Tuesday, 31 July 2018

ಗಂಗಾವತಿ : ವಾಜಪೇಯಿ ನಗರ ವಸತಿ ಯೋಜನೆಯಡಿ ಹೆಚ್ಚುವರಿ ಗುರಿ ನಿಗದಿ


ಕೊಪ್ಪಳ ಜು. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ವತಿಯಿಂದ ವಾಜಪೇಯಿ ನಗರ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು 2017-18ನೇ ಸಾಲಿಗೆ ಹೆಚ್ಚುವರಿ ಗುರಿಯನ್ನು ನಿಗದಿಪಡಿಸಲಾಗಿದ್ದು, ನಿವೇಶನ ಹೊಂದಿದ ವಸತಿ ರಹಿತರಿಂದ ಅರ್ಜಿ ಆಹ್ವಾನಿಸಲಾಗಿದೆ.
         ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಬೆಂಗಳೂರು ರವರ ಪತ್ರದನ್ವಯ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ 2017-18ನೇ ಸಾಲಿಗಾಗಿ ಹೆಚ್ಚುವರಿ ಮನೆಗಳನ್ನು ನಿರ್ಮಾಣ ಮಾಡಲು ಗುರಿಯನ್ನು ನಿಗದಿಪಡಿಸಲಾಗಿದೆ.  ಅಲ್ಪಸಂಖ್ಯಾತರು-17, ಸಾಮಾನ್ಯ-158 ಸೇರಿ ಒಟ್ಟು-175 ಮನೆ ನಿರ್ಮಾಣಕ್ಕೆ 2017-18ನೇ ಸಾಲಿನಲ್ಲಿ ಹೆಚ್ಚುವರಿ ಗುರಿಯನ್ನು ನಿಗದಿಪಡಿಸಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯ ಪಡೆಯಬಹುದಾಗಿದೆ.
        ಅರ್ಜಿದಾರರು ಮಹಿಳಾ ಫಲಾನುಭವಿಗಳಾಗಿರಬೇಕು.  ಆದರೆ ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಸಹ ಅರ್ಜಿ ಸಲ್ಲಿಸಬಹುದು.  ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು ಪುರುಷರ ಹೆಸರಿಲ್ಲಿದ್ದರೆ ರೂ. 20 ಛಾಪಾ ಕಾಗದ ಮೇಲೆ ಒಪ್ಪಿಗೆ ಪತ್ರವನ್ನು ನೀಡಬೇಕು.  ಅರ್ಜಿ ಸಲ್ಲಿಸಲು ಆಗಸ್ಟ್. 14 ಕೊನೆಯ ದಿನವಾಗಿದ್ದು, ನಿಗದಿತ ಅರ್ಜಿ ನಮೂನೆಯೊಂದಿಗೆ ಇತ್ತೀಚಿನ ಪಾಸ್‍ಪೆÇೀರ್ಟ ಸೈಜಿನ 4 ಭಾವಚಿತ್ರ, ನಿವೇಶನ/ ಜಾಗಕ್ಕೆ ಸಂಬಂಧಿಸಿದ ದಾಖಲೆಗಳು ಹಕ್ಕುಪತ್ರ, ಫಾರಂ ನಂ-3/ ಖಾತಾ ನೊಂದಣಿ/ ಖಾತಾ ವರ್ಗಾವಣೆ/ ಚಾಲ್ತಿ ಸಾಲಿನ ತೆರಿಗೆ ರಶೀದಿ, ನಿವೇಶನದ (ಜಾಗ/ ಕಚ್ಚಾಮನೆ/ ಬಿದ್ದಮನೆ/ಗುಡಿಸಲು) ಪ್ರಸ್ತುತ ಸ್ಥಿತಿಯ ಭಾವಚಿತ್ರ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಆಧರ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಸ್ವಂತ ಹೆಸರಿನಲ್ಲಿ ಅಥವಾ ಕುಟುಂಬದ ಇತರೇ ಸದಸ್ಯರ ಹೆಸರಿನಲ್ಲಿ ವಸತಿ/ ಮನೆ ಹೊಂದಿಲ್ಲವೆಂದು ಮತ್ತು ಸರ್ಕಾರದ ಇತರೆ ಯೋಜನೆಯಡಿ ವಸತಿ ಸೌಲಭ್ಯವನ್ನು ಪಡೆದಿಲ್ಲವೆಂದು ರೂ. 50/- ರ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment