Wednesday, 2 May 2018

ಮೇ. 18 ರಂದು ಮಾವು ಮೇಳ : ಹೆಸರು ನೋಂದಣಿಗೆ ರೈತರಿಗೆ ಸೂಚನೆ


ಕೊಪ್ಪಳ ಮೇ. 02 (ಕರ್ನಾಟಕ ವಾರ್ತೆ):  ಕೊಪ್ಪಳ ತೋಟಗಾರಿಕೆ ಇಲಖೆ ವತಿಯಿಂದ ಮಾವು ಮೇಳವನ್ನು ಮೇ. 18 ರಂದು ತೋಟಗಾರಿಕೆ ಆವರಣದಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಆಸಕ್ತ ರೈತರು ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಇಲಾಖೆ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ತಿಳಿಸಿದ್ದಾರೆ.  
ಕೊಪ್ಪಳ ತೋಟಗಾರಿಕೆಯ ಕಛೇರಿಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕಿನ ಎಲ್ಲ ಅಧಿಕಾರಿಗಳೊಂದಿಗೆ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ "ಮಾವು ಮೇಳ" ಆಯೋಜನೆಯ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ರೈತರಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣುಗಳನ್ನು ಯೋಗ್ಯ ದರದಲ್ಲಿ ಒದಗಿಸುವ ಉದ್ದೇಶದಿಂದ ಈ ವರ್ಷವೂ ಸಹ ಮಾವು ಮೇಳವನ್ನು ಮೇ. 18 ರಿಂದ 10 ದಿನಗಳ ಕಾಲ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.  ಜಿಲ್ಲೆಯ ಸಮಸ್ತ ಮಾವು ಬೇಳೆಗಾರರು  ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಉತ್ಪನ್ನವನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಯೋಗ್ಯ ಬೆಲೆಗೆ ಮಾರಾಟ ಮಾಡಿಕೊಳ್ಳಲು ತೋಟಗಾರಿಕೆ ಇಲಾಖೆಕೆಯಿಂದ ಅವಕಾಶ ಕಲ್ಪಿಸಲಾಗಿದೆ.  ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಹಣ್ಣುಗಳು ಒಂದು ತಿಂಗಳು ತಡವಾಗಿ ಕಟಾವಿಗೆ ಬರುವ ಸಾಧ್ಯತೆ ಇದ್ದು, ಇನ್ನೂ ಸಮಯಾವಕಾಶ ಇರುವುದರಿಂದ ರೈತರು ವೈಜ್ಞಾನಿಕ ರೀತಿಯಲ್ಲಿ ಕಾಯಿಗಳನ್ನು ಕಟಾವು ಮಾಡಿ ನೈಸರ್ಗಿಕವಾಗಿ ಮಾಗಿಸಿ ಮೇಳಕ್ಕೆ ತರಬೇಕು.  ಮತ್ತು ಯಾವುದೇ ಕಾರಣಕ್ಕೂ ಕ್ಯಾಲ್ಸಿಯಂ ಕಾರ್ಬೈಡ್ ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸಬಾರದು. 
ರೈತರು ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಹಣ್ಣು ಮಾಗಿಸುವ ಘಟಕದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.  ಇಲ್ಲಿ ವೈಜ್ಞಾನಿಕವಾಗಿ ಹಣ್ಣುಗಳನ್ನು ಮಾಗಿಸಬಹುದಾಗಿದ್ದು, ಈ ಘಟಕದ ಸಾಮಥ್ರ್ಯ 10 ಟನ್‍ಗಳಷ್ಟು ಇರುತ್ತದೆ.  ರೈತರು ಇದರ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.  ಮೇಳದಲ್ಲಿ ಭಾಗವಹಿಸಲು ಆಸಕ್ತ ಮಾವು ಬೆಳೆಗಾರರು ಮೇ. 10 ರೊಳಗಾಗಿ ಕಛೇರಿ ಸಮಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ, ತಮ್ಮ ಜಮೀನಿನ ವಿವರ, ಗ್ರಾಮ, ವಿವಿಧ ತಳಿಗಳ ವಿವರ, ಮರಗಳ ಸಂಖ್ಯೆ ಹಾಗೂ ಒಟ್ಟು ಮಾವು ಬೆಳೆಯ ವಿಸ್ತೀರ್ಣ ಮುಂತಾದ ವಿವರಗಳನ್ನು  ನೀಡಿ ನೋಂದಣಿ ಮಾಡಿಕೊಳ್ಳಬೇಕು. 
ಈಗಾಗಲೇ ಕೆಲವು ತಾಕುಗಳಲ್ಲಿ ಹಣ್ಣು ಕಟಾವಿಗೆ ಬಂದಿರುವುದರಿಂದ ಅಂತಹ ರೈತರು ಇಲಾಖೆಯನ್ನು ಸಂಪರ್ಕಿಸಿದಲ್ಲಿ ಕೂಡಲೇ ಅವರಿಗೆ ಸೂಕ್ತ ಮಾರುಕಟ್ಟೆ ಒದಗಿಸಿಕೊಡಲಾಗುವುದು ಮತ್ತು ತಾತ್ಕಾಲಿಕವಾಗಿ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ) ಕೊಪ್ಪಳ ಕಛೇರಿಯ ಆವಾರಣದಲ್ಲಿಯೇ ಯೋಗ್ಯ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತೋಟಗಾರಿಕೆ ಇಲಾಖೆ ಕಛೇರಿ ದೂರವಾಣಿ ಸಂಖ್ಯೆ 08539-231530, ಇಲಾಖಾ ಉಪ ನಿರ್ದೇಶಕರು ಕೃಷ್ಣ ಉಕ್ಕುಂದ ಮೊ.ಸಂ-9448999237, ಸಹಾಯಕ ತೋಟಗಾರಿಕೆ ನಿರ್ದೇಶಕರು ಶಿವಯೋಗಪ್ಪ ಮೊ.ಸಂ – 9743518608, ಹಾಗೂ ವಿಷಯ ತಜ್ಞ ವಾಮನಮೂರ್ತಿ ಮೊ.ಸಂ-9482672039 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.  
Post a Comment