Wednesday, 8 August 2018

ಎಸ್‍ಬಿಐ ಲೈಫ್ ಇನ್ಸೂರೆನ್ಸ್ ಮೂಲಕ ಆದಾಯ ತೆರಿಗೆಯಲ್ಲಿ ಉಳಿತಾಯ : ಗಂಗಾಧರ


ಕೊಪ್ಪಳ ಆ. 08 (ಕರ್ನಾಟಕ ವಾರ್ತೆ): ಎಸ್.ಬಿ.ಐ ಲೈಫ್ ಇನ್ಸೂರೆನ್ಸ್ ಮೂಲಕ ಆದಾಯ ತೆರಿಗೆಯಲ್ಲಿ ಉಳಿತಾಯ ಮಾಡಬಹುದಾಗಿದೆ ಎಂದು ಎಸ್.ಬಿ.ಐ ಲೈಫ್ ಇನ್ಸೂರೆನ್ಸ್‍ನ ಟ್ರೈನಿಂಗ್ ಮ್ಯಾನೇಜರ್ ಗಂಗಾಧರ ಅವರು ಹೇಳಿದರು.  

    ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಎಸ್.ಬಿ.ಐ ಲೈಫ್ ಇನ್ಸೂರೆನ್ಸ್ ಯೋಜನೆ ಕುರಿತು ಆಯೋಜಿಸಲಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

    ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರವಿದ್ದು, 60 ವರ್ಷದೊಳಗಿರುವವರ ಆದಾಯವು 2.5 ಲಕ್ಷಗಳವರೆ ಇದ್ದರೆ ಯಾವುದೇ ತೆರಿಗೆ ಇಲ್ಲ.  2.5 ಲಕ್ಷಕ್ಕಿಂತ ಹೆಚ್ಚು 5 ಲಕ್ಷದವರೆಗೆ ಇದ್ದರೆ ಶೇ.05 ರಷ್ಟು ತೆರಿಗೆ, 05 ರಿಂದ 10 ಲಕ್ಷ ಆದಾಯ ಹೊಂದಿದವರೆಗೆ ಶೇ.20 ರಷ್ಟು ಹಾಗೂ 10 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದರೆ ಶೇ.30 ರಷ್ಟು ತೆರಿಗೆ.  60 ರಿಂದ 80 ವರ್ಷದೊಳಗಿರುವ ಹಿರಿಯ ನಾಗರೀಕರ ಆದಾಯವು 03 ಲಕ್ಷ ಇದ್ದರೆ ಯಾವುದೇ ತೆರಿಗೆ ಇಲ್ಲ, 03 ರಿಂದ 05 ಲಕ್ಷದವರೆ ಇದ್ದರೆ ಶೇ.05 ರಷ್ಟು, 05 ರಿಂದ 10 ಲಕ್ಷಕ್ಕೆ ಶೇ.20 ಹಾಗೂ 10 ಲಕ್ಷಕ್ಕಿಂತ ಹೆಚ್ಚು ಇದ್ದರೆ ಶೇ.30 ರಷ್ಟು ತೆರಿಗೆ.  80 ವರ್ಷಕ್ಕಿಂತ ಹೆಚ್ಚು ವಯೋಮಾನದ ಹಿರಿಯ ನಾಗರೀಕರ ಆದಾಯವು 05 ಲಕ್ಷದವರೆಗೆ ಇದ್ದರೆ ಯಾವುದೇ ತೆರಿಗೆ ಇಲ್ಲ, 05 ರಿಂದ 10 ಲಕ್ಷಕ್ಕೆ ಶೇ.20 ಹಾಗೂ 10 ಲಕ್ಷಕ್ಕಿಂತ ಹೆಚ್ಚಿದ್ದರೆ ಶೇ.30 ರಷ್ಟು ತೆರಿಗೆ ಪಾವತಿಸಬೇಕಾಗಿದೆ.  ಈ ನಿಟ್ಟಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಲೈಫ್ ಇನ್ಸೂರೆನ್ಸ್ ಯೋಜನೆಯನ್ನು ಜಾರಿಗೊಳಿಸಿದ್ದು, ಇದರಿಂದ ಆದಾಯ ತೆರಿಗೆಯಲ್ಲಿ ಉಳಿತಾಯ ಮಾಡಬಹುದಾಗಿದೆ.  ಈ ಯೋಜನೆ ನಿಮ್ಮ ಪಾಲಿಗೆ ಸೂಪರ್ ಮಾರ್Pೀಟ್ ರೀತಿಯಲ್ಲಿ ಸೌಲಭ್ಯ ಕಲ್ಪಿಸಲಿದೆ ಎಂದರು. 
ಬ್ಯಾಂಕ್ ಎಂದರೆ ಕೇವಲ ಹಣ ಜಮಾ ಮಾಡುವುದು ಹಾಗೂ ಹಣವನ್ನು ಮರಳಿ ಪಡುವುದು ಅಲ್ಲ.  ಬ್ಯಾಂಕ್ ಒಂದು ಫೈನಾನ್‍ಶಿಯಲ್ ಯುನಿವರ್ಸಿಟಿಯಂತೆ.  ಎಸ್.ಬಿ.ಐ ಲೈಫ್ ಇನ್ಸೂರೆನ್ಸ್ ಯೋಜನೆಯಲ್ಲಿ ಗೃಹಸಾಲ, ವಾಹನ ಸಾಲ, ಸೇರಿದಂತೆ ಇತ್ಯಾದಿ ಸಾಲ ಸೌಲಭ್ಯಗಳ ಜೊತೆಯಲ್ಲಿಯೇ ಭವಿಷ್ಯದ ಯೋಜನೆಗಳು ಸಹ ಪ್ರಮುಖವಾಗಿವೆ. ಚೈಲ್ಡ್ ಸೇವಿಂಗ್ ಪ್ಲಾನಿಂಗ್, ಹೆಲ್ತ್‍ಕೇರ್, ಶಿಕ್ಷಣ, ಮಕ್ಕಳ ಮದುವೆ, ಪಿಂಚಣಿ ಗಳಂತಹ ವಿವಿಧ ಪ್ರಕಾರದ ಸೌಲಭ್ಯಗಳಿವೆ.  ಯೋಜನೆಯು ಕನಿಷ್ಠ 5 ವರ್ಷದ್ದಾಗಿದೆ.  ಉದಾಹರಣೆಗೆ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಈಗಿನಿಂದಲೇ ಮಗುವಿನ ಹೆಸರಿನಲ್ಲಿ ತಿಂಗಳಿಗೊಮ್ಮೆ ನಿಯಮಾನುಸಾರ ಪಾಲಸಿ ಹಣ ತುಂಬಬೇಕು.  ಕನಿಷ್ಠ 05 ವರ್ಷ, ಜಮಾ ಆದ ಒಟ್ಟು ಹಣಕ್ಕೆ ಯಾವುದೇ ರೀತಿಯ ಟಿಡಿಎಸ್ ಖಡಿತವಾಗದೇ ಜೊತೆಗೆ ಶೇ.10 ರಷ್ಟು ಬಡ್ಡಿಯೊಂದಿಗೆ ನಿಮಗೆ ದೊರೆಯಲಿದೆ.  ಮಗುವಿನ ಉನ್ನತ ಶಿಕ್ಷಣಕ್ಕಾಗಿ 18 ವರ್ಷ ಪೂರ್ಣಗೊಂಡ ಮೇಳೆ ಪ್ರಥಮ, 19 ರಂದು ದ್ವಿತೀಯ, 20, 21 ವರ್ಷ ಹೀಗೆ ನಾಲ್ಕು ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡಲಾಗುವುದು.  ಆರೋಗ್ಯ ವಿಮೆಯಲ್ಲಿಯೂ ಕೂಡ ಸಂಪೂರ್ಣ ಆರೋಗ್ಯ ಭದ್ರತೆಯನ್ನು ನೀಡಲಾಗಿದೆ.  ಪಿಂಚಣಿ ಯೊಜನೆಯಲ್ಲಿ ಕನಿಷ್ಠ 18 ವರ್ಷ ಪೂರ್ಣಗೊಂಡವರು ಈ ಯೋಜನೆಯಡಿ ಪಾಲಿಸಿಯನ್ನು ಪ್ರಾರಂಭಿಸಬಹುದು.  ಪಿಂಚಣಿಯು ಅನ್ವಯವಾಗಬೇಕಾದರೆ ಅಂತಹ ವ್ಯಕ್ತಿಗಳಿಗೆ 40 ವರ್ಷ ಕಡ್ಡಾಯವಾಗಿ ಪೂರ್ಣಗೊಂಡಿರಬೇಕು.  ಪಾಲಸಿದಾರರು ಮರಣ ಹೊಂದಿದಲ್ಲಿ, ಆ ಪಿಂಚಣಿಯನ್ನು ಅವರ ಕುಟುಂಬಕ್ಕೆ ಪೂರ್ಣ ಹಣ ಅಥವಾ ಪಿಂಚಣಿ ರೂಪದಲ್ಲಿ ನೀಡಲಾಗುವುದು.  ಯಾವುದೇ ಪಾಲಿಸಿಯನ್ನು ಪ್ರಾರಂಭಿಸಿ ಕನಿಷ್ಠ 02 ಕಂತುಗಳನ್ನು ಪಾವತಿಸಿ ಮರಣ ಅಥವಾ ರಸ್ತೆ ಅಪಘಾತದಲ್ಲಿ ವ್ಯಕ್ತಿಯು ದುಡಿಯಲಾಗದ ಸ್ಥಿತಿಗೆ ಒಳಗಾದಲ್ಲಿ, ಅಂತಹವರು ಪಾವತಿಸಿದ ಪಾಲಸಿ ಹಣ ಹಾಗೂ ಯೋಜನೆಯ ಒಟ್ಟು ಹಣವನ್ನು ಅವರಿಗೆ ನೀಡಲಾಗುವುದು.  ಎಲ್ಲಾ ಗ್ರಾಹಕರಿಗೆ ಎಸ್.ಬಿ.ಐ ಲೈಫ್ ಇನ್ಸೂರೆನ್ಸ್ ಯೋಜನೆಯು ಅತ್ಯಂತ ಉತ್ಕøಷ್ಟ ಮೌಲ್ಯದ ಪ್ರತಿಫಲವಾಗಿದ್ದು, ಇದರ ಸದುಪಯೋಗ ಪೊಡೆದುಕೊಳ್ಳಿ.  ಯಾವುದೇ ರೀತಿಯ ಮಾಹಿತಿ ಬೇಕಿದ್ದಲ್ಲಿ 9945904463 ಸಂಖ್ಯೆಗೆ ಕರೆ ಮಾಡಿ ಎಂದು ಎಸ್.ಬಿ.ಐ ಲೈಫ್ ಇನ್ಸೂರೆನ್ಸ್‍ನ ಟ್ರೈನಿಂಗ್ ಮ್ಯಾನೇಜರ್ ಗಂಗಾಧರ ಅವರು ಹೇಳಿದರು.
ಕಾರ್ಯಾಗಾರದಲ್ಲಿ ಎಸ್.ಬಿ.ಐ ಖಜಾನೆ ಶಾಖೆ ಬ್ಯಾಂಕ್‍ನ ಮ್ಯಾನೇಜರ್ ಅಗಳಿ ಶಿಲ್ಪಾ, ಎಸ್.ಬಿ.ಐ ಲೈಫ್ ಇನ್ಸೂರೆನ್ಸ್‍ನ ಶ್ರವಣ, ರಾಮು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
Post a Comment