Friday, 9 February 2018

ಯಲಬುರ್ಗಾ ಪ.ಪಂ ವತಿಯಿಂದ ವಸತಿ ಸೌಲಭ್ಯ : ಅರ್ಜಿ ಆಹ್ವಾನ


ಕೊಪ್ಪಳ ಫೆ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ವತಿಯಿಂದ ಪ್ರಸಕ್ತ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಾಜಪೇಯಿ ನಗರ ವಸತಿ ಯೋಜನೆ ಪ್ರಸಕ್ತ ಸಾಲಿನ ಶ್ರೇಣಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತಿಗೆ ಹೆಚ್ಚುವರಿಯಾಗಿ ಅಲ್ಪಸಂಖ್ಯಾತರು-25, ಇತರರು-225 ಒಟ್ಟು-250 ಮನೆಗಳನ್ನು ನಿರ್ಮಿಸಲು ಗುರಿ ನಿಗದಿಪಡಿಸಲಾಗಿದೆ.   ಯಲಬುರ್ಗಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಖಾಯಂ ಆಗಿ ವಾಸವಾಗಿರುವ ನಿವೇಶನ ಹೊಂದಿದ ವಸತಿ ರಹಿತರು ಅರ್ಜಿ ಸಲ್ಲಿಸಬಹುದು.  ಆದರೆ ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಅವರೂ ಅರ್ಜಿ ಸಲ್ಲಿಸಬಹುದು. 
ಅರ್ಜಿ ಸಲ್ಲಿಸಲು ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು ಅರ್ಜಿದಾರರ ಹೆಸರಿನಲ್ಲಿ ಆಸ್ತಿ ಇರಬೇಕು.  ಈ ಹಿಂದೆ ಸ್ವಂತ ಹೆಸರಿನಲ್ಲಿ ಅಥವಾ ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ವಸತಿ/ ಮನೆ ಸೌಲಭ್ಯ ಪಡೆದಿರುವುದಿಲ್ಲವೆಂದು 50 ರೂ. ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರ ಬರೆದುಕೊಡಬೇಕು.  ಈಗಾಗಲೇ ವಸತಿ ರಹಿತರ ಯಾದಿಯಲ್ಲಿ ಹೆಸರು ನೊಂದಣಿಯಾಗಿರಬೇಕು.  ಅರ್ಜಿಯೊಂದಿಗೆ ಪಾಸ್‍ಪೋರ್ಟ ಅಳತೆಯ 04 ಭಾವಚಿತ್ರ, ಆಸ್ತಿ (ನಿವೇಶನ/ ಜಾಗ)ಕ್ಕೆ ಸಂಬಂಧಿಸಿದ ದಾಖಲಾತಿಗಳು, ಹಕ್ಕುಪತ್ರ/ ಕ್ರಯಪತ್ರ/ ದಾನಪತ್ರ ಫಾರಂ ನಂ.03/ ಖಾತಾ ವರ್ಗಾವಣೆ ಚಾಲ್ತಿ ಸಾಲಿನ ತೆರಿಗೆ ರಸೀದಿ, ನಿವೇಶನದ (ಜಾಗ/ ಕಚ್ಚಾಮನೆ/ ಬಿದ್ದಮನೆ/ ಗುಡಿಸಲು) ಪ್ರಸ್ತುತ ಸ್ಥಿತಿಯ ಭಾವಚಿತ್ರ ಚುನಾವಣಾ ಗುರುತಿನ ಚೀಟಿ/ ಆಧಾರ್ ಕಾರ್ಡ ರೇಷನ್ ಕಾರ್ಡ ಜಾತಿ ಆದಾಯ ಪ್ರಮಾಣ ಪತ್ರ ಲಗತ್ತಿಸಿ ಯಲಬುರ್ಗಾ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಫೆ. 20 ರೊಳಗಾಗಿ ಸಲ್ಲಿಸಬೇಕು ಎಂದು ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
Post a Comment