Saturday, 4 August 2018

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ವ್ಯಾಪ್ತಿಗೆ ತರಲು : ಸಂಸ್ಥೆಗಳಿಂದ ಪ್ರಸ್ತಾವನೆ ಆಹ್ವಾನ


ಕೊಪ್ಪಳ ಆ. 04 (ಕರ್ನಾಟಕ ವಾರ್ತೆ): ಕೊಪ್ಪಳ ಸರ್ವ ಶಿಕ್ಷಣ ಅಭಿಯಾನ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲಾ ವ್ಯಾಪ್ತಿಗೆ ತರಲು ಆಸಕ್ತ ಅರ್ಹ ಸರಕಾರೇತರ ಸಂಘ ಸಂಸ್ಥೆಗಳಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ.
    ಸರ್ವ ಶಿಕ್ಷಣ ಅಭಿಯಾನವು ಪ್ರಸಕ್ತ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲಾ ವ್ಯಾಪ್ತಿಗೆ ತರಲು ಅರ್ಹ ಎನ್.ಜಿ.ಓ ಗಳಿಂದ, 6 ತಿಂಗಳ ಎಸ್.ಆರ್.ಎಸ್.ಟಿ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.  ಪ್ರಸ್ತಾವನೆ ಸಲ್ಲಿಸಲು ಎನ್.ಜಿ.ಓ ಸಂಸ್ಥೆ ನೊಂದಾಯಿತಗೊಂಡು ಕನಿಷ್ಟ 05 ವರ್ಷ ಪೂರೈಸಿರಬೇಕು.  05 ವರ್ಷದ ವಾರ್ಷಿಕ ವರದಿಯನ್ನು (ನಡೆಸಲಿಚ್ಚಿಸಿರುವ ಕಾರ್ಯತಂತ್ರಗಳಿಗೆ ಸಂಬಂಧಿಸಿದಂತೆ) ಲಗತ್ತಿಸಬೇಕು.  ಭಾಗವಹಿಸುವ ಸಂಸ್ಥೆಯು ತಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಮಾನವ ಸಂಪನ್ಮೂಲ ವಿವರದ ಪಟ್ಟಿಯನ್ನು ಲಗತ್ತಿಸಬೇಕು.  05 ವರ್ಷದ ಆಡಿಟ್ ವರದಿ ಲಗತ್ತಿಸಬೇಕು.  ಆದರೆ ಅದರಲ್ಲಿ ಪ್ರತಿಕೂಲ ಷರಾಗಳು ಇರಬಾರದು.  05 ವರ್ಷದ ಆದಾಯ ತೆರಿಗೆ ಪಾವತಿಸಿರುವ ಪ್ರತಿಯನ್ನು ಲಗತ್ತಿಸಬೇಕು.  ಹಣಕಾಸಿನ ವಹಿವಾಟು ಮತ್ತು ಬ್ಯಾಂಕ್ ಶಿಲ್ಕು, ವಿಶೇಷ ತರಬೇತಿ ಕೇಂದ್ರ ನಡೆಸಲು ಖಾತ್ರಿ ಪಡಿಸಬೇಕು.  ಶಿಕ್ಷಣ ಕ್ಷೇತ್ರದಲ್ಲಿ, ಅದರಲ್ಲೂ ಇಚ್ಚಿಸಿದ ಕಾರ್ಯತಂತ್ರದಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.  ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ಕಾರ್ಯತಂತ್ರ ನಡೆಸಲು ಸರಕಾರೇತರ ಸಂಸ್ಥೆಯು(ಎನ್.ಜಿ.ಓ) ಆರ್ಥಿಕ ಸಬಲತೆಯನ್ನು ಹೊಂದಿರಬೇಕು.
    ಪ್ರಸ್ತಾವನೆ ಸಲ್ಲಿಸಲಿಚ್ಛಿಸುವ ಆಸಕ್ತ ಸರಕಾರೇತರ ಸಂಘ ಸಂಸ್ಥೆಯವರು ಪ್ರಸ್ತಾವನೆಗಳನ್ನು ಅಗತ್ಯ ದಾಖಲೆಗಳೊಂದಿಗೆ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ದ್ವಿ-ಪ್ರತಿಯಲ್ಲಿ ಆ. 10 ರೊಳಗಾಗಿ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳ ಇವರಿಗೆ ಸಲ್ಲಿಸಬೇಕು.  ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸುವುದಿಲ್ಲ.  ಅರ್ಜಿ ನಮೂನೆಯನ್ನು ವೆಬ್‍ಸೈಟ್  http://ssakarnataka.gov.in ನಿಂದ ಪಡೆದುಕೊಳ್ಳಬಹುದಾಗಿದೆ ಎಂದು ಕೊಪ್ಪಳ ಸರ್ವ ಶಿಕ್ಷಣ ಅಭಿಯಾನದ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment