Thursday, 15 February 2018

ವಾಜಪೇಯಿ ನಗರ ವಸತಿ ಯೋಜನೆ : ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಫೆ. 15 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯತ ವತಿಯಿಂದ ಪ್ರಸಕ್ತ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ವಸತಿ ರಹಿತ ಅರ್ಹ ಸಾಮಾನ್ಯ ಹಾಗೂ ಅಲ್ಪಸಂಖ್ಯಾತರ ಕುಟುಂಬಗಳಿಗೆ ಆರ್ಥಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 
ಕುಕನೂರು ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ವಾಸಿಸುವ, ನಿವೇಶನ ಹೊಂದಿರುವ ವಸತಿ ರಹಿತ ಸಾಮಾನ್ಯ-225 ಹಾಗೂ ಅಲ್ಪಸಂಖ್ಯಾತರ-25 ಸೇರಿದಂತೆ ಒಟ್ಟು 250 ಫಲಾನುಭವಿಗಳಿಗೆ ಪ.ಪಂ ವತಿಯಿಂದ ಆರ್ಥಿಕ ಸಹಾಯಧನ ಒದಗಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.  ಅರ್ಜಿ ಸಲ್ಲಿಸಲು ಫಲಾನುಭವಿಯ ಹೆಸರಲ್ಲಿ ಆಸ್ತಿ (ನಿವೇಶನ) ಇರಬೇಕು.  ಈ ಹಿಂದೆ ಸರಕಾರದಿಂದ ಯಾವುದೇ ವಸತಿ ಯೋಜನೆಗಳಲ್ಲಿ ಈ ಸೌಲಭ್ಯವನ್ನು ಪಡೆದಿರಬಾರದು.  ಕುಕನೂರು ಪ.ಪಂ ವ್ಯಾಪ್ತಿಯವರಾಗಿರಬೇಕು.   
      ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತರು ಚಾಲ್ತಿ ವರ್ಷದ ಫಾರಂ ನಂ.-3, ಚಾಲ್ತಿ ಸಾಲಿನ ವರೆಗೆ ಪಾವತಿಸಿದ ಆಸ್ತಿ ಹಾಗೂ ನೀರಿನ ತೆರೆಗೆ ರಸೀದಿ, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆದಾರ ಕಾರ್ಡ್, ಪಡೀತರ ಚೀಟಿ, ಗುರುತಿನ ಚೀಟಿ, ಮೂರು ಭಾವಚಿತ್ರ, ಫಲಾನುಭವಿಗಳ ಮುಚ್ಚಳಿಕೆ ಪ್ರಮಾಣ (ಈ ಹಿಂದೆ ಯಾವುದೇ ಸರಕಾರಿ ಸೌಲಭ್ಯ ಪಡೆದಿಲ್ಲವೆಂದು ಮುಚ್ಚಳಿಕೆ) ಪತ್ರದೊಂದಿಗೆ ಫೆ. 24 ರೊಳಗಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ನೋಟಿಸ್ ಬೋರ್ಡ್ ಅಥವಾ ವಸತಿ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕುಕನೂರು ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
Post a Comment