ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯುತ್ ಬಳಕೆದಾರರಿಗೆ ಸೂಚನೆ
ಕೊಪ್ಪಳ ನ. 16 (ಕರ್ನಾಟಕ ವಾರ್ತೆ): ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯುತ್ ಬಳಕೆದಾರರ ಗಣತಿಗಾಗಿ ಸರ್ಕಾರದ ಆದೇಶದಂತೆ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಮತ್ತು ನೀರಾವರಿ ಪಂಪಸೆಟ್‌ನ ಆರ್. ಆರ್. ಸಂಖ್ಯೆಗೆ ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಗಳನ್ನು ಸೇರಿಸಬೇಕಾಗಿರುತ್ತದೆ.
ಆದ್ದರಿಂದ ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಜೆಸ್ಕಾಂ, ಮುನಿರಾಬಾದ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಮತ್ತು ನೀರಾವರಿ ಪಂಪಸೆಟ್‌ಗಳ ಬಳಕೆದಾರರು ವಿದ್ಯುತ್ ಆರ್.ಆರ್. ಸಂಖ್ಯೆ, ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಗಳನ್ನು ಮುನಿರಾಬಾದ್ ಉಪ ವಿಭಾಗದ ಜೆಸ್ಕಾಂ ಕಚೇರಿಗೆ ಅಥವಾ ವಿದ್ಯುತ್ ಇಲಾಖೆ, ತಮ್ಮ ಗ್ರಾಮಗಳಿಗೆ ಸಂಬAಧಿಸಿದ ಮೀಟರ್ ರೀಡರ್, ಗ್ರಾಮ ವಿದ್ಯುತ್ ಪ್ರತಿನಿಧಿ ಅಥವಾ ಮಾರ್ಗದಾಳು (ಲೈನ್‌ಮ್ಯಾನ್) ರವರಿಗೆ ಕಚೇರಿ ವೇಳೆಯಲ್ಲಿ ಕರೆ ಮಾಡಿ ಗ್ರಾಹಕರ ಹೆಸರಿನೊಂದಿಗೆ ಮೇಲೆ ತಿಳಿಸಿದಂತೆ ಎಲ್ಲಾ ಮಾಹಿತಿಯನ್ನು ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ: 08539-270262, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಮೊ.ಸಂ: 9448271602 ಹಾಗೂ ಸಹಾಯಕ ಅಭಿಯಂತರರು(ತಾA) ಮೊ.ಸಂ: 9480847966 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜೆಸ್ಕಾಂನ ಮುನಿರಾಬಾದ್ ಕಾರ್ಯ ಮತ್ತು ಪಾಲನ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment