Monday, 9 July 2018

ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನ : ಜು. 10 ರಂದು ಜಾಗೃತ ಸಮಿತಿ ಸಭೆಗೆ


ಕೊಪ್ಪಳ ಜು. 09 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮೂರನೇ ಸುತ್ತಿನ ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನ ಹಮ್ಮಿಕೊಳ್ಳುವ ಕುರಿತು ಜಿಲ್ಲಾ ಮಟ್ಟದ ಜಾಗೃತ ಸಮಿತಿಯ ಸಭೆಯನ್ನು ಜು. 10 ರಂದು ಮಧ್ಯಾಹ್ನ 3-45 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.    
    ಜಿಲ್ಲೆಯಾದ್ಯಂತ ಜು. 18 ರಿಂದ 21 ರವರೆಗೆ ಮೂರನೇ ಸುತ್ತಿನ ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನವನ್ನು ಹಮ್ಮಿಕೊಳ್ಳುವ ಕುರಿತು ಪೂರ್ವಭಾವಿ ಸಿದ್ದತೆಗಾಗಿ ಜಿಲ್ಲಾ ಮಟ್ಟದ ಜಾಗೃತ ಸಮಿತಿಯ ಸಭೆಯನ್ನು ಆಯೋಜಿಸಲಾಗಿದ್ದು, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ತಿಳಿಸಿದ್ದಾರೆ. 

Post a Comment