Wednesday, 16 May 2018

ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ ಮೇ. 16 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿಗೆ ರೈತ ಮಕ್ಕಳಿಗೆ ಮುನಿರಾಬಾದ್ ನಲ್ಲಿರುವ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹತ್ತು ತಿಂಗಳ ತೋಟಗಾರಿಕೆ ತರಬೇತಿಯನ್ನು ನೀಡುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
    ತರಬೇತಿಯು ಜೂನ್. 01 ರಿಂದ ಆರಂಭವಾಗಲಿದ್ದು, ತರಬೇತಿಗಾಗಿ ಪ.ಜಾತಿ- 03, ಪ.ಪಂಗಡ-01 ಹಾಗೂ ಸಾಮಾನ್ಯ ವರ್ಗದ 16 ಅಭ್ಯರ್ಥಿಗಳಿಗೆ ಅವಕಾಶವಿದೆ.  ವಯೋಮಿತಿ  ಪ.ಜಾತಿ ಮತ್ತು ಪ.ಪಂಗಡದವರಿಗೆ ಕನಿಷ್ಟ 18, ಗರಿಷ್ಟ 33 ವರ್ಷ.  ಸಾಮಾನ್ಯ ವರ್ಗದವರಿಗೆ ಕನಿಷ್ಟ 18, ಗರಿಷ್ಟ 30 ವರ್ಷಗಳು.  ಅರ್ಜಿ ಸಲ್ಲಿಸಲು ಕನ್ನಡ ವಿಷಯದೊಂದಿಗೆ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು.  ಅಭ್ಯರ್ಥಿಯು ಚೆನ್ನಾಗಿ ಕನ್ನಡ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಬಲ್ಲವರಾಗಿರಬೇಕು.  ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ, ಅಭ್ಯರ್ಥಿಯ ತಂದೆ/ತಾಯಿ ಅಥವಾ ಪೆÇೀಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು.  ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು.  ಈ ಕುರಿತಂತೆ ಪಹಣಿ ನೀಡುವುದು ಕಡ್ಡಾಯ.  ಅಭ್ಯರ್ಥಿಗಳು ತೋಟದ ಕೆಲಸಗಳನ್ನು ಮಾಡುವಷ್ಟು ದೃಢಕಾಯರಾಗಿರಬೇಕು. 
ಅರ್ಜಿ ಶುಲ್ಕ ಪ.ಜಾತಿ/ ಪ.ಪಂಗಡದವರಿಗೆ ರೂ. 15, ಸಾಮಾನ್ಯ ವರ್ಗದವರಿಗೆ ರೂ. 30.  ಅರ್ಜಿ ಶುಲ್ಕವನ್ನು ಪೆÇೀಸ್ಟಲ್ ಆರ್ಡರ್ ಅಥವಾ ಡಿಡಿ ಯನ್ನು ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಕೊಪ್ಪಳ ಇವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆ ಲಗತ್ತಿಸಬೇಕು.  ನಿಗದಿತ ಅರ್ಜಿ ನಮೂನೆಯನ್ನು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.) ಕೊಪ್ಪಳ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಕೊಪ್ಪಳ ಇವರಿಂದ ಪಡೆಯಬಹುದು.  ಅಥವಾ   www.horticulture.kar.nic.in   ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.  ಭರ್ತಿ ಮಾಡಿದ ಅರ್ಜಿಯನ್ನು ಮೇ. 24 ರ ಮಧ್ಯಾಹ್ನ 1-30 ಗಂಟೆಯೊಳಗಾಗಿ ಸಲ್ಲಿಸಬೇಕು.  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೇ. 26 ರಂದು ಬೆಳಿಗ್ಗೆ 11 ಗಂಟೆಗೆ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಕಚೇರಿ, ಕೊಪ್ಪಳ ಇಲ್ಲಿ ಸಂದರ್ಶನ ನಡೆಸಲಾಗುವುದು.  ಅಭ್ಯರ್ಥಿಗಳು ಎಲ್ಲ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.  ಇದಕ್ಕಾಗಿ ಪ್ರತ್ಯೇಕ ಸಂದರ್ಶನ ಪತ್ರ ಕಳುಹಿಸಲಾಗುವುದಿಲ್ಲ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment