Wednesday, 25 April 2018

ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ 65 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ


ಕೊಪ್ಪಳ ಏ. 25 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ, ಐದು ವಿಧಾನಸಭಾ ಕ್ಷೇತ್ರಗಳಿಗೆ 65 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ-60, ಕನಕಗಿರಿ-61, ಗಂಗಾವತಿ-62, ಯಲಬುರ್ಗಾ-63, ಕೊಪ್ಪಳ-64 ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಕ್ಷೇತ್ರವಾರು ವಿವರ ಇತಿಂದೆ.   
ಕುಷ್ಟಗಿ ವಿಧಾನಸಭಾ ಕ್ಷೇತ್ರ :
*********** ಕುಷ್ಟಗಿ-60, ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಜೀರಅಲಿ ಗೋನಾಳ, ಕಾಂಗ್ರೆಸ್‍ನಿಂದ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪುರ, ಬಿಜೆಪಿಯಿಂದ ದೊಡ್ಡನಗೌಡ ಹನುಮನಗೌಡ ಪಾಟೀಲ್, ಜನತಾದಳ (ಸೆಕ್ಯೂಲರ್) ದಿಂದ ಹೆಚ್.ಸಿ ನೀರಾವರಿ, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿಯಿಂದ ಮಂಜುಳಾ ಮರಿಯಪ್ಪ ಮಡಿವಾಳ, ರಾಣಿ ಚೆನ್ನಮ್ಮ ಪಾರ್ಟಿಯಿಂದ ಡಾ. ಪ್ರಭಾಕರಗೌಡ ಗುರುಲಿಂಗಪ್ಪ ಅಮ್ಮಣ್ಣವರ್, ಪಕ್ಷೇತರರಾಗಿ ಬಾಲರಾಜ್ ಕೊಂಡೆಪ್ಪ ಮತ್ತು ರಾಮಣಗೌಡ ಮಲೆಗೌಡ ಮಾಲಿಪಾಟೀಲ್, ಹಿಂದೂಸ್ಥಾನ ಜನತಾ ಪಾರ್ಟಿಯಿಂದ ಶಿವರೆಡ್ಡಿ ಸಾಹೇಬ್‍ಗೌಡಾ, ರಾಷ್ಟ್ರೀಯ ಜನಸಂಭಾವನಾ ಪಾರ್ಟಿಯಿಂದ ಯಲ್ಲನಗೌಡ ಗಣೇಶಗೌಡ, ಹಾಗೂ ಜನಹಿತ ಪಕ್ಷದಿಂದ ವೆಂಕಟೇಶ ರಾಮಣ್ಣ ವಡಿಗೇರಿ ನಾಮಪತ್ರ ಸಲ್ಲಿಸಿದ್ದು, ಕುಷ್ಟಗಿ-60, ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 11 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ.

ಕನಕಗಿರಿ ವಿಧಾಸಭಾ ಕ್ಷೇತ್ರ :
********* ಕನಕಗಿರಿ-61, ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಮೇಶ ಭೀಮಯ್ಯ ದಾಸರ್, ಬಿಜೆಪಿಯಿಂದ ಬಸವರಾಜ ದುರಗಪ್ಪ ದಡೆಸೂಗುರ, ಕಾಂಗ್ರೆಸ್‍ನಿಂದ ಶಿವರಾಜ ಸಂಗಪ್ಪ ತಂಗಡಗಿ, ಜನತಾದಳ (ಸೆಕ್ಯೂಲರ್) ದಿಂದ ಮಂಜುಳಾ ರವಿಕುಮಾರ, ಜನಹಿತ ಪಕ್ಷದಿಂದ ರಮೇಶ ಯಲ್ಲಪ್ಪ ಕೊಟಿ, ಪಕ್ಷೇತರರಾಗಿ ಕೆ.ಹೆಚ್ ಹುಲಗಣ್ಣ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂಎಲ್)(ಎಲ್) ದಿಂದ ಕೆಂಚಪ್ಪ ಲಿಂಗಪ್ಪ, ಪಕ್ಷೇತರರಾಗಿ ಹನುಮಂತ ಎಸ್. ಭೋವಿ, ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯಿಂದ ಮುಕ್ಕಣ್ಣ ರಾಮಚಂದ್ರಪ್ಪ ನಾಯಕ, ಪಕ್ಷೇತರರಾಗಿ ಈರಣ್ಣ ಗಲದಯ್ಯ ಮತ್ತು ಡಾ. ಎಂ.ಪಿ ದಾರಕೇಶ್ವರಯ್ಯ ನಾಮಪತ್ರ ಸಲ್ಲಿಸಿದ್ದು, ಕನಕಗಿರಿ-61, ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 11 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ.

ಗಂಗಾವತಿ ವಿಧಾನಸಭಾ ಕ್ಷೇತ್ರ :
*******ಗಂಗಾವತಿ-62, ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಇಕ್ಬಾಲ್ ಅನ್ಸಾರಿ, ಪಕ್ಷೇತರ ಅಭ್ಯರ್ಥಿಯಾಗಿ ರಮೇಶ, ಬಿಜೆಪಿಯಿಂದ ಪರಪ್ಪ ಎಂ. ಈಶ್ವರಪ್ಪ ಮುನವಳ್ಳಿ, ಜನತಾದಳ (ಸೆಕ್ಯೂಲರ್) ದಿಂದ ಕರಿಯಣ್ಣ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂಎಲ್)(ಎಲ್) ದಿಂದ ಭರದ್ವಾಜ, ಪಕ್ಷೇತರರಾಗಿ ಟಿ.ಎನ್.ಎಸ್. ವರಪ್ರಸಾದ, ಆಮ್‍ಆದ್ಮಿ ಪಾರ್ಟಿಯಿಂದ ಶರಣಪ್ಪ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂ) ದಿಂದ ನಾಗರಾಜ್ ಗುರುಶಾಂತನವರ್, ಪಕ್ಷೇತರರಾಗಿ ಎಸ್. ಜರೀನಾ, ಜನತಾದಳ (ಸೆಕ್ಯೂಲರ್) ದಿಂದ ಬಾಲಪ್ಪ, ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯಿಂದ ವಿನಾಯಕುಮಾರ ರೆಡ್ಡಿ ಸಾರಿಕೊಂಡ, ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ದಿಗಂಬರ ರಾವ್, ಫಾತೀಮಾ, ಶರಣಬಸವ ಮತ್ತು ಮೊಹಮ್ಮದ ನತೀಕ್ ಆಲಂ ನಾಮಪತ್ರ ಸಲ್ಲಿಸಿದ್ದು, ಗಂಗಾವತಿ-62, ವಿಧಾನಸಭಾ ಕ್ಷೇತ್ರದಕ್ಕೆ ಒಟ್ಟು 15 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರ :
*********** ಯಲಬುರ್ಗಾ-63, ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸದಾಶಿವರಾವ್ ವಿ., ಜನತಾದಳ (ಸೆಕ್ಯೂಲರ್) ದಿಂದ ವೀರನಗೌಡ, ಬಿಜೆಪಿಯಿಂದ ಹಾಲಪ್ಪ ಆಚಾರ್, ಪಕ್ಷೇತರರಾಗಿ ರಹಮಾನಸಾಬ, ಕಾಂಗ್ರೆಸ್‍ನಿಂದ ಬಸವರಾಜ ರಾಯರಡ್ಡಿ, ಪಕ್ಷೇತರ ಅಭ್ಯರ್ಥಿಗಳಾಗಿ ಶಿವಪ್ಪ, ಜಾಕೀರ್ ಹುಸೇನ್ ಹಾಗೂ ನವೀನ್, ಶಿವಸೇನೆಯಿಂದ ಶರಣಬಸಪ್ಪ, ಪಕ್ಷೇತರರಾಗಿ ನಿಂಗಪ್ಪ, ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯಿಂದ ಶಾಮೀದ್‍ಸಾಬ, ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯಿಂದ ಅಲ್ಲಾಭಕ್ಷಿ, ಜನಹಿತ ಪಕ್ಷದಿಂದ ಅನ್ನದಾನರಾಜಾ, ಮತ್ತು ಪಕ್ಷೇತರರಾಗಿ ಶರಣಯ್ಯ ನಾಮಪತ್ರ ಸಲ್ಲಿಸಿದ್ದು, ಯಲಬುರ್ಗಾ-63, ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 14 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರ :
********** ಕೊಪ್ಪಳ-64 ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ನಿಜಗುಣಪ್ಪ ಹಡಪದ, ಕಾಂಗ್ರೆಸ್‍ನಿಂದ ರಾಘವೇಂದ್ರ, ಜನತಾದಳ (ಸೆಕ್ಯೂಲರ್) ದಿಂದ ಕಾಸಿಂಅಲಿ, ಬಿಜೆಪಿಯಿಂದ ಸಿ.ವಿ ಚಂದ್ರಶೇಖರ, ಪಕ್ಷೇತರರಾಗಿ ಸುರೇಶಗೌಡ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂಎಲ್) ರೆಡ್ ಸ್ಟಾರ್‍ದಿಂದ ಹನುಮಪ್ಪ, ಬಿಜೆಪಿಯಿಂದ ಅಮರೇಶ ಕರಡಿ, ಪಕ್ಷೇತರರಾಗಿ ಸಂಜಯ, ಜನಹಿತ ಪಕ್ಷದಿಂದ ಮಂಜುನಾಥ ಪಲ್ಲೇದ, ಪಕ್ಷೇತರ ಹಾಗೂ ಶಿವಸೇನೆಯಿಂದ ಪಂಪಾಪತಿ, ಪಕ್ಷೇತರರಾಗಿ ಯಮನಪ್ಪ ಮತ್ತು ರಾಜಶೇಖರ, ಬಿಜೆಪಿಯಿಂದ ಸಂಗಣ್ಣ ಕರಡಿ, ಹಾಗೂ ಪಕ್ಷೇತರರಾಗಿ ಸಿದ್ದರಾಮಪ್ಪ ನಾಮಪತ್ರ ಸಲ್ಲಿಸಿದ್ದು, ಕೊಪ್ಪಳ-64, ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 14 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ, ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 65 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ 04 ಜನ ಮಹಿಳಾ ಅಭ್ಯಥಿಗಳು ಹಾಗೂ 61 ಜನ ಪುರುಷ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ ಎಂದು ಕೊಪ್ಪಳ ಜಿಲ್ಲೆಯ ಚುನಾವಣಾ ಶಾಖೆಯ ಪ್ರಕಟಣೆ ತಿಳಿಸಿದೆ.

Post a Comment