Monday, 30 April 2018

ಅಬಕಾರಿ ಅಕ್ರಮ : ಹಣವಾಳ ಗ್ರಾಮ ಬಳಿ ಅಕ್ರಮ ಮದ್ಯ ವಶ


ಕೊಪ್ಪಳ ಏ. 30 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಗಂಗಾವತಿ ತಾಲೂಕು ಹಣವಾಳ ಗ್ರಾಮ ಬಳಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ ಕುರಿತು ಪ್ರಕರಣಗಳು ದಾಖಲಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ 18. 90 ಲೀ. ಮದ್ಯ  ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.
     ನೀರಿ ಸಂಹಿತೆ ಜಾರಿಯಲ್ಲಿದ್ದು, ಅಬಕಾರಿ ಇಲಾಖೆಯು, ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ತೀವ್ರ ನಿಗಾ ವಹಿಸುತ್ತಿದೆ.  ಚೆಕ್‍ಪೋಸ್ಟ್‍ಗಳಲ್ಲಿಯೂ ಕೂಡ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.   ಗಂಗಾವತಿ ತಾಲೂಕಿನ ಹಣವಾಳ ಗ್ರಾಮ ಬಳಿ ಭಾನುವಾರದಂದು ರಾತ್ರಿ ದ್ವಿಚಕ್ರ ವಾಹನ ಮೂಲಕ  ಅಕ್ರಮವಾಗಿ 18. 90 ಲೀ. ಮದ್ಯ ಸಾಗಿಸುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ದ್ವಿಚಕ್ರ ವಾಹನ ಹಾಗೂ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.  ಈ ಸಂಬಂಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ.   ಅಬಕಾರಿ ನಿರೀಕ್ಷಕ ಮಹದೇವ ಪೂಜಾರಿ, ಅಬಕಾರಿ ಉಪ ನಿರೀಕ್ಷಕ ಈಶ್ವರಪ್ಪ,  ಸಿಬ್ಬಂದಿಗಳಾದ ನಾಗಪ್ಪ, ಯಮನೂರಪ್ಪ, ಸಂತೋಷ, ಜಗದೀಶ ಹಾಗೂ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.
Post a Comment