Saturday, 17 February 2018

ಭಾಗ್ಯನಗರ : ವಾಜಪೇಯಿ ನಗರ ವಸತಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಫೆ. 17 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವತಿಯಿಂದ ಪ್ರಸಕ್ತ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸಾಮಾನ್ಯ ವರ್ಗದವರಿಗಾಗಿ (ಮೀಸಲಾತಿ ವರ್ಗಿಕರಣಕ್ಕಾಗಿ ಅನುಗುಣವಾಗಿ) ಪ್ರಸಕ್ತ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ 200 ಮನೆಗಳನ್ನು ನಿರ್ಮಿಸುವ ಸಲುವಾಗಿ, ಸಹಾಯಧನ ಪಡೆಯಲು ಸರ್ಕಾರ ಗುರಿಯನ್ನು ನಿಗದಿಪಡಿಸಿದ್ದು, ಅರ್ಹ ಬಡ ಫಲಾನುಭವಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಅರ್ಜಿದಾರರು ತಮ್ಮ ಹೆಸರಿನಲ್ಲಿ ಸ್ವಂತ ಆಸ್ತಿ  ಹೊಂದಿರಬೇಕು.  ಆಸ್ತಿಯು ಮೀಸಲಿರಿಸಿದ ಸರ್ಕಾರಿ ಜಾಗೆಯಲ್ಲಿರಬಾರದು.  ಬಡ ಫಲಾನುಭವಿಯಾಗಿರಬೇಕು.  ಈ ಹಿಂದೆ ಸರಕಾರದಿಂದ ಯಾವುದೇ ವಸತಿ ಯೋಜನೆಯಡಿ ಈ ಸೌಲಭ್ಯವನ್ನು ಪಡೆದಿರಬಾರದು.  ಭಾಗ್ಯನಗರ ಪ.ಪಂ ವ್ಯಾಪ್ತಿಯವರಾಗಿರಬೇಕು.   
ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತರು ಆಸ್ತಿಗೆ ಸಂಬಂಧಪಟ್ಟ ದಾಖಲೆ ಫಾರಂ ನಂ.-3, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕುಟುಂಬದ ಎಲ್ಲಾ ಸದಸ್ಯರ ಆದಾರ ಕಾರ್ಡ್ ಛಾಯಾ ಪ್ರತಿ, ಪಡೀತರ ಚೀಟಿ/ ಗುರುತಿನ ಚೀಟಿ, ಮೂರು ಭಾವಚಿತ್ರ, ರೂ. 20/-ಗಳ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪ್ರಮಾಣ ಪತ್ರ (ಈ ಹಿಂದೆ ಯಾವುದೇ ಸರಕಾರಿ ಸೌಲಭ್ಯ ಪಡೆದಿಲ್ಲ ಹಾಗೂ ಯಾವುದೇ ಪಕ್ಕಾ ಮನೆ ಹೊಂದಿರುವುದಿಲ್ಲ ಎಂಬುದರ ಬಗ್ಗೆ) ನೋಟರಿ ಮಾಡಿಸಿ ಫೆ. 28 ರೊಳಗಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ಸೂಚನಾ ಫಲಕವನ್ನು ವೀಕ್ಷಿಸಬಹುದಾಗಿದೆ ಎಂದು ಭಾಗ್ಯನಗರ ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

Post a Comment