Wednesday, 13 June 2018

ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ : ಅರ್ಜಿ ಆಹ್ವಾನ


ಕೊಪ್ಪಳ ಜೂ. 13 (ಕರ್ನಾಟಕ ವಾರ್ತೆ): ಬಾಗಲಕೋಟೆ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗಾಗಿ ಒಂದನೇ ತರಗತಿಯಿಂದ ಅಂತಿಮ ವರ್ಷದ ಪದವಿ/ ಡಿಪೆÇ್ಲೀಮಾ ವರೆಗೆ ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಯ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಮೂಲ ನಿವಾಸಿ ಪಿಂಚಿಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಸ್ಟೈಫೆಂಡ್ ಪಡೆಯದೇ ಐಟಿಐ ಕಲಿಯುತ್ತಿರುವ ವಿದ್ಯಾರ್ಥಿಗಳು ಸಹ ಈ ಶಿಷ್ಯವೇತನಕ್ಕೆ ಅರ್ಹರಿರುತ್ತಾರೆ.  ಅರ್ಜಿ ಸಲ್ಲಿಸಲು ಸೆಪ್ಟೆಂಬರ್. 30 ಕೊನೆಯ ದಿನವಾಗಿದ್ದು, ಪ್ರಥಮ ಬಾರಿಗೆ ಶಿಷ್ಯವೇತನದ ಅರ್ಜಿಯನ್ನು ಸಲ್ಲಿಸುವಾಗ ಮಾಜಿ ಸೈನಿಕರ ಶಾಲಾ ಬಿಡುಗಡೆಯ ಪ್ರಮಾಣ ಪತ್ರದ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.  ಶಿಷ್ಯವೇತನವನ್ನು ಇಸಿಎಸ್ ಮೂಲಕ ಮಾಜಿ ಸೈನಿಕರ ವ್ಯಯಕ್ತಿಕ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ಮಾಜಿ ಸೈನಿಕರು ತಮ್ಮ ಹೆಸರಿನಲ್ಲಿರುವ ಎಸ್.ಬಿ.ಐ ಖಾತೆ ನಂಬರ್, ವಿಳಾಸ, ಬ್ರ್ಯಾಂಚ್ ಕೋಡ ನಂಬರ್ ಹಾಗೂ ಐ.ಎಫ್.ಎಸ್.ಸಿ. ಕೋಡ್ ನಂಬರ್‍ಗಳನ್ನು ಕಡ್ಡಾಯವಾಗಿ ನಮೂದಿಸಬೇಕು (ಎಸ್.ಬಿ.ಐ ಖಾತೆಗಳಿಗೆ ಆಧ್ಯತೆ ನೀಡಲಾಗಿದ್ದು, ಬೇರೆ ಬ್ಯಾಂಕ್ ಖಾತೆಗಳನ್ನು ಸ್ವೀಕರಿಸಲಾಗುವುದಿಲ್ಲ).  ಮಾಜಿ ಸೈನಿಕರು ತಮ್ಮ ಮಕ್ಕಳ ಆಧಾರ ಕಾರ್ಡ ನಂಬರನ್ನು ಕಡ್ಡಾಯವಾಗಿ ಅರ್ಜಿ ಫಾರಂನಲ್ಲಿ ನಮೂದಿಸಬೇಕು. 
    ಶುಲ್ಕ ರಹಿತ ಅರ್ಜಿಯನ್ನು ಉಪನಿರ್ದೇಶಕರು, ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟೆ ಇವರ ಕಛೇರಿಯಿಂದ ಜುಲೈ. 01 ರ ನಂತರ ಪಡೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08354-235434 ಕ್ಕೆ ಸಂಪರ್ಕಿಸುವಂತೆ ಬಾಗಲಕೋಟೆ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment