Monday, 19 February 2018

ನವೋದಯ ಪ್ರವೇಶ ಪರೀಕ್ಷೆ ಏ. 21 ಕ್ಕೆ ಮುಂದೂಡಿಕೆ


ಕೊಪ್ಪಳ ಫೆ. 19 (ಕರ್ನಾಟಕ ವಾರ್ತೆ): ಜವಾಹರ ನವೋದಯ ವಿದ್ಯಾಲಯಕ್ಕೆ 06 ನೇ ತರಗತಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಕಳೆದ ಫೆ. 10 ರಂದು ನಡೆಸಲು ಉದ್ದೇಶಿಸಲಾಗಿದ್ದ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪ್ರವೇಶ ಪರೀಕ್ಷೆ ಏಪ್ರಿಲ್ 21 ರಂದು ನಡೆಸಲು ನಿಗದಿಪಡಿಸಲಾಗಿದೆ.
     ಜವಾಹರ ನವೋದಯದ 2018-19 ನೇ ಸಾಲಿನ 06 ನೇ ತರಗತಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಫೆ. 10 ರಂದು ಪ್ರವೇಶ ಪರೀಕ್ಷೆ ಏರ್ಪಡಿಸಲಾಗಿತ್ತು.  ಆದರೆ ಆಯ್ಕೆ ಪರೀಕ್ಷೆಯನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ.  ಇದೀಗ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 21 ರಂದು ಕೊಪ್ಪಳ ಜಿಲ್ಲೆಯ ಒಟ್ಟು 25 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 11-30 ರಿಂದ ಮಧ್ಯಾಹ್ನ 1-30 ರವರೆಗೆ ನಡೆಸಲಾಗುವುದು.  ಹೆಚ್ಚಿನ ವಿವರಗಳು ಹಾಗೂ ಪ್ರವೇಶ ಪತ್ರ ಪಡೆಯುವ ಕುರಿತಂತೆ ನವೋದಯ ವಿದ್ಯಾಲಯ ಸಮಿತಿಯ ವೆಬ್‍ಸೈಟ್   ನಲ್ಲಿ ಪಡೆಯಬಹುದು ಎಂದು ಕುಕನೂರು ನವೋದಯ ವಿದ್ಯಾಲಯದ ಪ್ರಾಚಾರ್ಯ ಬಿ.ಎನ್.ಟಿ. ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment