Thursday, 2 August 2018

ಯಲಬುರ್ಗಾ ಪ.ಪಂ. ವಾರ್ಡವಾರು ಮೀಸಲಾತಿ ನಿಗದಿ


ಕೊಪ್ಪಳ ಆ. 02 (ಕರ್ನಾಟಕ ವಾರ್ತೆ):
ಕರ್ನಾಟಕ ಪುರಸಭೆ ಕಾಯ್ದೆ 1964 ರ ಕಲಂ 13ರನ್ವಯ ಸರ್ಕಾರವು ಪ್ರಸಕ್ತ ನಗರ, ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣ ಪಂಚಾಯಿತಿಯ 15 ವಾರ್ಡುಗಳ ಮೀಸಲಾತಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. 
ಯಲಬುರ್ಗಾ ಪಟ್ಟಣದ ವಾರ್ಡ-01 ರಲ್ಲಿ ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ-02 ಸಾಮಾನ್ಯ, ವಾರ್ಡ-03 ಸಾಮಾನ್ಯ, ವಾರ್ಡ-04 ಪರಿಶಿಷ್ಟ ಜಾತಿ, ವಾರ್ಡ-05 ಹಿಂದುಳಿದ ವರ್ಗ(ಎ), ವಾರ್ಡ-06 ಸಾಮಾನ್ಯ ಮಹಿಳೆ, ವಾರ್ಡ-07 ಹಿಂದುಳಿದ ವರ್ಗ(ಬಿ), ವಾರ್ಡ-08 ಸಾಮಾನ್ಯ, ವಾರ್ಡ-09 ಸಾಮಾನ್ಯ, ವಾರ್ಡ-10 ಸಾಮಾನ್ಯ ಮಹಿಳೆ, ವಾರ್ಡ-11 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ-12 ಪರಿಶಿಷ್ಟ ಪಂಗಡ, ವಾರ್ಡ-13 ಸಾಮಾನ್ಯ ಮಹಿಳೆ, ವಾರ್ಡ-14 ಪರಿಶಿಷ್ಟ ಜಾತಿ, ವಾರ್ಡ-15 ಸಾಮಾನ್ಯ ಮಹಿಳೆ, ಮೀಸಲಾತಿಯನ್ನು ನಿಗಧಿಪಡಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. 
Post a Comment