Friday, 4 May 2018

ಚುನಾವಣಾ ದೂರು : ಗ್ರಾ.ಪಂ. ಗಳಲ್ಲಿ ದೂರವಾಣಿ ಸಂಖ್ಯೆ ಪ್ರದರ್ಶನಕ್ಕೆ ಸೂಚನೆ


ಕೊಪ್ಪಳ ಮೇ. 04 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ದೂರುಗಳಿಗಾಗಿ ಗ್ರಾಮ ಪಂಚಾಯತಿಗಳ ನಾಮ ಫಲಕಗಳಲ್ಲಿ ದೂರವಾಣಿ ಸಂಖ್ಯೆಯನ್ನು ಪ್ರದರ್ಶಿಸುವಂತೆ ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಗ್ರಾ.ಪಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
    ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಮೇ. 12 ರಂದು ಸಾರ್ವತ್ರಿಕ ಮತದಾನವಿದ್ದು, ಇದರ ಪ್ರಯುಕ್ತ ಸಾರ್ವಜನಿಕರಿಗೆ ಯಾವುದಾದರೂ ಆಕ್ಷೇಪಣೆಗಳು, ದೂರುಗಳು ಇದ್ದಲ್ಲಿ "08539-225001" ದೂರವಾಣಿ ಸಂಖ್ಯೆಗೆ ಯಾವುದೇ ಸಮಯದಲ್ಲಿ ಕರೆ ಮಾಡಿ ದೂರುಗಳನ್ನು ನೀಡಬಹುದು ಎಂದು ಗ್ರಾಮ ಪಂಚಾಯತಿಗಳ ಮುಂಭಾಗದಲ್ಲಿ ನಾಮ ಫಲಕದ ಮೇಲೆ ಈ ವಿಷಯವನ್ನು ದಾಖಲಿಸಿ, ಪ್ರದರ್ಶಿಸಲು ಎಲ್ಲಾ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment