Friday, 4 May 2018

ಚೆಕ್‍ಪೋಸ್ಟ್‍ಗಳಲ್ಲಿ ತೀವ್ರಗೊಂಡ ತಪಾಸಣೆ



ಕೊಪ್ಪಳ ಮೇ. 04 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆ ಸಂಬಂಧ, ಮತದಾನ ದಿನ ಸಮೀಪಿಸುತ್ತಿದ್ದು, ಅಕ್ರಮವಾಗಿ ನಗದು, ಸಾಮಗ್ರಿ, ಮದ್ಯ ಸಾಗಾಣಿಕೆ ತಡೆಗಟ್ಟಲು ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.

  ಜಿಲ್ಲೆಯ ವಿವಿಧೆಡೆ ಸುಮಾರು 11 ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ಪ್ರತಿಯೊಂದು ವಾಹನಗಳ ಮೇಲೂ ಹದ್ದಿನ ಕಣ್ಣು ಇರಿಸಲಾಗಿದೆ.  ಕಾರು, ಬಸ್, ಜೀಪ್ ಸೇರಿದಂತೆ ಎಲ್ಲ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದ್ದು, ಚೆಕ್‍ಪೋಸ್ಟ್‍ನಲ್ಲಿ ಸರದಿಯ ಮೇಲೆ ಸಿಬ್ಬಂದಿಗಳು ದಿನದ 24 ಗಂಟೆಗಳೂ ಕಾರ್ಯ ನಿರತರಾಗಿದ್ದಾರೆ.  ಚೆಕ್‍ಪೋಸ್ಟ್‍ಗಳಲ್ಲಿ ಸಾರಿಗೆ ಬಸ್‍ಗಳನ್ನೂ ಬಿಡದಂತೆ, ಎಲ್ಲ ಬಗೆಯ ವಾಹನಗಳನ್ನೂ ತಪಾಸಣೆ ಮಾಡಲಾಗುತ್ತಿದೆ ಎಂದು ಯಲಬುರ್ಗಾ ತಾಲೂಕು ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಜೆಸ್ಕಾಂನ ಎಇಇ ಮಹಮದ್ ಕಲೀಮುದ್ದೀನ್ ಅವರು ತಿಳಿಸಿದ್ದಾರೆ.
Post a Comment