Thursday, 15 February 2018

ಫೆ. 18 ರಿಂದ ಕೊಪ್ಪಳದಲ್ಲಿ ದ್ರಾಕ್ಷಿ ಮತ್ತು ದಾಳಿಂಬೆ ಮೇಳ


ಕೊಪ್ಪಳ ಫೆ. 15 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಫೆ. 18 ರಿಂದ 22 ರವರೆಗೆ ನಾಲ್ಕು ದಿನಗಳ ಕಾಲ ದ್ರಾಕ್ಷಿ ಮತ್ತು ದಾಳಿಂಬೆ ತಾಂತ್ರಿಕ ಕಾರ್ಯಗಾರ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.
 ಕಾರ್ಯಾಗಾರವನ್ನು  ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟಿಸುವರು.   ಹೆಚ್ಚಿನ ಸಂಖ್ಯೆಯಲ್ಲಿ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರು ಮೇಳದಲ್ಲಿ ಪಾಲ್ಗೊಂಡು, ಈ ಮೇಳದ ಲಾಭ ಪಡೆದುಕೊಳ್ಳಬೇಕು.  ತೋಟಗಾರಿಕೆ ಬೆಳೆಗಾರರಿಗೆ ಫೆ. 20 ರಂದು ತಾಂತ್ರಿಕ ಕಾರ್ಯಗಾರ ಆಯೋಜಿಸಿದ್ದು,  ಜಿಲ್ಲೆಯ ಗ್ರಾಹಕರು ಮತ್ತು ಸಾರ್ವಜನಿಕರು ಈ ಮೇಳದಲ್ಲಿ ಪಾಲ್ಗೊಂಡು ಗುಣಮಟ್ಟದ ವಿವಿಧ ತಳಿಗಳ ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣು ಮತ್ತು ಉತ್ಪನ್ನಗಳನ್ನು ಯೋಗ್ಯ ಬೆಲೆಯಲ್ಲಿ ಖರೀದಿಸಿ ಮೇಳದ ಸದುಪಯೋಗ ಪಡೆಯಲು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
Post a Comment