Thursday, 7 June 2018

ಪರಿಷತ್ ಚುನಾವಣೆ : ಮತದಾರರ ಗುರುತಿಗೆ ಪರ್ಯಾಯ 13 ದಾಖಲೆಗಳು


ಕೊಪ್ಪಳ ಜೂ. 06 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ನಿಯಮಾನುಸಾರ ನೊಂದಾಯಿತರಾಗಿರುವ ಮತದಾರರು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೇ, ಚುನಾವಣಾ ಆಯೋಗ ಪರ್ಯಾಯವಾಗಿ 13 ದಾಖಲೆಗಳನ್ನು ಸೂಚಿಸಿದ್ದು, ಈ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ ಎಂದು ಈಶಾನ್ಯ ಪದವಿಧರ ಮತ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
    ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆಗಾಗಿ ಭಾರತ ಚುನಾವಣಾ ಆಯೋಗವು ಜೂ. 08 ರಂದು ಮತದಾನವನ್ನು ನಿಗದಿಪಡಿಸಿದ್ದು, ಈ ಚುನಾವಣೆಯಲ್ಲಿ ನಿಯಮಾನುಸಾರ ನೊಂದಾಯಿತರಾಗಿರುವ ಮತದಾರರು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ (ಇ.ಪಿ.ಐ.ಸಿ) ಯನ್ನು ತೋರಿಸಿ ಮತದಾನ ಮಾಡಬಹುದು.  ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ (ಇ.ಪಿ.ಐ.ಸಿ) ಹೊಂದಿರದ ಮತದಾರರಿಗೆ ಪರ್ಯಾಯವಾಗಿ 13 ಬಗೆಯ ದಾಖಲೆಗಳನ್ನು ನಿಗದಿಪಡಿಸಿದೆ.  ಈ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯಿದ್ದಲ್ಲಿ, ಮತ ಚಲಾಯಿಸಬಹುದಾಗಿದೆ.
    ಮತದಾನಕ್ಕೆ ಪಾಸ್ ಪೆÇೀರ್ಟ, ಡ್ರೈವಿಂಗ್ ಲೈಸನ್ಸ್, ರಾಜ್ಯ/ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಬ್ಯಾಂಕ್/ ಅಂಚೆ ಕಛೇರಿ ನೀಡಿರುವ ಭಾವಚಿತ್ರವಿರುವ ಪಾಸ್‍ಬುಕ್ (ಮೇ. 31 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ತೆರೆದ ಖಾತೆಗಳು), ಆದಾಯ ತೆರೆಗೆ ಗುರುತಿನ ಚೀಟಿ (ಪಾನ್‍ಕಾರ್ಡ್), ಆರ್.ಜಿ.ಐ ಯಿಂದ ಎನ್.ಪಿ.ಆರ್ ಅಡಿಯಲ್ಲಿ ನೀಡಿರುವ ಸ್ಮಾರ್ಟ್‍ಕಾರ್ಡ್, ಆರೋಗ್ಯ ವಿಮಾ ಯೋಜನೆಯಡಿ ನೀಡಿದ ಭಾವಚಿತ್ರವಿರುವ ಸ್ಮಾರ್ಟಕಾರ್ಡ (ಮೇ. 31 ರವರೆಗೆ ನೀಡಿದ), ಭಾವಚಿತ್ರವಿರುವ ಪಿಂಚಣಿ ದಾಖಲಾತಿಗಳು, ಭಾವಚಿತ್ರವಿರುವ ಸ್ವಾತಂತ್ರ ಯೋಧರ ಗುರುತಿನ ಚೀಟಿಗಳು, ಭಾವಚಿತ್ರವಿರುವ ಶಸ್ತ್ರ ಪರವಾನಿಗೆ, ಸಕ್ಷಮ ಪ್ರಾಧಿಕಾರದಿಂದ ನೀಡಿದ ಭಾವಚಿತ್ರವಿರುವ ಅಂಗವಿಕಲ ದೃಢೀಕರಣ ಪತ್ರ, ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ ಕ್ಯಾಂಟಿನ್ ಕಾರ್ಡ್ ಹಾಗೂ ಆದಾರ ಕಾರ್ಡ, ಈ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ.  ಮತದಾನವನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತ ರೀತಿಯಿಂದ ಕೈಗೊಳ್ಳಲು ಮತದಾರರು ಸಹಕರಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment