Wednesday, 25 April 2018

58 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತ : 07 ಅಭ್ಯರ್ಥಿಗಳ ನಾಮಪತ್ರ ತಿರಸ್ಕøತ


ಕೊಪ್ಪಳ ಏ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದ 65 ಅಭ್ಯರ್ಥಿಗಳ ಪೈಕಿ 07 ಅಭ್ಯರ್ಥಿಗಳ ನಾಮಪತ್ರಗಳು ವಿವಿಧ ಕಾರಣಗಳಿಂದ ತಿರಸ್ಕøತಗೊಂಡಿದ್ದು, 58 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿವೆ.

     ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.  ಈ ಪೈಕಿ ವೆಂಕಟೇಶ ವಡ್ಡಿಗೇರಿ ಇವರ ನಾಮಪತ್ರ ತಿರಸ್ಕøತಗೊಂಡಿದ್ದು, ವಜೀರಲಿ ಗೋನಾಳ-ಪಕ್ಷೇತರ, ಅಮರೇಗೌಡ ಬಯ್ಯಾಪುರ- ಕಾಂಗ್ರೆಸ್, ದೊಡ್ಡನಗೌಡ ಪಾಟೀಳ್-ಬಿಜೆಪಿ, ಹೆಚ್.ಸಿ. ನೀರಾವರಿ- ಜೆಡಿಎಸ್, ಮಂಜುಳಾ ಮಡಿವಾಳ- ಭಾರತೀಯ ಹೊಸ ಕಾಂಗ್ರೆಸ್, ಡಾ. ಪ್ರಭಾಕರಗೌಡ ಅಮ್ಮಣ್ಣವರ- ರಾಣಿ ಚನ್ನಮ್ಮ ಪಕ್ಷ, ಬಾಲರಾಜ ಕೊಂಡೆಪ್ಪ- ಪಕ್ಷೇತರ, ರಾಮನಗೌಡ ಮಾಲಿಪಾಟೀಲ- ಪಕ್ಷೇತರ, ಶಿವರೆಡ್ಡಿ ಸಾಹೇಬಗೌಡ- ಹಿಂದೂಸ್ತಾನ ಜನತಾ ಪಕ್ಷ, ಯಲ್ಲನಗೌಡ- ರಾಷ್ಟ್ರೀಯ ಜನಸಂಭಾವನಾ ಪಕ್ಷ ಸೇರಿದಂತೆ 10 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿವೆ.

     ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎಲ್ಲ 11 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕೃತಗೊಂಡಿವೆ.  ಪಕ್ಷೇತರ ಅಭ್ಯರ್ಥಿಯಾಗಿ ರಮೇಶ ಭೀಮಯ್ಯ ದಾಸರ್, ಬಿಜೆಪಿಯಿಂದ ಬಸವರಾಜ ದುರಗಪ್ಪ ದಡೆಸೂಗುರ, ಕಾಂಗ್ರೆಸ್‍ನಿಂದ ಶಿವರಾಜ ಸಂಗಪ್ಪ ತಂಗಡಗಿ, ಜನತಾದಳ (ಸೆಕ್ಯೂಲರ್) ದಿಂದ ಮಂಜುಳಾ ರವಿಕುಮಾರ, ಜನಹಿತ ಪಕ್ಷದಿಂದ ರಮೇಶ ಯಲ್ಲಪ್ಪ ಕೊಟಿ, ಪಕ್ಷೇತರರಾಗಿ ಕೆ.ಹೆಚ್ ಹುಲಗಣ್ಣ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂಎಲ್)(ಎಲ್) ದಿಂದ ಕೆಂಚಪ್ಪ ಲಿಂಗಪ್ಪ, ಪಕ್ಷೇತರರಾಗಿ ಹನುಮಂತ ಎಸ್. ಭೋವಿ, ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯಿಂದ ಮುಕ್ಕಣ್ಣ ರಾಮಚಂದ್ರಪ್ಪ ನಾಯಕ, ಪಕ್ಷೇತರರಾಗಿ ಈರಣ್ಣ ಗಲದಯ್ಯ ಮತ್ತು ಡಾ. ಎಂ.ಪಿ ದಾರಕೇಶ್ವರಯ್ಯ ನಾಮಪತ್ರ ಸಲ್ಲಿಸಿದ್ದರು.

     ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.  ಈ ಪೈಕಿ ಬಾಳಪ್ಪ- ಜೆಡಿಎಸ್, ವಿನಯಕುಮಾರ ರೆಡ್ಡಿ- ಎಐಎಂಇಪಿ, ಹಾಗೂ ಶರಣಬಸವ- ಪಕ್ಷೇತರ ಸೇರಿದಂತೆ 03 ಅಭ್ಯರ್ಥಿಗಳ ನಾಮಪತ್ರ ತಿರಸ್ಕøತಗೊಂಡಿವೆ.  12 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕೃತಗೊಂಡಿದ್ದು, ವಿವರ ಇಂತಿದೆ. ಕಾಂಗ್ರೆಸ್‍ನಿಂದ ಇಕ್ಬಾಲ್ ಅನ್ಸಾರಿ, ಪಕ್ಷೇತರ ಅಭ್ಯರ್ಥಿಯಾಗಿ ರಮೇಶ, ಬಿಜೆಪಿಯಿಂದ ಪರಪ್ಪ ಎಂ. ಈಶ್ವರಪ್ಪ ಮುನವಳ್ಳಿ, ಜನತಾದಳ (ಸೆಕ್ಯೂಲರ್) ದಿಂದ ಕರಿಯಣ್ಣ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂಎಲ್)(ಎಲ್) ದಿಂದ ಭರದ್ವಾಜ, ಪಕ್ಷೇತರರಾಗಿ ಟಿ.ಎನ್.ಎಸ್. ವರಪ್ರಸಾದ, ಆಮ್‍ಆದ್ಮಿ ಪಾರ್ಟಿಯಿಂದ ಶರಣಪ್ಪ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂ) ದಿಂದ ನಾಗರಾಜ್ ಗುರುಶಾಂತನವರ್, ಪಕ್ಷೇತರರಾಗಿ ಎಸ್. ಜರೀನಾ,  ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ದಿಗಂಬರ ರಾವ್, ಫಾತೀಮಾ, ಮತ್ತು ಮೊಹಮ್ಮದ ನತೀಕ್ ಆಲಂ ಅವರ ನಾಮಪತ್ರ ಅಂಗೀಕೃತಗೊಂಡಿವೆ.

     ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎಲ್ಲ 14 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿವೆ.  ನಾಮಪತ್ರ ಅಂಗೀಕೃತಗೊಂಡ ಅಭ್ಯರ್ಥಿಗಳ ವಿವರ ಇಂತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸದಾಶಿವರಾವ್ ವಿ., ಜನತಾದಳ (ಸೆಕ್ಯೂಲರ್) ದಿಂದ ವೀರನಗೌಡ, ಬಿಜೆಪಿಯಿಂದ ಹಾಲಪ್ಪ ಆಚಾರ್, ಪಕ್ಷೇತರರಾಗಿ ರಹಮಾನಸಾಬ, ಕಾಂಗ್ರೆಸ್‍ನಿಂದ ಬಸವರಾಜ ರಾಯರಡ್ಡಿ, ಪಕ್ಷೇತರ ಅಭ್ಯರ್ಥಿಗಳಾಗಿ ಶಿವಪ್ಪ, ಜಾಕೀರ್ ಹುಸೇನ್ ಹಾಗೂ ನವೀನ್, ಶಿವಸೇನೆಯಿಂದ ಶರಣಬಸಪ್ಪ, ಪಕ್ಷೇತರರಾಗಿ ನಿಂಗಪ್ಪ, ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯಿಂದ ಶಾಮೀದ್‍ಸಾಬ, ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯಿಂದ ಅಲ್ಲಾಭಕ್ಷಿ, ಜನಹಿತ ಪಕ್ಷದಿಂದ ಅನ್ನದಾನರಾಜಾ, ಮತ್ತು ಪಕ್ಷೇತರರಾಗಿ ಶರಣಯ್ಯ ನಾಮಪತ್ರ ಸಲ್ಲಿಸಿದ್ದರು.

     ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಸಿ.ವಿ. ಚಂದ್ರಶೇಖರ್-ಬಿಜೆಪಿ, ಯಮನಪ್ಪ- ಪಕ್ಷೇತರ, ಹಾಗೂ ಸಂಗಣ್ಣ ಕರಡಿ- ಬಿಜೆಪಿ ಸೇರಿದಂತೆ 03 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡಿವೆ.  ಒಟ್ಟು 11 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದು, ವಿವರ ಈ ರೀತಿ ಇದೆ. ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ನಿಜಗುಣಪ್ಪ ಹಡಪದ, ಕಾಂಗ್ರೆಸ್‍ನಿಂದ ರಾಘವೇಂದ್ರ, ಜನತಾದಳ (ಸೆಕ್ಯೂಲರ್) ದಿಂದ ಕಾಸಿಂಅಲಿ ಮೆಹಬೂಬ್ ಸಾಬ್ ಸಯ್ಯದ್ ಪಕ್ಷೇತರರಾಗಿ ಸುರೇಶಗೌಡ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂಎಲ್) ದಿಂದ ಹನುಮಪ್ಪ, ಬಿಜೆಪಿಯಿಂದ ಅಮರೇಶ ಕರಡಿ, ಜನಹಿತ ಪಕ್ಷದಿಂದ ಮಂಜುನಾಥ ಪಲ್ಲೇದ, ಪಕ್ಷೇತರರಾಗಿ ಪಂಪಾಪತಿ, ಸಂಜಯ, ರಾಜಶೇಖರ ಹಾಗೂ ಸಿದ್ದರಾಮಪ್ಪ ನಾಮಪತ್ರ ಸಲ್ಲಿಸಿದ್ದರು.
     ಉಮೇದುವಾರಿಕೆ ಹಿಂಪಡೆಯುವ ಪ್ರಕ್ರಿಯೆ ಆರಂಭಗೊಂಡಿದ್ದು, ಉಮೇದುವಾರಿಕೆ ಹಿಂಪಡೆಯಲು ಏ. 27 ಕೊನೆಯ ದಿನವಾಗಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಚುನಾವಣಾ ವಿಭಾಗದ ಪ್ರಕಟಣೆ ತಿಳಿಸಿದೆ.
Post a Comment