Tuesday, 6 February 2018

ಗಂಗಾವತಿಯಲ್ಲಿ ಜೀವನ ಕೌಶಲ್ಯ ಮತ್ತು ಯುವ ಸ್ಪಂದನ ತರಬೇತಿ ಕಾರ್ಯಗಾರ


ಕೊಪ್ಪಳ ಫೆ. 06 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿಯ ಕೊಲ್ಲಿನಾಗೇಶ್ವರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ “ಜೀವನ ಕೌಶಲ್ಯ ಮತ್ತು ಯುವ ಸ್ಪಂದನ ತರಬೇತಿ ಕಾರ್ಯಗಾರ” ನಡೆಯಿತು. 
    ಕಾರ್ಯಗಾರವನ್ನು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದು, ಕಾಲೇಜಿನ ಕಾರ್ಯಧ್ಯಕ್ಷರಾದ ಎಂ.ಡಿ. ಸಿರಾಜ್ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿದರು.  ಯುವಸಮೂಹಕ್ಕೆ ಆಗುವ ತೊಂದರೆಗಳ ಕುರಿತು ವಿವರಿಸಿದರು.  ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೋ. ಹಸನ್ಮಿಯಾ ಅವರು ವಹಿಸಿದ್ದರು.  ಜಿಲ್ಲಾ ಆಸ್ಪತ್ರೆಯ ಮನೋವೈದ್ಯರಾದ ಕೃಷ್ಣಾ ವಿ. ಓಂಕಾರ ಅವರು “ಮಾನಸಿಕ ಖಿನ್ನತೆ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಬೆಂಗಳೂರಿನ ಜನ ಆರೋಗ್ಯ ಕೇಂದ್ರ ಎಪಿಡಿಮಿಯಾಲಾಜೀ ವಿಭಾಗ ನಿಮ್ಹಾನ್ಸ್ ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಆರ್. ಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೈ. ಸುದರ್ಶನರಾವ್, ಗಂಗಾವತಿ ತಾಲೂಕಾ ಕ್ರೀಡಾ ಅಧಿಕಾರಿ ರಂಗಸ್ವಾಮಿ, ಜಿಲ್ಲಾ ಯುವ ಸ್ಪಂದನ ಕೇಂದ್ರದ ಕ್ಷೇತ್ರ ಸಂಪರ್ಕಾಧಿಕಾರಿ ಪ್ರದೀಪ್, ಜಿಲ್ಲೆಯ ಯುವ ಸಮಾಲೋಚಕರಾದ ಭೀಮೇಶ ಕುರಿ, ಮಂಜುನಾಥ ಹಾಗೂ ಹೆಚ್ ದಾಸರ್, ಕನ್ನಡ ಉಪನ್ಯಾಸಕರದ ನಿಂಗಪ್ಪ ಕಂಬಳಿ ಸೇರಿದಂತೆ ತಾಲೂಕಾ ಯುವ ಪರಿವರ್ತಕರು, ಹಾಗೂ ಅನೇಕ ಗಣ್ಯರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. 
Post a Comment