Thursday, 3 May 2018

ಅಬಕಾರಿ ಅಕ್ರಮ : ಗಂಗಾವತಿಯಲ್ಲಿ ಇಬ್ಬರ ಬಂಧನ


ಕೊಪ್ಪಳ ಮೇ. 03 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಗಂಗಾವತಿ ನಗರದ ಕನಕದಾಸ ವೃತ್ತ ಬಳಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ ಕುರಿತು ಪ್ರಕರಣಗಳು ದಾಖಲಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ  7. 740 ಲೀ. ಮದ್ಯ, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
     ನೀರಿ ಸಂಹಿತೆ ಜಾರಿಯಲ್ಲಿದ್ದು, ಅಬಕಾರಿ ಇಲಾಖೆಯು, ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ತೀವ್ರ ನಿಗಾ ವಹಿಸುತ್ತಿದೆ.  ಚೆಕ್‍ಪೋಸ್ಟ್‍ಗಳಲ್ಲಿಯೂ ಕೂಡ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.   ಗಂಗಾವತಿ ನಗರದ ಕನಕದಾಸ ವೃತ್ತ ಬಳಿ ಗುರುವಾರದಂದು ರಾತ್ರಿ ದ್ವಿಚಕ್ರ ವಾಹನ ಮೂಲಕ  ಅಕ್ರಮವಾಗಿ 7. 740 ಲೀ. ಮದ್ಯ ಸಾಗಿಸುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ದ್ವಿಚಕ್ರ ವಾಹನ ಹಾಗೂ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.  ಈ ಸಂಬಂಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿಗಳಾದ ವಿರುಪಾಪುರ ನಗರದ ಲಕ್ಷ್ಮಣ ಹಾಗೂ ಯಮನೂರಪ್ಪ ಅವರನ್ನು ಬಂಧಿಸಲಾಗಿದೆ.   ಗಂಗಾವತಿ ತಹಸಿಲ್ದಾರ್ ಸಂತೋಷದೇವಿ ರಾಣಿ ಸಮ್ಮುಖದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಬಕಾರಿ ನಿರೀಕ್ಷಕ ಮಹದೇವ ಪೂಜಾರಿ, ಅಬಕಾರಿ ಉಪ ನಿರೀಕ್ಷಕ ಈಶ್ವರಪ್ಪ,  ಸಿಬ್ಬಂದಿಗಳಾದ ನಾಗಪ್ಪ, ಯಮನೂರಪ್ಪ, ಸಂತೋಷ, ಜಗದೀಶ ಹಾಗೂ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.


Post a Comment