Thursday, 26 July 2018

ಹುಣ್ಣಿಮೆ : ಕನಕಾಚಲಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 12-15 ರವರೆಗೆ ಮಾತ್ರ ಸೇವೆ


ಕೊಪ್ಪಳ ಜು. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಜು. 27ರ ಶುಕ್ರವಾರದಂದು ಕಡ್ಲಿಗಡಬ ಹುಣ್ಣಿಮೆ ಇದ್ದು, ಅಂದು ಖಗ್ರಾಸ ಚಂದ್ರಗ್ರಹಣ ಇರುವುದರಿಂದ ಭಕ್ತಾದಿಗಳಿಗೆ ಮಧ್ಯಾಹ್ನ 12-15 ರವರೆಗೆ ಮಾತ್ರ ಸೇವೆಗೆ ಅವಕಾಶ ಇದೆ.
ಕನಕಾಚಲಪತಿ ದೇವಸ್ಥಾನದಲ್ಲಿ ಅಂದು ಸಾಯಂಕಾಲ 06-30 ರವರೆಗೆ ದರ್ಶನದ ವ್ಯವಸ್ಥೆ ಇದ್ದು, ನಂತರದಲ್ಲಿ ದರ್ಶನದ ವ್ಯವಸ್ಥೆ ಇರುವುದಿಲ್ಲ ಭಕ್ತಾದಿಗಳು ಸಹಕರಿಸಬೇಕಾಗಿ ಕನಕಾಚಲಪತಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
Post a Comment