Tuesday, 31 July 2018

ಜಾನಪದ ಸಂಗೀತ ಕಲಾತಂಡ : ಅವಧಿ ವಿಸ್ತರಣೆ


ಕೊಪ್ಪಳ,ಜು.31(ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗ್ರಾಮ ಸಂಪರ್ಕ ಕಾರ್ಯಕ್ರಮದಡಿ, ಸರ್ಕಾರದ ಅಭಿವೃದ್ಧಿಪರ ಯೋಜನೆಗಳನ್ನು ಬಿಂಬಿಸುವ ಜಾನಪದ ಸಂಗೀತ ಕಾರ್ಯಕ್ರಮ ಆಯೋಜನೆಗಾಗಿ ಜಿಲ್ಲೆಯ ನೋಂದಾಯಿತ ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಆಗಸ್ಟ್ 04 ರವರೆಗೆ ವಿಸ್ತರಿಸಲಾಗಿದೆ.
     ಈ ಮೊದಲು ಅರ್ಜಿ ಸಲ್ಲಿಸಲು ಜು. 30 ಕೊನೆಯ ದಿನವಾಗಿತ್ತು.  ಇದೀಗ ಅವಧಿಯನ್ನು ಆ. 04 ರವರೆಗೆ ವಿಸ್ತರಿಸಲಾಗಿದೆ.  ಪ್ರತಿ ಕಲಾತಂಡದಲ್ಲಿ ಕನಿಷ್ಟ 3 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಓರ್ವರು ಮಹಿಳೆಯರು, ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಕೊಪ್ಪಳ ಜಿಲ್ಲೆಯೂ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಗಾದರೂ ತೆರಳಿ ಕಾರ್ಯಕ್ರಮ ನೀಡಲು ಸಿದ್ಧರಿರಬೇಕು.  ಜಿಲ್ಲಾ ಮಟ್ಟದ ಸಮಿತಿಯು ತಂಡವನ್ನು ಆಯ್ಕೆ ಮಾಡಲಿದೆ.  ಸರ್ಕಾರದ ಅಭಿವೃದ್ಧಿಪರ ಯೋಜನೆಗಳನ್ನು ಬಿಂಬಿಸುವ ಹಾಡುಗಳನ್ನು ಜಾನಪದ ಶೈಲಿಯಲ್ಲಿ ಅಳವಡಿಸಿಕೊಂಡು, ಕಾರ್ಯಕ್ರಮವನ್ನು ಪ್ರಸ್ತುತಪಡಿಸುವ ಅನುಭವ ಹೊಂದಿರುವ ಕಲಾವಿದರಿಗೆ ಅವಕಾಶವಿರುತ್ತದೆ.  ವಿವಿಧ ಇಲಾಖೆಗಳಡಿ ಇಂತಹ ಕಾರ್ಯಕ್ರಮಗಳನ್ನು ಕೈಗೊಂಡಿರುವ ಅನುಭವ ಹೊಂದಿರುವುದು ಕಡ್ಡಾಯ.
     ಅರ್ಜಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ ಕಚೇರಿಯಿಂದ ಪಡೆದು ಭರ್ತಿ ಮಾಡಿ, ಕಲಾವಿದರ ಹೆಸರು, ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಪಾನ್ ಕಾರ್ಡ್ ಜೆರಾಕ್ಸ್ ಪ್ರತಿಗಳೊಂದಿಗೆ ಆಗಸ್ಟ್ 04 ರೊಳಗೆ ಸಂಬಂಧಪಟ್ಟ ಎಲ್ಲ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
Post a Comment