ಕೊಪ್ಪಳ,ಜೂ.12(ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕುಷ್ಟಗಿ
ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ 100 ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ
ನಿಲಯದ ನಿರ್ವಹಣೆಗೆ ಬಾಡಿಗೆ ಕಟ್ಟಡ ಬೇಕಾಗಿದ್ದು, ಆಸಕ್ತ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ದಿನನಿತ್ಯದ ಬಳಕೆಗಾಗಿ, ಕುಡಿಯುವ
ನೀರಿನ ಸೌಕರ್ಯ ಹಾಗೂ ಕನಿಷ್ಟ 6 ರಿಂದ 8 ಸ್ನಾನ ಗೃಹಗಳು ಮತ್ತು 6 ರಿಂದ 8 ಶೌಚಾಲಯಗಳನ್ನು ಹೊಂದಿರುವಂತಹ
ಕಟ್ಟಡ ಬೇಕಾಗಿದ್ದು, ಆಸಕ್ತ ಮಾಲೀಕರು ಸಂಬಂಧಿಸಿದ ದಾಖಲೆಗಳೊಂದಿಗೆ ಕುಷ್ಟಗಿ ತಾಲೂಕ ಹಿಂದುಳಿದ ವರ್ಗಗಳ
ವಿಸ್ತರಣಾಧಿಕಾರಿಗಳ ಕಛೇರಿ ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
No comments:
Post a Comment