂಕ್ರಪ್ಪ ಹೊರಪೇಟೆ ಅವರಿಂದ ಬಯಲಾಟ (ಕುಶಲವರ ಕಾಳಗ) ಕಾರ್ಯಕ್ರಮ ನಡೆಯಲಿವೆ.

ಶ್ರೀ ವಿದ್ಯಾರಣ್ಯ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ;
 ಜ. 10 ರಂದು  ಸಂಜೆ 04 ರಿಂದ 04-15 ರವರೆಗೆ ಗಂಗಾವತಿಯ ಪ್ರಿಯಾಂಕ ನವಲಿ ಹಿರೇಮಠ ಅವರಿಂದ ಸಮೂಹ ನೃತ್ಯ, 04-15 ರಿಂದ 04-30 ರವರೆಗೆ ಸಿದ್ದಾಪುರದ ಶಿವಕುಮಾರ ಜಿ. ಮಹಾಂತ ಅವರಿಂದ ಸುಗಮ ಸಂಗೀತ, 04-30 ರಿಂದ 04-45 ರವರೆಗೆ ಕೊಪ್ಪಳದ ಕೆ. ನವೀನ ಹಾಗೂ ತಂಡ ಅವರಿಂದ ಶಾಸ್ತಿçÃಯ ನೃತ್ಯ, 04-45 ರಿಂದ 05 ರವರೆಗೆ ಮಂಗಳೂರು ಹನುಮಂತಪ್ಪ ಮುದುಕಪ್ಪ ಭಜಂತ್ರಿ ಅವರಿಂದ ಕ್ಲಾರಿಯೋನೆಟ್ ವಾದನ, 05 ರಿಂದ 05-15 ರವರೆಗೆ ಭಾಗ್ಯನಗರದ ಶಕುಂತಲಾ ಬೆನ್ನಾಳ ಅವರಿಂದ ಶಾಸ್ತಿçÃಯ ಗಾಯನ, 05-15 ರಿಂದ 5-30 ರವರೆಗೆ ಹಿರೇನಂದಿಹಾಳದ ಬಾಲನಗೌಡ ಯಮನಗೌಡ ಹಾದಿಮನಿ ಅವರಿಂದ ಜಾನಪದ ಹಾಡು, 05-30 ರಿಂದ 05-45 ರವರೆಗೆ ಮುನಿರಾಬಾದನ ನೇಹಾ ನಾಗರಾಜ ಅವರಿಂದ ಶಾಸ್ತಿçÃಯ ನೃತ್ಯ, 05-45 ರಿಂದ 06 ರವರೆಗೆ ಆದರಗುಂಚಿ ಗಂಗಾಧರ ಮಹಾಂತ ಅವರಿಂದ ಸುಗಮ ಸಂಗೀತ, 06 ರಿಂದ 06-15 ರವರೆಗೆ ಹನುಮಸಾಗರದ ವಾಣಿಶ್ರೀ ಮಚಗಾರ ಅವರಿಂದ ವಯೋಲಿನ್ ವಾದನ, 06-15 ರಿಂದ 06-30 ರವರೆಗೆ ಗಂಗಾವತಿಯ ನಟರಾಜ ನೃತ್ಯಕಲಾಸಂಘ ಅವರಿಂದ ಸಮೂಹನೃತ್ಯ, 06-30 ರಿಂದ 06-45 ರವರೆಗೆ ತಾವರಗೇರಾದ ಶಿವರಾಜ ಶಾಸ್ತಿç ರಾಂಪೂರ ಅವರಿಂದ ಕಥಾ ಕೀರ್ತನ, 06-45 ರಿಂದ 07 ರವರೆಗೆ ನವಲಿ ಹನುಮಂತಪ್ಪ ಭಜಂತ್ರಿ ಅವರಿಂದ ವಚನ ಗಾಯನ, 07 ರಿಂದ 07-15 ರವರೆಗೆ ಕೊಪ್ಪಳದ ಬಸನಗೌಡ ಪರಮೇಶ್ವರಪ್ಪ ಮರೇಗೌಡರ ಅವರಿಂದ ಸುಗಮ ಸಂಗೀತ, 07-15 ರಿಂದ 07-30 ರವರೆಗೆ ಗಂಗಾವತಿಯ ವಾರುಣಿ ನವಲಿ ಹಾಗೂ ತಂಡದವರಿAದ ಸಮೂಹನೃತ್ಯ, 07-30 ರಿಂದ 07-45 ರವರೆಗೆ ಕುಣಿಕೇರಿ ತಾಂಡಾದ ಪದ್ಮಪ್ರಿಯ ಹಾಗೂ ತಂಡದವರಿAದ ಲಂಬಾಣಿ ನೃತ್ಯ, 07-45 ರಿಂದ 08 ರವರೆಗೆ ಕಿನ್ನಾಳ  ಲಚ್ಚಪ್ಪ ಹಳೆಪೇಟೆ ಅವರಿಂದ ಶಾಸ್ತಿçÃಯ ಗಾಯನ, ರಾತ್ರಿ 08 ರಿಂದ 08-10 ರವರೆಗೆ ಗಂಗಾವತಿಯ ಆರಾಧನಾ ನೃತ್ಯಕಲಾ ತಂಡದಿAದ ಶಾಸ್ತಿçÃಯ ನೃತ್ಯ, 08-10 ರಿಂದ 08-20 ರವರೆಗೆ ಬಳ್ಳಾರಿಯ ಸಮೀರ ಹಾಗೂ ತಂಡದಿAದ ಜಾನಪದ ನೃತ್ಯ, 08-20 ರಿಂದ 08-40 ರವರೆಗೆ ಮೊರನಾಳ ಯಂಕಪ್ಪ ಶಿಳ್ಳೆಕ್ಯಾತರ ಅವರಿಂದ ತೊಗಲು ಗೊಂಬೆಯಾಟ, 08-40 ರಿಂದ 08-50 ರವರೆಗೆ ಗಂಗಾವತಿಯ ಹೆಚ್. ಭಾವನಾ ಅವರಿಂದ ಭರತನಾಟ್ಯ, 08-50 ರಿಂದ 09 ರವರೆಗೆ ಮುನಿರಾಬಾದನ ಶೃತಿ ಹ್ಯಾಟಿ ಅವರಿಂದ ಶಾಸ್ತಿçÃಯ ಗಾಯನ, 09 ರಿಂದ 09-10 ರವರೆಗೆ ಗಂಗಾವತಿಯ ರಮ್ಯಾ ದೇವರಾಜ ಪೊಲೀಸ್ ಪಾಟೀಲ್ ಅವರಿಂದ ಶಾಸ್ತಿçÃಯ ನೃತ್ಯ, 09-10 ರಿಂದ 09-20 ರವರೆಗೆ ನರಸಿಂಹ ದರೋಜಿ ಅವರಿಂದ ಸುಗಮ ಸಂಗೀತ, 09-20 ರಿಂದ 09-30 ರವರೆಗೆ ಸಿದ್ದಪ್ಪ ಶಿವಪ್ಪ ಭಜಂತ್ರಿ ಅವರಿಂದ ಶಾಸ್ತಿçÃಯ ವಾದ್ಯಸಂಗೀತ, 09-30 ರಿಂದ 09-40 ರವರೆಗೆ ಆನೆಗೊಂದಿಯ ಸಂಜನಾ ಅವರಿಂದ ಭರತನಾಟ್ಯ, 09-40 ರಿಂದ 11 ರವರೆಗೆ ಚಿಕ್ಕಬಿಡನಾಳದ ವಿಸ್ತಾರ ರಂಗ ಶಾಲೆಯಿಂದ ನಾಟಕ, 11 ರಿಂದ 12 ರವರೆಗೆ ಕೊಪ್ಪಳದ ಪ್ರಕಾಶಗೌಡ ಹಾಗೂ ತಂಡದವರಿAದ ನಾಟಕ-(ಹೈ-ಕ ನಿವಾಸ#371) ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
========

ಆನೆಗೊಂದಿ ಉತ್ಸವ ಕ್ರೀಡಾಕೂಟ : ಕುಸ್ತಿ ಸ್ಪರ್ಧೆ

ಆನೆಗೊಂದಿ ಉತ್ಸವ ಕ್ರೀಡಾಕೂಟ
ಕೊಪ್ಪಳ : ಆನೆಗೊಂದಿ ಉತ್ಸವದ ಅಂಗವಾಗಿ ಜನವರಿ. ೦೮ ರಂದು ಉತ್ಸವದ ಮುಖ್ಯ ವೇದಿಕೆ ಹತ್ತಿರ ಮಹಿಳೆಯರಿಗಾಗಿ ೪೫ ಕೆ.ಜಿ, ೫೦ ಕೆ.ಜಿ ಹಾಗೂ ೫೫ ಕೆ.ಜಿ ವಿಭಾಗದಲ್ಲಿ ಕುಸ್ತಿ ಸ್ಪರ್ಧೆ ಜರುಗಲಿವೆ ಎಂದು ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
=========

Monday, 6 January 2020

ಪುರುಷರ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾವಳಿಗಳಿಗೆ ಜಿ.ಪಂ. ಸಿಇಒ ಚಾಲನೆ

ಕೊಪ್ಪಳ ಜ. 06 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಅಂಗವಾಗಿ ಆನೆಗೊಂದಿಯ ಸರಕಾರಿ ಪ್ರೌಢಶಾಲೆಯಲ್ಲಿ ಇಂದು (ಜ.6) ನಡೆದ ಪುರುಷರ ಮತ್ತು ಮಹಿಳಿಯೆರ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಅವರು ಚಾಲನೆ ನೀಡಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಸ್ವನಾಥರೆಡ್ಡಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಅವರು ವಾಲಿಬಾಲ್ ಸ್ಪರ್ಧಾಳುಗಳೊಂದಿಗೆ ಆಟವಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು.  ಉಪವಿಭಾಗಾಧಿಕಾರಿ ಸಿ.ಡಿ ಗೀತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶಿಲ್ದಾರ ಚಂದ್ರಶೇಖರ ಮಾಲಗಿತ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಲ್.ಡಿ ಚಂದ್ರಕಾAತ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್, ಬಿ.ಇ.ಓ ಸೋಮಶೇಖರ್ ಗೌಡ, ಆನೆಗೊಂದಿ ಗ್ರಾ.ಪಂ. ಅಧ್ಯಕ್ಷೆ ಅಂಜನಾದೇವಿ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಂದ್ಯಾವಳಿ ವಿವರ;
  ಮಹಿಳೆಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು.  ಮೊದಲ ಸೆಮಿಪೈನಲ್ ಪಂದ್ಯದಲ್ಲಿ ಹಣಾಹಣಿಯಾದ ಡಿಸ್ಟಿಕ್ ಸರ್ವೀಸ್ ಕೊಪ್ಪಳ ತಂಡದ ವಿರುದ್ದ ಡಿಸ್ ರೋಸ್ ಬರ್ಡ್ ಎ ಬೆಂಗಳೂರು ತಂಡ ನೇರ 2 ಸೆಟ್ ಗಳಲ್ಲಿ ಜಯಗಳಿಸಿ ಫೈನಲ್ ತಲುಪಿದರು.  ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೆ.ಎಸ್.ಸಿ ಗಂಗಾವತಿ ತಂಡದ ವಿರುದ್ದ ಡಿಸ್ಟಿಕ್ ಯುತ್ ಸರ್ವೀಸ್ ಕೊಪ್ಪಳ ಎ ತಂಡ ಜಯಗಳಿಸಿ 2 ನೇ ಸ್ಥಾನ ಪಡೆಯಿತು.  ಫೈನಲ್ ಪಂದ್ಯದಲ್ಲಿ ಡಿಸ್ಟಿಕ್ ಸರ್ವಿಸ್ ಕೊಪ್ಪಳ ಎ ತಂಡದ ವಿರುದ್ದ ರೋಸ್ ಬರ್ಡ್ ಬೆಂಗಳೂರು ತಂಡ 2 ನೇರ ಸೆಟ್ ಗಳಿಂದ ಜಯ ಸಾಧಿಸಿತು.  3ನೇ ಸ್ಥಾನಕ್ಕಾಗಿ ಕೆ.ಎಸ್.ಸಿ ಗಂಗಾವತಿ ತಂಡದ ವಿರುದ್ದ ಡಿಸ್ಟಿಕ್ ಯುತ್ ಸರ್ವಿಸ್ ಕೊಪ್ಪಳ ಬಿ ತಂಡ ಜಯಸಾಧಿಸಿ 3ನೇ ಸ್ಥಾನವನ್ನು ಪಡೆದುಕೊಂಡಿತು.  ಪುರುಷರ ಪಂದ್ಯಾವಳಿ ಇನ್ನೂ ನಡೆಯುತ್ತಿದ್ದು, ಫಲಿತಾಂಶ ಬರಲಿದೆ ಎಂದು ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ. ನಾಡಗೀರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=========

ಆನೆಗೊಂದಿ ಉತ್ಸವ : ಕಿಷ್ಕಿಂದ ಪಾರಂಪರಿಕ ಸೈಕಲ್ ಜಾಥಕ್ಕೆ DC ಚಾಲನೆ

ಕೊಪ್ಪಳ ಜ. 06 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಆನೆಗೊಂದಿಯಲ್ಲಿ ಇಂದು (ಜ.6) ಹಮ್ಮಿಕೊಳ್ಳಲಾದ ``ಕಿಷ್ಕಿಂದ ಪಾರಂಪರಿಕ ಸೈಕಲ್ ಜಾಥ''ಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಸ್ವನಾಥರೆಡ್ಡಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಾವು ಸಹ ಈ ಜಾಥದಲ್ಲಿ ಭಾಗಿಯಾಗಿದ್ದು, ವಿಶೇಷವಾಗಿತ್ತು.  ಉಪವಿಭಾಗಾಧಿಕಾರಿ ಸಿ.ಡಿ ಗೀತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶಿಲ್ದಾರ ಚಂದ್ರಶೇಖರ ಮಾಲಗಿತ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಲ್.ಡಿ ಚಂದ್ರಕಾAತ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್, ಬಿ.ಇ.ಓ ಸೋಮಶೇಖರ್ ಗೌಡ, ಆನೆಗೊಂದಿ ಗ್ರಾ.ಪಂ. ಅಧ್ಯಕ್ಷೆ ಅಂಜನಾದೇವಿ ಸೇರಿದಂತೆ ಪೋಲಿಸ್ ಸಿಬ್ಬಂದಿ, ಸಾರ್ವಜನಿಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸೈಕಲ್ ಜಾಥಾ;
  ಈ ಪಾರಂಪರಿಕ ಸೈಕಲ್ ಜಾಥದಲ್ಲಿ ಒಟ್ಟು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಹಿರಿಯರು, ಸರ್ಕಾರಿ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿ ಸೇರಿದಂತೆ ಹಲವರು ಜಾಥದಲ್ಲಿ ಪಾಲ್ಗೊಂಡಿದ್ದರು.  ಸೈಕಲ್ ಜಾಥವು ಆನೆಗೊಂದಿಯ ರಂಗನಾಥ ದೇವಸ್ಥಾನದಿಂದ ಆರಂಭವಾಗಿ ಗಗನ್ ಮಹಲ್, ಕೃಷ್ಣದೇವರಾಯ ವೃತ್ತ, ದುರ್ಗಾ ದೇವಸ್ಥಾನದಿಂದ ಚಿಕ್ಕರಾಂಪೂರ ಮಾರ್ಗವಾಗಿ ಪಂಪ ಸರೋವರ, ಅಂಜಿನಾದ್ರಿ ಪರ್ವತದಿಂದ ಹನುಮನಹಳ್ಳಿ ಮಾರ್ಗವಾಗಿ ಋಷಿಮುಖ ಪರ್ವತದಿಂದ ಸೇತುವೆ ಬಳಿಯ ಕಿಷ್ಕಿಂದ ರಸ್ತೆಯ ಬಳಿಗೆ ಸೇರಿ, ಅಲ್ಲಿಂದ ಮತ್ತೆ ವಾಪಸಾಗಿ ಅಂಜನಾದ್ರಿ ಪರ್ವತದ ಬಳಿ ಎಲ್ಲ ವಿದ್ಯಾರ್ಥಿಗಳಿಗೆ ಗುಲ್ಕೋಸ್ ಪೌಡರ್ ನೀಡಲಾಯಿತು.  
ನಂತರ ಅಲ್ಲಿಂದ ಹಿಂತಿರುಗಿ ಹುಚ್ಚಪಯ್ಯನ ಮಠದ ಬಳಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ಸಮಾರೋಪವಾಯಿತು.  ಎಲ್ಲ ವಿದ್ಯಾರ್ಥಿಗಳಿಗೆ, ಅಧಿಕಾರಿಗಳಿಗೆ ಅಲ್ಪ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಜಾಥದ ಸಂದರ್ಭದಲ್ಲಿ ಕಾಡು ಬೆಳಸಿ, ನಾಡು ಉಳಿಸಿ, ಸ್ವಚ್ಚ ಭಾರತ ಶ್ರೇಷ್ಠ ಭಾರತ, ಹಸಿರೆ ಉಸಿರು, ಕಡಿದರೆ ಮರ ಬರುವುದು ಬರ, ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತಿರ್ಥ ಎಂಬ ನಾಮಫಲಕಗಳನ್ನು ಹಾಕಿಕೊಂಡು ಜಾಗೃತಿ ಮೂಡಿಸಿಲಾಯಿತು.  ಜಾಥದ ಮಾರ್ಗದಲ್ಲಿ ಬೊಲೋ ಭಾರತ್ ಮಾತಾಕಿ, 2020 ನೇ ಆನೆಗೊಂದಿ ಉತ್ಸವಕ್ಕೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗಿದರು.  

ಜಾಥದಲ್ಲಿ ಗಂಗಾವತಿಯ ಲಿಟೀಲ್ ಹಾರ್ಟ್ಸ್ ಸ್ಕೂಲ್, ಗಂಗಾವತಿಯ ಬೇಥಲ್ ಸ್ಕೂಲ್, ಹೊಸಪೇಟೆಯ ಗೋ-ಗ್ರೀನ್ ತಂಡ, ಗಂಗಾವತಿಯ ಗೋ-ಗ್ರೀನ್ ತಂಡ, ಸಂಗಾಪೂರ ಗ್ರಾಮದ ಶಾಲೆಯ ವಿದ್ಯಾರ್ಥಿಗಳು, ಆನೆಗೊಂದಿ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರು, ಅಧಿಕಾರಿ, ಸಿಬ್ಬಂದಿ, ಜನಪ್ರತಿನಿದಿಗಳು, ಪೊಲೀಸರು ಹಾಗೂ ಸಾರ್ವಜನಿಕರು ಸೈಕಲ್ ಜಾಥದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
=========

ವಿಕಲಚೇತನರ ಮತ್ತು ಪುರುಷರ ಕಬಡ್ಡಿ ಪಂದ್ಯಾವಳಿಗಳಿಗೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ

ಕೊಪ್ಪಳ ಜ. 06 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಅಂಗವಾಗಿ ಆನೆಗೊಂದಿಯ ಶ್ರೀ ಕೃಷ್ಣದೇವರಾಯ ವೇದಿಕೆ ಮುಂಭಾಗದಲ್ಲಿ ಇಂದು (ಜ.6) ಹಮ್ಮಿಕೊಳ್ಳಲಾದ ವಿಕಲಚೇತನರ ಮತ್ತು ಪುರುಷರ ಕಬಡ್ಡಿ ಪಂದ್ಯಾವಳಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ವಿಶ್ವನಾಥರೆಡ್ಡಿ ಅವರು ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಸ್ವನಾಥರೆಡ್ಡಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಅವರು ಕಬಡ್ಡಿ ಸ್ಪರ್ಧಾಳುಗಳೊಂದಿಗೆ ಆಟವಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು.  ಉಪವಿಭಾಗಾಧಿಕಾರಿ ಸಿ.ಡಿ ಗೀತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶಿಲ್ದಾರ ಚಂದ್ರಶೇಖರ ಮಾಲಗಿತ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಲ್.ಡಿ ಚಂದ್ರಕಾAತ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್, ಬಿ.ಇ.ಓ ಸೋಮಶೇಖರ್ ಗೌಡ, ಆನೆಗೊಂದಿ ಗ್ರಾ.ಪಂ. ಅಧ್ಯಕ್ಷೆ ಅಂಜನಾದೇವಿ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಕಲಚೇತನರ ಕಬಡ್ಡಿ ಪಂದ್ಯಾವಳಿ ವಿವರ;
  ವಿಕಲಚೇತನರ ಕಬಡ್ಡಿ ಪಂದ್ಯಾವಳಿಯಲ್ಲಿ ಒಟ್ಟು 4 ತಂಡಗಳು ಭಾಗವಹಿಸಿದ್ದವು.  ಫೈನಲ್ ಪಂದ್ಯದಲ್ಲಿ ಕಿಷ್ಕಿಂದಾ ಗಂಗಾವತಿ ತಂಡದ ವಿರುದ್ದ ಕೊಪ್ಪಳ ಟೈಗರ್ಸ್ ತಂಡ  1 ಅಂಕದಿAದ ಜಯಗಳಿಸಿತು.. ಗಂಗಾವತಿ 7 ಅಂಕಗಳಿಸಿದರೆ, ಕೊಪ್ಪಳ 8 ಅಂಕಗಳಿಸಿ ಪ್ರಥಮ ಸ್ಥಾನ ಪಡೆಯಿತು.  ಕಿಷ್ಕಿಂದ ಗಂಗಾವತಿ ತಂಡ ದ್ವೀತಿಯ ಸ್ಥಾನ ಪಡೆಯಿತು.  ತೃತಿಯ ಸ್ಥಾನಕ್ಕಾಗಿ ಕಾದಾಡಿದ ಇಲಕಲ್ ಲಯನ್ಸ್ ಮತ್ತು ಹರಪನಹಳ್ಳಿ ತಂಡಗಳಲ್ಲಿ ಇಲಕಲ್ ಲಯನ್ಸ್ ಜಯಗಳಿಸಿ, ತೃತಿಯ ಸ್ಥಾನ ಪಡೆಯಿತು.  

ಪುರುಷರ ಕಬಡ್ಡಿ ಪಂದ್ಯಾವಳಿ ವಿವರ;  
ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಿದ್ದವು. ಅದರಲ್ಲಿ 12 ಕ್ವಾಲಿಫರ್ ಆಗಿ, 8 ಸೆಮಿಫೈನಲ್ಸ್ ಗೆ ಬಂದವು.  ಮೊದಲ ಸೆಮಿಫೈನಲ್ ನಲ್ಲಿ ಯರಂಗಳ (ಬಳ್ಳಾರಿ) ತಂಡದ ವಿರುದ್ದ ಬಸವನದುರ್ಗ ತಂಡ 21-13 ಅಂಕಗಳಿAದ ಗೆಲುವು ದಾಖಲಿಸಿತು.  8 ಅಂಕಗಳಿAದ ಯರಂಗಳ ಸೋಲನುಭವಿಸಿತು.      ಎರಡನೇ ಸೆಮಿಫೈನಲ್ಸ್ ನಲ್ಲಿ ವೆಂಕಟಗಿರಿ ತಂಡದ ವಿರುದ್ದ ಶಿವಮಾರುತೇಶ್ವರ ಹಾರಾಳ ತಂಡ 16-13 ಅಂಕಗಳಿಸಿದರೆ, 3 ಅಂಕದಿAದ ವೆಂಕಟಗಿರಿ ಸೋಲನುಭವಿಸಿತು.  ಮೊದಲ ಸೆಮಿ ಮತ್ತು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ಮೂರನೆ ಸ್ಥಾನಕ್ಕೆ ಕಾದಾಡಿದ ವೆಂಕಟಗಿರಿ ಮತ್ತು ಯರಂಗಲಳ ಪಂದ್ಯದಲ್ಲಿ ಯರಂಗಳ 05-12 ರಿಂದ ಗೆಲುವು ದಾಖಲಿಸಿ, 3ನೇ ಸ್ಥಾನ ಪಡೆಯಿತು.  ಅಂತಿಮ ಫೈನಲ್ ಪಂದ್ಯದಲ್ಲಿ ಶಿವಮಾರುತೇಶ್ವರ ಹಾರಳ ತಂಡದ ವಿರುದ್ದ ಬಸವನದುರ್ಗ ತಂಡ 08-19 ಅಂಕಗಳಿAದ ಜಯಗಳಿಸಿದರು. ಸೋತ ಹಾರಳ ತಂಡ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.
=========