Monday, 19 February 2018

ಫೆ. 20 ರಂದು ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗಾಗಿ ಕಾರ್ಯಗಾರ


ಕೊಪ್ಪಳ ಫೆ. 19 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗಾಗಿ ಸುಧಾರಿತ ಬೇಸಾಯ ಕ್ರಮಗಳು ಹಾಗೂ ಪೂರಕ ವಿಷಯಗಳ ಕುರಿತು ವಿಶೇಷ ಕಾರ್ಯಗಾರ ಫೆ. 20 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ತೋಟಗಾರಿಕೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
       ರೈತರಿಂದ ಗ್ರಾಹಕರಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯು ದ್ರಾಕ್ಷಿ ಮತ್ತು ದಾಳಿಂಬೆ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಿದ್ದು, ಈಗಾಗಲೆ ಮೇಳಕ್ಕೆ ಚಾಲನೆ ದೊರೆತಿದೆ.  ಈ ಮೇಳದ ಅಂಗವಾಗಿ ಫೆ. 20 ರಂದು ದ್ರಾಕ್ಷಿ ಮತ್ತು ದಾಳಿಂಬೆ ಸುಧಾರಿತ ಬೇಸಾಯ ಕ್ರಮಗಳು, ನವೀನ ತಂತ್ರಜ್ಞಾನಗಳು ಹಾಗೂ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿದೆ. ತೋಟಗಾರಿಕೆ ವಿಶ್ವ ವಿದ್ಯಾಲಯ, ಬಾಗಲಕೋಟೆಯಿಂದ ವಿಜ್ಞಾನಿಗಳು ಹಾಗೂ ನುರಿತ ತಂತ್ರಜ್ಞರು ಮತ್ತು ಪ್ರಗತಿಪರ ರೈತರು ಆಗಮಿಸುತ್ತಿದ್ದಾರೆ.
    ಜಿಲ್ಲೆಯ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗೆ ಇದೊಂದು ಸುವರ್ಣಾವಾಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಂiÀರ್iಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕರು, ಕೃಷ್ಣ ಉಕ್ಕುಂದರವರು ಪ್ರಕಟಣೆಯಲ್ಲಿ ಕೋರಿದ್ದಾರೆ.
Post a Comment