Wednesday, 16 May 2018

ಮೇ. 17 ರಂದು ಕೊಪ್ಪಳದಲ್ಲಿ ಅಂತರಾಷ್ಟ್ರೀಯ ಕಾಂಗರೋ ಮಾದರಿ ಆರೈಕೆ ದಿನಾಚರಣೆ


ಕೊಪ್ಪಳ ಮೇ. 16 (ಕರ್ನಾಟಕ ವಾರ್ತೆ): ಕೊಪ್ಪಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ, ಹಾಗೂ ಸೆಂಟ್‍ಜಾನ್ಸ್ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಇವರ ಸಹಯೋಗದಲ್ಲಿ "ಅಂತರಾಷ್ಟ್ರೀಯ ಕಾಂಗರೂ ಮಾದರಿ ಆರೈಕೆ (ಕೆ.ಎಂ.ಸಿ) ದಿನಾಚರಣೆ" ಕಾರ್ಯಕ್ರಮ ಮೇ. 17 ರಂದು ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ.
    ವಿಶ್ವ ಆರೋಗ್ಯ ಸಂಸ್ಥೆ ಅನುದಾನಿತ "ಕಾಂಗರೂ ಮದರ್ ಕೇರ್" ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಹಾಗೂ ಸೆಂಟ್‍ಜಾನ್ಸ್ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಜೊತೆಗೂಡಿ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಅನುಷ್ಠಾನಗೊಳಿಸಿದ್ದು, ಯೋಜನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಒಳಗಾಗಿದ್ದರಿಂದ ಜಿಲ್ಲೆಯಲ್ಲಿ ಮೇ. 17 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಆಸ್ಪತ್ರೆಯಲ್ಲಿ "ಅಂತರಾಷ್ಟ್ರೀಯ ಕಾಂಗರೂ ಮಾದರಿ ಆರೈಕೆ (ಕೆ.ಎಂ.ಸಿ)" ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.  ಹಾಗೂ ದಿನಾಚರಣೆಯ ಅಂಗವಾಗಿ ರಸಪ್ರಶ್ನೆ, ಚಿತ್ರಕಲೆ, ಅನುದಾನ ಹಂಚಿಕೆ, ಆರೋಗ್ಯ ಆಧಾರಿತ ಕ್ರೀಡೆಗಳು, ಏಕಪಾತ್ರಾಭಿನಯ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Post a Comment