*********************************
ಕೊಪ್ಪಳ ಜ.02 (ಕರ್ನಾಟಕ ವಾರ್ತೆ): ಸರ್ವ ಶಿಕ್ಷಣ ಅಭಿಯಾನ ಕೊಪ್ಪಳ ವತಿಯಿಂದ, 2016-17 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು, ಶಾಲಾ ವ್ಯಾಪ್ತಿಗೆ ತರಲು, ಆಸಕ್ತ ಸರ್ಕಾರೇತರ ಸಂಘ ಸಂಸ್ಥೆಗಳಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ.
2016-17 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ವ್ಯಾಪ್ತಿಗೆ ತರಲು ಆಸಕ್ತ ಅರ್ಹ ಎನ್‍ಜಿಒ ಗಳಿಂದ, 6 ತಿಂಗಳ ಎಸ್.ಆರ್.ಬಿ.ಸಿ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಲು ಪ್ರಸ್ತಾವನೆ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಎನ್‍ಜಿಒ ಸಂಸ್ಥೆ ನೊಂದಾವಣಿಯಾಗಿ ಕನಿಷ್ಟ 5 ವರ್ಷಗಳಾಗಿರಬೇಕು. 5 ವರ್ಷದ ವಾರ್ಷಿಕ ವರದಿ (ನಡೆಸಲಿಚ್ಚಿಸಿರುವ ಕಾರ್ಯತಂತ್ರಗಳಿಗೆ ಸಂಬಂಧಿಸಿದಂತೆ) ಲಗತ್ತಿಸಬೇಕು. ಭಾಗವಹಿಸುವ ಸಂಸ್ಥೆ ತಮ್ಮಲ್ಲಿ ಕಾರ್ಯ ನಿರ್ವಹಿಸುವ ಮಾನವ ಸಂಪನ್ಮೂಲ ವಿವರದ ಪಟ್ಟಿ ಲಗತ್ತಿಸಬೇಕು. 5 ವರ್ಷ ಆಡಿಟ್ ವರದಿ ಲಗತ್ತಿಸಬೇಕು ಆದರೆ ಅದರಲ್ಲಿ ಪ್ರತಿಕೂಲ ಷರಾಗಳು ಇರಬಾರದು. 5 ವರ್ಷದ ಆದಾಯ ತೆರಿಗೆ ಪಾವತಿಸಿರುವ ಪ್ರತಿ, ಹಣಕಾಸಿನ ವಹಿವಾಟು ಮತ್ತು ಬ್ಯಾಂಕ್ ಶಿಲ್ಕು, ವಿಶೇಷ ತರಬೇತಿ ಕೇಂದ್ರ ನಡೆಸಲು ಖಾತ್ರಿ ಪಡಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ, ಅದರಲ್ಲೂ ಇಚ್ಚಿಸಿದ ಕಾರ್ಯತಂತ್ರದಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ಕಾರ್ಯತಂತ್ರ ನಡೆಸಲು ಸರಕಾರೇತರ ಸಂಸ್ಥೆಯು ಆರ್ಥಿಕ ಸಬಲತೆ ಹೊಂದಿರಬೇಕು.
ಆಸಕ್ತರು ಪ್ರಸ್ತಾವನೆಗಳನ್ನು ಅಗತ್ಯ ದಾಖಲೆಗಳೊಂದಿಗೆ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ದ್ವೀ ಪ್ರತಿಯೊಂದಿಗೆ ಜ.5 ರೊಳಗಾಗಿ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ಸರ್ವ ಶಿಕ್ಷಣ ಅಭಿಯಾನ ಕೊಪ್ಪಳ ಇವರಿಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

No comments:
Post a Comment