Monday, 23 April 2018

ಗಂಗಾವತಿ: ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮತದಾನ ಜಾಗೃತಿ


ಕೊಪ್ಪಳ ಏ. 23 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಂಗಾವತಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ ವತಿಯಿಂದ ಗಂಗಾವತಿ ತಾಲೂಕಿನ ಆನೆಗುಂದಿ ವಲಯದ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳು ಜರುಗಿದವು.   
ಗಂಗಾವತಿ ಶಿಶು ಅಭಿವೃದ್ದಿ ಯೋಜನೆಯ ತಾಲೂಕಿನ ಆನೆಗುಂದಿ ವಲಯದ ಹನುಮನಹಳ್ಳಿ ಮತ್ತು ಕಡೇಬಾಗಿಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮತದಾರರಲ್ಲಿ ಮತದಾನದ ಜಾಗೃತಿಗಾಗಿ ಮಹಿಳಾ ಮತದಾರರು, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಮತದಾನ ಜಾಗೃತಿಗಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಸೋಮವಾರದಂದು ಆಯೋಜಿಸಲಾಗಿತ್ತು.  
ಅಂಗನವಾಡಿ ಮೇಲ್ವಿಚಾರಕಿ ವನಮಾಲ ಬಾವಿಮನಿ ಮಾತನಾಡಿ,  ಮತದಾನ ಎಂಬುದು ಪ್ರತಿಯೊಬ್ಬ ನಾಗರೀಕ ಪ್ರಜೆಯ ಪ್ರಮುಖ ಹಕ್ಕು.  ಜನಪರ ಕಾಳಜಿಯುಳ್ಳ ನಾಯಕರನ್ನು ಆಯ್ಕೆ ಮಾಡುವ ಒಂದು ಮಹತ್ವದ ವ್ಯವಸ್ಥೆ.  18ವರ್ಷಕ್ಕೆ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನ ಮಾಡಬೇಕು.  ಮತದಾನ ಮೂಲಕ ಪ್ರಜೆಗಳು ಆಡಳಿತದಲ್ಲಿ ಪರೋಕ್ಷವಾಗಿ ಭಾಗಿಗಳಾಗಿರುತ್ತಾರೆ.  ಮತದಾನ ಪ್ರಜಾಪ್ರಭುತ್ವ ಆಧಾರ ಸ್ತಂಭ ಮತದಾನಕ್ಕೆ ವಯಸ್ಸೊಂದೆ ಅರ್ಹತೆ.  ತಪ್ಪದೆ ಮೇ 12ರಂದು ನಡೆಯುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಚಲಾಯಿಸಬೇಕು ಹಾಗೂ ಮತ ಚಲಾಯಿಸುವಂತೆ ಇತರರಿಗೂ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತದಾರರು, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.  

Post a Comment