Wednesday, 25 July 2018

ಜಾನಪದ ಸಂಗೀತ ಕಲಾತಂಡಗಳ ಆಯ್ಕೆ : ಅರ್ಜಿ ಆಹ್ವಾನ


ಕೊಪ್ಪಳ,ಜು.25 (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗ್ರಾಮ ಸಂಪರ್ಕ ಕಾರ್ಯಕ್ರಮದಡಿ, ಸರ್ಕಾರದ ಅಭಿವೃದ್ಧಿಪರ ಯೋಜನೆಗಳನ್ನು ಬಿಂಬಿಸುವ ಜಾನಪದ ಸಂಗೀತ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಜಿಲ್ಲೆಯ ನೋಂದಾಯಿತ ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
     ಪ್ರತಿ ಕಲಾತಂಡದಲ್ಲಿ ಕನಿಷ್ಟ 3 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಓರ್ವರು ಮಹಿಳೆಯರು, ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ತಂಡದ ಎಲ್ಲ ಕಲಾವಿದರು ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ಹೊಂದಿರಬೇಕು.  ಕೊಪ್ಪಳ ಜಿಲ್ಲೆಯೂ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಗಾದರೂ ತೆರಳಿ ಕಾರ್ಯಕ್ರಮ ನೀಡಲು ಸಿದ್ಧರಿರಬೇಕು.  ಒಮ್ಮೆ ಆಯ್ಕೆಯಾದ ತಂಡವು ಕಲಾವಿದರನ್ನು ಬದಲಾಯಿಸುವಂತಿಲ್ಲ.   ಜಿಲ್ಲಾ ಮಟ್ಟದ ಸಮಿತಿಯು ತಂಡವನ್ನು ಆಯ್ಕೆ ಮಾಡಲಿದೆ.  ಸರ್ಕಾರದ ಅಭಿವೃದ್ಧಿಪರ ಯೋಜನೆಗಳನ್ನು ಬಿಂಬಿಸುವ ಹಾಡುಗಳನ್ನು ಜಾನಪದ ಶೈಲಿಯಲ್ಲಿ ಅಳವಡಿಸಿಕೊಂಡು, ಕಾರ್ಯಕ್ರಮವನ್ನು ಪ್ರಸ್ತುತಪಡಿಸುವ ಅನುಭವ ಹೊಂದಿರುವ ಕಲಾವಿದರಿಗೆ ಅವಕಾಶವಿರುತ್ತದೆ.  ವಿವಿಧ ಇಲಾಖೆಗಳಡಿ ಇಂತಹ ಕಾರ್ಯಕ್ರಮಗಳನ್ನು ಕೈಗೊಂಡಿರುವ ಅನುಭವ ಹೊಂದಿರುವುದು ಕಡ್ಡಾಯ.
     ಅರ್ಜಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ ಕಚೇರಿಯಿಂದ ಪಡೆದು ಭರ್ತಿ ಮಾಡಿ, ಕಲಾವಿದರ ಹೆಸರು, ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಪಾನ್ ಕಾರ್ಡ್ ಜೆರಾಕ್ಸ್ ಪ್ರತಿಗಳೊಂದಿಗೆ ಜು.30 ರೊಳಗೆ ಸಂಬಂಧಪಟ್ಟ ಎಲ್ಲ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
Post a Comment