Wednesday, 9 May 2018

ಪ್ರಥಮ ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಮೇ. 08 (ಕರ್ನಾಟಕ ವಾರ್ತೆ): ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಆನ್‍ಲೈನ್ ಇಂಟರಾಕ್ಟಿವ್ ಕೌನ್ಸಲಿಂಗ್ ಮುಖಾಂತರ ಪ್ರಥಮ ಡಿಪೆÇ್ಲೀಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ನಮೂನೆ ಹಾಗೂ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್  www.dte.kar.nic.in ಮೂಲಕ ಡೌನ್‍ಲೋಡ್ ಮಾಡಿಕೊಂಡು ಅರ್ಜಿಯನ್ನು ಸಂಪೂರ್ಣ ಭರ್ತಿ ಮಾಡಿ, ನಿಗದಿಪಡಿಸಿದ ಅರ್ಜಿ ಶುಲ್ಕವನ್ನು (ಜಿ.ಎಂ./ 2ಎ/ 2ಬಿ/ 3ಎ.3ಬಿ ರೂ. 100/- & ಎಸ್‍ಸಿ/ ಎಸ್‍ಟಿ/ ಸಿಎಟಿ-1 ರೂ. 50/-) ರಾಜ್ಯದ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿನ ಖಾತೆ ಸಂಖ್ಯೆ:  ED-KEA-DCET-2017 ಅಪ್ಲಿಕೇಶನ್ ಫೀ ಕಲೇಕ್ಷನ್ ಅಕೌಂಟ್ ನಂ. 36843662415 ಐಎಫ್‍ಸಿ ಕೊಡ್-  SBIN0007080  ಗೆ ಪಾವತಿಸಿ, ಬ್ಯಾಂಕ್ ಚ್ಯಾನೆಲ್ (ಕೌಂಟರ್‍ಫೈಲ್) ನೊಂದಿಗೆ ಸರ್ಕಾರಿ ಪಾಲಿಟೆಕ್ನಿಕ್ ಕೊಪ್ಪಳ, ಸಂಸ್ಥೆಗೆ ಎಲ್ಲಾ ಮೂಲ ದಾಖಲಾತಿಗಳು ಮತ್ತು ಅವುಗಳ ಧೃಢೀಕರಿಸಿದ ನಕಲು ಪ್ರತಿಗಳೊಂದಿಗೆ ಆನ್‍ಲೈನ್‍ನಲ್ಲಿ ಮೇ. 28 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಪ್ರಿನ್ಸಿಪಾಲರ ಕಛೇರಿ, ಕೊಪ್ಪಳ ಸರ್ಕಾರಿ ಪಾಲಿಟೆಕ್ನಿಕ್ ದೂರವಾಣಿ ಸಂಖ್ಯೆ 9449432723, 9448715325 ಮತ್ತು 9481466097 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
Post a Comment