Friday, 30 August 2019

2017 ಜ.6 ರಿಂದ ಹನುಮಸಾಗರದಲ್ಲಿ ಜಂಪ್‍ರೋಪ್ (ಹಗ್ಗದ ಆಟ) ಕ್ರೀಡಾಕೂಟ

*********************
ಕೊಪ್ಪಳ ಜ.02 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಜಂಪ್‍ರೋಪ್ (ಹಗ್ಗದ ಆಟ) ಸಂಸ್ಥೆಯಿಂದ 13 ನೇ ಕಿರಿಯರ ರಾಷ್ಟ್ರೀಯ ಜಂಪ್ ರೋಪ್ (ಹಗ್ಗದ ಆಟ) ಕ್ರೀಡಾಕೂಟ ಜ.6 ರಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಆಯೋಜಿಸಲಾಗಿದೆ.
ಕ್ರೀಡಾಕೂಟ ಜ.06 ರಿಂದ 11 ರ ವರೆಗೆ ನಡೆಯಲಿದೆ. ಕ್ರೀಡಾಕೂಟದಲ್ಲಿ ಭಾರತದ 24 ರಾಜ್ಯದ ಕ್ರೀಡಾಪಟುಗಳು ಸೇರಿದಂತೆ 700 ಕ್ರೀಡಾಪಟುಗಳು ಹಾಗೂ 15 ಸಾವಿರಕ್ಕೂ ಅಧಿಕ ಕ್ರೀಡಾ ಪ್ರೇಮಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ಜಂಪರೋಪ್ (ಹಗ್ಗದ ಆಟ) ಸಂಸ್ಥೆ ಪ್ರಕಟಣೆ ತಿಳಿಸಿದೆ.

No comments: