Thursday, 8 February 2018

ಕೊಪ್ಪಳ ಜಿಲ್ಲೆಯಲ್ಲಿ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ- ಕರಡಿ ಸಂಗಣ್ಣ


ಕೊಪ್ಪಳ ಫೆ. 08 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‍ನಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ತಿಳಿಸಿದ್ದಾರೆ.
    ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‍ನ ರೈಲ್ವೆ ಇಲಾಖೆಯ ಅನುದಾನದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಗದಗ-ಕೃಷ್ಣಾನಗರ (ವಾಯಾ ಕೊಟುಮೂಚಗಿ-ನರೆಗಲ್-ಗಜೇಂದ್ರಗಡ-ಹನುಮಸಾಗರ-ಇಲಕಲ್ ಮತ್ತು ಲಿಂಗಸಗೂರ) 216 ಕಿ.ಮಿ ಉದ್ದದ ರೂ. 0.54 ಕೋಟಿ ಅನುದಾನವನ್ನು “ಹೊಸ ರೈಲ್ವೆ ಲೈನ್ ಸರ್ವೆ” ಕಾರ್ಯಕ್ಕೆ ಮಂಜೂರಾಗಿದೆ.  ಕೊಪ್ಪಳ ನಗರದ ಗೇಟ್ ನಂ.66 (ಕುಷ್ಟಗಿ ರಸ್ತೆ) ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ.  ತಾಲೂಕಿನ ರೈಲ್ವೆ ಗೇಟ್ ನಂ.72 (ಗಿಣಿಗೇರಾ ಗ್ರಾಮ) ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ.  ತಾಲೂಕಿನ ಗೇಟ್ ನಂ.79 (ಹುಲಿಗಿ-ಮುನಿರಾಬಾದ್ ಆರ್.ಎಸ್ ಗ್ರಾಮ) ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ.  ಗದಗ ದಿಂದ ಕೊಪ್ಪಳ-ಹೊಸಪೇಟೆ ಜಂಕ್ಷನ್‍ವರೆಗೆ ಹಳೆ ರೈಲ್ವೆ ಹಳಿ ಬದಲಾವಣೆ ಮಾಡುವುದಕ್ಕೆ ರೂ. 11.6 ಕೋಟಿ ಅನುದಾನ ಬಿಡುಗಡೆ.  ಗದಗ-ವಾಡಿ ಹೊಸ ರೈಲ್ವೆ ಮಾರ್ಗದ (255 ಕಿ.ಮಿ) ಯೋಜನೆಗೆ ರೂ. 145.00 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.  ಹೊಸಪೇಟೆ-ಕೊಪ್ಪಳ-ಹುಬ್ಬಳ್ಳಿ-ಲೊಂಡಾ-ತಿನಾಯಘಾಟ-ವಾಸ್ಕೋಡ ಗಾಮ (352.28 ಕಿ.ಮಿ) ದ್ವೀ ಪಥ ರೈಲು ಮಾರ್ಗಕ್ಕೆ ರೂ. 80 ಕೋಟಿಯನ್ನು ಮಂಜೂರು ಮಾಡಲಾಗಿದೆ.  ಈ ಎಲ್ಲಾ ಯೋಜನೆಗಳನ್ನು ಮಂಜೂರು ಮಾಡಿದ ಪ್ರಧಾನ ಮಂತ್ರಿಗಳು, ಕೇಂದ್ರದ ರೈಲ್ವೆ ಸಚಿವರಿಗೆ ಹಾಗೂ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಕೊಪ್ಪಳ ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
Post a Comment