Thursday, 7 June 2018

ತಳಕಲ್ : ಐ.ಎಂ.ಸಿ ಕೋಟಾದಡಿಯಲ್ಲಿ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಜೂ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ತಳಕಲ್ ಗ್ರಾಮದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಐ.ಎಂ.ಸಿ ಕೋಟಾದಡಿಯಲ್ಲಿ ಐಟಿಐ ಪ್ರವೇಶಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
    ತಳಕಲ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ತರಬೇತಿ ಪ್ರವೇಶ ಪ್ರಕ್ರಿಯೆ ಸಂಬಂಧ ಜೋಡಣೆಗಾರ, ವಿದ್ಯುತ್ ಶಿಲ್ಪಿ ವೃತ್ತಿಗಳಿಗೆ ಐ.ಎಂ.ಸಿ ಕೋಟಾದಡಿಯಲ್ಲಿ ಮೀಸಲಿರುವ ತಲಾ 5 ಸೀಟುಗಳನ್ನು ಹಾಗೂ ವಿದ್ಯುನ್ಮಾನ ದುರಸ್ತಿಗಾರ ವೃತ್ತಿಯ 6 ಸೀಟು ಸೇರಿದಂತೆ ಒಟ್ಟು 16 ಸೀಟುಗಳನ್ನು ಐ.ಎಂ.ಸಿ ಕೋಟಾದಡಿಯಲ್ಲಿ ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲಿಚ್ಛಿಸುವರು ರೂ. 100 ಗಳನ್ನು ಪಾವತಿಸಿ ಸಂಸ್ಥೆಯಿಂದ ಅರ್ಜಿಯನ್ನು ಪಡೆದುಕೊಂಡು ಭರ್ತಿಮಾಡಿ, ಪ್ರಾಚಾರ್ಯರ ಕಾರ್ಯಾಲಯದಲ್ಲಿ ಜುಲೈ. 30 ರೊಳಗಾಗಿ ಸಲ್ಲಿಸಬೇಕು.  ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಸೀಟುಗಳನ್ನು ನೀಡಲಾಗುವುದು. 
    ಪ್ರವೇಶ ಪಡೆಯುವ ಅಭ್ಯರ್ಥಿಯು ಪ್ರವೇಶ ಪಡೆಯುವ ದಿನದಂದೇ ತಕ್ಷಣದಲ್ಲಿಯೇ ಐ.ಎಂ.ಸಿ ಶುಲ್ಕ ಹಾಗೂ ಸರಕಾರಿ ಶುಲ್ಕಗಳನ್ನು ಅದೇ ದಿನ ಭರ್ತಿ ಮಾಡಬೇಕು.  ಪ್ರವೇಶ ಪ್ರಕಿಯೆಗೆ ಸಂಬಂಧಿಸಿದಂತೆ ಐ.ಎಂ.ಸಿ ಕಮಿಟಿಯ ತೀರ್ಮಾನವೇ ಅಂತಿಮವಾಗಿರುತ್ತದೆ.  ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು/ ಕಾರ್ಯದರ್ಶಿ ಐ.ಎಂ.ಸಿ ಆಫ್ ಐಟಿಐ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ತಳಕಲ್ ಗ್ರಾಮ ಇವರನ್ನು ದೂರವಾಣಿ ಸಂಖ್ಯೆ 08534-239216, ಮೊ.ಸಂ-9902850748, 9902852362 ಕ್ಕೆ ಅಥವಾ ಖುದ್ದಾಗಿ ಸಂಪರ್ಕಿಸಬಹುದು ಎಂದು ತಳಕಲ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment