Wednesday, 11 July 2018

ಡೆಹರಾಡೂನ್ ಮಿಲಿಟರಿ ಶಾಲೆ 8ನೇ ತರಗತಿ ಪ್ರವೇಶ ಪರೀಕ್ಷೆ : ಅರ್ಜಿ ಆಹ್ವಾನ


ಕೊಪ್ಪಳ ಜು. 11 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಇಂಡಿಯನ್ ಮಿಲಿಟರಿ, ಡೆಹರಾಡೂನ್ ಕಾಲೇಜ್, 8ನೇ ತರಗತಿ ಪ್ರವೇಶಕ್ಕಾಗಿ ಕರ್ನಾಟಕ ರಾಜ್ಯದ ಬಾಲಕರಿಗೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
    ಜನೇವರಿ-2019ನೇ ಅಧಿವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹರಾಡೂನ್‍ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಡಿಸೆಂಬರ್. 01 ಮತ್ತು 02 ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿವೆ.  ಪರೀಕೆಗಾಗಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು 01-01-2019 ರಂತೆ 11.5 ರಿಂದ 13 ವರ್ಷದೊಳಗಿರಬೇಕು (ಅಂದರೆ ದಿನಾಂಕ 02-07-2006 ರಿಂದ 01-01-2008 ರೊಳಗೆ ಜನಿಸಿರಬೇಕು).  ಬಾಲಕರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.  ಸಂಸ್ಥೆಯ ಮುಖ್ಯ ಗುರಿ ಯುವಕರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ಧಗೊಳಿಸುವುದು ಹಾಗೂ ಸರ್ವರೀತಿಯ ವಿದ್ಯಾಭ್ಯಾಸ/ ತರಬೇತಿ ನೀಡುವುದು.  ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ ರೂ. 42,400 ಆಗಿರುತ್ತದೆ.  
ವಿವರಣೆ ಪತ್ರ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಅರ್ಜಿ ನಮೂನೆಯನ್ನು ಕೋರಿಕೆ ಪತ್ರದ ಮೇರೆಗೆ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು 560025, ಇಲ್ಲಿಂದ ದಿ ಕಮಾಂಡೆಂಟ್, ಆರೈಎಂಸಿ ಡೆಹ್ರಾಡೂನ್ (ಪೇಯಬಲ್ ಅಟ್ ಎಸ್‍ಬಿಐ ಟೆಲ್ ಭವನ್, ಡೆಹ್ರಾಡೂನ್- ಬ್ಯಾಂಕ್ ಕೋಡ್- 01576), ಇವರ ಹೆಸರಿನಲ್ಲಿ ಸೆಳೆದ ರೂ. 600 (ಸಾಮಾನ್ಯ ಅಭ್ಯರ್ಥಿಗಳಿಗೆ) ಮತ್ತು ರೂ. 555 (ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳಿಗೆ) ಡಿಮಾಂಡ್ ಡ್ರಾಪ್ಟ್ ಮೂಲಕ ಖುದ್ದಾಗಿ ಪಡೆಯಬಹುದಾಗಿದೆ.  ರಿಜಿಸ್ಟರ್ಡ್ ಪಾರ್ಸಲ್ ಮೂಲಕ ಅರ್ಜಿ ನಮೂನೆಗಳನ್ನು ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮೇಲೆ ತಿಳಿಸಿದ ಬ್ಯಾಂಕ್ ಡ್ರಾಪ್ಟ್‍ನೊಂದಿಗೆ 11" ಉದ್ದ ಮತ್ತು 9" ಅಳತೆಯ ಸೈಜಿನ ಸ್ವವಿಳಾಸದ ಲಕೋಟೆಯ ಮೇಲೆ ರೂ. 40 ಮೌಲ್ಯದ ಅಂಚೆ ಚೀಟಿ ಲಗತ್ತಿಸಿ ಕಳುಹಿಸಬೇಕು.  ಲಕೋಟೆಯ ಮೇಲೆ ಅಭ್ಯರ್ಥಿಯ ಪೂರ್ಣ ಅಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಮುನ್ಸಿಪಾಲಿಟಿ ಅಥವಾ ಗ್ರಾಮ ಪಂಚಾಯತ್ ಪ್ರಾಧಿಕಾರದಿಂದ ಪಡೆದ ಆಂಗ್ಲ ಭಾಷೆಯ ಜನನ ಪ್ರಮಾಣ ಪತ್ರ, ಪಾಸ್‍ಪೆÇೀರ್ಟ್ ಸೈಜಿನ 5 ಭಾವಚಿತ್ರ, ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರ ನೀಡಿದ ಜಾತಿ ಪ್ರಮಾಣ ಪತ್ರದ ಧೃಢಿಕರಣ ಪ್ರತಿ (ಆಂಗ್ಲ ಭಾಷೆಯ), ಪರೀಕ್ಷಾ ಪ್ರವೇಶ ಪತ್ರವನ್ನು ತ್ವರಿತ/ ನೊಂದಾಯಿತ ಅಂಚೆದ್ವಾರ ರವಾನಿಸಲು ರೂ. 40 ರ ಅಂಚೆ ಚೀಟಿ ಅಂಟಿಸಿದ ಸ್ವವಿಳಾಸ ಲಕೋಟೆ, ಶಾಲಾ ಮುಖ್ಯೋಪಾಧ್ಯಯರಿಂದ ಅಭ್ಯರ್ಥಿಯ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಪಡೆದ ಪ್ರಮಾಣ ಪತ್ರ ಮೂಲ ಪ್ರತಿ ಹಾಗೂ ತಹಶಿಲ್ದಾರರಿಂದ ಪಡೆದ ರಾಜ್ಯದ ವಾಸ ಸ್ಥಾಳ ಧೃಢಿಕರಣ ಪತ್ರ ಲಗತ್ತಿಸಿ ಸೆಪ್ಟೆಂಬರ್. 30 ರ ಒಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459 ಕ್ಕೆ ಅಥವಾ ಸಮೀಪದಲ್ಲಿರುವ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಬಾಗಲಕೋಟೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment