Friday, 2 February 2018

ಯಲಬುರ್ಗಾ ಪ.ಪಂ ವತಿಯಿಂದ ಟ್ಯಾಕ್ಸಿ ಡ್ರೈವರ್ ತರಬೇತಿ : ಸಂಸ್ಥೆಗಳಿಂದ ಅರ್ಜಿ ಆಹ್ವಾನ


ಕೊಪ್ಪಳ ಫೆ. 01 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣ ಪಂಚಾಯತ ವತಿಯಿಂದ 2017-18ನೇ ಸಾಲಿನ ದೀನದಯಾಳ ಅಂತ್ಯೋದಯ ಯೋಜನೆಯ-ನಲ್ಮ್ ಅಭಿಯಾನದಡಿ ಟ್ಯಾಕ್ಸಿ ಡ್ರೈವರ್ ತರಬೇತಿ ನೀಡಲು ಆರ್.ಟಿ.ಓ ನೋಂದಾಯಿತ ಅರ್ಹ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಯಲಬುರ್ಗಾ ಪಟ್ಟಣ ಪಂಚಾಯತಿಯಿಂದ ದೀನದಯಾಳ ಅಂತ್ಯೋದಯ ಯೋಜನೆಯ-ನಲ್ಮ್ ಅಭಿಯಾನದಡಿ ರಾಜ್ಯ ಯೋಜನೆಯ ಉಪ-ಘಟಕ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ನಿಯುಕ್ತಿ ಘಟಕದಡಿ ಆರ್.ಟಿ.ಓ. ನೋಂದಾಯಿತ ವಾಹನ ಚಾಲನಾ ತರಬೇತಿ ಸಂಸ್ಥೆಗಳಿಂದ “ಟ್ಯಾಕ್ಸಿ ಡ್ರೈವರ್ ಚಾಲನಾ ತರಬೇತಿ” ಯನ್ನು ನೀಡಲು ಉದ್ದೇಶಿಸಿದ್ದು, ಪ್ರತಿ ಪಲಾನುಭವಿಗೆ ರೂ. 4750/- ದಂತೆ ತರಬೇತಿ ಶುಲ್ಕವನ್ನು ಪಾವತಿಸಲಾಗುವುದು.  ತರಬೇತಿ ಸಂಸ್ಥೆಯವರು ಬೇರೆ ಸಂಸ್ಥೆಗೆ ಉಪ-ಗುತ್ತಿಗೆ ನೀಡಬಾರದು.  ತರಬೇತಿಗೆ ಹಾಜರಾದ ಪ್ರಾರಂಭಿಕ ವರದಿಯನ್ನು ತರಬೇತಿ ಸಂಸ್ಥೆಯ ಮೂಲಕ ಪಡೆದ ನಂತರ ಹಾಗೂ ಅನುದಾನದ ಲಭ್ಯತೆ ಆಧಾರದ ಮೇಲೆ ಮೊದಲನೇ ಕಂತಿನ ಶೇ.50 ರಷ್ಟು ಅನುದಾನ ಬಿಡುಗಡೆ ಮಾಡಲಾಗುವುದು.  ತರಬೇತಿ ಪೂರ್ಣಗೊಂಡು ಚಾಲನಾ ಪರವಾನಿಗೆ ಪತ್ರ ನೀಡಿದ ನಂತರ ಹಾಗೂ ಅನುದಾನದ ಲಭ್ಯತೆ ಆಧಾರದ ಮೇಲೆ ಶೇ.30 ರಷ್ಟು ಬಿಡುಗಡೆ ಮಾಡಲಾಗುವುದು.  ತರಬೇತಿ ಪಡೆದ ಶೇ.50 ರಷ್ಟು ಅಭ್ಯರ್ಥಿಗಳು ಉದ್ಯೋಗಕ್ಕೆ ಸೇರಿಕೊಂಡು 6 ತಿಂಗಳ ವರೆಗೆ ಪೋಸ್ಟ್ ಪ್ಲೇಸ್‍ಮೆಂಟ್ ಟ್ರ್ಯಾಕ್ ಮಾಡಿದ ನಂತರ ಹಾಗೂ ಅನುದಾನದ ಲಭ್ಯತೆ ಆಧಾರದ ಮೇಲೆ ಮೂರನೇ ಕಂತಿನ ಶೇ.20 ರಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗುವುದು.  ಅನುದಾನವನ್ನು ನಿರ್ದೇಶಕರು ಬಿಡುಗಡೆ ಮಾಡಿದ ನಂತರ ತರಬೇತಿ ಶುಲ್ಕವನ್ನು ಪಾವತಿಸಲಾಗುವುದು.
    ತರಬೇತಿ ನೀಡಲು ಇಚ್ಛೆಯುಳ್ಳ ಸಂಸ್ಥೆಯವರು ದಾಖಲಾತಿಗಳೊಂದಿಗೆ ಫೆ. 07 ರೊಳಗಾಗಿ ಯಲಬುರ್ಗಾ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
Post a Comment