Saturday, 5 May 2018

ಅಬಕಾರಿ ಅಕ್ರಮ : ಬಹದ್ದೂರ ಬಂಡಿ ಕ್ರಾಸ್ ಬಳಿ ಮದ್ಯ ವಶ, ಇಬ್ಬರ ಬಂಧನ


ಕೊಪ್ಪಳ ಮೇ. 05 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಕೊಪ್ಪಳ ನಗರದ ಬಹದ್ದೂರ ಬಂಡಿ ಕ್ರಾಸ್ ಬಳಿ ಅಬಕಾರಿ ನಿಯಮ ಉಲ್ಲಂಘಿಸಿದ ಕುರಿತು ಪ್ರಕರಣಗಳು ದಾಖಲಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ  4. 950 ಲೀ. ಮದ್ಯ, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
         ನೀತಿ ಸಂಹಿತೆ ಜಾರಿಯಲ್ಲಿದ್ದು, ಅಬಕಾರಿ ಇಲಾಖೆಯು, ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ತೀವ್ರ ನಿಗಾ ವಹಿಸುತ್ತಿದೆ.  ಕೊಪ್ಪಳ ನಗರದ ಬಹದ್ದೂರ ಬಂಡಿ ಕ್ರಾಸ್ ಬಳಿ ಗುರುವಾರದಂದು ಬೆಳಿಗ್ಗೆ 11-45 ಗಂಟೆ ಸುಮಾರಿಗೆ ದ್ವಿಚಕ್ರ ವಾಹನ ಮೂಲಕ  ಅಕ್ರಮವಾಗಿ 4. 950 ಲೀ. ಮದ್ಯ ಸಾಗಿಸುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ದ್ವಿಚಕ್ರ ವಾಹನ ಹಾಗೂ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.  ಈ ಸಂಬಂಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿಗಳಾದ ಕುತುಬುದ್ದೀನ ನದಾಫ ಹಾಗೂ ಶರಣಪ್ಪ ಗದ್ದಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, ಮದ್ಯ ಮತ್ತು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಆರೋಪಿಗಳ ವಿರುದ್ದ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದೆ.   ಆರೋಪಿಗಳನ್ನು ಕೊಪ್ಪಳ ನ್ಯಾಯಾಲಯಕ್ಕೆ ಹಾಜರುಪಡಿಸಿ ಅಬಕಾರಿ ನಿರೀಕ್ಷಕರಾದ ಎ.ಎಚ್. ಕೃಷ್ಣಮೂರ್ತಿ ಹಾಗೂ ಉಪ ನಿರೀಕ್ಷಕ ಎಂ.ಎಲ್. ಕಣಬರಕರ್, ಅಬಕಾರಿ ಉಪ ಅಧೀಕ್ಷಕ ಎಂ.ಎಸ್. ನಾರಾಯಣ ನಾಯ್ಕ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.  ಕಾರ್ಯದ ಅಬಕಾರಿ ರಕ್ಷಕರಾದ ಅಲ್ಪೂರಪ್ಪ, ವಾಹನ ಚಾಲಕ ಶಿವಾನಂದ ದಿಂಡವಾರ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳಾದ ಪವಾಡೆಪ್ಪ ಘಂಟಿ ಮತ್ತು ರಂಗಪ್ಪ ದೊಡ್ಡಮನಿ ಹಾಗೂ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.
Post a Comment