Tuesday, 24 July 2018

ಹುಲಿಗಿ ಮತ್ತು ಹಿಟ್ನಾಳ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಸಂಸದರಿಂದ ಕೇಂದ್ರ ಸಚಿವರಿಗೆ ಮನವಿ


ಕೊಪ್ಪಳ ಜು. 24 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಮುನಿರಾಬಾದ್-ಹುಲಗಿ ರೈಲ್ವೆ ನಿಲ್ದಾಣದಲ್ಲಿ ಹರಿಪ್ರಿಯಾ ಮತ್ತು ಕೋಲ್ಲಾಪುರ-ಹೈದ್ರಾಬಾದ್ ಎಕ್ಸ್‍ಪ್ರೆಸ್ ರೈಲುಗಳು ಹಾಗೂ ಹಿಟ್ನಾಳ ರೈಲ್ವೆ ನಿಲ್ದಾಣದಲ್ಲಿ ಹುಬ್ಬಳ್ಳಿ-ತಿರುಪತಿ ಫಾಸ್ಟ್ ಪ್ಯಾಸೆಂಜರ್ ರೈಲು ನಿಲುಗಡೆ ಮಾಡುವಂತೆ ಶಿಫಾರಸ್ಸು ಮಾಡಲು ಕೇಂದ್ರ ಸಂಸದೀಯ ಮತ್ತು ರಾಸಾಯನಿಕ ಗೊಬ್ಬರ ಸಚಿವರಾದ ಅನಂತಕುಮಾರ ಅವರಿಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಮನವಿ ಸಲ್ಲಿಸಿದ್ದಾರೆ.
    ತಾ.ಪಂ. ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಗ್ರಾ.ಪಂ. ಸದಸ್ಯ ನಿಂಗಪ್ಪ, ಗಿರೀಶ ಹಿರೇಮಠ, ವಸಂತ ನಾಯಕ, ಕಂಠಯ್ಯಸ್ವಾಮಿ, ಮುರಳಿ ಮೋಹನ, ಪಂಪನಗೌಡ, ಚಂದ್ರು ಅಗಸಿ, ಬಾಲಸ್ವಾಮಿ, ಪರಶುರಾಮ, ಮಂಜುನಾಥ, ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
Post a Comment