Saturday, 5 May 2018

ಕೊಪ್ಪಳ : ಸರ್ಕಾರಿ ಶುಲ್ಕ ಬೇಬಾಕಿ ಇಲ್ಲವೆಂದು ಹತ್ತೂ ಅಭ್ಯರ್ಥಿಗಳಿಂದ ಘೋಷಣೆ ಸಲ್ಲಿಕೆ


ಕೊಪ್ಪಳ ಮೇ. 05 (ಕರ್ನಾಟಕ ವಾರ್ತೆ): ಕೊಪ್ಪಳ ವಿಧಾನಸಭಾ ಕ್ಷೇತ್ರ ಚುನಾವಣೆಗೆ ನಾಮಪತ್ರ ಸಲ್ಲಿಸಿ, ಅಂತಿಮವಾಗಿ ಉಮೇದುವಾರರಾಗಿರುವ ಎಲ್ಲ 10 ಅಭ್ಯರ್ಥಿಗಳು, ಯಾವುದೇ ಸರ್ಕಾರಿ ಶುಲ್ಕ ಬೇಬಾಕಿ ಇರುವುದಿಲ್ಲ ಎಂಬುದಾಗಿ ಘೋಷಣಾ ಪತ್ರ ಸಲ್ಲಿಸಿರುತ್ತಾರೆ.
     ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅಮರೇಶ ಕರಡಿ- ಬಿಜೆಪಿ, ಕೆ.ಎಂ. ಸೈಯದ್- ಜೆಡಿಎಸ್, ಕೆ. ರಾಘವೇಂದ್ರ ಹಿಟ್ನಾಳ- ಕಾಂಗ್ರೆಸ್, ಮಂಜುನಾಥ ಪಲ್ಲೇದ- ಜನಹಿತ ಪಕ್ಷ, ಹನುಮೇಶಗೌಡ ಮ್ಯಾಗಳಮನಿ- ಸಿಪಿಐ(ಎಂಎಲ್), ಪಂಪಾಪತಿ ರಾಟಿ-ಪಕ್ಷೇತರ, ಹಡಪದ ಮಲ್ಲಿಕಾರ್ಜುನ ನಿಜಗುಣಪ್ಪ- ಪಕ್ಷೇತರ, ಸಂಜಯ- ಪಕ್ಷೇತರ, ಸಿದ್ದರಾಮಪ್ಪ ದೊಡ್ಡಮನಿ- ಪಕ್ಷೇತರ ಹಾಗೂ ಸುರೇಶಗೌಡ ಪಾಟೀಲ್- ಪಕ್ಷೇತರ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು ಉಮೇದುವಾರರಾಗಿದ್ದು, ಎಲ್ಲ ಹತ್ತೂ ಉಮೆದುವಾರರು ಯಾವುದೇ ಸರ್ಕಾರಿ ಶುಲ್ಕ ಬಾಕಿ ಇರುವುದಿಲ್ಲ ಎಂಬುದಾಗಿ ಹೆಚ್ಚುವರಿ ಘೋಷಣಾ ಪತ್ರವನ್ನು ಕೊಪ್ಪಳ ಕ್ಷೇತ್ರ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುತ್ತಾರೆ ಎಂದು ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment