ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಜಂಟಿ ಕೃಷಿ ನಿರ್ದೇಶಕರ ಕಛೇರಿಯಿಂದ ಜಿಲ್ಲೆಯಲ್ಲಿ ಹವಾಮಾನ
ಆಧಾರಿತ ಬೆಳೆವಿಮೆ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ವಿವರಗಳು
ಇಂತಿವೆ.
ಗಂಗಾವತಿ ತಾಲೂಕಿನ ಹೋಬಳಿಗಳಾದ ಗಂಗಾವತಿ-ಹತ್ತಿ, ಬಾಳೆ, ಹುಲಿಹೈದರ್-ಹತ್ತಿ, ಕನಕಗಿರಿ-ಹತ್ತಿ, ಕಾರಟಗಿ-ಹತ್ತಿ, ಮರಳಿ-ಹತ್ತಿ, (ಮ.ಆ),
ನವಲಿ-ಹತ್ತಿ (ಮ.ಆ.) (ನೀ), ಸಿದ್ದಾಪೂರ-ಹತ್ತಿ, ವೆಂಕಟಗಿರಿ-ಹತ್ತಿ ಈ ಹೋಬಳಿಗಳಿಗೆ ಮಳೆ ಆಶ್ರಿತ
ಪ್ರದೇಶವಾಗಿದೆ, ಕೊಪ್ಪಳ ತಾಲೂಕಿನ ಹೋಬಳಿಗಳಾದ ಅಳವಂಡಿ-ಹತ್ತಿ (ಮ.ಆ.) ಹತ್ತಿ (ನೀ), ಮೆಣಸಿನಕಾಯಿ
(ನೀ), ಈರುಳ್ಳಿ (ನೀ), ಹಿಟ್ನಾಳ-ಹತ್ತಿ (ಮ.ಆ.), ಇರಕಲ್‍ಗಡ-ಹತ್ತಿ (ಮ.ಆ.), ಕೊಪ್ಪಳ-ಹತ್ತಿ (ಮ.ಆ.)
(ನೀ), ಕುಷ್ಟಗಿ ತಾಲೂಕಿನ ತಾವರಗೇರಾ-ಈರುಳ್ಳಿ (ನೀ), ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ-ಹತ್ತಿ
(ಮ.ಆ.), ಕುಕನೂರು-ಹತ್ತಿ (ಮ.ಆ.), ಮಂಗಳೂರು-ಹತ್ತಿ (ಮ.ಆ.), ಯಲಬುರ್ಗಾ-ಹತ್ತಿ (ಮ.ಆ.)
2014 ರ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ
ಬೆಳೆವಾರು ರೈತರು ಪಾವತಿಸಬೇಕಾದ ವಿಮಾ ಕಂತಿನ ವಿವರಗಳು : ಹತ್ತಿ (ಮ.ಆ.) ಪ್ರತಿ ಹೆಕ್ಟೆರಿಗೆ ರೈತರು ಪಾವತಿಸಬೇಕಾಗಿರುವ ವಿಮಾಕಂತು 2400, ಅದರಂತೆ
ಹತ್ತಿ (ನೀ)-3000, ಮೆಣಸಿನಕಾಯಿ (ನೀ)-5880, ಈರುಳ್ಳಿ (ನೀ)-5160, ಬಾಳೆ-6000 ರೂ.ಗಳಷ್ಟು ವಿಮಾ
ಕಂತನ್ನು ನಿಗದಿಪಡಿಸಲಾಗಿದೆ.
ಕೊಪ್ಪಳ ಜಿಲ್ಲೆಗೆ ಚೋಳಮಂಡಲಮ್ ಎಂ.ಎಸ್.ಜನರಲ್ ಇನ್ಸೂರೆನ್ಸ್ ಕಂಪನಿ ಲಿ., ವಿಮಾ ಸಂಸ್ಥೆಯನ್ನು
ನಿಗದಿಪಡಿಸಲಾಗಿದ್ದು, ಈ ಯೋಜನೆಯಲ್ಲಿ ಒಳಪಡಿಸಲಾಗುವ ಎಲ್ಲಾ ಬೆಳೆಗಳಿಗೆ ಬೆಳೆಸಾಲ ಪಡೆಯುವ ರೈತರನ್ನು
ಕಡ್ಡಾಯವಾಗಿ ಒಳಪಡಿಸಲು ತೀರ್ಮಾನಿಸಲಾಗಿದೆ ಹಾಗೂ ಬೆಳೆಸಾಲ ಪಡೆಯದ ರೈತರಿಗೆ ಐಚ್ಚಿಕ, 2014 ರ ಮುಂಗಾರು
ಹಂಗಾಮಿಗೆ ಬೆಳೆಸಾಲ ಪಡೆದ ರೈತರಿಗೆ ಜೂ.30 ರೊಳಗಾಗಿ ಬೆಳೆಸಾಲ ಮಂಜೂರಾಗಿದ್ದರೆ ಅಂತಹ ರೈತರನ್ನು
ಕಡ್ಡಾಯವಾಗಿ ಯೋಜನೆಯಡಿಯಲ್ಲಿ ಒಳಪಡಿಸತಕ್ಕದ್ದು, ಇಚ್ಚೆಯುಳ್ಳ ಬೆಳೆಸಾಲ ಪಡೆಯದ ರೈತರು ಪಾಲ್ಗೊಳ್ಳಲು
ಜೂ.30 ಕೊನೆಯ ದಿನವಾಗಿರುತ್ತದೆ. ಬೆಳೆಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ
ದಾಖಲೆಗಳಾದ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಶೀದಿಯನ್ನು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ
ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ, ಸ್ಥಳೀಯ ವಾಣಿಜ್ಯ ಗ್ರಾಮೀಣ, ಸಹಕಾರಿ ಬ್ಯಾಂಕ್ (ಸಾಲ
ಸಂಸ್ಥೆ) ಗಳ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment