Saturday, 12 May 2018

ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಸಖಿ ಮತಗಟ್ಟೆಯಲ್ಲಿ ಮತದಾನ



ಕೊಪ್ಪಳ ಮೇ. 12 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆ ಅಂಗವಾಗಿ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಶನಿವಾರದಂದು ಕೊಪ್ಪಳ ನಗರದ ಪಿಎಲ್‍ಡಿ ಬ್ಯಾಂಕ್‍ನಲ್ಲಿ ಸ್ಥಾಪಿಸಲಾಗಿರುವ ಸಖಿ (ಪಿಂಕ್) ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಶನಿವಾರದಂದು ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾದ ಕೆಲ ನಿಮಿಷಗಳಲ್ಲಿಯೇ ಕೊಪ್ಪಳದ ಪಿಎಲ್‍ಡಿ ಬ್ಯಾಂಕ್‍ ನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ ಸಂಖ್ಗೆಯೆ 126 ಕ್ಕೆ ಉತ್ಸಾಹದಿಂದ ಆಗಮಿಸಿ, ತಮ್ಮ ಮತ ಚಲಾಯಿಸಿದರು. ಅಲ್ಲದೆ ಮತ ಚಲಾಯಿಸಿದ ಬೆರಳನ್ನು ತೋರಿಸುವ ಮೂಲಕ ಇತರರಿಗೂ ಮತದಾನಕ್ಕೆ ಪ್ರೇರೇಪಿಸಿದರು. ಪಿಂಕ್ ಮತಗಟ್ಟೆಗೆ ಮತ ಚಲಾಯಿಸಲು ಜಿಲ್ಲಾಧಿಕಾರಿಗಳು ಪಿಂಕ್ ಬಣ್ಣದ ತೊಡುಗೆಯನ್ನು ಧರಿಸಿ ಆಗಮಿಸಿದ್ದು, ವಿಶೇಷವೆನಿಸಿತು.




Post a Comment