Wednesday, 28 August 2019

ಮನೆ ಮನೆ ಜನ ಜಾಗೃತಿ ಆಂದೋಲನ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಕ್ರಮ : ರಘುನಂದನ್ ಮೂರ್ತಿ

ಮನೆ ಮನೆ ಜನ ಜಾಗೃತಿ ಆಂದೋಲನ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಕ್ರಮ : ರಘುನಂದನ್ ಮೂರ್ತಿ  

ಕೊಪ್ಪಳ: ಆಗಸ್ಟ 26 ರಂದು ಜಿಲ್ಲಾ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಕ್ರಮ ಕುರಿತು ಮನೆ ಮನೆ ಜನ ಜಾಗೃತಿ ಆಂದೋಲನ 2019 ಕೈಗೊಳ್ಳುವಂತೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷಿನ್ ಸೊಸೈಟಿ, ಬೆಂಗಳೂರ ಇದರ ಮಾರ್ಗದರ್ಶನದಂತೆ ಆರೋಗ್ಯ ಮತ್ತು ಇತರೆ ಇಲಾಖೆ ಸಿಬ್ಬಂದಿಗೆ  ನಿಯಂತ್ರಣ ಸಂಸ್ಥೆ ಹೆಚ್.ಐ.ವಿ/ಏಡ್ಸ್  ಕುರಿತು ತರಬೇತಿಯನ್ನು ಆಯೋಜಿಸಲಾಗುತ್ತದೆ. ಜಿಲ್ಲಾ ಎಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಯಾವುದೆ ಲಸಿಕೆ ಇಲ್ಲದಿರುವದರಿಂದ ಹೆಚ್.ಐ.ವಿ/ಏಡ್ಸ್ ಕುರಿತಾದ ಮಾಹಿತಿ, ಶಿಕ್ಷಣ ಸಂವಹನಗಳೇ ಲಸಿಕೆಗಳಾಗಿರುವದರಿಂದ ಜನರಲ್ಲಿ ಜಾಗೃತಿ ಮೂಡಿಸುವದೆ ಎಚ್‍ಐವಿ ಸೋಂಕಿಗೆ ಅತ್ಯುತ್ತಮ ಲಸಿಕೆ, ಪ್ರಚಾರವನ್ನು ನೀಡುವದು ಬಿತ್ತಿಪತ್ರ, ಗೀ-ಗೀ ಪದ, ಶ್ರೀಕೃಷ್ಣ ಪಾರಿಜಾತ, ಡೋಳ್ಳು ಕುಣಿತ  ಮತ್ತು ಬಿದಿ ನಾಟಕಗಳನ್ನು ಕಲಾ ಮತ್ತು ಜಾನಪದ ತಂಡಗಳಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ 4 ಕಾಲ್ಲೂಕುಗಳಲ್ಲಿ ಒಟ್ಟಾರೆ 191380 ಮನೆಗಳಿಗೆ ಮಾಹಿತಿಯನ್ನು ತಲುಪಿಸುವದು ಈ ಆಂದೋಲನ  ಗುರಿಯಾಗಿದೆ. ಎಚ್‍ಐವಿ ಸೋಂಕು ಹರಡಿರುವ ಒಟ್ಟು 1,91,380 ಮನೆಗಳನ್ನು ಗುರುತಿಸಲಾಗಿದ್ದು, ಇಬ್ಬರನ್ನೊಳಗೊಂಡ ಒಂದು ತಂಡಂತೆ ಒಟ್ಟು 684 ತಂಡಗಳಿದ್ದು, 1367 ಆಶಾ ಕಾರ್ಯಕರ್ತೆಯರು ಒಂದು ದಿನಕ್ಕೆ 95650 ಮನೆಗಳಿಗೆ ಬೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ವತ್ರೆ ಹಾಗೂ ಜಿಲ್ಲಾ ಆಸ್ವತ್ರೆಯಲ್ಲಿ ಒಟ್ಟು 14 ಐ.ಸಿ.ಟಿ.ಸಿ. ಕೇಂದ್ರಗಳಿದ್ದು, ಹೆಚ್.ಐ.ವಿ/ಏಡ್ಸ್ ಕುರಿತು ಆಪ್ತಸಮಾಲೊಚನೆ ಮತ್ತು ಪ್ರಯೊಗಶಾಲಾ ತಂತ್ರಜ್ಞರ ಮೂಲಕ ಹೆಚ್.ಐ.ವಿ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುತ್ತದೆ. ಪ್ರತಿ ಶನಿವಾರಂದು ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಢಾಬಾಗಳು ಹಾಗೂ ಮುಂತಾದ ಕಡೆ ಭೇಟಿನೀಡಿ  ಹೆಚ್.ಐ.ವಿ/ಏಡ್ಸ್ ಕುರಿತು ಮಾಹಿತಿ, ಶಿಕ್ಷಣ, ಮತ್ತು ಸಂವಹನ ನಡೆಸಲಾಗುತ್ತದೆ. ಜಿಲ್ಲೆಯ ಒಟ್ಟು 46 ಪ್ರಾಥಮಿಕ ಕೇಂದ್ರಗಳಲ್ಲಿ ಹಾಗೂ 13 ಆಯ್ದ ಖಾಸಗಿ ಆಸ್ಪತ್ರೇಗಳಲ್ಲಿ (ಕೊಪ್ಪಳದಲ್ಲಿ 4 ಹಾಗೂ ಗಂಗಾವತಿಯಲ್ಲಿ 9)  ಹೆಚ್.ಐ.ವಿ/ಏಡ್ಸ್ ಕುರಿತು ಆಪ್ತಸಮಾಲೊಚನೆ ಮತ್ತು ಹೆಚ್.ಐ.ವಿ ಪರೀಕ್ಷೆಯನ್ನು ಮಾಡಲಾಗುತ್ತದೆ. ವಿವಿಧ ಇಲಾಖೆಗಳೊಂದಿಗೆ ಸಂಯೋಜನೆಯನ್ನು ಏರ್ಪಡಿಸಿ ಹಾಗೂ ಜಿಲ್ಲೆಯಲ್ಲಿ ಹೆಚ್.ಐ.ವಿ/ಏಡ್ಸ್  ಕುರಿತು ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸುತ್ತದೆ.

No comments: