Monday, 23 April 2018

ಕೊಪ್ಪಳ: ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮತದಾನ ಜಾಗೃತಿ


ಕೊಪ್ಪಳ ಏ. 23 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ ವತಿಯಿಂದ ಕೊಪ್ಪಳ ನಗರದ ಹಾಗೂ ತಾಲೂಕಿನ ಹಟ್ಟಿ ಗ್ರಾಮದ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳು ಜರುಗಿದವು.  
ಕೊಪ್ಪಳ ಶಿಶು ಅಭಿವೃದ್ದಿ ಯೋಜನೆಯ ಕೊಪ್ಪಳ ನಗರದ ಗೌರಿ ಅಂಗಳ ಅಂಗನವಾಡಿ ಕೇಂದ್ರದಲ್ಲಿ ಮತದಾರರಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮೇ. 12 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಬೇಕು.  ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಎಲ್ಲರೂ ಮತದಾನ ಮಾಡಬೇಕು.  ನಾವು ಮತದಾನ ಮಾಡುವುದರ ಜೊತೆಗೆ ನಮ್ಮ ಅಕ್ಕಪಕ್ಕದ ಮತದಾರೆಲ್ಲರಿಗೂ ಮತದಾನ ಮಾಡುವಂತೆ ಪ್ರೇರಪಿಸಬೇಕು ಎಂದರು.  ವಲಯ ಮೇಲ್ವಿಚಾರಕಿ ಲಕ್ಷ್ಮೀದೇವಿ ರೆಡ್ಡಿ, ಉಪಸ್ಥಿತರಿದ್ದರು.  ಹಾಗೂ ರೇಲ್ವೆ ಸ್ಟೇಶನ್ ಏರಿಯಾದಲ್ಲಿಯು ಸಹ ಕಾರ್ಯಕ್ರಮ ನಡೆಯಿತು.  ನಗರದ ವಡ್ಡರ ಓಣಿ, ಬಸವೇಶ್ವರ ನಗರ-1 ಮತ್ತು 2, ಛಲವಾದಿ ಓಣಿ, ಸಜ್ಜಿಹೊಲ-2 ಅಂಗನವಾಡಿ ಕೇಂದ್ರದಲ್ಲಿ ನಡೆದ ಮತದಾನದ ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಬಸವ್ವ, ಎಲ್ಲರೂ ಕಡ್ಡಾಯವಾಗಿ ಮೇ. 12 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಿದರು.  
ತಾಲೂಕಿನ ಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ಮತದಾನದ ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಕೊಪ್ಪಳ ಶಿಶು ಅಬಿವೃಧ್ದಿ ಯೋಜನಾಧಿಕಾರಿ ಸಿಂಧು ಅಂಗಡಿ ಅವರು ಮಾತನಾಡಿ, ನಮ್ಮ ಮತ ನಮ್ಮ ಹಕ್ಕು, ಮತದಾನವು ನಮ್ಮೆಲರಿಗೂ ಸಂವಿಧಾನಭದ್ದವಾಗಿ ದೊರೆತ ಹಕ್ಕು.  ಮತ ಚಲಾಯಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.  ಮೇ. 12 ರಂದು ನಡೆಯುವ ಕರ್ನಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಹಾಗೂ ನಿಮ್ಮ ನೆರೆಹೋರೆಯವರನ್ನು ಸಹ ಮತದಾನ ಮಾಡುವಂತೆ ಪ್ರೇರೆಪಿಸಿ ಶೇ.100 ರಷ್ಟು ಮತದಾನ ಯಶಸ್ವಿಗೊಳಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಜಾಗೃತಿ ಮೂಡಿಸಿದರು. 
Post a Comment