Wednesday, 9 May 2018

ಎಸ್.ಎಸ್.ಎಲ್.ಸಿ ಫಲಿತಾಂಶ : ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಶಾಲೆಗಳ ಉತ್ತಮ ಸಾಧನೆ


ಕೊಪ್ಪಳ ಮೇ. 08 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶವು ಪ್ರಕಟಗೊಂಡಿದ್ದು, ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಉತ್ತಮ ಸಾಧನೆ ಮಾಡಿವೆ. 
    ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಕನೂರಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 43 ವಿದ್ಯಾರ್ಥಿಗಳಲ್ಲಿ 08 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 33 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಇಬ್ಬರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ಶಾಲೆಯು ಶೇ.100 ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ.  ತಳಕಲ್ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 55 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 32 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ಶಾಲೆಯು ಶೇ.100 ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ.  ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಟಣಕನಕಲ್ – ಶೇ.98.30 ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಿರೇಬೆಣಕಲ್-1 ಶೇ. 94.44 ರಷ್ಟು ಸಾಧನೆ ಮಾಡಿವೆ.
    ಕುಕನೂರಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚೈತ್ರಾ ತೋಂಟದಾರ್ಯಮಠ ಶೇ.91.68 ಪ್ರಥಮ, ಶಶಿಧರ ಶೇ.90.24 ದ್ವಿತೀಯ, ಪ್ರಿಯಾಂಕ ಶೇ.90.08 ತೃತೀಯ ಸ್ಥಾನ ಪಡೆದಿದ್ದಾರೆ.  ಹಾಗೂ ಚೈತ್ರಾ ತೋಂಟದಾರ್ಯಮಠ, ಬಸವರಾಜ, ಶಶೀಧರ, ದಾವೂದ್ ಅಲಿ, ಮಂಜುಳಾ ಹಿರೇಮಠ, ಮುದ್ದವ್ವ ಈ ಆರು ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದಿದ್ದಾರೆ.  ತಳಕಲ್ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಕಾಶ ಶೇ.95.02 ಪ್ರಥಮ, ಮಹಾಲಕ್ಷ್ಮೀ ಶೇ.92.16 ದ್ವಿತೀಯ, ಸುರೇಶ ಶೆ.91.84 ತೃತೀಯ ಸ್ಥಾನ ಪಡೆದಿದ್ದಾರೆ.  ಹಾಗೂ ಮಹಮ್ಮದ ಅಜರ್, ಸಲಿಂ, ಮಹಾಲಕ್ಷ್ಮೀ ಈ ಮೂರು ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದಿದ್ದಾರೆ.  ಟಣಕನಕಲ್ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ವಪ್ನಾ ಶೇ.94.08 ಪ್ರಥಮ, ಪ್ರದೀಪ ಶೇ.92.32 ದ್ವಿತೀಯ, ನಾಗರಾಜ್ ಶೇ.92.00 ತೃತೀಯ ಸ್ಥಾನ ಪಡೆದಿದ್ದಾರೆ.  ಮಂಜುನಾಥ, ಪ್ರದೀಪ, ಸ್ವಪ್ನಾ ಈ ಮೂರು ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದಿದ್ದಾರೆ.  ಹಿರೇಬೆಣಕಲ್ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೀಣ ಕುಮಾರ ಮತ್ತು ತಿರುಪತಿ ಮಂಜುನಾಥ ಶೇ.89.44 ಪ್ರಥಮ, ಸಹನಾ ಹಿರೇಮಠ ಶೇ.89.28 ದ್ವಿತೀಯ, ಹುಲಿಗೆಮ್ಮ ಹುಲಿಗೆಪ್ಪ ಶೇ.87.84 ತೃತೀಯ ಸ್ಥಾನ ಪಡೆದಿದ್ದಾರೆ.  ಹಾಗೂ ತಿರುಪತಿ, ಹುಲಿಗೆಮ್ಮ, ಬುದ್ದಮ್ಮ ಈ ಮೂರು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment