Saturday, 3 February 2018

ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ


ಕೊಪ್ಪಳ ಫೆ. 03 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಶಾಖಾಪೂರ ಗ್ರಾಮದ ಹನುಮಂತಪ್ಪ @ ಗುಂತಪ್ಪ ಮೇಟಿ (45) ಎಂಬ ವ್ಯಕ್ತಿ ಜ. 30 ರಂದು ಕಾಣೆಯಾಗಿದ್ದು ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
    ಹನುಮಂತಪ್ಪ @ ಗುಂತಪ್ಪ ಮೇಟಿ (45) ಎಂಬ ವ್ಯಕ್ತಿ ಜ. 30 ರಂದು ಸಂಜೆ 5 ಗಂಟೆ ಸುಮಾರಿಗೆ ತನಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ಶಾಖಾಪೂರು ಗ್ರಾಮದಿಂದ ಕುಷ್ಟಗಿಗೆ ತಮ್ಮ ಹೆಂಡತಿ ಜೊತೆ ಬಂದಿದ್ದು, ವಾಪಸ್ಸ ಊರಿಗೆ ಹೋಗುವಾಗ ಗಜೇಂದ್ರಗಡಾ ಸರ್ಕಲ್ ಹತ್ತಿರದಿಂದ ಬಸ್ಸ್‍ಗಾಗಿ ಕಾಯುತ್ತಿದ್ದಾಗ ನಾನು ಆಮೇಲೆ ಊರಿಗೆ ಬರುವುದಾಗಿ ಹೇಳಿ ಹೋಗಿದ್ದು, ಕಾಣೆಯಾಗಿದ್ದಾರೆ ಎಂದು ಕಾಣೆಯಾದ ವ್ಯಕ್ತಿಯ ಹೆಂಡತಿ ಲಕ್ಷ್ಮಿ ಗಂಡ ಹನುಮಂತಪ್ಪ ಅವರು ಕುಷ್ಟಗಿ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಕಾಣೆಯಾದ ವ್ಯಕ್ತಿಯ ಚಹರೆ ವಿವರ ಇಂತಿದೆ.  ಹನುಮಂತಪ್ಪ @ ಗುಂತಪ್ಪ ಮೇಟಿ (45), ಎತ್ತರ 5.2 ಅಡಿ, ಸಾದರಣ ಮೈಕಟ್ಟು, ದುಂಡು ಮುಖ, ಸಾದಾ ಕಪ್ಪು ಮೈಬಣ್ಣ ಹೊಂದಿದ್ದಾರೆ.  ಕಾಣೆಯಾದಾಗ ಬಿಳಿ ಬಣ್ಣದ ಲುಂಗಿ ಮತ್ತು ಬಿಳಿ ಅಂಗಿ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.  ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಎಸ್.ಪಿ ಕಛೇರಿ ದೂ.ಸಂ 08539-230111, ಕುಷ್ಟಗಿ ಪೊಲೀಸ್ ಠಾಣೆ ದೂ.ಸಂ 08536-267033, ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ 08539-230222-100, ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
Post a Comment